• Home
  • »
  • News
  • »
  • jobs
  • »
  • Pariksha Pe Charcha 2023: 'ಪರೀಕ್ಷಾ ಪೇ ಚರ್ಚಾ'ದಲ್ಲಿ ಎಲ್ಲರೂ ಭಾಗವಹಿಸುವಂತೆ ಪ್ರಧಾನಿ ಮೋದಿ ಕರೆ

Pariksha Pe Charcha 2023: 'ಪರೀಕ್ಷಾ ಪೇ ಚರ್ಚಾ'ದಲ್ಲಿ ಎಲ್ಲರೂ ಭಾಗವಹಿಸುವಂತೆ ಪ್ರಧಾನಿ ಮೋದಿ ಕರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಜನವರಿ 27 ರಂದು ವಾರ್ಷಿಕ 'ಪರೀಕ್ಷಾ ಪೇ ಚರ್ಚಾ'ದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂವಾದದ ಆರನೇ ಆವೃತ್ತಿಯು ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸ್ಥಳಕ್ಕೆ ಆಗಮಿಸಿದರೆ ನೇರಾ ನೇರವಾಗಿ ಮೋದಿ ಅವರೊಟ್ಟಿಗೆ ಮಾತನಾಡಬಹುದು.

ಮುಂದೆ ಓದಿ ...
  • Share this:

ಪರೀಕ್ಷಾ ಪೇ ಚರ್ಚಾ 2023ರಲ್ಲಿ (Pariksha Pe Charcha 2023) ಎಲ್ಲರೂ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಕರೆ ನೀಡಿದ್ದಾರೆ. ಸಂವಾದಾತ್ಮಕ ಕಾರ್ಯಕ್ರಮವು ಪರೀಕ್ಷೆಗಳನ್ನು ಒತ್ತಡ (Exam Stress) ಮುಕ್ತವಾಗಿಸಲು ಮತ್ತು ವಿದ್ಯಾರ್ಥಿಗಳನ್ನು (Students) ಬೆಂಬಲಿಸುವ ಮಾರ್ಗಗಳನ್ನು ಚರ್ಚಿಸಲು ಅವಕಾಶವನ್ನು ನೀಡುತ್ತದೆ. ಆದ್ದರಿಂದ ಹೆಚ್ಚಿನ ಸಂಕ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಕಾರ್ಯಕ್ರಮದಲ್ಲಿ (Program) ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ.


ಅದರಂತೆ ಈಗಾಗಲೇ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹೋಗಲು ವಿದ್ಯಾರ್ಥಿಗಳ ಹೆಸರನ್ನು ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು. ಅಷ್ಟೇ ಅಲ್ಲ ಈ ಚರ್ಚೆಯಲ್ಲಿ ಪಾಲಕರು ಮತ್ತು ಶಿಕ್ಷಕರೂ ಸಹ ಭಾಗಿಯಾಗುವ ಅವಕಾಶ ನೀಡಲಾಗಿದೆ. ಇದು ತುಂಬಾ ಜನರಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.


ಜನವರಿ 27 ರಂದು ನಡೆಯಲಿದೆ ಕಾರ್ಯಕ್ರಮ


ಜನವರಿ 27 ರಂದು ವಾರ್ಷಿಕ 'ಪರೀಕ್ಷಾ ಪೇ ಚರ್ಚಾ'ದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂವಾದದ ಆರನೇ ಆವೃತ್ತಿಯು ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸ್ಥಳಕ್ಕೆ ಆಗಮಿಸಿದರೆ ನೇರಾ ನೇರವಾಗಿ ಮೋದಿ ಅವರೊಟ್ಟಿಗೆ ಮಾತನಾಡಬಹುದು.


ಇದನ್ನೂ ಓದಿ: Education: ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ ಸ್ಥಾಪನೆಗೆ ಅಸ್ತು


ಪರೀಕ್ಷಾ ಪೇ ಚರ್ಚಾವು ಅತ್ಯಂತ ಪ್ರಯೋಜನಕಾರಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ, ಪರೀಕ್ಷೆಗಳನ್ನು ಒತ್ತಡ-ಮುಕ್ತಗೊಳಿಸುವ ವಿಧಾನಗಳನ್ನು ಚರ್ಚಿಸಲು ಮತ್ತು #ExamWarriors (ವಿದ್ಯಾರ್ಥಿಗಳನ್ನು) ಅನ್ನು ಬೆಂಬಲಿಸಲು ಅವಕಾಶವನ್ನು ನೀಡುತ್ತದೆ. ನಾನು ಈ ತಿಂಗಳ 27 ರಂದು ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದೇನೆ ಮತ್ತು ಈ ಅನನ್ಯ ಸಂವಾದದಲ್ಲಿ ಭಾಗವಹಿಸಲು ನಿಮ್ಮೆಲ್ಲರನ್ನು ಕೋರುತ್ತೇನೆ. #PPC2023,ಎಂದು ಪ್ರಧಾನಿ ಮೋದಿ ಬುಧವಾರ ಟ್ವೀಟ್ ಮಾಡಿದ್ದಾರೆ.


ವಾರ್ಷಿಕ ಈವೆಂಟ್‌ನಲ್ಲಿ ಭಾಗವಹಿಸಲು ನೋಂದಣಿಗಳು ನವೆಂಬರ್ 25 ರಿಂದ ಡಿಸೆಂಬರ್ 30 ರವರೆಗೆ ತೆರೆದಿತ್ತು ಈಗಾಗಲೇ ನೋಂದಣಿ ಮಾಡಿಕೊಂಡವರಿಗೆ ಈ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.


ಇದನ್ನೂ ಓದಿ: Pariksha Pe Charcha 2023: ಪ್ರಧಾನಿ ಜೊತೆ ಸಂವಾದದಲ್ಲಿ ಭಾಗವಹಿಸ್ಬೇಕಾ? ನಾಳೆಯೊಳಗೆ ಹೀಗೆ ರೆಜಿಸ್ಟರ್ ಮಾಡ್ಕೊಳ್ಳಿ


ಪರೀಕ್ಷಾ ಪೆ ಚರ್ಚಾ ಎಂಬುದು ಮುಂಬರುವ ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸುವ ವಾರ್ಷಿಕ ಕಾರ್ಯಕ್ರಮವಾಗಿದೆ. ಈವೆಂಟ್‌ನಲ್ಲಿ, ಅವರು ಪರೀಕ್ಷೆಯ ಒತ್ತಡ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿಯವರ ಸಂವಾದಾತ್ಮಕ ಕಾರ್ಯಕ್ರಮದ ಮೊದಲ ಆವೃತ್ತಿಯು ಫೆಬ್ರವರಿ 16, 2018 ರಂದು ಕ್ರೀಡಾಂಗಣದಲ್ಲಿ ನಡೆಯಿತು.


ಸಾಂಕೇತಿಕ ಚಿತ್ರ


ಸಚಿವಾಲಯದ (MoE) ಅಧಿಕಾರಿಯ ಪ್ರಕಾರ, 2022 ನೇ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೋಂದಣಿಗಳು ದ್ವಿಗುಣಗೊಂಡಿದೆ. ಸುಮಾರು 38.80 ಲಕ್ಷ ಭಾಗವಹಿಸಲಿದ್ದಾರೆ (ವಿದ್ಯಾರ್ಥಿಗಳು- 31.24 ಲಕ್ಷ, ಶಿಕ್ಷಕರು - 5.60 ಲಕ್ಷ, ಪೋಷಕರು - 1.95 ಲಕ್ಷ) PPC ಗೆ ನೋಂದಾಯಿಸಿದ್ದಾರೆ. 150 ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು, 51 ದೇಶಗಳ ಶಿಕ್ಷಕರು ಮತ್ತು 50 ದೇಶಗಳ ಪೋಷಕರು PPC-2023 ಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಪರಿಕ್ಷಾ ಪೇ ಚರ್ಚಾ ಕಿಟ್ ಮತ್ತು ಪ್ರಮಾಣ ಪತ್ರ


ರಾಜ್ಯ ಮಂಡಳಿಗಳು, CBSE, KVS, NVS ಮತ್ತು ಇತರ ಮಂಡಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಉತ್ಸಾಹದಿಂದ ಭಾಗವಹಿಸಲಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. MyGov ನಲ್ಲಿ ಸೃಜನಾತ್ಮಕ ಬರವಣಿಗೆ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಸುಮಾರು 2,050 ಭಾಗವಹಿಸುವವರಿಗೆ ಪ್ರಧಾನ ಮಂತ್ರಿಯವರು ಬರೆದಿರುವ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷಾ ವಾರಿಯರ್ಸ್ ಪುಸ್ತಕವನ್ನು ಒಳಗೊಂಡ ವಿಶೇಷ ಪರಿಕ್ಷಾ ಪೇ ಚರ್ಚಾ ಕಿಟ್ ಮತ್ತು ಪ್ರಮಾಣಪತ್ರವನ್ನು ನೀಡಲಾಗುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು