ವಿದ್ಯಾರ್ಥಿಗಳ (Students) ಹಿತದೃಷ್ಟಿಯಿಂದ ಒಂದು ಹಾಗೂ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಮಾಡಬಾರದು ಎಂಬ ಮಾತು ಕೇಳಿಬರುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ (Exam) ಒತ್ತಡ ಉಂಟಾಗುತ್ತದೆ ಎಂಬುದೇ ಇದಕ್ಕೆ ರೀಸನ್. ಅಷ್ಟು ಚಿಕ್ಕ ವಿದ್ಯಾರ್ಥಿಗಳ ಬುದ್ದಿ ಮಟ್ಟವನ್ನು ಅಳೆಯಲು ಪರೀಕ್ಷೆ ಎಂ ಮಾನದಂಡ ಸೂಕ್ತವಲ್ಲ ಎಂಬ ಕಾರಣದಿಂದ ಈ ರೀತಿ ಮಾಡಲಾಗಿದೆ. ಲಿಖಿತ ಪರೀಕ್ಷೆಗಳನ್ನು ಏನಿದ್ದರೂ 3ನೇ ತರಗತಿಯಿಂದ (Class) ಆರಂಭಿಸಬೇಕು ಎಂದು ಹೇಳಲಾಗುತ್ತಿದೆ. ಮಗುವಿಗೆ ಹೆಚ್ಚುವರಿ ಹೊರೆಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಚೌಕಟ್ಟಿನ ಪ್ರಕಾರ ಮೂಲಭೂತ ಹಂತಕ್ಕೆ ಸೂಕ್ತವಾದ ಮೌಲ್ಯಮಾಪನದ ಎರಡು ಪ್ರಮುಖ ವಿಧಾನಗಳನ್ನು ತಿಳಿಸಿದೆ. ಕರಕುಶಲಗಳು ಹಾಗೂ ವಿದ್ಯಾರ್ಥಿಗಳು ಮಾಡಿದ ಚಿಕ್ಕ ಪುಟ್ಟ ಪ್ರಾಜೆಕ್ಟ್ಗಳನ್ನೇ ಮೌಲ್ಯಮಾಪನ ಮಾಡುವುದು ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವುದು ಇಷ್ಟು ಮಾತ್ರ ಮಾಡಿದರೆ ಸಾಕು ಎಂದು NCF ಸೂಚಿಸಿದೆ.
ಪೂರ್ವಸಿದ್ಧತಾ ಹಂತದ (3 ರಿಂದ 5 ನೇ ತರಗತಿ) ಮೌಲ್ಯಮಾಪನವನ್ನು ವಿವರಿಸುವ ಕರಡು "ಈ ಹಂತದಲ್ಲಿ ಲಿಖಿತ ಪರೀಕ್ಷೆಗಳನ್ನು ಪರಿಚಯಿಸಬೇಕು" ಎಂದು ಶಿಫಾರಸು ಮಾಡುತ್ತದೆ. ಕಲಿಕೆಯನ್ನು ಉತ್ತೇಜಿಸಲು ವಿವಿಧ ಮೌಲ್ಯಮಾಪನ ವಿಧಾನಗಳನ್ನು ಬಳಸಬೇಕು. ಅವರ ಕೆಲಸದ ಮೂಲಕ ಸಮಗ್ರವಾಗಿ ವಿದ್ಯಾರ್ಥಿಗಳ ಪ್ರಗತಿಯನ್ನು ಸೆರೆಹಿಡಿಯಲು ಪೋರ್ಟ್‌ಫೋಲಿಯೊಗಳನ್ನು ಬಳಸಬಹುದು. ಇದು ಪೋಷಕರಿಗೆ ಅವರ ಕಲಿಕೆಯ ವಿಶ್ವಾಸಾರ್ಹ ಚಿತ್ರಣವನ್ನು ಸಹ ನೀಡುತ್ತದೆ.
ಇದನ್ನೂ ಓದಿ: Karnataka Education: ರಾಜ್ಯದ 3 ರಿಂದ 8 ವರ್ಷದ ಮಕ್ಕಳಿಗೆ ಹೊಸ ಶಿಕ್ಷಣ ಯೋಜನೆ; ಆಟದ ಮೂಲಕ ಕಲಿಕೆ
ಶಿಕ್ಷಣ ಸಚಿವಾಲಯವು ಶಾಲಾ ಶಿಕ್ಷಣಕ್ಕಾಗಿ ಎನ್‌ಸಿಎಫ್‌ನ ತಿದ್ದುಪಡಿ ಪ್ರಕಾರ ಇದನ್ನು ಗುರುವಾರ ಬಿಡುಗಡೆ ಮಾಡಿದೆ . ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ವಿದ್ವಾಂಸರಂತಹ ಮಧ್ಯಸ್ಥಗಾರರಿಂದ ಸಲಹೆಗಳನ್ನು ಈ ಕುರಿತು ಕೇಳಲಾಗಿದೆ. ಇಸ್ರೋ ಮಾಜಿ ಮುಖ್ಯಸ್ಥರಾದ ಕೆ ಕಸ್ತೂರಿರಂಗನ್ ನೇತೃತ್ವದ ಸಮಿತಿಯು ಸಿದ್ಧಪಡಿಸಿದ ಕರಡು, ಮಧ್ಯಮ ಹಂತದಲ್ಲಿ (6 ರಿಂದ 8 ನೇ ತರಗತಿ), ಪಠ್ಯಕ್ರಮದ ಗಮನವು ಪರಿಕಲ್ಪನೆ, ತಿಳುವಳಿಕೆ ಮತ್ತು ಉನ್ನತ ಶ್ರೇಣಿಯ ಸಾಮರ್ಥ್ಯಗಳತ್ತ ಸಾಗಬೇಕು ಎಂದು ಸೂಚಿಸುತ್ತದೆ.
ಆದ್ದರಿಂದ, ತರಗತಿಯ ಮೌಲ್ಯಮಾಪನ ತಂತ್ರಗಳಾದ ಪ್ರಾಜೆಕ್ಟ್‌ಗಳು, ಚರ್ಚೆಗಳು, ಪ್ರಸ್ತುತಿಗಳು, ಪ್ರಯೋಗಗಳು, ತನಿಖೆಗಳು, ರೋಲ್ ಪ್ಲೇಗಳು, ಜರ್ನಲ್‌ಗಳು ಮತ್ತು ಪೋರ್ಟ್‌ಫೋಲಿಯೊಗಳು ಕಲಿಕೆಯನ್ನು ನಿರ್ಣಯಿಸಲು ಬಳಸಬೇಕು ಎಂದು ಹೇಳಲಾಗಿದೆ.
3-8 ವರ್ಷದ ಮಕ್ಕಳಿಗೆ ಹೊಸ ಶಿಕ್ಷಣ ಯೋಜನೆ
ರಾಜ್ಯವು 10+ 2+ 3 ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಆದ್ದರಿಂದ 1 ಮತ್ತು 10 ವರ್ಷಗಳ ಶಾಲಾ ಶಿಕ್ಷಣದ ನಡುವೆ, ಶಾಲಾಪೂರ್ವ ಶಿಕ್ಷಣವು 2 ವರ್ಷಗಳು ಮತ್ತು ಪದವಿ ಶಿಕ್ಷಣವು ಕನಿಷ್ಠ 3 ವರ್ಷಗಳು. ಪ್ರಿ-ಯೂನಿವರ್ಸಿಟಿ ವ್ಯವಸ್ಥೆಯಲ್ಲಿ ಎರಡು ಭಾಷಾ ವಿಷಯಗಳು ಮತ್ತು ನಾಲ್ಕು ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡಬಹುದು.
3-8 ವರ್ಷದ ಮಕ್ಕಳಿಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಕ್ಟೋಬರ್ 2022 ರಲ್ಲಿ ಪ್ರಕಟಿಸಿತ್ತು. ಆದರೆ ಅದನ್ನು 2023-24ರ ಶೈಕ್ಷಣಿಕ ವರ್ಷದಲ್ಲಿ ಅಂತಿಮಗೊಳಿಸಿದೆ ಹಾಗೂ ಈ ವರ್ಷದಿಂದಲೆ ಅದನ್ನು ಅಳವಡಿಸಿಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಚೌಕಟ್ಟನ್ನು ಸಿದ್ಧಪಡಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಹೊಸ ಚೌಕಟ್ಟಿನ ಯಶಸ್ವಿ ಅನುಷ್ಠಾನ
ಈ ಹೊಸ ಚೌಕಟ್ಟಿನ ಯಶಸ್ವಿ ಅನುಷ್ಠಾನದಿಂದ ಕರ್ನಾಟಕದಲ್ಲಿ 3-8 ವರ್ಷದೊಳಗಿನ ಮಕ್ಕಳು ಗುಣಮಟ್ಟದ ಶಿಕ್ಷಣ ಮತ್ತು ಸೇವೆಗಳನ್ನು ಪಡೆಯುತ್ತಾರೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದು ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕಿ ವೆನಿತಾ ಕೌಲ್, ಶಿಕ್ಷಣ ತಜ್ಞೆ ಲತಾ ಮೆನನ್ ಮತ್ತು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಮೊಹಮ್ಮದ್ ಬೇಗ್ ಅವರು ಹೊಸ ಚೌಕಟ್ಟನ್ನು ರೂಪಿಸಿದ ಸಮಿತಿಯ ಸದಸ್ಯರಾಗಿದ್ದರೆ. ಮಕ್ಕಳಿಗೆ ಗಿಳಿಪಾಠವನ್ನಷ್ಟೇ ಮಾಡದೇ, ನೀತಿ, ಪ್ರಾಮಾಣಿಕತೆಗಳ ಮಹತ್ವವನ್ನರಿತು ಅವುಗಳನ್ನು ಸ್ವತಃ ಪಾಲಿಸಿ, ಮಕ್ಕಳಿಗೆ ಆದರ್ಶಪ್ರಾಯರಾಗಿ ಪ್ರೀತಿಯಿಂದ ಬೋಧಿಸುವ ಶಾಲೆಗಳಿಗೆ ಸೇರಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ