ಕೆಲವರಿಗೆ ಕಲಿಯುವ ಮನಸ್ಸಿರುತ್ತದೆ. ಆದರೆ ಕಲಿಯಲು (Learning) ಬೇಕಾದಷ್ಟು ಹಣ ಇರುವುದಿಲ್ಲ. ಅಂತವರಿಗಾಗಿ ಹಲವಾರು ಸ್ಕಾಲರ್ ಶಿಪ್ಗಳನ್ನು (Scholarship) ನೀಡಲಾಗುತ್ತದೆ. ಆದರೆ ಇನ್ನು ಕೆಲವರಿಗೆ ಅದರಿಂದಲೂ ಹಣ ಸಿಗುವುದಿಲ್ಲ. ಅಂತಹ ಒಂದು ವಿದ್ಯಾರ್ಥಿನಿಗೆ (Students) ತಾವೇ ನೆರವಾಗಿದ್ದಾರೆ ಈ ವ್ಯಕ್ತಿ. ಇವರ ಹೆಸರು ಹಾಗೂ ವಿದ್ಯಾರ್ಥಿನಿಗೆ ಈತ ಮಾಡಿದ ಸಹಾಯದ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸೋಮವಾರ ಬೆಳಗ್ಗೆಯಿಂದ ದೇವಯ್ಯ ಅವರು ವಿವಿಧ ದಾನಿಗಳಿಂದ 60,338 ರೂ.ಸಂಗ್ರಹಿಸಿ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣಕ್ಕಾಗಿ ನೆರವಾಗಿದ್ದಾರೆ. ಹೈದರಾಬಾದ್‌ನ ಎಂಡಿ ಅಸಿಫುದ್ದೀನ್ ಅವರು 8,000 ರೂ. ದೇಣಿಗೆ ನೀಡಿದರೆ, ರಾಜ್ಯ ರಾಜಧಾನಿಯ ಆರತಿ ಅವರು 8,000 ರೂ. ಹೈದರಾಬಾದ್‌ನಿಂದ ಚಿನ್ನೂರಿ ರಾಜಶೇಖರ್ ರೆಡ್ಡಿ ಮತ್ತು ವಿಜಯವಾಡದಿಂದ ಬಾಲಕೃಷ್ಣ 6,000 ಮತ್ತು 4,995 ರೂ ಇನ್ನಿತರ ದಾನಿಗಳಿಂದ ಸಂಗ್ರಹಿಸಲ್ಪಟ್ಟಿದೆ ಈ ಎಲ್ಲಾ ಹಣವನ್ನು ಶಿಕ್ಷಣಕ್ಕಾಗಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ICSE Topper ಅನನ್ಯಾ ಹೆಚ್ಚಿನ ಅಂಕ ಗಳಿಸಲು ಯಾವ ರೀತಿ ತಯಾರಿ ನಡೆಸಿದ್ದರು ಗೊತ್ತಾ? ಇಲ್ಲಿದೆ ಮಾಹಿತಿ
ಬಿಆರ್‌ಎಸ್ ಎಂಎಲ್‌ಸಿ ಶೇರಿ ಸುಭಾಷ್ ರೆಡ್ಡಿ ಅವರು ಸೋಮವಾರ ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ತಮ್ಮ ಮನೆಗೆ ದಿವ್ಯಾ ಅವರನ್ನು ಆಹ್ವಾನಿಸಿ ಸನ್ಮಾನಿಸಿದರು. ಆಕೆಯ ಪದವಿ ಮುಗಿಯುವವರೆಗೂ ಆಕೆಯ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.ಲೋಕೋಪಕಾರಿಗಳಾದ ನಂದಾ ಮರಿ, ಪೊಟ್ಟಿ ಚಂದು ಕುಮಾರ್, ಅರಿಕಪುಡಿ ರಘು ಸೇರಿದಂತೆ ಹಲವರು ಶಿಕ್ಷಕ ದೇವಯ್ಯ ಅವರಿಗೆ ಕರೆ ಮಾಡಿ ದಿವ್ಯಾ ಅವರ ಓದು ಮುಂದುವರಿಸಲು ನೆರವು ನೀಡುವುದಾಗಿ ಭರವಸೆ ನೀಡಿದರು.
ಪೊಡ್ಚೆನಪಲ್ಲಿ ಶಾಲೆಯ ಶಿಕ್ಷಕರಾದ ದಿವ್ಯಾ ಅವರ ಅಜ್ಜಿಯರಾದ ಕೃಷ್ಣ ಮತ್ತು ರುಕ್ಕಮ್ಮ ದಾನಿಗಳಿಗೆ ಹಾಗೂ ಎಂಎಲ್ ಸಿ ಸುಭಾಷ್ ರೆಡ್ಡಿ ಅವರಿಗೆ ಧನ್ಯವಾದ ಅರ್ಪಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ದೇವಯ್ಯ ಈ ಸಹಾಯ ಮಾಡಿದ ನಂತರ ತನಗೆ ವಿವಿಧ ಕಡೆಗಳಿಂದ ಕನಿಷ್ಠ 40 ಫೋನ್ ಕರೆಗಳು ಬಂದಿವೆ ಎಂದು ಹೇಳಿದರು .
ದಿವ್ಯಾಗೆ ಸಹಾಯ ಬೇಕಾದಾಗ ಕರೆ ಮಾಡಲು ಎಲ್ಲಾ ಫೋನ್ ಸಂಖ್ಯೆಗಳು ಮತ್ತು ವಿವರಗಳನ್ನು ನೀಡಿದ್ದರು. ದಿವ್ಯಾ ಅವರು ಪಪ್ಪನಪೇಟೆ ಮಂಡಲ್ ಟಾಪರ್ ಆಗಿ ಐಐಐಟಿ-ಬಸರಾದಲ್ಲಿ ಸೀಟು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆರ್ಥಿಕ ನೆರವು ಬೇಕು. ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಿದರೆ ಒಂದಿಲ್ಲಾ ಒಂದು ರೂಪದಲ್ಲಿ ಆರ್ಥಿಕ ನೆರವು ಸಿಕ್ಕೆ ಸಿಗುತ್ತದೆ. ದಾನಿಗಳು ಮನಸ್ಸುಮಾಡಿದರೆ ಸುಲಭವಾಗಿ ಎಲ್ಲರನ್ನೂ ಓದಿಸಬಹುದು.
ಅನನ್ಯಾ ಕಾರ್ತಿಕ್ ಸಾಧನೆಯ ಕಥೆ
ಬೆಂಗಳೂರಿನ ಅನ್ನನ್ಯಾ ಕಾರ್ತಿಕ್ ಭಾನುವಾರ ಪ್ರಕಟವಾದ ಐಸಿಎಸ್‌ಇ ಪರೀಕ್ಷೆಯ ಫಲಿತಾಂಶಗದಲ್ಲಿ 99.8% ನೊಂದಿಗೆ ಉತ್ತೀರ್ಣರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಟಾಪರ್‌ಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಂಡಿದ್ದಾರೆ. ಹೆಬ್ಬಾಳದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಇವಳು ಒಂಬತ್ತು ಜನ ರಾಷ್ಟ್ರೀಯ ಟಾಪರ್ಗಳಲ್ಲಿ ಒಬ್ಬರಾಗಿದ್ದಾರೆ. ಒಟ್ಟು ಒಂಬತ್ತು ವಿದ್ಯಾರ್ಥಿಗಳು ದೇಶಾದ್ಯಂತ ಪ್ರಥಮ ಸ್ಥಾನ ಗಳಿಸಿದ್ದಾರೆ ಅವರಲ್ಲಿ ಇವರೂ ಒಬ್ಬರಾಗಿದ್ದಾರೆ.
ರಾಷ್ಟ್ರೀಯ ಟಾಪರ್ ಆಗುವ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ. ಅವರು ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸಿದ್ದರು ಎಂದು ನೀವು ತಿಳಿದುಕೊಳ್ಳಲು ಇಷ್ಟ ಪಡುವುದಾದರೆ ಅವರು ಪರೀಕ್ಷೆ ಒಂದು ಕಠಿಣ ವಿಷಯ ಎಂದು ಭಾವಿಸಿಯೇ ಇರಲಿಲ್ಲ. ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ತಯಾರಿ ನಡೆಸಿದ್ದರು. ಪರೀಕ್ಷೆಯಲ್ಲಿ ಪ್ರಶ್ನೆಗಳು ಅಷ್ಟೇನೂ ಕಠಿಣವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಪರೀಕ್ಷೆಯ ಫಲಿತಾಂಶದಲ್ಲಿ ಇವರೇ ಟಾಪರ್
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಸೋಮವಾರ 12ನೇ ತರಗತಿ ಮತ್ತು ಹತ್ತನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಬಾಲಕಿಯರು ಮತ್ತೊಮ್ಮೆ ಹುಡುಗರನ್ನು ಹಿಂದಿಕ್ಕಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ