• Home
  • »
  • News
  • »
  • jobs
  • »
  • Education: ಶಾಲೆಗಳಲ್ಲಿ ಪ್ಲಾಸ್ಟಿಕ್​ ಪಾಠ ಅತಿಮುಖ್ಯ, ಬದಲಾವಣೆ ಮಕ್ಕಳಿಂದಲೇ ಸಾಧ್ಯ

Education: ಶಾಲೆಗಳಲ್ಲಿ ಪ್ಲಾಸ್ಟಿಕ್​ ಪಾಠ ಅತಿಮುಖ್ಯ, ಬದಲಾವಣೆ ಮಕ್ಕಳಿಂದಲೇ ಸಾಧ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು ಮೂಲದ ಘನತ್ಯಾಜ್ಯ ನಿರ್ವಹಣಾ ರೌಂಡ್ ಟೇಬಲ್ (SWMRT) ಸದಸ್ಯರಾದ ಪಿಂಕಿ ಚಂದ್ರನ್, ಹೇಗೆ ಪ್ಲಾಸ್ಟಿಕ್ಅನ್ನು ನಿರ್ಬಹಿಸಬೇಕು ಎಂಬ ಮಾರ್ಗಸೂಚಿಗಳ ಕೊರತೆ ನಮ್ಮಲ್ಲಿದೆ. ಎಂದು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಬದಲಾವಣೆ ತರಬೇಕು ಭೂಮಿಯ ಮುಂದಿನ ನಿಜ ಸ್ಥಿತಿಯನ್ನು ಮಕ್ಕಳಿಗೆ ಅರ್ಥ ಮಾಡಿಸುವುದು ಮುಖ್ಯವಾಗಿರುತ್ತದೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಪ್ಲಾಸ್ಟಿಕ್ (Plastic)​ ವಿಶ್ವದಾದ್ಯಂತ ಒಂದು ದುರಂತಕರ ಸಂಗತಿ. ಇದನ್ನು ನಾಶ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಭೂಮಿಯನ್ನು (Earth) ಸಂಪೂರ್ಣವಾಗಿ ನುಂಗಿ ಹಾಕುತ್ತಿರುವ ವಸ್ತು ಇದಾಗಿದೆ. ಇದ ಬಳಕೆಯನ್ನು ನಿಷೇಧ ಮಾಡಿಸುವ ಕಾರ್ಯ ಈಗ ಅತ್ಯಗತ್ಯ. ಈ ನಿಟ್ಟಿನಲ್ಲಿ ಶಾಲೆಗಳಿಂದ ಈ ಅಭ್ಯಾಸವನ್ನು (Practice) ರೂಢಿಸಿದರೆ ಮುಂದೆ ಒಂದು ದೊಡ್ಡ ಬದಲಾವಣೆಯಾಗಬಹುದು ಎಂಬ ಆಶಯದಿಂದ ಈಗ ಹೊಸದೊಂದು ಯೋಜನೆ (Plan) ಮಾಡಲಾಗುತ್ತಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.


2016 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಅಸ್ತಿತ್ವದಲ್ಲಿದ್ದರೂ, ಕರ್ನಾಟಕವು ಅದನ್ನು ಕಾರ್ಯಗತಗೊಳಿಸುವಲ್ಲಿ ಸ್ವಲ್ಪ ಹಿಂದಿತ್ತು ಎಂದೇ ಹೇಳಬಹುದು ಅಷ್ಟೇ ಅಲ್ಲ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದರೂ ತಪ್ಪಿಲ್ಲ. ಮಾಲಿನ್ಯದ ಮಾನದಂಡಗಳನ್ನು ನೋಡಿದರೆ ಪ್ಲಾಸ್ಟಿಕ್​ ತ್ಯಾಜ್ಯಗಳ ಸಂಖ್ಯೆ ಹೆಚ್ಚಿದೆ. ಇದರಲ್ಲಿ ವಿಫಲಗೊಂಡ ನಂತರ ಸುಮಾರು 400 ಪ್ಲಾಸ್ಟಿಕ್ ತಯಾರಿಕೆ, ಮರುಬಳಕೆ ಮತ್ತು ಪೂರಕ ಘಟಕಗಳನ್ನು ಆರಂಭಿಸಲಾಯಿತು.


ಕೇವಲ 3 ಪ್ರತಿಶತ ಮಾತ್ರ ಮರುಬಳಕೆಯ ಪ್ಲಾಸ್ಟಿಕ್​ ಆಗಿದ್ದು ಇನ್ನುಳಿದವೆಲ್ಲಾ ಯೂಸ್​ ಆ್ಯಂಡ್​ ಥ್ರೋ ಪ್ಲಾಸ್ಟಿಕ್​ಗಳಾಗಿವೆ. ಎಂದು ಕೇಂದ್ರ ಸರ್ಕಾರದ ವರದಿಯಲ್ಲಿ ತಿಳಿದುಬಂದಿದೆ. ರಾಜ್ಯದಲ್ಲಿ ಅದನ್ನು ಸಂಸ್ಕರಿಸುವ ಸೌಲಭ್ಯದ ಕೊರತೆಯಿದೆ. ಚಿಪ್ಸ್ ಪ್ಯಾಕೆಟ್‌ಗಳಂತಹ ಏಕ ಬಳಕೆಯ ಪ್ಲಾಸ್ಟಿಕ್​ ವಸ್ತುಗಳು ಪರಿಸರವನ್ನು ಬಹುದೊಡ್ಡ ಮಟ್ಟದಲ್ಲಿ ಹಾಳು ಮಾಡುತ್ತಿದೆ.


ಇದನ್ನೂ ಓದಿ: UG PG Exams: ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಇನ್ಮುಂದೆ ಇಂಗ್ಲಿಷ್-ಕನ್ನಡ ಎರಡೂ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು


EPR ಅಡಿಯಲ್ಲಿ ಬರುವ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಈಗ ತಯಾರಕರು, ಆಮದುದಾರರು ಮತ್ತು ಬ್ರಾಂಡ್ ಮಾಲೀಕರು (PIBOs) ಸಂಗ್ರಹಿಸುತ್ತಾರೆ ಮತ್ತು ಅವುಗಳನ್ನು ನೋಂದಾಯಿತ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ (PWP) ಘಟಕಗಳಿಗೆ ನೀಡಲಾಗುತ್ತದೆ. KSPCB ಒದಗಿಸಿದ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ 140 ನೋಂದಾಯಿತ ಪ್ಲಾಸ್ಟಿಕ್​ ಮರುಬಳಕೆಯ ಕೇಂದ್ರಗಳಿವೆ. ವರ್ಷಕ್ಕೆ 1,88,905 ಮೆಟ್ರಿಕ್ ಟನ್‌ಗಳ ಸಂಸ್ಕರಣಾ ಸಾಮರ್ಥ್ಯವನ್ನು ಇವುಗಳು ಹೊಂದಿವೆ. ಅವುಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಣ್ಣಕಣಗಳಾಗಿ ಪರಿವರ್ತಿಸುತ್ತವೆ. ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಮರುಬಳಕೆ ಕಡ್ಡಾಯ ಮಾಡಿದೆ.


ಭೂಮಿಯ ಮುಂದಿನ ನಿಜ ಸ್ಥಿತಿಯನ್ನು ಮಕ್ಕಳಿಗೆ ಅರ್ಥ ಮಾಡಿಸಿ


ಬೆಂಗಳೂರು ಮೂಲದ ಘನತ್ಯಾಜ್ಯ ನಿರ್ವಹಣಾ ರೌಂಡ್ ಟೇಬಲ್ (SWMRT) ಸದಸ್ಯರಾದ ಪಿಂಕಿ ಚಂದ್ರನ್, ಹೇಗೆ ಪ್ಲಾಸ್ಟಿಕ್ಅನ್ನು ನಿರ್ಬಹಿಸಬೇಕು ಎಂಬ ಮಾರ್ಗಸೂಚಿಗಳ ಕೊರತೆ ನಮ್ಮಲ್ಲಿದೆ. ಎಂದು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಬದಲಾವಣೆ ತರಬೇಕು ಭೂಮಿಯ ಮುಂದಿನ ನಿಜ ಸ್ಥಿತಿಯನ್ನು ಮಕ್ಕಳಿಗೆ ಅರ್ಥ ಮಾಡಿಸುವುದು ಮುಖ್ಯವಾಗಿರುತ್ತದೆ. ಆ ಕಾರಣದಿಂದ ಪರಿಸರ ಪಾಠ ಮಾಡುವುದು ಬಹಳ ಮುಖ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಪರಿಸರ ಅಧ್ಯಯನದ ಪ್ರಾಯೋಗಿಕ ಪಾಠಗಳ ಅವಶ್ಯಕಥೆ ಇದೆ ಎಂದು ತಿಳಿದುಬಂದಿದೆ.


ಮುಂದಿನ ದಿನದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಸಹಕಾರಿ


ಹೀಗೆ ಮಾಡಿದಲ್ಲಿ ಮಾತ್ರ ಮುಂದಿನ ಭವಿಷ್ಯದಲ್ಲಿ ಮಹತ್ತರ ಬದಲಾವಣೆಯಾಗಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮಕ್ಕಳಿಗೂ ಪ್ಲಾಸ್ಟಿಕ್ ಒಂದು ಜೀವನದ ಭಾಗವಾಗಿ ಅಡಕವಾಗಿ ಹೋಗುತ್ತದೆ. ಒಂದೇ ಭಾರಿ ಸಂಪೂರ್ಣ ನಿಷೇಧ ಸಾಧ್ಯವಾಗದಿದ್ದರೂ ಪ್ರಾಥಮಿಕ ಹಂತದಿಂದ ಒಂದೊಂದಾಗಿ ಅಥವಾ ಒಂದೊಂದು ಹೊಸ ರೀತಿಯಲ್ಲಿ ಪ್ಲಾಸ್ಟಿಕ್ ತ್ಯಜಿಸುತ್ತಾ ಬರಬೇಕಾಗುತ್ತದೆ. ಕಲಿಸುವಾಗಲೇ ಮಕ್ಕಳಿಗೆ ಇದರ ಕುರಿತು ತಿಳಿವಳಿಕೆ ಮೂಡಿಸುವುದು ಅನಿವಾರ್ಯವಾಗಿದೆ. ಹಾಗಾದಾಗ ಮಾತ್ರ ಮುಂದಿನ ದಿನದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗುವು ಸಾಧ್ಯತೆ ಇರುತ್ತದೆ. ಇಲ್ಲವಾದರೆ ಇನ್ನೂ ಹೆಚ್ಚಿನ ಪ್ಲಾಸ್ಟಿಕ್ ಬಳಕೆಗೆ ಕಾರಣವಾಗುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು