• ಹೋಂ
  • »
  • ನ್ಯೂಸ್
  • »
  • jobs
  • »
  • NSUI: ಡಿಸೆಂಬರ್​ 17 ರಂದು ಬಂದ್​ಗೆ ಕರೆ ನೀಡಿದ NSUI, ಹಲವು ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ

NSUI: ಡಿಸೆಂಬರ್​ 17 ರಂದು ಬಂದ್​ಗೆ ಕರೆ ನೀಡಿದ NSUI, ಹಲವು ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕರ್ನಾಟಕ ಸರ್ಕಾರದ ಕೆಲವು ಅವ್ಯವಸ್ಥೆಗಳನ್ನು ನೋಡಿ ಸರ್ಕಾರವು ಮಕ್ಕಳ ಕೆಲವು ಬೇಡಿಕೆಗಳನ್ನು ಕಡೆಗಣಿಸಿದೆ ಎಂಬ ನಿಟ್ಟಿನಲ್ಲಿ ಈ ನಿರ್ದಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಇದನ್ನು ಖಂಡಿಸುವ ಮೂಲಕ ಬಂದ್​ಗೆ ಕರೆ ನೀಡಲಾಗಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ರಾಜ್ಯದಾದ್ಯಂತ ಡಿಸೆಂಬರ್​ 17ರಂದು ಕಾಲೇಜ್ (College)​ ಬಂದ್​ಗೆ ಕರೆ ನೀಡಲಾಗಿದೆ. ಬಂದ್​ಗೆ ಕರೆ ನೀಡಲು ಕೇವಲ ಒಂದೆರಡು ಕಾರಣವಲ್ಲ ಹಲವಾರು ಸಮಸ್ಯೆಗಳನ್ನು (Problems) ಬಗೆಹರಿಸುವಂತೆ ಒತ್ತಾಯಿಸಿ ಬಂದ್​ ನಡೆಸಲಾಗುತ್ತಿದೆ. ಕರ್ನಾಟಕದ ರಾಷ್ಟ್ರೀಯ ವಿದ್ಯಾರ್ಥಿಗಳ (Students) ಒಕ್ಕೂಟವು ಈ ಬಂದ್​ನ ಮುಂದಾಳತ್ವ ವಹಿಸಿದ್ದು ಎಲ್ಲಾ ವಿದ್ಯಾರ್ಥಿಗಳು ಇದಕ್ಕೆ ಸಹಕರಿಸಲು ಕೋರಲಾಗಿದೆ. ಡಿಸೆಂಬರ್ 17, 2022 ರಂದು ಎಲ್ಲಾ ವಿಶ್ವವಿದ್ಯಾನಿಲಯಗಳು (Universities) ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಬಹಿಷ್ಕಾರ ಮತ್ತು ಬಂದ್ ಘೋಷಿಸಿದೆ.


ಈ ಹಿಂದೆಯೇ ಡಿಸೆಂಬರ್​ 17ರಂದು ಬಂದ್​ಗೆ ಕರೆ ನೀಡಲಾಗುವುದು ಎಂಬ ವಿಚಾರವನ್ನು ಪ್ರಸ್ಥಾಪಿಸಲಾಗಿತ್ತು ಅದರಂತೆ ಇದೀಗ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗೇ ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರ ಬಯಸುವ ನಿಟ್ಟಿನಲ್ಲಿ ಈಗ ಬಂದ್​ಗೆ ಕರೆನೀಡಲಾಗಿದೆ. ಈ ಕುರಿತು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಕರೆ ನೀಡಲಾಗಿದೆ.


ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ದೃಷ್ಟಿಯಿಂದ ಹೀಗೆ ಮಾಡಲು ಹೊರಟಿದ್ದೇವೆ ಇಲ್ಲವಾದರೆ ಸಮಸ್ಯೆಗಳಿಗೆ ಎಂದೂ ಸಹ ಪರಿಹಾರ ಸಿಗುವುದಿಲ್ಲ. ದಿನೇ ದಿನೇ ಸಮಸ್ಯೆಗಳಲ್ಲೇ ಇರುವುದು ಸರಿ ಅಲ್ಲ ಎಂದು ಯು ಐ ಅಧ್ಯಕ್ಷ ಫಾರೂಕ್​ ಬಯಾಬೆ ತಿಳಿಸಿದ್ದಾರೆ.


ಇದನ್ನೂ ಓದಿ: Mid Day Meal: ಬಿಸಿ ಊಟಕ್ಕೆ ದಾನಿಗಳ ನೆರವು, ಶಿಕ್ಷಣ ಇಲಾಖೆಯಿಂದ ಹೊಸ ಸುತ್ತೋಲೆ 


ಕರ್ನಾಟಕ ಸರ್ಕಾರದ ಕೆಲವು ಅವ್ಯವಸ್ಥೆಗಳನ್ನು ನೋಡಿ ಸರ್ಕಾರವು ಮಕ್ಕಳ ಕೆಲವು ಬೇಡಿಕೆಗಳನ್ನು ಕಡೆಗಣಿಸಿದೆ ಎಂಬ ನಿಟ್ಟಿನಲ್ಲಿ ಈ ನಿರ್ದಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಇದನ್ನು ಖಂಡಿಸುವ ಮೂಲಕ ಬಂದ್​ಗೆ ಕರೆ ನೀಡಲಾಗಿದೆ. ಅಧಿಕೃತ ಸೂಚನೆಯಲ್ಲಿ ಪ್ರಕಟಿಸಿರುವ ಪ್ರಕಾರ ಡಿಸೆಂಬರ್ 5, 2022 ರಂದು ಒಕ್ಕೂಟದಿಂದ ಶಿಕ್ಷಣ ಸಚಿವಾಲಯದಲ್ಲಿನ ಕಳಪೆ ಆಡಳಿತ, ಉನ್ನತ-ಕೈಗಾರಿಕೆ ಮತ್ತು ಅನಿಯಂತ್ರಿತತೆಯು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಉಲ್ಲೇಖಿಸಿದ್ದಾರೆ.


ವಿದ್ಯಾರ್ಥಿಗಳಲ್ಲ ಅವರೊಟ್ಟಿಗೆ ಪೋಷಕರೂ ಸಹ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. 


ಬಂದ್ ಮಾಡಿದ ನಿಟ್ಟಿನಲ್ಲಾದರೂ  ಸಮಸ್ಯೆಗಳಿಗೆ ಪರಿಹಾರ ದೊರೆಯಲಿ ಎಂಬ ಆಶಯದಿಂದ ಹೀಗೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವೂ ಸಹ ಸಿಗುತ್ತಿಲ್ಲ ಇದರಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಾಗುತ್ತಿತ್ತು ಎಂದು ಎಂಬ ಅಭಿಪ್ರಾಯ ಎಲ್ಲರಲ್ಲಿದೆ. ಇಲ್ಲಿ ತೊಂದರೆ ಅನುಭವಿಸುತ್ತಿರುವವರು ಕೇವಲ ವಿದ್ಯಾರ್ಥಿಗಳಲ್ಲ ಅವರೊಟ್ಟಿಗೆ ಪೋಷಕರೂ ಸಹ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.


ಪರೀಕ್ಷೆ ಬರೆದು ಆರು ತಿಂಗಳಾದರೂ ಬಾರದ ಫಲಿತಾಂಶ
ಬೆಂಗಳೂರಿನ ವಿಶ್ವವಿದ್ಯಾಲಯಗಳು, ವಿಶೇಷವಾಗಿ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ಫಲಿತಾಂಶಗಳು ಪರೀಕ್ಷೆಗಳ ನಂತರ 6 - 8 ತಿಂಗಳುಗಳವರೆಗೆ ಪ್ರಕಟಿಸಲಾಗಿಲ್ಲ. ಕೆಲವು ವಿದ್ಯಾರ್ಥಿಗಳು ತಮ್ಮ ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳ ಫಲಿತಾಂಶವನ್ನು ಪಡೆಯದೆ ಮೂರನೇ ಸೆಮಿಸ್ಟರ್‌ಗೆ ಹಾಜರಾಗಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯ ಅಸಂಘಟಿತ ಮತ್ತು ಅವೈಜ್ಞಾನಿಕ ಅನುಷ್ಠಾನದಿಂದಾಗಿ ವಿಳಂಬವಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪೋರ್ಟಲ್‌ನಲ್ಲಿ ವಿಳಂಬವಾದ ಸರ್ವರ್ ಪ್ರತಿಕ್ರಿಯೆಯು ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ತಮ್ಮ ಅಂಕವೇ ತಿಳಿಯದೇ ಅಂದತ್ವದಿಂದ ಮುಂದುವರೆಯುವ ಪರಿಸ್ಥಿತಿ ಮಕ್ಕಳಿಗೆ ಬಂದಿದೆ.


ಪಿಯು ಹಾಗೂ ಪದವಿ ವಿದ್ಯಾರ್ಥಿಗಳೂ ಇದೇ ಸಮಸ್ಯೆ
ವಿದ್ಯಾರ್ಥಿ ವೇತನವನ್ನು ಸಕಾಲದಲ್ಲಿ ನೀಡದೆ ವಿದ್ಯಾರ್ಥಿಗಳ ಭವಿಷ್ಯದೊಟ್ಟಿಗೆ ಚೆಲ್ಲಾಟವಾಡುತ್ತಿದ್ದಾರೆ. ಪರೀಕ್ಷೆ ಫಲಿತಾಂಶವನ್ನೂ ಸಹ ಪ್ರಕಟಿಸದೇ ಇದ್ದರೆ ಹೇಗೆ ಅವರ ಮೌಲ್ಯಮಾಪನವಾದರೂ ಹೇಗೆ ಸಾಧ್ಯ ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗುತ್ತಿದೆ ಎಂಬೆಲ್ಲಾ ಉದ್ದೇಶದಿಂದ ಬಂದ್​ಗೆ ಕರೆನೀಡಲಾಗಿದೆ.

First published: