ಉನ್ನತ ಶಿಕ್ಷಣ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy) ಪರಿಣಾಮಕಾರಿ ಅನುಷ್ಠಾನದ ಭಾಗವಾಗಿ, ರಾಜ್ಯ ಸರ್ಕಾರವು (Karnataka Government) ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಡಿಸೆಂಬರ್ 25 ರೊಳಗೆ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ನಲ್ಲಿ (ABC) ನೋಂದಾಯಿಸಲು ಅಧಿಸೂಚನೆ ಹೊರಡಿಸಿದೆ. ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ್ ಕೂಡ ಡಿಸೆಂಬರ್ 25ರ ಮೊದಲು ಎಬಿಸಿಯಲ್ಲಿ ನೋಂದಾಯಿಸಲು ವಿಶ್ವವಿದ್ಯಾನಿಲಯಗಳನ್ನು ಕೇಳಿಕೊಂಡಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರದ ಸೂಚನೆ ಬೆನ್ನಲ್ಲೇ ಎಲ್ಲಾ ವಿದ್ಯಾರ್ಥಿಗಳು ತಮ್ಮ ಖಾತೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬೇಕಾಗಿದೆ
"ಡಿಸೆಂಬರ್ 25ರ ಮೊದಲು ನೋಂದಾಯಿಸಲು ಸೂಚನೆ ಹೊರಡಿಸಿದ್ದೇವೆ"
"ನಾವು ಡಿಸೆಂಬರ್ 25ರ ಮೊದಲು ನೋಂದಾಯಿಸಲು ಎಲ್ಲಾ ವಿಶ್ವವಿದ್ಯಾನಿಲಯಗಳನ್ನು ಕೇಳಿದ್ದೇವೆ. ಇದನ್ನು ಪೂರ್ಣಗೊಳಿಸುವ ಮೂಲಕ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭರವಸೆಯಂತೆ ವಿದ್ಯಾರ್ಥಿಗಳಿಗೆ ಬಹು ನಿರ್ಗಮನ ಮತ್ತು ಪ್ರವೇಶಗಳ ಅವಕಾಶವನ್ನು ಒದಗಿಸಲು ನಾವು ಒಂದು ಹೆಜ್ಜೆ ಮುಂದಿಡುತ್ತೇವೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಇದನ್ನು ನಾವು ಯೋಜಿಸುತ್ತಿದ್ದೇವೆ" ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಅಷ್ಟಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಎಬಿಸಿ ಏನು? ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಹಲವರಿಗೆ ತಿಳಿದಿಲ್ಲ. ಈ ಬಗ್ಗೆ ಒಂದು ಮಾಹಿತಿ ಹೀಗಿದೆ ನೋಡಿ.
ಇದನ್ನೂ ಓದಿ: Annual Exams: ವಿದ್ಯಾರ್ಥಿಗಳೇ ಅಲರ್ಟ್, ಈ ವರ್ಷದಿಂದಲೇ 5, 8ನೇ ತರಗತಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆ; ಸರ್ಕಾರದಿಂದ ಆದೇಶ
ಏನಿದು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ)?
ಎಬಿಸಿಯನ್ನು ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿ (ಎನ್ಎಡಿ) ಮಾದರಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಅನ್ನು ಇದು ಸಂಗ್ರಹಿಸುತ್ತದೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ನೋಂದಾಯಿಸಲು ಮತ್ತು ಕ್ರೆಡಿಟ್ ವರ್ಗಾವಣೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಕ್ರೆಡಿಟ್ ರಿಡೆಂಪ್ಶನ್ ಮತ್ತು ಪ್ರಮಾಣಪತ್ರಗಳ ವಿತರಣೆಯ ಅಂತಿಮ ಫಲಿತಾಂಶವನ್ನು ಆಯಾ ವಿಶ್ವವಿದ್ಯಾಲಯವು ಕುದ್ದಾಗಿ ನಿರ್ವಹಿಸುತ್ತದೆ. ಆದ್ದರಿಂದ, ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಎನ್ಎಡಿ (NAD) ಮೂಲಕ ಎಬಿಸಿ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಸಂಕ್ಷಿಪ್ತವಾಗಿ ಎಬಿಸಿ ಎಂದು ಕರೆಯಲ್ಪಡುವ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್, ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಗಳಿಸಿದ ಕ್ರೆಡಿಟ್ಗಳೊಂದಿಗೆ ವ್ಯವಹರಿಸುವ ಒಂದು ವರ್ಚುವಲ್ ಕಾರ್ಯವಿಧಾನವಾಗಿದೆ ಮತ್ತು ಇದನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಗುರುತಿಸಿದೆ. ಒಟ್ಟಾರೆ NAD ಎಂಬುದು ABC ಯ ಬೆನ್ನೆಲುಬು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಡೇಟಾವನ್ನು ಹಿಡಿದಿಟ್ಟುಕೊಳ್ಳಲಾಗುತ್ತದೆ ಮತ್ತು ಶೈಕ್ಷಣಿಕ ಪ್ರಶಸ್ತಿಗಳನ್ನು ಸಂಗ್ರಹಿಸುತ್ತದೆ.
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ನ ವೈಶಿಷ್ಟ್ಯಗಳು ಮತ್ತು ಕಾರ್ಯಗಳು
* ಈ ಯೋಜನೆಯು ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ (UGC) ಗುರುತಿಸಲ್ಪಟ್ಟ ಎಲ್ಲಾ ರೀತಿಯ ಕೋರ್ಸ್ಗಳನ್ನು ಒಳಗೊಂಡಿರುತ್ತದೆ, ಅದು ಪದವಿ ಕೋರ್ಸ್, ಸ್ನಾತಕೋತ್ತರ ಕೋರ್ಸ್, ಪಿಎಚ್ಡಿ ಕೋರ್ಸ್ಗಳು, ಡಿಪ್ಲೊಮಾ ಕೋರ್ಸ್ಗಳು, ಪ್ರಮಾಣಪತ್ರ ಕೋರ್ಸ್ಗಳು ಇತ್ಯಾದಿಗಳನ್ನು ಒಳಗೊಂಡಿದೆ.
ಇದನ್ನೂ ಓದಿ: Mid Day Meal: ಶಾಲೆಗಳಲ್ಲಿ ಇನ್ಮುಂದೆ ಬಿಸಿ ಊಟದ ಸಮಯ ಬದಲು, ಶಿಕ್ಷಣ ಇಲಾಖೆಯಿಂದ ಹೊಸ ಸೂಚನೆ
* SWAYAM, NPTEL, V-ಲ್ಯಾಬ್ ಮತ್ತು ತಮ್ಮ ಕೋರ್ಸ್ಗಳನ್ನು ನೀಡುವ ಇತರ ಯೋಜನೆಗಳು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಒದಗಿಸುವ ಸೌಲಭ್ಯಗಳನ್ನು ಪಡೆಯಲು ಅರ್ಹವಾಗಿವೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಗಳಿಸಿದ ಕ್ರೆಡಿಟ್ಗಳು ನಿರ್ದಿಷ್ಟ ಕೋರ್ಸ್ಗೆ ನಿರ್ದಿಷ್ಟಪಡಿಸದ ಹೊರತು 7 ವರ್ಷಗಳ ಮಾನ್ಯತೆಯನ್ನು ಹೊಂದಿರುತ್ತದೆ; ಮತ್ತು ಮಾನ್ಯತೆಯ ಅವಧಿಯ ಅಂತ್ಯದ ನಂತರ ಈ ಕ್ರೆಡಿಟ್ಗಳು ಮುಕ್ತಾಯಗೊಳ್ಳುತ್ತವೆ.
* ABCಯು ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಕ್ರೆಡಿಟ್ ಕೋರ್ಸ್ ಡಾಕ್ಯುಮೆಂಟ್ ಅನ್ನು ಸ್ವೀಕರಿಸುವುದಿಲ್ಲ ಬದಲಾಗಿ ದಾಖಲಾಗಿರುವ ಉನ್ನತ ಶಿಕ್ಷಣ ಸಂಸ್ಥೆಯಿಂದ ಮಾತ್ರ ಸ್ವೀಕರಿಸುತ್ತದೆ. ಈ ಸಂಸ್ಥೆಗಳು ಈ ಕ್ರೆಡಿಟ್ಗಳನ್ನು ವಿದ್ಯಾರ್ಥಿಯ ABC ಖಾತೆಗೆ ನಿಯಮಿತವಾಗಿ ಜಮಾ ಮಾಡಲು ಜವಾಬ್ದಾರರಾಗಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ