ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಸರ್ಕಾರ ನೋಟೀಸ್ ಜಾರಿಗೊಳಿಸಿದೆ. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(MS Dhoni) ಮಕ್ಕಳ ಕಲಿಕೆಗಾಗಿ ಬೆಂಗಳೂರಿನಲ್ಲಿ ಗ್ಲೋಬಲ್ ಸ್ಕೂಲ್(MS Dhoni Global School) ಆರಂಭಿಸಿದ್ದರು. ಎಂಎಸ್ ಧೋನಿ ಶಾಲೆಗೂ ಶಿಕ್ಷಣ ಇಲಾಖೆ(Karnataka Education Department) ಶಾಕ್ ಕೊಟ್ಟಿದೆ. ಭಾರತ (India) ಕ್ರಿಕೇಟ್ ತಂಡದ ಮಾಜಿ ಕ್ಯಾಪ್ಟ್ ಧೋನಿಗೆ ಕರ್ನಾಟಕ ಶಿಕ್ಷಣ ಇಲಾಖೆ ನೋಟಿಸ್ ಕಳಿಸಿದೆ. ಮಹೇಂದ್ರ ಸಿಂಗ್ ಧೋನಿ ಶಾಲೆ ಕರ್ನಾಟಕ ರಾಜ್ಯ ಪಠ್ಯಕ್ರಮದಡಿ ಬೋಧನೆ ಮಾಡಲು ಅನುಮತಿ ಪಡೆದಿದೆ. ಆದ್ರೆ ಮಾಡ್ತಿರೋದು ಮಾತ್ರ CBSC ಪಾಠ ಈ ಕಾರಣಕ್ಕಾಗಿ ಎಚ್ಚರಿಕೆ ನೀಡಲಾಗಿದೆ.
ಒಂದನೇ ತರಗತಿಯಿಂದ 8 ನೇ ತರಗತಿಯವರೆಗೂ ಈ ಶಾಲೆಯಲ್ಲಿ ಪಾಠ ಹೇಳಲಾಗುತ್ತೆ. ಬೆಂಗಳೂರಿನ ಸಿಂಗಸಂದ್ರದಲ್ಲಿರೋ ಮಹೇಂದ್ರ ಸಿಂಗ್ ಧೋನಿ ಗ್ಲೋಬಲ್ ಸ್ಕೂಲ್‌ನಲ್ಲಿ ಈ ವರ್ಷ 248 ವಿದ್ಯಾರ್ಥಿಗಳು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಆದ್ರೆ ಹೇಳೋ ಪಾಠ ಸಿಎಬಿಎಸ್ಸಿದು. ಪಡೆದ ಅನುಮತಿ ಮಾತ್ರ ರಾಜ್ಯ ಪಠ್ಯಕ್ರಮದ್ದು ಅನ್ನೋದು ನೋಟಿಸ್ ಜಾರಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ
ಈ ಗ್ಲೋಬಲ್ ಶಾಲೆಯಲ್ಲಿ ಒಂದನೇ ತರಗತಿಗೆ ಮಗುವನ್ನು ಸೇರಿಸೋಕೆ ಬರೋಬ್ಬರಿ 1,47,000 ರೂ. ಶುಲ್ಕ ವಿಧಿಸಲಾಗುತ್ತದೆ. ಎರಡನೇ ತರಗತಿಗೆ ಈ ಫೀಸ್ ಮೊತ್ತ ಇನ್ನಷ್ಟು ಹೆಚ್ಚು. ಪಠ್ಯ ಪುಸ್ತಕ ಮತ್ತು ಯುನಿಫಾರ್ಮ್ ಎಲ್ಲ ಸೇರಿ 2ನೇ ತರಗತಿಗೆ ಮಗುವನ್ನು ಸೇರಿಸಲಹ 1,56,000 ಹಣ ಪಾವತಿಸಬೇಕಿದೆ. ಇಷ್ಟೊಂದು ದುಬಾರಿ ಶುಲ್ಕ ನೀಡಿದರೂ ಸಹ ಪಾಠ ಮಾತ್ರ ಅಂದುಕೊಂಡ ಹಾಗೆ ಆಗ್ತಿಲ್ಲ ಈ ಕಾರಣದಿಂದ ನೋಟೀಸ್ ಜಾರಿ ಮಾಡಲಾಗಿದೆ.
ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ನೋಟೀಸ್
ಈ ಶಾಲೆಯೊಂದೇ ಅಲ್ಲ ಇದನ್ನು ಹೊರತು ಪಡಿಸಿ ಇನ್ನೂ 500 ಶಾಲೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ. ಶಿಕ್ಷಣ ಇಲಾಖೆ ನಿಯಮ ಪಾಲಿಸದ ಎಲ್ಲಾ ಖಾಸಗಿ ಶಾಲೆಗಳಿಗೆ ನೋಟೀಸ್ ನೀಡಲಾಗಿದೆ. ಅದರಲ್ಲಿ ಈ ಶಾಲೆಯೂ ಒಂದಾಗಿದೆ. ಇಷ್ಟೊಂದು ಸಂಖ್ಯೆಯ ಶಾಲೆಗಳಿಗೆ ನೋಟೀಸ್ ಜಾರಿಯಾಗಿದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮೋಸ ಮಾಡ್ತಿದ್ದಾರೆ ಅಂತ.
ಶಿಕ್ಷಣ ಇಲಾಖೆಯಿಂದ ರಾಜ್ಯ ಪಠ್ಯಕ್ರಮ ಅನುಮತಿ
ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು ರಾಜ್ಯ ಪಠ್ಯಕ್ರಮಕ್ಕೆ ಆದರೆ ಪಾಠ ಮಾತ್ರ ಬೇರೆ ಸಿಲೇಬಸ್ನದ್ದು. ಈ ಕುರಿತು ಪೋಷಕರಿಗೂ ಸಹ ಯಾವುದೇ ಮಾಹಿತಿ ಶಾಲಾ ಆಡಳಿತ ಮಂಡಳಿ ವಂಚನೆ ಮಾಡುತ್ತಿದೆ. ಶಿಕ್ಷಣ ಇಲಾಖೆ NOC ಪಡೆಯದೇ ಶಾಲೆ ನಡೆಸುತ್ತಿರುವ ಆರೋಪಕ್ಕೆ ನೋಟೀಸ್ ಜಾರಿಗೊಳಿಸಲಾಗಿದೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಶಾಲೆಗಳಿಗೆ ನೋಟೀಸ್ ಜಾರಿ
ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಶಾಲೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ದಕ್ಷಿಣ ವಲಯದ 303 ಖಾಸಗಿ ಶಾಲೆಗಳಿಗೆ ನೋಟಿಸ್ ನೀಡಿದ್ದು, ಉತ್ತರ ವಲಯದ 179 ಖಾಸಗಿ ಶಾಲೆಗಳಿಗೆ ನೋಟೀಸ್ ನೀಡಲಾಗಿದೆ. ಪ್ರತಿಷ್ಟಿತ ಖಾಸಗಿ ಶಾಲೆಗಳಿಗೆ ಈ ಮೊದಲು ನೋಟೀಸ್ ನೀಡಿದ್ರೂ ನಿರ್ಲಕ್ಷ್ಯ ಮಾಡಿದ್ದಾರೆ. ಯಾವುದೇ ರೀತಿ ಸ್ಪಂದನೆ ನೀಡದೇ ಅದನ್ನೇ ಮುಂದುವರಿಸಿದ್ದಾರೆ. ಆ ಕಾರಣಕ್ಕಾಗಿ ಮತ್ತೊಮ್ಮೆ ನೋಟೀಸ್ ನೀಡಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಹೊರಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ