• ಹೋಂ
  • »
  • ನ್ಯೂಸ್
  • »
  • Jobs
  • »
  • Physical Science ವಿಷಯವನ್ನೇ ಹೆಚ್ಚಿನ ವಿದ್ಯಾರ್ಥಿಗಳು ಯಾಕೆ ಆಯ್ಕೆ ಮಾಡ್ತಾರೆ ಗೊತ್ತಾ? ಇಲ್ಲಿದೆ ಉತ್ತರ

Physical Science ವಿಷಯವನ್ನೇ ಹೆಚ್ಚಿನ ವಿದ್ಯಾರ್ಥಿಗಳು ಯಾಕೆ ಆಯ್ಕೆ ಮಾಡ್ತಾರೆ ಗೊತ್ತಾ? ಇಲ್ಲಿದೆ ಉತ್ತರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಅಲ್ಲಿ ಮುಖ್ಯವಾಗಿ ಯಾವ ವಿಷಯವನ್ನು ಕಲಿಯುತ್ತಾರೆ ಗೊತ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ವಿವರ ಇಲ್ಲಿದೆ ನೋಡಿ.

  • Share this:

ಇತ್ತಿಚೀಗೆ ಎಂಜಿನಿಯರ್‌ ಪದವಿಗಿಂತ ಭೌತಿಕ ವಿಜ್ಞಾನ ಪದವಿ ಕಡೆಗೆ ಯುವಕರು ಆಕರ್ಷಿತರಾಗಿ ಅದರಲ್ಲಿ ಉನ್ನತ ವ್ಯಾಸಂಗ (Study) ಮಾಡುತ್ತಿದ್ದಾರೆ. ಈಗ ಇಂಜಿನಿಯರ್‌ ಪದವಿಗೆ ಮೊದಲಿಗಿಂತ ಬೆಲೆ ಕಡಿಮೆ ಆಗಿದೆ ಎಂದು ಕೆಲ ಡೇಟಾಗಳು ತಿಳಿಸುತ್ತಿವೆ. ವಿದೇಶದಲ್ಲಿ ಎಂಜಿನಿಯರ್‌ ಪದವಿಯಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದರೆ ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆಯನ್ನು (GRE) ಪ್ರತಿಯೊಬ್ಬ ವಿದ್ಯಾರ್ಥಿಯು (Student) ತೆಗೆದುಕೊಳ್ಳಲೇಬೇಕು. ಆದರೆ ಇತ್ತಿಚೀಗೆ ಆ ಪರೀಕ್ಷೆಯನ್ನು ತೆಗೆದುಕೊಳ್ಳುವ ಭಾರತೀಯ ವಿದ್ಯಾರ್ಥಿಗಳು ಶೇಕಡಾವಾರು ಕಡಿಮೆ ಆಗುತ್ತಿದ್ದಾರೆ ಎಂದು ಡೇಟಾಗಳು ತಿಳಿಸುತ್ತಿವೆ.ಇದೇ ಸಮಯದಲ್ಲಿ ಆಶ್ಚರ್ಯವೆಂಬತೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೂ ವಿಜ್ಞಾನ ಸೇರಿದಂತೆ ಇತರ ಭೌತಿಕ ವಿಜ್ಞಾನಗಳ ಪದವಿಯು ಈಗ ವಿದ್ಯಾರ್ಥಿಗಳ ಅತ್ಯಂತ ಜನಪ್ರಿಯ ಆಯ್ಕೆ ಆಗುತ್ತಿವೆಯಂತೆ.


ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆ (ಜಿಆರ್‌ಇ) ಎಂದ್ರೇನು?


ಜಿಆರ್‌ಇ (GRE) ಎನ್ನುವುದು ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ನಾತಕೋತ್ತರ ಪದವಿಗೆ ಇರುವ ಪ್ರವೇಶಾತಿ ಪರೀಕ್ಷೆ ಆಗಿದೆ. ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್‌ನ ಉನ್ನತ ಶಿಕ್ಷಣ ಸಂಸ್ಥೆಗಳು ಸಹ GRE ಪರೀಕ್ಷೆಯ ಅಂಕಗಳನ್ನು ಸ್ವೀಕರಿಸುತ್ತವೆ. ಈ ಪರೀಕ್ಷೆಯಲ್ಲಿ‌ ಪಡೆಯುವ ಅಂಕಗಳೇ ವಿದೇಶದಲ್ಲಿ ಪ್ರವೇಶ ಪಡೆಯಲು ಮುಖ್ಯವಾದ ಮಾನದಂಡವಾಗಿದೆ.


ಇತ್ತಿಚೀಗೆ ವಿದೇಶದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯಲು ಭಾರತೀಯ ವಿದ್ಯಾರ್ಥಿಗಳು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂಬುದು ಗಮನಾರ್ಹವಾಗಿದೆ. ಆದರೆ, ಹತ್ತು ವರ್ಷಗಳ ಹಿಂದೆ 34% ರಷ್ಟು ಇದ್ದ ವಿದ್ಯಾರ್ಥಿಗಳ ಸಂಖ್ಯೆ 2021-22 ರ ಶೈಕ್ಷಣಿಕ ವರ್ಷದಲ್ಲಿ 17% ರಷ್ಟಕ್ಕೆ ಇಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭೌತಿಕ ವಿಜ್ಞಾನದಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 27% ರಷ್ಟಿಂದ 37% ರಷ್ಟಕ್ಕೆ ಏರಿದೆಎಂದು ವರದಿಗಳು ತಿಳಿಸಿವೆ.


ಶೈಕ್ಷಣಿಕ ಅಧ್ಯಯನಗಳು ಏನ್‌ ಹೇಳ್ತಿವೆ?


ವಿದೇಶದಲ್ಲಿರುವ ದಿ ಪ್ರಿನ್ಸ್‌ಟನ್ ರಿವ್ಯೂ ಸಂಸ್ಥೆಯಾದ ಮಾನ್ಯ ಎಂಬ ಕನ್ಸಲ್ಟೆನ್ಸಿಯ ಅಧ್ಯಯನದ ಪ್ರಕಾರ, “ಅಮೆರಿಕದಲ್ಲಿ ಭೌತ ವಿಜ್ಞಾನದ ಪದವಿಗಳು ಎಂಜಿನಿಯರಿಂಗ್‌ಗಿಂತ GRE ಅಂಕಗಳನ್ನು ಕೇಳುವ ಸಾಧ್ಯತೆ ಹೆಚ್ಚು ಎಂಬ ಅಂಶಕ್ಕೆ ಈ ಪ್ರವೃತ್ತಿಯು ಹೆಚ್ಚಾಗಿದೆ.


ಇದನ್ನೂ ಓದಿ: AP Inter Results 2023 ಪ್ರಕಟ; ಈ ಲಿಂಕ್​ ಬಳಸಿ ಚೆಕ್​ ಮಾಡಿ


ಉದಾಹರಣೆಗೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ ನಂತಹ ವಿಶ್ವವಿದ್ಯಾಲಯಗಳಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪದವಿಗಳಿಗೆ GRE ಅಂಕಗಳು ಅಗತ್ಯವಿರುತ್ತದೆ, ಆದರೆ ಇದು ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್, ಕಂಪ್ಯೂಟರ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಂತಾದ ಇಂಜಿನಿಯರಿಂಗ್ ಪದವಿಗಳಿಗೆ ಕಡ್ಡಾಯವಲ್ಲ” ಎಂದು ದಿ ಪ್ರಿನ್ಸ್‌ಟನ್ ರಿವ್ಯೂ ಸಂಸ್ಥೆಯಾದ ಮಾನ್ಯದ ಮುಖ್ಯಸ್ಥರಾದ ಜಿ. ಶಾರದಾ, ಅವರು ಸುದಿ ಮಾಧ್ಯಮ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.


ಎಂಜಿನಿಯರ್‌ ಪದಿವಿಗಿಂತ ಭೌತಿಕ ವಿಜ್ಞಾನದ ಪದವಿಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ ಎಂದು US ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಓಪನ್ ಡೋರ್ಸ್ ವರದಿಯಿಂದ ದೃಢೀಕರಿಸಲ್ಪಟ್ಟಿದೆ. ಈ ವರದಿಯು US ನಲ್ಲಿ ಇಂಜಿನಿಯರಿಂಗ್ ಅನ್ನು ಅನುಸರಿಸುವ ಭಾರತೀಯರ ಪ್ರಮಾಣವು 2009-10ರಲ್ಲಿ 38.8% ರಷ್ಟಿದ್ದ ದತ್ತಾಂಶ 2021-22ರಲ್ಲಿ 29.6% ರಷ್ಟು ಕುಸಿದಿದೆ ಎಂದು ತಿಳಿಸುತ್ತಿದೆ.


“ಈಗ ಬಿಟೆಕ್ ಪದವೀಧರರು ಭಾರತದಲ್ಲಿ ಉತ್ತಮ ಮತ್ತು ಹೆಚ್ಚು ಸಂಬಳದ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಕಾಲೇಜು ಮುಗಿದ ಕೂಡಲೇ ವಾರ್ಷಿಕ 50 ಲಕ್ಷ ರೂಪಾಯಿ ಪ್ಯಾಕೇಜ್ ಪಡೆಯುವುದು ಈಗ ಸಾಮಾನ್ಯವಾಗಿದೆ. ಆದರೆ ಎರಡು ದಶಕಗಳ ಹಿಂದೆ ಹೀಗಿರಲಿಲ್ಲ. ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುತ್ತಿದ್ದರು.



ಆದರೆ ಈಗ ಭೌತಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆಯುವುದಕ್ಕೆ ವಿದೇಶಕ್ಕೆ ಹಾರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲಿದೆ. ಏಕೆಂದರೆ ಭೌತಿಕ ವಿಜ್ಞಾನದಲ್ಲಿ ಭಾರತದಲ್ಲಿ ಉತ್ತಮ ಉದ್ಯೋಗವಕಾಶಗಳಿಗೆ ಕೊರತೆ ಇದೆ” ಎಂದು ಎಂದು ಐಐಟಿ ಹೈದರಾಬಾದ್ ನಿರ್ದೇಶಕ ಬಿ.ಎಸ್. ಮೂರ್ತಿ ಸುದ್ದಿ ಮಾಧ್ಯಮವಾದ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.


ಇದಲ್ಲದೆ, ಹೆಚ್ಚಿನ ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನದಲ್ಲಿ ಉನ್ನತ ವ್ಯಾಸಂಗ ಅಧ್ಯಯನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 2012-13 ರಲ್ಲಿ, ಕೇವಲ 1,697 ಜನರು ವ್ಯವಹಾರ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಪ್ರವೇಶಾತಿಗಾಗಿ GRE ಪರೀಕ್ಷೆಯನ್ನು ತೆಗೆದುಕೊಂಡರು.


ಸಂಖ್ಯೆಯು ನಾಲ್ಕು ಪಟ್ಟು ಹೆಚ್ಚಾಗಿದೆ


2021-22 ರಲ್ಲಿ, ಈ ಸಂಖ್ಯೆಯು ನಾಲ್ಕು ಪಟ್ಟು ಹೆಚ್ಚಾಗಿದ್ದು, ಒಟ್ಟು 7,912 ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನದಲ್ಲಿ GRE ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. “ಮಾನವಿಕ ವಿಷಯಗಳು ಮತ್ತು ಕಲಾ ವಿಷಯಗಳಲ್ಲಿ ವಿದೇಶದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯು ಇತ್ತಿಚೀಗೆ ಗಣನೀಯವಾಗಿ ಕುಸಿತ ಕಂಡಿದೆ. 2012-13 ರಲ್ಲಿ 0.3% ರಷ್ಟಿಂದ ವಿದ್ಯಾರ್ಥಿಗಳ ಸಂಖ್ಯೆ 2020-21 ಮತ್ತು 2021-22 ರಲ್ಲಿ 0.1% ರಷ್ಟು ಕಡಿಮೆ ಆಗಿದೆ. ಇದರ ಬಗ್ಗೆ ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಪಡೆಯಲು ಯಾವುದೇ ರೀತಿಯ ನಿರ್ಬಂಧಗಳಿಲ್ಲ” ಎಂದು ವೊಲೊಂಗೊಂಗ್ ವಿಶ್ವವಿದ್ಯಾಲಯ ಹೇಳಿದೆ.


ಇನ್ನು ಜೀವ ವಿಜ್ಞಾನದ ಪದವಿಗಳಿಗಾಗಿ GRE ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 2012-13 ರಲ್ಲಿ 5% ರಷ್ಟಿದ್ದರು. ಆದರೆ ಈಗ 2% ರಷ್ಟು ಕುಸಿತ ಕಂಡಿರುವುದು ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುತ್ತಿರುವುದು ಕಡಿಮೆ ಆಗುತ್ತಿದೆ ಎಂದು ತಿಳಿದು ಬರುತ್ತಿದೆ.


ಜೀವ ವಿಜ್ಞಾನದ ಪದವಿಯಲ್ಲಿ ಉನ್ನತ ವ್ಯಾಸಂಗ


ಓಪನ್ ಡೋರ್ಸ್ ವರದಿಯ ಪ್ರಕಾರ ಜೀವ ವಿಜ್ಞಾನದ ಪದವಿಯಲ್ಲಿ ಉನ್ನತ ವ್ಯಾಸಂಗ ಪಡೆಯಲು ಆಸಕ್ತಿ ತೋರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಜೀವ ವಿಜ್ಞಾನ ಪದವಿಗಳಿಗೆ ದಾಖಲಾದ ಭಾರತೀಯರ ಸಂಖ್ಯೆ 2013-14 ರಲ್ಲಿ 10% ರಷ್ಟಿತ್ತು. 2021-22 ರಲ್ಲಿ 6.5% ರಷ್ಟಕ್ಕೆ ಇಳಿದಿದೆ. ಭಾರತೀಯರು US ವಿಶ್ವವಿದ್ಯಾನಿಲಯಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಎರಡನೇ ಅತಿ ದೊಡ್ಡ ಸಮೂಹವನ್ನು ಹೊಂದಿದ್ದಾರೆ. 2021-22 ರಲ್ಲಿ, ಭಾರತವು 199,182 ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳುಹಿಸಿದೆ. ಇದು ಹಿಂದಿನ ವರ್ಷಕ್ಕಿಂತ 18.9% ರಷ್ಟು ಹೆಚ್ಚಾಗಿದೆ.

top videos


    ನಿರ್ದಿಷ್ಟವಾಗಿ ಹೇಳಬೇಕೆಂದರೆ ಪದವೀಧರ ವಿದ್ಯಾರ್ಥಿಗಳ ಸಂಖ್ಯೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. 2021-22 ರಲ್ಲಿ 48% ರಷ್ಟು ಹೆಚ್ಚಳವನ್ನು ಕಂಡಿದೆ. ಇದು ಭಾರತದಲ್ಲಿ GRE ಪರೀಕ್ಷೆಯ ಜನಪ್ರಿಯತೆಯನ್ನು ಸಾರುತ್ತದೆ.

    First published: