ದಾವಣಗೆರೆ: ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಪಾಲಕರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. 5ನೇ ತರಗತಿ ಪರೀಕ್ಷೆ (Exam) ಬರೆಯುವ ವೇಳೆ ಬೇರೆ ಸಿಲೆಬಸ್ ಪ್ರಶ್ನೆ ಪತ್ರಿಕೆಗಳಿಗೆ (Question Paper) ಉತ್ತರ ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಅದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಇದರಿಂದಾಗಿ ಕಡಿಮೆ ಅಂಕ ಬರುತ್ತದೆ. ಒಟ್ಟು 28 ವಿದ್ಯಾರ್ಥಿಗಳ (Students) ಭವಿಷ್ಯಕ್ಕೆ ತೊಂದರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಹಾಗಾದರೆ ನಿಜವಾಗಿ ನಡೆದದ್ದೇನು ಎಂಬ ಸಂಗತಿ ಇಲ್ಲಿದೆ ನೋಡಿ.
ಶಾಲೆ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ದಾವಣಗೆರೆ ಚೇತನ ಓಲಂಪಿಯಾಡ್ ಶಾಲಾ ಆಡಳಿತ ಮಂಡಳಿ ವಿರುದ್ಧ ಎಲ್ಲರೂ ಕಂಪ್ಲೇಂಟ್ ಮಾಡುತ್ತಿದ್ದಾರೆ ಈ ಶಾಲೆಯಲ್ಲಿ ಫೀಸ್ ಕೂಡಾ ಕಡಿಮೆ ಇಲ್ಲಾ. ಎಲ್ಲಾ ರೀತಿಯಲ್ಲೂ ಸೌಲಭ್ಯ ಪಡೆದುಕೊಂಡು ನಂತರ ವಿದ್ಯಾರ್ಥಿಗಳಿಗೆ ಸಲ್ಲಬೇಕಿದ್ದ ನ್ಯಾಯ ಮಾತ್ರ ನೀಡುತ್ತಿಲ್ಲಾ ಎಂಬುದು ಅವರ ವಾದವಾಗಿದೆ.
ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಶಾಲೆ ಇದಾಗಿದ್ದು. ಒಟ್ಟು 90 ವಿದ್ಯಾರ್ಥಿಗಳು ಶಾಲೆಗೆ ಸೇರಿದ್ದರು. ಸಿಬಿಎಸ್ಇ ತರಗತಿಗೆ 55ರಿಂದ 60 ಸಾವಿರ ರೂ. ಶುಲ್ಕ ಪಡೆದಿದ್ದ ಆಡಳಿತ ಮಂಡಳಿ ಇದೀಗ ತಿರುಗಿನಿಂತಿದೆ. ಈ ಶಾಲೆ ಯಾವುದೇ ಸಿಬಿಎಸ್ ಇ ಅನುಮತಿ ಪಡೆದಿಲ್ಲ ಸಿಬಿಎಸ್ ಇ ಇದೆ ಎಂದು ಸುಳ್ಳು ಹೇಳಿ ವಂಚಿಸಿ ಮಕ್ಕಳನ್ನು ದಾಖಲು ಮಾಡಿಕೊಂಡಿದೆ.
ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್ ಮಾರ್ಕ್ಸ್ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ
ಪಬ್ಲಿಕ್ ಪರೀಕ್ಷೆ ಆದ ಕಾರಣ ಯಡವಟ್ಟು ಬಯಲಿಗೆ ಬಂದಿದೆ. ಸಿಬಿಎಸ್ ಇ ಪರೀಕ್ಷೆ ಬರೆಸದೇ ಸ್ಟೇಟ್ ಸಿಲಬಸ್ ಬರೆಸಿದ ಮಂಡಳಿ, 5 ನೇ ತರಗತಿಗೆ ವಿಶ್ವಚೇತನಾ, ವಿದ್ಯಾ ನಿಕೇತನ ಶಾಲೆಯಲ್ಲಿ ಆಗಿರುವ ಅಚಾತುರ್ಯ ಇದಾಗಿದೆ. ಮಕ್ಕಳಿಗೆ ಸ್ಟೇಟ್ ಸಿಲಬಸ್ ಪರೀಕ್ಷೆ ಉತ್ತರ ಪತ್ರ ಕೊಟ್ಟು ಬರೆಸಿದ ಆರೋಪ ಕೇಳಿ ಬಂದಿದೆ. ವಿಚಾರ ಗೊತ್ತಾಗುತ್ತಿದ್ದಂತೆ ಆಡಳಿತ ಮಂಡಳಿ ಕಚೇರಿಗೆ ನುಗ್ಗಿದ ಪೋಷಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಜಾಗರೂಕತೆ, ಮೋಸ, ವಂಚನೆ, ಕಾನೂನು ಬಾಹಿರ
ಚೇತನಾ ಒಲಂಪಿಯಾಡ್ ಶಾಲೆ ಕಾರ್ಯದರ್ಶಿ ವಿಜಯಲಕ್ಷ್ಮೀ, ಆಡಳಿತಾಧಿಕಾರಿ ಪವನ್, ಪ್ರಾಂಶುಪಾಲ ಶ್ರೀನಿವಾಸ್ ಮೂರ್ತಿ, ಉಪಪ್ರಾಂಶುಪಾಲರಾದ ಮಹಾದೇವಿ, ಮಾನಸ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕಳೆದ 5 ವರ್ಷಗಳ ಕಾಲ ಕಟ್ಟಿದ್ದ ಶುಲ್ಕ ವಾಪಸ್ ಗೆ ಪೋಷಕರ ಆಗ್ರಹ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Education: US ಯುನಿವರ್ಸಿಟಿಗೆ 1 ಮಿಲಿಯನ್ ಡಾಲರ್ ಕೊಡುಗೆ ನೀಡಿದ ಭಾರತೀಯ!
ಈ ಶಾಲೆಗೆ ಮಕ್ಕಳನ್ನು ಸೇರಿಸಬೇಡಿ
ಈ ಶಾಲೆಗೆ ಮಕ್ಕಳನ್ನು ಸೇರಿಸಬೇಡಿ ಎಂದು ಅಲ್ಲಿನ ಪಾಲಕರು ಹೇಳುತ್ತಿದ್ದಾರೆ.
ಕೇಳಿದರೆ ಉಡಾಫೆ ಉತ್ತರ ಕೊಡುತ್ತಿರುವ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್, ಗ್ರಾಹಕರ ವೇದಿಕೆಗೂ ಕೇಸ್ ದಾಖಲಿಸಲು ನಿರ್ಧಾರ ಮಾಡಲಾಗಿದೆ.
ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 17 ಲಕ್ಷ ವಿದ್ಯಾರ್ಥಿಗಳು ಐದನೇ ತರಗತಿ ಹಾಗೂ 8ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಬರೆದಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸಿದ್ದು ಇದೇ ಮೊದಲ ಬಾರಿಗೆ 5 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆಪಬ್ಲಿಕ್ ಪರೀಕ್ಷೆ ನಡೆಸಲಾಗಿತ್ತು. ಈ ತರಗತಿಗಳ ವಿದ್ಯಾರ್ಥಿಗಳು ರಾಜ್ಯಾದ್ಯಂತ ಒಟ್ಟಿಗೆ ಪರೀಕ್ಷೆ ಬರೆಯುತ್ತಿರುವುದು ಇದೇ ಮೊದಲು. ಇದು ಬೋರ್ಡ್‌ಗಳಿಗೆ ಹೋಲುವ ಪರೀಕ್ಷೆಯಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಈ ರೀತಿ ಅನ್ಯಾಯ ಆಗಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ