ಶಾಲೆಗೆ ಹೋದ ವಿದ್ಯಾರ್ಥಿಗಳು ಶೈಕ್ಷಣಿಕ (Education) ಪ್ರಗತಿ ಸಾಧಿಸುವುದರ ಜೊತೆಗೆ ಹಾದಿ ತಪ್ಪುವ ಸಾಧ್ಯತೆ ಕೂಡಾ ತುಂಬಾ ಹೆಚ್ಚಿರುತ್ತದೆ. ಆದರೆ ವಿದ್ಯಾರ್ಥಿಗಳು ಹಾದಿ ತಪ್ಪದಂತೆ ನಿಗಾ ವಹಿಸಲು ಶಿಕ್ಷಕರಿಗೆ ತಿಳಿಸಿ ನಮ್ಮ ಮಕ್ಕಳನ್ನು ಸರಿ ದಾರಿಗೆ ತನ್ನಿ ಎಂದು ಎಷ್ಟೋ ಪಾಲಕರು (Parents) ಹೇಳಿರುತ್ತಾರೆ. ಶಿಕ್ಷಕರನ್ನು (Teachers) ನಂಬಿ ತಮ್ಮ ಮಕ್ಕಳನ್ನು ಕೆಲವೊಮ್ಮೆ ದೂರ ದೂರದ ಊರುಗಳಿಗೆ ಬಿಟ್ಟು ಬಂದಿರುತ್ತಾರೆ. ಆದರೆ ಕೆಲವೊಮ್ಮೆ ಈ ಶಿಕ್ಷಕರೇ ಮಕ್ಕಳನ್ನು ಹಾದಿ ತಪ್ಪಿಸುತ್ತಾರೆ ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ಜರುಗಿದೆ ನೋಡಿ. ಹಾಗಾದ್ರೆ ನಿಜವಾಗಿಯೂ ನಡೆದದ್ದೇನು ಎಂಬ ಮಾಹಿತಿ ಇಲ್ಲಿದೆ. ಈ ಮಾಹಿತಿ (Infornation) ಓದುತ್ತಿದ್ದ ಹಾಗೇ ನೀವು ದಂಗಾಗಿ ಹೋಗ್ತೀರಾ.
ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಿದ್ದ ಶಿಕ್ಷಕರೇ ದಾರಿ ತಪ್ಪಿದ್ದಾರೆ. ಪಾಠ ಮಾಡುತ್ತಿದ್ದ ಶಿಕ್ಷಕಿ ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಪ್ರಸ್ತುತ, ಸಮಾಜದಲ್ಲಿ ಕೆಲವು ಶಿಕ್ಷಕರು ತಮ್ಮ ಶೈಕ್ಷಣಿಕ ಜೀವನಕ್ಕೆ ಕಳಂಕ ತಂದೊಡ್ಡಿಕೊಳ್ಳುತ್ತಿದ್ದಾರೆ. ಇನ್ನೂ ಲೋಕದ ಅರಿವೇ ಬಾರದ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಮೇಲಾಗಿ ಪ್ರೀತಿ ಪ್ರೇಮ ಎಂಬ ಹೆಸರಿನಲ್ಲಿ ಅವರನ್ನು ಹಾಳು ಮಾಡಲು ನೋಡುತ್ತಾರೆ. ಇವಳು ಮಾಡಿದ್ದು ಹಾಗೇ ತನ್ನ ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ.
ಇನ್ನು ಹಲವೆಡೆ ರೀಲ್ಸ್ ಮಾಡುವ ಸಲುವಾಗಿ ಶಿಕ್ಷಕರೊಂದಿಗೆ ಮಕ್ಕಳು ಅನುಚಿತವಾಗಿ ನಡೆದು ಕೊಳ್ಳತ್ತಾರೆ. ಶಾಲಾ ಅವಧಿಯಲ್ಲೇ ಡಾನ್ಸ್ ಮಾಡುವುದು. ತರಗತಿಯಲ್ಲಿ ಶಿಕ್ಷಕಿಗೆ ಪ್ರಪೋಸ್ ಮಾಡುವುದು ಮಾಡುತ್ತಾರೆ. ಇದನ್ನೆಲ್ಲಾ ನಿಲ್ಲಸಲು ಸಾಧ್ಯವೇ ಇಲ್ವಾ ಅಂತ ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮತ್ತೆ ಇಂಥದ್ಧೇ ಘಟನೆಗಳು ನಡೆಯುತ್ತದೆ.
ಇದನ್ನೂ ಓದಿ: STEM ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಿ, 92 ಸಾವಿರ ಹಣ ಪಡೆಯಿರಿ
ಹೈದರಾಬಾದ್ ಚಂದಂಗರ್ ಪ್ರದೇಶದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 27 ವರ್ಷದ ಶಾಲಾ ಶಿಕ್ಷಕರೊಬ್ಬರು ಚಂದಾನಗರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಶಾಲೆಗೆ ಇವರು ಹೋಗುತ್ತಿದ್ದರು ಆದರೆ ಶಾಲೆ ಅವಧಿ ಮುಗಿದ ನಂತರ ವಿದ್ಯಾರ್ಥಿ ಮತ್ತು ಶಿಕ್ಷಕಿ ಮನೆಗೆ ಹೋಗುತ್ತಿರಲಿಲ್ಲ. ಅವರ ಸಂಬಂಧ ಶಾಲೆಯಲ್ಲಿ ಈಗಾಗಲೇ ತಿಳಿದಿತ್ತು. ಹುಡುಗನಿಗೆ 16 ವರ್ಷ.
ಇಬ್ಬರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ತಿಂಗಳ 16ರಂದು ಇವರಿಬ್ಬರ ವಿರುದ್ಧ ಚಂದಾನಗರ ಹಾಗೂ ಗಚ್ಚಿಬೌಲಿ ಪೊಲೀಸ್ ಠಾಣೆಗಳಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆಯಂತೆ. ಆದರೆ, ಶಿಕ್ಷಕರು ತಮ್ಮ ಮಗನನ್ನು ವಂಚಿಸಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡರು.
ಈಗಾಗಲೇ ಪೊಲೀಸರು ಶಿಕ್ಷಕ ಮತ್ತು ವಿದ್ಯಾರ್ಥಿಯನ್ನು ಹಿಡಿದಿದ್ದಾರೆ. ಬಳಿಕ ಇಬ್ಬರನ್ನೂ ಠಾಣೆಗೆ ಕರೆದೊಯ್ಯಲಾಯಿತು. ಇಬ್ಬರನ್ನು ಕೌನ್ಸೆಲಿಂಗ್ ಮಾಡಿ ಅವರವರ ಮನೆಗೆ ಕಳುಹಿಸಲಾಗಿದೆಯಂತೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯುವತಿ ಮನೆಯಲ್ಲಿ ಮದುವೆ ಬಗ್ಗೆ ಮಾತು ಕತೆ ನಡೆಯುತ್ತಿದ್ದು ಆ ಕಾರಣಕ್ಕಾಗಿ ಈ ಹಿನ್ನೆಲೆಯಲ್ಲಿ ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಪ್ರಾಥಮಿಕವಾಗಿ ಅಂದಾಜಿಸಿದ್ದಾರೆ. ಆದ್ದರಿಂದ ಬಾಲಕ ಇನ್ನೂ ಮದುವೆಯ ವಯಸ್ಸಿಗೆ ಬಂದಿಲ್ಲವಾದ್ದರಿಂದ ಶಿಕ್ಷಕಿಯ ಮೇಲೆ ತಪ್ಪು ಹೋರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ