• Home
  • »
  • News
  • »
  • jobs
  • »
  • PGCET ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಲಿಂಕ್​ ಕ್ಲಿಕ್ ಮಾಡಿ ಅಪ್ಲೈ ಮಾಡಿ

PGCET ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಲಿಂಕ್​ ಕ್ಲಿಕ್ ಮಾಡಿ ಅಪ್ಲೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯ ಕುರಿತು ಮನೆಯಲ್ಲಿ ಪೂರ್ವಸಿದ್ಧತಾ ಚರ್ಚೆ ಮಾಹಿತಿ ಮೊದಲೇ ಅದರ ಬಗ್ಗೆ ತಿಳಿದುಕೊಂಡು ನಂತರ ಅಪ್ಲೈ ಮಾಡುವುದು ಉತ್ತಮ. ಅಥವಾ ಈ ಮೊದಲು ಯಾರಾದರೂ ಈ ಅರ್ಜಿಯನ್ನು ತುಂಬಿ ಗೊತ್ತಿದ್ದರೆ ಅವರನ್ನೊಮ್ಮೆ ಕೇಳಿ ಅರ್ಜಿ ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಏಕೆಂದರೆ ಪ್ರತಿ ವತ್ಷವೂ ಹಲವಾರು ಜನ ತಪ್ಪಾಗಿ ಅರ್ಜಿ ಭರ್ತಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (KPGCET) 1 ನೇ ಸುತ್ತಿನ ವೆಬ್ ಆಯ್ಕೆಗಳನ್ನು ಇಂದು ಪ್ರಾರಂಭಿಸುತ್ತದೆ. ಕರ್ನಾಟಕ PGCET ವೆಬ್ ಆಯ್ಕೆಗಳ ಪ್ರವೇಶವು ಜನವರಿ 19 ರಿಂದ ಪ್ರಾರಂಭವಾದ ನಂತರ ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯ್ನನು ಪರಿಶೀಲಿಸಬಹುದು. ನಾವು ಇ್ಲಲಿ ಅಧಿಕೃತ ಜಾಲತಾಣದ ಲಿಂಕ್​ (Link) ನೀಡಿದ್ದೇವೆ ಇದನ್ನು ಕ್ಲಿಕ್ (Click) ಮಾಡುವ ಮೂಲಕ ನೀವು ನೇರವಾಗಿ ಭೇಟಿ ನೀಡಿ ನಿಮ್ಮ ಪ್ರವೇಶಾತಿ ದಾಖಲೆಗಳನ್ನು ಪರಿಶೀಲಿಸಬಹುದು. 


ಕರ್ನಾಟಕ PGCET 2022 ವೆಬ್ ಆಯ್ಕೆಗಳನ್ನು ಪ್ರವೇಶಿಸಲು ಕೊನೆಯ ದಿನಾಂಕ ಜನವರಿ 23, 2023, ಬೆಳಿಗ್ಗೆ 11.00 ಗಂಟೆಯವರೆಗೆ ಮಾತ್ರ ಇದೆ ಆದ ಕಾರಣ ಹೆಚ್ಚು ದಿನಗಳ ಅವಕಾಶ ದೊರೆಯುವುದಿಲ್ಲ ಆದ್ದರಿಂದ ಬೇಗ ಮಾಹಿತಿ ತಿಳಿದು ಅಗತ್ಯ ಪ್ರಕ್ರಿಯೆ ನೀಡ ಬೇಕಾಗುತ್ತದೆ.


ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯ ಕುರಿತು ಮನೆಯಲ್ಲಿ ಪೂರ್ವಸಿದ್ಧತಾ ಚರ್ಚೆ ಮಾಹಿತಿ ಮೊದಲೇ ಅದರ ಬಗ್ಗೆ ತಿಳಿದುಕೊಂಡು ನಂತರ ಅಪ್ಲೈ ಮಾಡುವುದು ಉತ್ತಮ. ಅಥವಾ ಈ ಮೊದಲು ಯಾರಾದರೂ ಈ ಅರ್ಜಿಯನ್ನು ತುಂಬಿ ಗೊತ್ತಿದ್ದರೆ ಅವರನ್ನೊಮ್ಮೆ ಕೇಳಿ ಅರ್ಜಿ ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಏಕೆಂದರೆ ಪ್ರತಿ ವತ್ಷವೂ ಹಲವಾರು ಜನ ತಪ್ಪಾಗಿ ಅರ್ಜಿ ಭರ್ತಿ ಮಾಡಿದ್ದಾರೆ. ಅಂತರ್ಜಾಲದಲ್ಲಿ ಆನ್​ಲೈನ್​ ಮೂಲಕವೇ ನೀವು ನೇರವಾಗಿ ಅಪ್ಲೈ ಮಾಡಬಹುದು.


ಇದನ್ನೂ ಓದಿ: ICICI Bank Job: 10ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಜಾಬ್​! ಬಳ್ಳಾರಿಯಲ್ಲಿ ಕೆಲಸ, 43 ಸಾವಿರ ಸಂಬಳ


ಅಭ್ಯರ್ಥಿಯು ಕಾಲೇಜಿನ ಹೆಸರು, ಕೋರ್ಸ್ ಅನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಬೇಕು. ಆಯ್ಕೆ ಮಾಡಿದ ಕಾಲೇಜುಗಳಲ್ಲಿ ಆಯ್ಕೆಗಳ ಆದ್ಯತೆಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ಸೀಟ್​ ಆಯ್ಕೆ ಮಾಡಲು ತನ್ನ ಸ್ವತಂತ್ರ್ಯವನ್ನು ಹೊಂದಿರುತ್ತಾನೆ/ಳೆ. ಅಭ್ಯರ್ಥಿಯು ಎಲ್ಲಾ ವಿಭಾಗಗಳ ಆಯ್ಕೆಗಳನ್ನು ಒಂದೇ ಬಾರಿಗೆ ನಮೂದಿಸಬೇಕು. 


ಅಭ್ಯರ್ಥಿಯು ಹಲವು ವಿಭಾಗಗಳಿಗೆ ಅಂದರೆ, MBA ಮತ್ತು MCA ಅಥವಾ MBA ಮತ್ತು ME/ M.Tech ಅಥವಾ M.Tech ಮತ್ತು MCA ಎರಡಕ್ಕೂ ಅರ್ಹರಾಗಿದ್ದರೆ, ಒಂದೇ ಅಪ್ಲಿಕೇಶನ್​ನಲ್ಲಿ ಎಲ್ಲವನ್ನೂ ಆಯ್ಕೆ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.




KPGCET ವೆಬ್ ಆಯ್ಕೆಗಳ ಪ್ರವೇಶ 2022 ಪೂರ್ಣಗೊಳಿಸುವುದು ಹೇಗೆ?
kea.kar.nic.in ನಲ್ಲಿ KEA PGCET 2022 ವೆಬ್ ಆಯ್ಕೆಗಳ ಪ್ರವೇಶವನ್ನು ಅಧಿಕಾರಿಗಳು ಪ್ರಾರಂಭಿಸುತ್ತಾರೆ. ಆಸಕ್ತ ಅಭ್ಯರ್ಥಿಗಳು ಕೆಳಗೆ ಸೂಚಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.


ಹಂತ 1: ಅಧಿಕೃತ ವೆಬ್‌ಸೈಟ್ ಅಂದರೆ kea.kar.nic.in ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ, KPGCET 2022 ವೆಬ್ ಆಯ್ಕೆಗಳ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ
ಹಂತ 4: ಈಗ ಆದ್ಯತೆಯ ಕಾಲೇಜು ಮತ್ತು ಕೋರ್ಸ್ ಆಯ್ಕೆಮಾಡಿ
ಹಂತ 5: ಆಯ್ಕೆಗಳನ್ನು ಉಳಿಸಿ ಮತ್ತು ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ


ಕರ್ನಾಟಕ PGCET 2022 ವೆಬ್ ಆಯ್ಕೆಗಳ ಪ್ರವೇಶದ ನಂತರ ಏನು?
ವೆಬ್ ಆಯ್ಕೆಗಳ ನಮೂದು ಪ್ರಕ್ರಿಯೆ ಮುಗಿದ ನಂತರ ಅಧಿಕಾರಿಗಳು ಅಣಕು ಹಂಚಿಕೆ ಫಲಿತಾಂಶವನ್ನು ಜನವರಿ 23, 2023 ರಂದು ಸಂಜೆ 6.00 ಗಂಟೆಯ ನಂತರ ಬಿಡುಗಡೆ ಮಾಡುತ್ತಾರೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅಂದರೆ kea.kar.nic.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.


ಜನವರಿ 25, 2023 ರಂದು ಸಂಜೆ 6.00 ಗಂಟೆಯ ನಂತರ ಘೋಷಿಸಲಾಗುತ್ತದೆ.


ಅಭ್ಯರ್ಥಿಗಳು ತಮ್ಮ ಕಾಲೇಜು ಮತ್ತು ಕೋರ್ಸ್‌ನ ಆಯ್ಕೆಗಳನ್ನು ಬದಲಾಯಿಸಲು ಅಥವಾ ತಿದ್ದುಪಡಿ ಮಾಡಲು ಬಯಸಿದರೆ ಅದಕ್ಕೂ ಅವಕಾಶ ನೀಡಲಾಗುತ್ತದೆ. ಜನವರಿ 23 ರಿಂದ 25, 2023 ರವರೆಗೆ ಮಾರ್ಪಾಡುಗಳನ್ನು ಮಾಡಲು ಅವಕಾಶವಿದೆ. ಸೇವ್ ಅಥವಾ ಡಿಲೀಟ್​ ಎರಡೂ ಕೂಡಾ ನೀವು ಮಾಡಬಹುದು.  KPGCET 1 ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಜನವರಿ 25, 2023 ರಂದು ಸಂಜೆ 6.00 ಗಂಟೆಯ ನಂತರ ಘೋಷಿಸಲಾಗುತ್ತದೆ.

First published: