• Home
  • »
  • News
  • »
  • jobs
  • »
  • Hassan: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲ ಅರೆಸ್ಟ್

Hassan: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲ ಅರೆಸ್ಟ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಾಲೆ ಪ್ರಾಂಶುಪಾಲರಿಂದಲೇ ಅನೇಕ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಏನು ಅರಿಯದ ಮಕ್ಕಳಿಗೆ ಈ ರೀತಿ ಅನ್ಯಾಯ ಶಾಲೆಯಲ್ಲಾಗುತ್ತಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಶಾಲೆಗಳಲ್ಲಿ (School) ನಡೆಯುತ್ತಿರುವ ಕೆಲವು ಅಹಿತಕೆ ಘಟನೆಗಳಿಗೆ ಸಂಬಂಧಿಸಿ, ಅವುಗಳನ್ನು ತಡೆಯುವಂತೆ ಹಲವೆಡೆ ಮುಂಜಾಗೃತಾ ಕ್ರಮ ವಹಿಸಲಾಗುತ್ತಿದೆ. ಆದರೂ ಸಹ ನಡೆಯಬಾರದ ಅದೆಷ್ಟೋ ಘಟನೆಗಳು ಜರುಗುತ್ತವೆ. ಹಾಸನದಲ್ಲೂ (Hassan) ಸಹ ಮಕ್ಕಳಿಗೆ ಜಾಗೃತಿ (Awareness) ಮೂಡಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ‌ ಇಲಾಖೆಯಿಂದ ಶಾಲೆಯಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು ಆದರೆ ಈ ಸಂದರ್ಭದಲ್ಲಿ ಒಂದು ಆತಂಕಕಾರಿ ಘಟನೆ (Insident) ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರು ಈ ಘಟನೆ ಬಗ್ಗೆ ತಮ್ಮ ಅನುಭವ ಹೇಳಿಕೊಂಡಿದ್ದಾರೆ. 


ಕಾರ್ಯಗಾರದ ವೇಳೆ ಭಯಾನಕ ಅಂಶ ಬಿಚ್ಚಿಟ್ಟ ವಿದ್ಯಾರ್ಥಿನಿಯರು
ಈ ಘಟನೆಯ ಬಗ್ಗೆ ವಿದ್ಯಾರ್ಥಿಗಳು ಹೇಳಿದ ಸತ್ಯವನ್ನು ಕೇಳಿದ್ರೆ ನಿಮಗೂ ಭಯವಾಗುತ್ತೆ. ಇಂತಹ ಘಟನೆಗೆ ಅಂತ್ಯವೇ ಇಲ್ವಾ ಅನಿಸಿ ಬಿಡುತ್ತದೆ. ಶಾಲೆ ಪ್ರಾಂಶುಪಾಲರಿಂದಲೇ ಅನೇಕ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಏನು ಅರಿಯದ ಮಕ್ಕಳಿಗೆ ಈ ರೀತಿ ಅನ್ಯಾಯ ಶಾಲೆಯಲ್ಲಾಗುತ್ತಿದೆ.


ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ಘಟನೆ
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿರುವ ಶಾಲೆಯೊಂದರಲ್ಲಿ ಈ ರೀತಿಯ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಿಡಿಪಿಓ ವರದಿ ಆಧರಿಸಿ ಪ್ರಾಂಶುಪಾಲನ ವಿರುದ್ಧ ದೂರು ನೀಡಲಾಗಿದೆ. ಎಷ್ಟು ದಿನದಿಂದ ಈ ರೀತಿ ನಡೆಯುತ್ತಿತ್ತು ಎಂದು ಸರಿಯಾಗಿ ತಿಳಿದುಬಂದಿಲ್ಲ. ಆದರೆ ವಿದ್ಯಾರ್ಥಿನಿಯರು ಇದರಿಂದ ಕಷ್ಟ ಅನುಭವಿಸಿದ್ದಂತೂ ನಿಜ.


ಒಬ್ಬ ಬದುಕು ನಿರ್ಮಾಣ ಮಾಡುವ ಸ್ಥಾನದಲ್ಲಿರುವ ಶಿಕ್ಷಕ ಈ ರೀತಿ ವಿದ್ಯಾರ್ಥಿನಿಯರ ಬದುಕನ್ನು ಚಿವುಟಿಹಾಕುತ್ತಿರುವುದು ಶೋಚನೀಯ. ಏನೂ ಅರಿಯದ ಅಪ್ರಾಪ್ತ ಬಾಲಲಕಿಯರ ಮೇಲೆ ಈ ರೀತಿ ಮಾಡುತ್ತಿರುವುದು ಆತಂಕಕಾರಿ. ಇನ್ನು ಮುಂದೆ ಪಾಲಕರೂ ಸಹ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.


ಇದನ್ನೂ ಓದಿ: Mathematics: ಸ್ಪರ್ಧಾತ್ಮಕ ಪರೀಕ್ಷೆಗೆ ಗಣಿತದ ಭಯ ಬೇಡ, ಇಷ್ಟು ಮಾಡಿ ಸಾಕು


ವಸತಿ ಶಾಲೆಯ ಪ್ರಾಂಶುಪಾಲನ ಬಂಧನ
ವಿದ್ಯಾರ್ಥಿನಿಲಯ ಅಂದರೆ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಈ ರೀತಿ ಪ್ರಾಂಶುಪಾಲನ ವರ್ತನೆ ಇದು ಎಂಬುದು ಮಹಿಳಾ ಮತ್ತು ಮಕ್ಕಳ‌ ಇಲಾಖೆಯಿಂದ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಗಾರದಿಂದ ತಿಳಿದು ಬಂದಿದೆ. ವಿದ್ಯಾರ್ಥಿನಿಯರು ಧೈರ್ಯ ಮಾಡಿ ತಮಗಾಗುತ್ತಿರುವ ನೋವನ್ನು ಹೇಳಿಕೊಂಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಸತ್ಯಾಂಶ ತಿಳಿದು ಬಂದ ನಂತರ ಇದೀಗ ಪ್ರಾಂಶುಪಾಲನ ಬಂಧನ ಮಾಡಲಾಗಿದೆ.


ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಬಂಧಿತ ಆರೋಪಿಯಾಗಿದ್ದು. ಇನ್ನು ಮುಂದಿನ ತನಿಖೆಯ ನಂತರ ಇನ್ನುಳಿದ ಮಾಹಿತಿ ತಿಳಿದುಬರುತ್ತದೆ. ಮೂಲತಃ ಕೊಡಗು ಜಿಲ್ಲೆಯ ಶಿವಕುಮಾರ್ ವಸತಿ ನಿಲಯದ ಪ್ರಾಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಈ ರೀತಿ ಮಾಡುತ್ತಿರುವ ಕುರಿತು ಈಗಾಗಲೇ  ಜಿಲ್ಲಾ ಮಕ್ಕಳ‌ ಕಲ್ಯಾಣ ಸಮಿತಿಗೆ ಹಾಸ್ಟೆಲ್ ವಿದ್ಯಾರ್ಥಿನಿಯರು ದೂರು ನೀಡಿದ್ದರು.


ಶಿವಕುಮಾರ್ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು


ದೂರಿನ ಅನ್ವಯ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಈ ಸಂಗತಿ ಬಯಲಾಗಿದೆ. ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದ ಮಕ್ಕಳ‌ ಕಲ್ಯಾಣ ಸಮಿತಿ ಅಧ್ಯಕ್ಷರು ನಡೆದ ನಿಜ ಘಟನೆ ಏನು ಎಂಬುದನ್ನು ವಿದ್ಯಾರ್ಥಿನಿಯರಿಂದ ಕೇಳಿ ತಿಳಿದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ಪ್ರಾಂಶುಪಾಲ ಶಿವಕುಮಾರ್‌ನನ್ನು ಬಂಧಿಸಿದ್ದಾರೆ.  ಶಿವಕುಮಾರ್ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು