• ಹೋಂ
  • »
  • ನ್ಯೂಸ್
  • »
  • Jobs
  • »
  • Higher Education: ವಿದ್ಯಾರ್ಥಿಗಳೇ ಗಮನಿಸಿ, ಕೇವಲ 15% ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಮಾತ್ರ ಇದೆ ಈ ಮಾನ್ಯತೆ!

Higher Education: ವಿದ್ಯಾರ್ಥಿಗಳೇ ಗಮನಿಸಿ, ಕೇವಲ 15% ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಮಾತ್ರ ಇದೆ ಈ ಮಾನ್ಯತೆ!

ಡಾ. ಅನಿಲ್ ಸಹಸ್ರಬುದ್ದೆ

ಡಾ. ಅನಿಲ್ ಸಹಸ್ರಬುದ್ದೆ

ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಆಸಕ್ತಿಯಿಲ್ಲ ಆದರೆ ಅವರಿಗೆ ಕಾರ್ಟೂನ್‌ಗಳೆಂದರೆ ಇಷ್ಟ. ಹಾಗಾಗಿ ಶೈಕ್ಷಣಿಕ ವಿಷಯಗಳನ್ನು ಕಾರ್ಟೂನ್‌ಗಳ ಮೂಲಕ ಬೋಧಿಸುವುದು ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅವರಿಗೆ ತಿಳಿಯಪಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

  • Share this:

ಭಾರತದಲ್ಲಿ ಕೇವಲ 15 ಪ್ರತಿಶತದಷ್ಟು ಉನ್ನತ ಶಿಕ್ಷಣ ಕೋರ್ಸ್‌ಗಳು ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (NBA) ನಿಂದ ಮಾನ್ಯತೆಯನ್ನು ಹೊಂದಿದ್ದು, ಈ ಮಾನ್ಯತೆಯು ವಾಷಿಂಗ್ಟನ್ ಅಕಾರ್ಡ್ ಮೂಲಕ ವಿಶ್ವಾದ್ಯಂತ ಅಂಗೀಕಾರವನ್ನು ಪಡೆದುಕೊಳ್ಳುತ್ತವೆ ಎಂದು ಎನ್‌ಬಿಎ (ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಶನ್) ಅಧ್ಯಕ್ಷರಾದ ಡಾ. ಅನಿಲ್ ಸಹಸ್ರಬುದ್ದೆ ತಿಳಿಸಿದ್ದಾರೆ. ಘಟಿಕೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಅನಿಲ್ ಸಹಸ್ರಬುಧಿ (Dr Anil Sahasrabudhe) ಉನ್ನತ ಶಿಕ್ಷಣ (Education ಕೋರ್ಸ್‌ಗಳಿಗೆ ಮಾನ್ಯತೆಯ ಮಹತ್ವವನ್ನು ತಿಳಿಸಿರುವ ಅನಿಲ್ ಸಹಸ್ರಬುಧಿ, ಮುಂಬೈ ವಿಶ್ವವಿದ್ಯಾಲಯದ (MU) ವಾರ್ಷಿಕ ಘಟಿಕೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು ಹಾಗೂ ಎರಡು ಲಕ್ಷಕ್ಕೂ ಹೆಚ್ಚಿನ ಪದವಿಗಳನ್ನು ಪ್ರದಾನ ಮಾಡಿದರು.


ಕುವೈತ್‌ನಲ್ಲಿ ತಂಗಿರುವ ಭಾರತೀಯರ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಮಾನ್ಯತೆ ಇಲ್ಲದ ಕಾರಣ ವೀಸಾ ರಿನ್ಯೂವಲ್ ಅನ್ನು ಹೇಗೆ ನಿರಾಕರಿಸಲಾಗಿದೆ ಎಂಬ ಉದಾಹರಣೆಯನ್ನು ಈ ಸಂದರ್ಭದಲ್ಲಿ ಅವರು ನೀಡಿದ್ದಾರೆ.


15% ದಷ್ಟು ಶೈಕ್ಷಣಿಕ ಕಾರ್ಯಕ್ರಮಗಳು ಮಾತ್ರ NBA ಮಾನ್ಯತೆ ಪಡೆದಿವೆ


NBA ಗೆ ವಾಷಿಂಗ್ಟನ್ ಅಕಾರ್ಡ್‌ನ ಶಾಶ್ವತ ಸಹಿ ಸ್ಥಾನಮಾನವನ್ನು ಹಲವು ವರ್ಷಗಳಿಂದ ನೀಡಲಾಗಿದೆ, ಇದೀಗ ಎಲ್ಲಾ ಎನ್‌ಬಿಎ-ಮಾನ್ಯತೆ ಪಡೆದ ಕಾರ್ಯಕ್ರಮಗಳಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ಒದಗಿಸುತ್ತದೆ.


ಆದರೆ 15% ದಷ್ಟು ಶೈಕ್ಷಣಿಕ ಕಾರ್ಯಕ್ರಮಗಳು ಮಾತ್ರ NBA ಮಾನ್ಯತೆಯನ್ನು ಪಡೆದುಕೊಂಡಿದ್ದು, ಇದು ಸಂಪೂರ್ಣ ಶೈಕ್ಷಣಿಕ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಮಾನ್ಯತೆಗಳಿಗಿಂತ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Teacher: ಪ್ರತಿಭಟನೆ ವೇಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ!


ಯೋಜನೆಗಳನ್ನು ತಿಳಿಸಿರುವ ಅಧ್ಯಕ್ಷರು


ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಅಧ್ಯಕ್ಷರಾಗಿ ಅವರು ಪ್ರೋಗ್ರಾಂ ಮಾನ್ಯತೆಗಾಗಿ ಎಂಜಿನಿಯರಿಂಗ್ ಕಾಲೇಜುಗಳನ್ನು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ತಿಳಿಸಿದ್ದಾರೆ. ಸಹಸ್ರಬುಧಿ ಅವರು ಹೊಸ ಯುಗದ ತಂತ್ರಜ್ಞಾನ-ಚಾಲಿತ ಶೈಕ್ಷಣಿಕ ವಿಷಯವನ್ನು ಒದಗಿಸುವ ಉದ್ದೇಶದಿಂದ ಹೊಸದಾಗಿ ರಚಿಸಲಾದ ರಾಷ್ಟ್ರೀಯ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ (NETF) ಗಾಗಿ ತಮ್ಮ ಯೋಜನೆಗಳನ್ನು ತಿಳಿಸಿದ್ದಾರೆ.


ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬೋಧಿಸುವುದು


ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಆಸಕ್ತಿಯಿಲ್ಲ ಆದರೆ ಅವರಿಗೆ ಕಾರ್ಟೂನ್‌ಗಳೆಂದರೆ ಇಷ್ಟ. ಹಾಗಾಗಿ ಶೈಕ್ಷಣಿಕ ವಿಷಯಗಳನ್ನು ಕಾರ್ಟೂನ್‌ಗಳ ಮೂಲಕ ಬೋಧಿಸುವುದು ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅವರಿಗೆ ತಿಳಿಯಪಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.


NETF ಒಂದೇ ವೇದಿಕೆಯಾಗಿದ್ದು, ಅಂತಹ ಸಂಸ್ಥೆಗಳ ಸಲ್ಲಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಉತ್ತಮ ವಿಷಯವನ್ನು ವಿವಿಧ ರಾಜ್ಯಗಳಿಗೆ ಶಿಫಾರಸು ಮಾಡಲಾಗುತ್ತದೆ ಎಂದು ಸಹಸ್ರಬುಧಿ ತಿಳಿಸಿದ್ದಾರೆ.


ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಪದವಿ ಪ್ರದಾನ


ಮುಂಬೈ ವಿಶ್ವವಿದ್ಯಾನಿಲಯ ನೀಡಿರುವ ಪದವಿಗಳಲ್ಲಿ 1,75,602 ಪದವಿಗಳು ಮತ್ತು 31,543 ಸ್ನಾತಕೋತ್ತರ ಪದವಿಗಳು, 270 ಪಿಎಚ್‌ಡಿಗಳು ಮತ್ತು 23 ಎಂ.ಫಿಲ್ ಪದವಿಗಳಾಗಿವೆ. ಒಟ್ಟು 18 ಚಿನ್ನದ ಪದಕಗಳಲ್ಲಿ 12 ಬಾಲಕಿಯರಿಗೆ ಮತ್ತು ಆರು ಬಾಲಕರಿಗೆ ಲಭಿಸಿದೆ. ಮುಂಬೈ ವಿಶ್ವವಿದ್ಯಾನಿಲಯ ಒದಗಿಸಿರುವ ಮಾಹಿತಿಯ ಪ್ರಕಾರ, ಒಟ್ಟು 79,220 ಹುಡುಗಿಯರು ಮತ್ತು 96,382 ಹುಡುಗರಿಗೆ ಪದವಿಗಳನ್ನು ನೀಡಲಾಗಿದೆ.




ಸ್ನಾತಕೋತ್ತರ ಪದವಿ ಪಡೆದವರಲ್ಲಿ 18,551 ಹುಡುಗಿಯರು ಮತ್ತು 12,992 ಹುಡುಗರು ಸೇರಿದ್ದಾರೆ. ಅಧ್ಯಾಪಕ-ವಾರು ಅಂಕಿಅಂಶಗಳನ್ನು ಪರಿಗಣಿಸಿ, ಈ ವರ್ಷದ ಘಟಿಕೋತ್ಸವ ಸಮಾರಂಭವು ಆರ್ಟ್ಸ್​ಗಾಗಿ 26,645 ಪದವಿಗಳನ್ನು, ಅಂತರಶಿಕ್ಷಣ ಕೋರ್ಸ್‌ಗಳಿಗೆ 4,937 ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಾಪಕರಿಗೆ 56, 004 ಪದವಿಗಳನ್ನು ಒಳಗೊಂಡಿದೆ. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗಗಳಲ್ಲಿ ಅತ್ಯಧಿಕ 1,19,559 ಪದವಿಗಳನ್ನು ನೀಡಲಾಗಿದೆ.


ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ದಿಗಂಬರ ಶಿರ್ಕೆ, ಪ್ರೊ-ವೈಸ್ ಚಾನ್ಸೆಲರ್ ಡಾ.ಅಜಯ್ ಭಾಮರೆ, ರಿಜಿಸ್ಟ್ರಾರ್ ಡಾ.ಸುನೀಲ್ ಭಿರೂದ್, ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಡಾ.ಪ್ರಸಾದ್ ಕರಂಡೆ ಉಪಸ್ಥಿತರಿದ್ದರು.

First published: