• Home
 • »
 • News
 • »
 • jobs
 • »
 • Pratibha Karanji: ಮಕ್ಕಳ ಕಲಿಕೆಗೆ ಪ್ರೇರಕ ಶಕ್ತಿ ಪ್ರತಿಭಾ ಕಾರಂಜಿ

Pratibha Karanji: ಮಕ್ಕಳ ಕಲಿಕೆಗೆ ಪ್ರೇರಕ ಶಕ್ತಿ ಪ್ರತಿಭಾ ಕಾರಂಜಿ

ಪ್ರತಿಭಾ ಕಾರಂಜಿ

ಪ್ರತಿಭಾ ಕಾರಂಜಿ

ಇದು ಮಕ್ಕಳ ಮುಂದಿನ ಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಪೂರಕವಾಗುತ್ತದೆ. ಅಷ್ಟೇ ಅಲ್ಲ ವರ್ಷಂಪ್ರತಿ ಪಾಠಗಳನ್ನು ಆಲಿಸುವ ಮಕ್ಕಳಿಗೆ ಇದರಿಂದ ಹೊಸತನ ದೊರೆಯುತ್ತದೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

ಪ್ರಾಥಮಿಕ ಹಾಗೂ ಪ್ರೌಢಶಾಲೆ (School) ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಕಾರಂಜಿ ಹೆಸರಿನಲ್ಲಿ ಸಾಂಸ್ಕ್ರತಿಕ ಸ್ಪರ್ಧೆಗಳನ್ನು (Cultural computation) ನಡೆಸಲಾಗುತ್ತದೆ. ಮಕ್ಕಳಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. ಆ ಕಾರಣದಿಂದಲೇ ಈ ಕಾರ್ಯಕ್ರಮವನ್ನು (Program) ಆಯೋಜಿಸಲಾಗುತ್ತದೆ. ಇದರಲ್ಲಿ ಹಲವಾರು ವಿದದ ಸ್ಪರ್ಧೆಗಳಿರುತ್ತವೆ. ಮಕ್ಕಳು ತಮಗೆ ಯಾವುದರಲ್ಲಿ ಆಸಕ್ತಿ (Interest) ಇದೆಯೋ ಅದರಲ್ಲಿ ಭಾಗವಹಿಸುವ ಅವಕಾಶವಿರುತ್ತದೆ.


ಮಕ್ಕಳಿಗೆ ಇದು ಎಷ್ಟು ಖುಷಿನೀಡುತ್ತದೆಯೋ ಪಾಲಕರು ಹಾಗೂ ಶಿಕ್ಷಕರಿಗೂ ಇದು ಅಷ್ಟೇ ಸಂತಸದ ವಿಷಯವಾಗಿರುತ್ತದೆ. ಒಂದೆರಡು ತಿಂಗಳಿನಿಂತ ಸಂಪೂರ್ಣ ತಯಾರಿ ನಡೆಸುತ್ತಾ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಗೊಳಿಸುತ್ತಾರೆ. ಅಷ್ಟೇ ಅಲ್ಲ ಆಯೋಜನೆಗೆ ಸಂಬಂಧಿಸಿದ ಕೆಲವು ತಯಾರಿಗಳನ್ನೂ ಸಹ ಶಿಕ್ಷಕರು ನಿರ್ವಹಣೆ ಮಾಡಬೇಕಾಗುತ್ತದೆ. ಶಿಕ್ಷಕರ ಸಮಿತಿ ರಚಿಸಲಾಗುತ್ತದೆ.


ಪ್ರತಿಭಾ ಕಾರಂಜಿ ಸಮಿತಿಗಳ ರಚನೆ
ಸ್ವಾಗತ ಸಮಿತಿ, ಕ್ರಿಯಾ ಸಮಿತಿ, ಆಹಾರ ಸಮಿತಿ, ನೋಂದಣಿ ಸಮಿತಿ, ಮಕ್ಕಳ ಸುರಕ್ಷತೆ ಹಾಗೂ ರಕ್ಷಣಾ ಸಮಿತಿ, ಸಾರಿಗೆ ಸಮಿತಿ, ಕಾನೂನು ಶಿಸ್ತುಪಾಲನಾ ಸಮಿತಿ, ರಂಗವೇದಿಕೆ /ಸಭಾಂಗಣ ಸಮಿತಿ, ಬೆಳಕು, ಧ್ವನಿವರ್ಧಕ, ತಾಂತ್ರಿಕ ನಿರ್ವಹಣಾ ಸಮಿತಿ, ಹೀಗೆ ಹಲವಾರು ಸಮಿತಿಗಳು ಇದರಲ್ಲಿ ಕಾರ್ಯ ನಿರ್ವಹಿಸುತ್ತವೆ.


ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ


ಹೀಗೆ ಸಮಿತಿಗಳನ್ನು ರಚಿಸುವ ಮೂಲಕ ಪೂರ್ವ ಸಿದ್ಧತೆಯೊಂದಿಗೆ ಕಾರ್ಯಕ್ರಮ ನಡೆಯುತ್ತದೆ. ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ಹೀಗೆ ಹಲವಾರು ಹಂತಗಳಲ್ಲಿ ಗೆದ್ದ ವಿದ್ಯಾರ್ಥಿಗಳು ಮುಂದಿನ ಸ್ಪರ್ಧೆಗೆ ಸಜ್ಜಾಗುತ್ತಾರೆ. ಇದರಲ್ಲಿ ಗುಂಪು ಮತ್ತು ವೈಯಕ್ತಿಕ ಎರಡೂ ರೀತಿಯ ಸ್ಪರ್ಧೆಗಳು ನಡೆಯುತ್ತವೆ. ಮಕ್ಕಳು ತಮ್ಮ ಕೌಶಲ್ಯಗಳನ್ನು ಇಲ್ಲಿ ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿರುತ್ತದೆ.


ಇದನ್ನೂ ಓದಿ: Nursing Exam: ವಿದ್ಯಾರ್ಥಿಗಳಿಂದ ಪರೀಕ್ಷೆಯಲ್ಲಿ ಸಾಮೂಹಿಕ ನಕಲು; ಕಾಲೇಜು ಸಿಬ್ಬಂದಿಯೇ ಸಾಥ್!


ಶಾಲೆಯಿಂದ ರಾಜ್ಯ ಮಟ್ಟದವರೆಗೆ ವಿಧ್ಯಾರ್ಥಿಗಳು ವೈಯಕ್ತಿಕವಾಗಿ ಹಾಗೂ ಗುಂಪು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ತರಗತಿ 1 ರಿಂದ 4 ಹಾಗೂ 5 ರಿಂದ 7 ರವರೆಗಿನ ವಿಧ್ಯಾರ್ಥಿಗಳಿಗೆ ವೈಯಕ್ತಿಕ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ, ಕಂಠಪಾಠ ಸ್ಪರ್ಧೆ, ಧಾರ್ಮಿಕ ಶ್ಲೋಕ(ಸಂಸ್ಕೃತ ಮತ್ತು ಅರೇಬಿಕ್), ಸುಗಮ ಸಂಗೀತ, ಫ್ಯಾನ್ಸಿ ಉಡುಗೆ, ಚಿತ್ರಕಲೆ, ಕಥೆಯನ್ನು ಹೇಳುವುದು, ಮಣ್ಣಿನ ಆಕೃತಿ ಮಾಡುವುದು, ಯೋಗಾಸನ ಹೀಗೆ ಹಲವು ಸ್ಪರ್ಧೆಗಳಿರುತ್ತವೆ. 5 ರಿಂದ 7 ರವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಗುಂಪು ಸ್ಪರ್ಧೆಗಳಿಗಾಗಿ ಜಾನಪದ ನೃತ್ಯ, ದೇಶಭಕ್ತಿ ಗೀತೆಗಳು, ಕೋಲಾಟ, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.


ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು


8 ರಿಂದ 10 ತರಗತಿಯ ವಿದ್ಯಾರ್ಥಿಯ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಷಣ, ಕಂಠಪಾಠ, ಧಾರ್ಮಿಕ ಶ್ಲೋಕ(ಸಂಸ್ಕೃತ ಮತ್ತು ಅರೇಬಿಕ್) ಯೋಗಾಸನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಹಾಡು, ಸುಗಮ ಸಂಗೀತ, ಭರತನಾಟ್ಯ, ಮಣ್ಣಿನ ಆಕೃತಿ ಮಾಡುವುದು, ಅಣಕು ನಟನೆ, ಪ್ರಬಂಧ ಬರೆಯುವುದು, ಚರ್ಚಾ ಸ್ಪರ್ಧೆ, ರಂಗೋಲಿ, ಗಜಲ್, ಫ್ಯಾನ್ಸಿ ಉಡುಗೆ, ಚಿತ್ರಕಲೆ, ಕಥೆಯನ್ನು ಹೇಳುವ ಚಟುವಟಿಕೆಗಳು ಇರುತ್ತದೆ.
ಮಕ್ಕಳಲ್ಲಿ ಮೂಡಿದ ಹರ್ಷ


ಎರಡೂ ವಿಭಾಗದ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಾರೆ. ಇದು ಮಕ್ಕಳ ಮುಂದಿನ ಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಪೂರಕವಾಗುತ್ತದೆ. ಅಷ್ಟೇ ಅಲ್ಲ ವರ್ಷಂಪ್ರತಿ ಪಾಠಗಳನ್ನು ಆಲಿಸುವ ಮಕ್ಕಳಿಗೆ ಇದರಿಂದ ಹೊಸತನ ದೊರೆಯುತ್ತದೆ. ಆ ಕಾರಣದಿಂದ ಪ್ರತಿ ವರ್ಷವೂ ಸಹ ಇದನ್ನು ಆಯೋಜಿಸಲಾಗುತ್ತದೆ. ಕೊರೊನಾದಿಂದ ನಿಂತು ಹೋಗಿದ್ದ ಈ ಕಾರ್ಯಕ್ರಮ ಈಗ ಮತ್ತೆ ಆರಂಭವಾಗಿದೆ. ಮಕ್ಕಳಲ್ಲಿ ಹರ್ಷ ಮೂಡಿದೆ.

First published: