ಪ್ರಥಮ ವರ್ಷದ ಎಮ್‌ಬಿಬಿಎಸ್ ಪರೀಕ್ಷೆಯಲ್ಲಿ (MBBS E xam) ಉತ್ತೀರ್ಣರಾಗಲು ನಾಲ್ಕು ಪ್ರಯತ್ನಗಳಲ್ಲಿ ವಿಫಲರಾದ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ (RGUHS) ನ ಕನಿಷ್ಠ 40 ಎಮ್‌ಬಿಬಿಎಸ್ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶವನ್ನು ನೀಡಲಾಗುತ್ತದೆ ಎಂದು ವಿಶ್ವವಿದ್ಯಾಲಯ (University) ತಿಳಿಸಿದೆ.
ಪಾಸ್ ಆಗಲು ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶ
ಸುದ್ದಿಮಾಧ್ಯಮಕ್ಕೆ ನೀಡಿದ ವರದಿಯ ಅನ್ವಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಈ ಕೊನೆಯ ಪ್ರಯತ್ನವೆಂಬುದು ಮತ್ತೊಂದು ಅವಕಾಶವಾಗಿದ್ದು, ಜೊತೆಗೆ ಉತ್ತೀರ್ಣರಾಗದೇ ಇದ್ದ ವಿದ್ಯಾರ್ಥಿಗಳು ಪ್ರೋಗ್ರಾಮ್‌ನಿಂದ ಹೊರಗುಳಿಯುತ್ತಾರೆ. ಅಂದರೆ ಅಧ್ಯಯನ ಪೂರ್ಣಗೊಳಿಸಲು ಈ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ ಎಂದು ವಿಶ್ವವಿದ್ಯಾಲಯ ಸೂಚಿಸಿದೆ.
ಕರ್ನಾಟಕದಲ್ಲಿರುವ ಎಲ್ಲಾ ವೈದ್ಯಕೀಯ ಕಾಲೇಜುಗಳನ್ನು RGUHS ನಿಯಂತ್ರಿಸುತ್ತದೆ. ಈ ಹಿಂದೆ ಎಮ್‌ಬಿಬಿಎಸ್‌ನ ಮೊದಲ ವರ್ಷವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಅನಿಯಮಿತ ಅವಕಾಶವನ್ನೊದಗಿಸಲಾಗುತ್ತಿತ್ತು.
ಎಮ್‌ಬಿಬಿಎಸ್ ವಿದ್ಯಾರ್ಥಿಗಳಿಗೆ ಪಾಸ್ ಆಗಲು ನಾಲ್ಕು ಅವಕಾಶ ಮಾತ್ರ
2020 ರಲ್ಲಿ ನ್ಯಾಷನಲ್ ಮೆಡಿಕಲ್ ಕಮೀಷನ್ (NMC) 2019 ರ ಬ್ಯಾಚ್‌ನಿಂದ ಪರಿಣಾಮ ಬೀರುವಂತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅವಕಾಶವನ್ನು ನಾಲ್ಕು ಪ್ರಯತ್ನಗಳಿಗೆ ಇಳಿಸಿತು.
ಇದನ್ನೂ ಓದಿ: ಸಪ್ಲಿಮೆಂಟರಿ ಎಕ್ಸಾಂಗೆ ಈ ರೀತಿ ಸ್ಟಡಿ ಮಾಡಿ- ಖಂಡಿತಾ ಪಾಸ್ ಆಗ್ತೀರಾ!
ಮೊದಲನೆಯದು ಮುಖ್ಯ ಪರೀಕ್ಷೆಯಾದರೆ, ಸಪ್ಲಿಮೆಂಟರಿ, ಮುಂದಿನದು ಮುಖ್ಯ ಪರೀಕ್ಷೆ ಹಾಗೂ ಸಪ್ಲಿಮೆಂಟರಿ ಹೀಗೆ ವಿಭಜನೆಗಳನ್ನು ಮಾಡಲಾಯಿತು. ಪರೀಕ್ಷೆ ಬರೆಯಲು ನೀಡಿದ್ದ ನಾಲ್ಕು ಅವಕಾಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಐದನೇ ಪ್ರಯತ್ನವನ್ನು ಅಮಾನ್ಯಗೊಳಿಸಿರುವ ನ್ಯಾಯಾಲಯ
ವಿಶ್ವವಿದ್ಯಾನಿಲಯವು ಮೊದಲು ನೀಡಿದ್ದ ಐದನೇ ಪ್ರಯತ್ನವು ಅಮಾನ್ಯವಾಗಿದೆ. ಇದಾದ ನಂತರ ಎನ್‌ಎಮ್‌ಸಿ ಯು ಮೇ 12 ರಂದು ನಾಲ್ಕು ಪ್ರಯತ್ನಗಳ ನಂತರ ವಿದ್ಯಾರ್ಥಿಗಳಿಗೆ ಇನ್ನೊಂದು ಕೊನೆಯ ಅವಕಾಶವನ್ನು ನೀಡುವುದಾಗಿ ಸುತ್ತೋಲೆ ಹೊರಡಿಸಿತು.
ಎಮ್‌ಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಈ ಕೊನೆಯ ಅವಕಾಶಕ್ಕೆ ನಡೆಸುವ ಪರೀಕ್ಷೆಯನ್ನು ಜುಲೈ 7 ರಂದು ನಡೆಸಲಾಗುತ್ತದೆ ಎಂಬುದಾಗಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಘೋಷಿಸಿದೆ. ವಿಶ್ವವಿದ್ಯಾಲವು ಈ ಹಿಂದೆ ಐದನೇ ಪ್ರಯತ್ನವನ್ನು ನೀಡಿದ್ದರೂ ನ್ಯಾಯಾಲಯದ ಆದೇಶವು ಇದನ್ನು ಅಮಾನ್ಯ ಎಂದು ಪರಿಗಣಿಸಿತ್ತು.
ಮೊದಲ ಪ್ರಯತ್ನದಲ್ಲೇ ವಿಫಲರಾದ ವಿದ್ಯಾರ್ಥಿಗಳು
ನಾವು 7000 ಎಮ್‌ಬಿಬಿಎಸ್ ವಿದ್ಯಾರ್ಥಿಗಳನ್ನು ಹೊಂದಿದ್ದು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು 10-15% ವಿದ್ಯಾರ್ಥಿಗಳು ವಿಫಲರಾಗಿದ್ದಾರೆ. ಅಂದಾಜು 1,400 ವಿದ್ಯಾರ್ಥಿಗಳಿಗೆ ಪರೀಕ್ಷೆ ಪಾಸು ಮಾಡಲು ಸಾಧ್ಯವಾಗಿಲ್ಲ. 2019 ರ ಬ್ಯಾಚ್‌ನಲ್ಲಿ 40 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಇದೇ ರೀತಿ 2020 ರ ಬ್ಯಾಚ್‌ನಲ್ಲಿ 100 ವಿದ್ಯಾರ್ಥಿಗಳು ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಾರೆ.
ಅವರಿಂದ ಇನ್ನೂ ಯಾವುದೇ ನಿರ್ದೇಶನ ದೊರೆಯದೇ ಇರುವುದರಿಂದ ಅವರ ಅದೃಷ್ಟ ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಶ್ವವಿದ್ಯಾಲಯದ ವೈಸ್‌ಚಾನ್ಸೆಲರ್ ಎಮ್‌ಕೆ ರಮೇಶ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮೊದಲ ಪರೀಕ್ಷೆಯಲ್ಲಿ ಮೂರು ವಿಷಯಗಳಾದ ಅವುಗಳೆಂದರೆ ಹ್ಯೂಮನ್ ಅನಾಟಮಿ, ಸೈಕಾಲಜಿ ಹಾಗೂ ಬಯೋಕೆಮಿಸ್ಟ್ರಿ ಹೊಂದಿದ್ದು ಅವುಗಳನ್ನು ಆರು ಪೇಪರ್‌ಗಳಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಬದ್ಧವಾಗಿರುವ ಕೋಚಿಂಗ್ ಸೆಂಟರ್‌ಗಳು
ವಿಶ್ವವಿದ್ಯಾಲಯವು ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಿದ ನಂತರ ಈ ಬಗ್ಗೆ ವಿಚಾರಣೆಗಳನ್ನು ನಡೆಸಲಾಗುತ್ತಿದೆ ಎಂದು ಕೋಚಿಂಗ್ ಕೇಂದ್ರಗಳು ತಿಳಿಸಿವೆ. ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಬರೆಯಲು ತರಬೇತಿ ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಇದು ಮಾಡು ಇಲ್ಲವೇ ಮಡಿ ಅವಕಾಶವಾಗಿದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾಗುವುದು ನಿರ್ಣಾಯಕವಾಗಿದೆ.
45 ದಿನಗಳಲ್ಲಿ ಕಳೆದ 10 ವರ್ಷಗಳ ಪ್ರಶ್ನಾವಳಿಗಳನ್ನು ನೀಡುತ್ತೇವೆ. ಆಫ್‌ಲೈನ್ ಕ್ಲಾಸ್‌ಗಳಿಗಾಗಿ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿದಾಗ ನಾವು ಅವರಿಂದ ಮೊಬೈಲ್ ಫೋನ್‌ಗಳನ್ನು ಪಡೆದುಕೊಳ್ಳುತ್ತೇವೆ ಎಂದು ಸೆಂಟರ್‌ನ ವಕ್ತಾರರಾದ ರಾಹುಲ್ ದತ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ