• ಹೋಂ
 • »
 • ನ್ಯೂಸ್
 • »
 • Jobs
 • »
 • NEP: ಉದ್ಯಮ ವಲಯಕ್ಕೆ ಅಗತ್ಯವಿರುವಂತೆ ಶಿಕ್ಷಣದ ಬದಲಾವಣೆ; ಭವಿಷ್ಯದ ಸೂಚನೆ ನೀಡಿದ ಪ್ರಧಾನಿ ಮೋದಿ

NEP: ಉದ್ಯಮ ವಲಯಕ್ಕೆ ಅಗತ್ಯವಿರುವಂತೆ ಶಿಕ್ಷಣದ ಬದಲಾವಣೆ; ಭವಿಷ್ಯದ ಸೂಚನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಕೇಂದ್ರ ಬಜೆಟ್ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನಾ ಯೋಜನೆಯಡಿಯಲ್ಲಿ ಸುಮಾರು 50 ಲಕ್ಷ ಯುವಕರಿಗೆ ಸ್ಟೈಫಂಡ್‌ ಒದಗಿಸಲಾಗಿದೆ ಎಂದರು.

 • News18 Kannada
 • 4-MIN READ
 • Last Updated :
 • Delhi, India
 • Share this:

ದೆಹಲಿ:  ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಯುವಜನತೆಯ ಯೋಗ್ಯತೆಗೆ ಅನುಗುಣವಾಗಿ ಶಿಕ್ಷಣ ಮತ್ತು ಕೌಶಲ್ಯವನ್ನು ಮರು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವ್ಯಾಖ್ಯಾನಿಸಿದ್ದಾರೆ. ಕೌಶಲ್ಯ ನುರಿತರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು “ಉದ್ಯಮ ಆಧಾರಿತ” ಶಿಕ್ಷಣ (Education System) ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂದು ಅವರು ಒತ್ತಿ ಹೇಳಿದರು. 


ಬಜೆಟ್ ನಂತರ ನಡೆದ ಕೌಶಲ್ಯ ಮತ್ತು ಶಿಕ್ಷಣದಲ್ಲಿ ಯುವಶಕ್ತಿಯನ್ನು ಬಳಸಿಕೊಳ್ಳುವ ಕುರಿತು ವೆಬಿನಾರ್ ಅನ್ನು ಉದ್ದೇಶಿಸಿ  ಅವರು ಮಾತನಾಡಿದರು.


ಶಿಕ್ಷಣ ಕ್ಷೇತ್ರ ಬದಲಾಯಿಸಲು ಪ್ರಯತ್ನಿಸಿದ್ದೇವೆ
"ನಮ್ಮ ಶಿಕ್ಷಣ ವ್ಯವಸ್ಥೆಯು ಪ್ರಾಯೋಗಿಕವಾಗಿರಬೇಕು. ಉದ್ಯಮ ಆಧಾರಿತವಾಗಿರಬೇಕು. ಬಜೆಟ್ ಅದಕ್ಕೆ ಅಡಿಪಾಯ ಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಶಿಕ್ಷಣ ಕ್ಷೇತ್ರವು ಹಲವು ವಿಷಯಗಳಿಗೆ ಬಲಿಯಾಗಿದೆ. ಇದನ್ನು ಬದಲಾಯಿಸಲು ನಾವು ಪ್ರಯತ್ನಿಸಿದ್ದೇವೆ. ನಾವು ಯುವಜನರ ಯೋಗ್ಯತೆ ಮತ್ತು ಮುಂಬರುವ ಕಾಲದ ಬೇಡಿಕೆಗಳಿಗೆ ಅನುಗುಣವಾಗಿ ಶಿಕ್ಷಣ ಮತ್ತು ಕೌಶಲ್ಯವನ್ನು ಮರುಹೊಂದಿಸಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.


ಕೇಂದ್ರ ಬಜೆಟ್ 2023-24 ರಲ್ಲಿ ಘೋಷಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮಾಡಲು ಹೊಸ ಆಲೋಚನೆ ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಈ ವೆಬಿನಾರ್ ಆಯೋಜಿಸಿತ್ತು.


ಇದನ್ನೂ ಓದಿ: Foreign Study: ವಿದ್ಯಾರ್ಥಿಗಳೇ ಗಮನಿಸಿ, ವಿದೇಶದಲ್ಲಿ ಓದುವವರಿಗೆ ಒಂದೊಳ್ಳೆ ಅವಕಾಶ ಇಲ್ಲಿದೆ!


ಯುವಕರಿಗೆ ತರಗತಿಯ ಹೊರಗೆ ಕೌಶಲ್ಯವನ್ನು ಹೆಚ್ಚಿಸಲು ಇಂಟರ್ನ್‌ಶಿಪ್ ಮತ್ತು ಅಪ್ರೆಂಟಿಸ್‌ಶಿಪ್‌ಗಳನ್ನು ಒದಗಿಸಲು ವಿಶೇಷ ಗಮನಹರಿಸಬೇಕ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.


25 ಲಕ್ಷ ಇಂಟರ್ನ್‌ಶಿಪ್‌ಗಳ ಅವಶ್ಯಕತೆಯಿದೆ
"ಇಂದು ರಾಷ್ಟ್ರೀಯ ಇಂಟರ್ನ್‌ಶಿಪ್ ಪೋರ್ಟಲ್‌ನಲ್ಲಿ ಸುಮಾರು 75,000 ಉದ್ಯೋಗದಾತರು ಇದ್ದಾರೆ. ಇಲ್ಲಿಯವರೆಗೆ 25 ಲಕ್ಷ ಇಂಟರ್ನ್‌ಶಿಪ್‌ಗಳ ಅವಶ್ಯಕತೆ ಇರುವ ಕುರಿತ ಮಾಹಿತಿ ನೀಡಲಾಗಿದೆ. ಈ ಪೋರ್ಟಲ್‌ನ ಗರಿಷ್ಠ ಬಳಕೆ ಮತ್ತು ದೇಶದಲ್ಲಿ ಇಂಟರ್ನ್‌ಶಿಪ್ ಸಂಸ್ಕೃತಿಯನ್ನು ಇನ್ನಷ್ಟು ವಿಸ್ತರಿಸುವಂತೆ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದರು.


ಸರಿಯಾದ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಪತ್ತೆಗೆ ಸಹಕಾರಿ
ಅಪ್ರೆಂಟಿಸ್‌ಶಿಪ್‌ಗಳು ದೇಶದ ಯುವಕರನ್ನು ಭವಿಷ್ಯತ್ತಿಗೆ ಸಿದ್ಧಗೊಳಿಸುತ್ತವೆ. ಕೈಗಾರಿಕೆಗಳು ಸರಿಯಾದ ಕೌಶಲ್ಯದೊಂದಿಗೆ ಉದ್ಯೋಗಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ ಕುರಿತು ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನಾ ಯೋಜನೆಯಡಿಯಲ್ಲಿ ಸುಮಾರು 50 ಲಕ್ಷ ಯುವಕರಿಗೆ ಸ್ಟೈಫಂಡ್‌ ಒದಗಿಸಲಾಗಿದೆ. ಇದು ಅಪ್ರೆಂಟಿಸ್‌ಶಿಪ್‌ ಉತ್ತೇಜನಕಾರಿ ವಾತಾವರಣವನ್ನು ಸೃಷ್ಟಿಸುತ್ತಿದೆ.  ಹಣ ಪಾವತಿ ಪ್ರಕ್ರಿಯೆಯಲ್ಲಿ ಉದ್ಯಮಗಳಿಗೆ ಸಹಾಯ ಮಾಡುತ್ತದೆ. ಜಗತ್ತು ಭಾರತವನ್ನು ಉತ್ಪಾದನಾ ಕೇಂದ್ರವಾಗಿ ನೋಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.


ಇದನ್ನೂ ಓದಿ: ChatGPT ಬರುವ ಮುನ್ನ ಶಿಕ್ಷಣಕ್ಕೆ ಸಂಬಂಧಿಸಿದ ಯಾವೆಲ್ಲಾ ಸಾಫ್ಟ್‌ವೇರ್‌ಗಳಿತ್ತು?


ದೇಶದಲ್ಲಿ ಹೂಡಿಕೆ ಮಾಡುವ ಬಗ್ಗೆ ಇಡೀ ವಿಶ್ವಕ್ಕೆ ಉತ್ಸಾಹ ಮೂಡಿದೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯಡಿ ಮುಂಬರುವ ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ, ಮರು ಕೌಶಲ್ಯ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯ ಮೂಲಕ ಆದಿವಾಸಿಗಳು, ವಿಕಲಚೇತನರು ಮತ್ತು ಮಹಿಳೆಯರ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು  ರೂಪಿಸಲಾಗುತ್ತಿದೆ ಎಂದು ತಿಳಿಸಿದರು.


ಇದನ್ನೂ ಓದಿ: Foreign Study: ವಿದ್ಯಾರ್ಥಿಗಳೇ ಗಮನಿಸಿ, ವಿದೇಶದಲ್ಲಿ ಓದುವವರಿಗೆ ಒಂದೊಳ್ಳೆ ಅವಕಾಶ ಇಲ್ಲಿದೆ!


"AI (ಕೃತಕ ಬುದ್ಧಿಮತ್ತೆ), ರೋಬೋಟಿಕ್ಸ್, IoT ಮತ್ತು ಡ್ರೋನ್‌ಗಳಂತಹ ವಲಯಗಳಿಗೆ ನುರಿತ ಉದ್ಯೋಗಿಗಳನ್ನು ಸೃಷ್ಟಿಸುವತ್ತ ಗಮನಹರಿಸಲಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಹೂಡಿಕೆದಾರರು ಪ್ರತಿಭೆಯನ್ನು ಹುಡುಕಲು ಹೆಚ್ಚು ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸಬೇಕಂತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು