• Home
 • »
 • News
 • »
 • jobs
 • »
 • Periods Leave: ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಿದ ಕೇರಳ ಸರ್ಕಾರ

Periods Leave: ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಿದ ಕೇರಳ ಸರ್ಕಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕುಸಾಟ್‌ನಲ್ಲಿರುವ ಮಹಿಳಾ ವಿದ್ಯಾರ್ಥಿನಿಯರು ಋತುಚಕ್ರದ ರಜೆ ಪಡೆಯಬಹುದು. ಅವರ ಹಾಜರಾತಿಯಲ್ಲಿ ಒಂದು ತ್ರೈಮಾಸಿಕಕ್ಕೆ ಶೇ. 2ರಷ್ಟು ಹಾಜರಾತಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ ಇದರಿಂದ ಹಲವಾರು ವಿದ್ಯಾರ್ಥಿನಿಯರಿಗೆ ಸಹಾಯವಾಗಲಿದೆ.

 • News18 Kannada
 • 2-MIN READ
 • Last Updated :
 • Kerala, India
 • Share this:

ವಿದ್ಯಾರ್ಥಿನಿಯರಿಗೆ ತಿಂಗಳದಲ್ಲಿ ಮೂರರಿಂದ ನಾಲ್ಕು ದಿನ ಋತುಚಕ್ರದ (Periods) ದಿನಗಳಾಗಿರುತ್ತವೆ. ಆಗ ವಿದ್ಯಾರ್ಥಿನಿಯರ (Students) ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದ ಎಷ್ಟೋ ಬಾರಿ ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ. ಶಾಲಾ (School) ಹಾಜರಾತಿಯಲ್ಲಿ (Attendance) ಕಡ್ಡಾಯವಾಗಿರುವ 75 ಪ್ರತಿಷತ ಹಾಜರಾತಿ ಕಷ್ಟ ಎಂಬಂತಾಗುತ್ತದೆ. ಆ ಕಾರಣದಿಂದ (Reason) ವಿದ್ಯಾರ್ಥಿನಿಯರಿಗೆ ಸ್ವಲ್ಪ ರಿಯಾಯಿತಿ ಕೊಡುವ ನಿಟ್ಟಿನಲ್ಲಿ ಆಲೋಚಿಸಲಾಗಿದೆ. ಒಂದು ಉತ್ತಮ ನಿರ್ಧಾರ ಕೇರಳದಲ್ಲಿ ವ್ಯಕ್ತವಾಗಿದೆ.


ಕುಸಾಟ್‌ನಲ್ಲಿರುವ ಮಹಿಳಾ ವಿದ್ಯಾರ್ಥಿನಿಯರು ಋತುಚಕ್ರದ ರಜೆ ಪಡೆಯಬಹುದು. ಅವರ ಹಾಜರಾತಿಯಲ್ಲಿ ಒಂದು ತ್ರೈಮಾಸಿಕಕ್ಕೆ ಶೇ. 2ರಷ್ಟು ಹಾಜರಾತಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ ಇದರಿಂದ ಹಲವಾರು ವಿದ್ಯಾರ್ಥಿನಿಯರಿಗೆ ಸಹಾಯವಾಗಲಿದೆ.


ಹೊಟ್ಟೆ ನೋವು, ವಾಂತಿ, ನಿಶ್ಶಕ್ತಿ, ತಲೆ ಸುತ್ತುವಿಕೆ ಹೀಗೆ ಹಲವಾರು ಸಮಸ್ಯೆ ಅನುಭವಿಸುವ ವಿದ್ಯಾರ್ಥಿನಿಯರು ಋತುಚಕ್ರದ ಕಾರಣದಿಂದ ಶಾಲೆಗೆ ಗೈರಾಗುತ್ತಿದ್ದರು. ಅಂತಹ ವಿದ್ಯಾರ್ಥಿನಿಯರಿಗೆ ಇದೀಗ ಸಹಾಯವಾಗಲಿದೆ.


ಇದನ್ನೂ ಓದಿ: CBSE: ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಟ್ಟ ಶಿಕ್ಷಣ ನೀತಿ, ವಿಷಯದ ಆಯ್ಕೆ ವಿದ್ಯಾರ್ಥಿಗಳೇ ಮಾಡ್ಬಹುದು


ಇದೇ ಮೊದಲ ಬಾರಿಗೆ ಕೇರಳದ ವಿಶ್ವವಿದ್ಯಾಲಯ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದು ಇತಿಹಾಸ ಸೃಷ್ಟಿಸಿದೆ. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮೊದಲಬಾರಿಗೆ ಇದನ್ನು ಅನಿಷ್ಠಾನಗೊಳಿಸಿದೆ. ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಯ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ವಿದ್ಯಾರ್ಥಿನಿಯರ ಬಹುಕಾಲದ ಬೇಡಿಕೆಯಾಗಿತ್ತು. ಆದರೆ ಈಗ ಆ ಬೇಡಿಕೆಗೆ ಸ್ಪಂದನೆ ದೊರೆತಿದೆ.


4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ


ಇದರಿಂದ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕುಸಾಟ್‌ನಲ್ಲಿರುವ ಮಹಿಳಾ ವಿದ್ಯಾರ್ಥಿನಿಯರು ಋತುಚಕ್ರದ ರಜೆ ಪಡೆಯಬಹುದು. ಅವರಿಗೆ ಮೂರು ತಿಂಗಳಿಗೆ ಶೇ. 2ರಷ್ಟು ಹಾಜರಾತಿಯನ್ನು ಹೆಚ್ಚುವರಿಯಾಗಿ ರಿಯಾಯತಿ ನೀಡಲಾಗುವುದು ಎಂದು ತಿಳಿಸಲಾಗಿದೆ.


ಪ್ರಸ್ತುತ ಶೇ. 75ರಷ್ಟು ಹಾಜರಾತಿ ಕಡ್ಡಾಯ


ಪ್ರಸ್ತುತ ಶೇ. 75ರಷ್ಟು ಹಾಜರಾತಿ ಇದ್ದವರು ಮಾತ್ರ ಸೆಮಿಸ್ಟರ್ ಪರೀಕ್ಷೆ ಬರೆಯಬಹುದು. ಅದಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿ ಇರುವುದಿಲ್ಲ. 75 ಕ್ಕಿಂತ ಕಡಿಮೆ ಹಾಜರಾತಿ ಇದ್ದರೆ  ದಂಡ ಪಾವತಿಸಿ ನಂತರ ಪರೀಕ್ಷೆ ಬರೆಯಬೇಕು ಎಂಬ ನಿಯಮವಿರುವ ಕಾರಣ ವಿದ್ಯಾರ್ಥಿನಿಯರಿಗೆ ಸರಿಯಾಗಿ ಹಾಜರಾತಿ ಸಿಗದೇ ಕಷ್ಟ ಪಡುವ ಹಾಗಾಗುತ್ತಿತ್ತು. ಆದರೆ ಇನ್ನು ಮುಂದೆ ಆ ರೀತಿ ಯಾವುದೇ ಸಮಸ್ಯೆ ಬಾರದಂತೆ ಪರಿಹಾರ ನೀಡಲಾಗುತ್ತದೆ.


ಮುಟ್ಟಿನ ರಜೆಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ. ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನೇತೃತ್ವದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟವು ವಿಶ್ವವಿದ್ಯಾನಿಲಯಕ್ಕೆ ಋತುಚಕ್ರದ ರಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿತ್ತು. ಒಕ್ಕೂಟದ ಮಧ್ಯಸ್ಥಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ತಕ್ಷಣದಿಂದ ಜಾರಿಗೆ ತರುವಂತೆ ಸೂಚಿಸಲಾಗಿದೆ. ಇದೊಂದು ಅತ್ಯತ್ತಮ ನಿರ್ಧಾರವೆಂದು ಅಲ್ಲಿನ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದ್ದಾರೆ.




ಋತುಚಕ್ರದ ಕುರಿತು ಕೆಲವು ಮಾಹಿತಿ


ಋತುಚಕ್ರವು ಮಹಿಳೆಯರ ಜೀವನದ ಮಹತ್ವದ ಘಟ್ಟವಾಗಿದ್ದು, ಒಂದು ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ಮುಟ್ಟಾಗುವುದು ಕಡ್ಡಾಯವಾಗಿದೆ. ಆರೋಗ್ಯವಂತ ಮಹಿಳೆಯ ಚಕ್ರವು 28 ದಿನಗಳಾಗಿದ್ದು ಸಹಜವಾಗಿ 3 ರಿಂದ 5 ದಿನಗಳವರೆಗೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ತಪ್ಪಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಿಂದಾಗಿ ಹೆಣ್ಣು ಮಕ್ಕಳು ಮುಟ್ಟು ಆಗುತ್ತಾರೋ ಇಲ್ಲವೋ ಎಂಬ ಹಂತಕ್ಕೆ ತಲುಪಿದ್ದೇವೆ. ಋತುಚಕ್ರದ ಏರುಪೇರು, ವಿಪರೀತ ರಕ್ತಸ್ರಾವ ಅಥವಾ ರಕ್ತಸ್ರಾವ ಇಲ್ಲದಿರುವಿಕೆಗೆ ಸಹ ಇನ್ಯಾವುದೋ ರೋಗಗಳ ಲಕ್ಷಣಗಳಾಗಿರುತ್ತವೆ.

First published: