• ಹೋಂ
  • »
  • ನ್ಯೂಸ್
  • »
  • jobs
  • »
  • College Fees: ಖಾಸಗಿ ಕಾಲೇಜು ಶುಲ್ಕ ಕಡಿಮೆ ಮಾಡಿ; ಖಡಕ್ ಸೂಚನೆ ನೀಡಿದ ಸರ್ಕಾರ

College Fees: ಖಾಸಗಿ ಕಾಲೇಜು ಶುಲ್ಕ ಕಡಿಮೆ ಮಾಡಿ; ಖಡಕ್ ಸೂಚನೆ ನೀಡಿದ ಸರ್ಕಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಷ್ಟ್ರೀಯ ವೈದ್ಯಕೀಯ ಆಯೋಗವು ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಅರ್ಧದಷ್ಟು ಸೀಟುಗಳ ಶುಲ್ಕವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮಟ್ಟಕ್ಕೆ ತರಬೇಕು ಎಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಸರ್ಕಾರಿ ಕೋಟಾದ ಸೀಟುಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕಡಿಮೆ ಶುಲ್ಕ ಮತ್ತು ಹೆಚ್ಚಿನ ಅರ್ಹತಾ ಶ್ರೇಣಿಗಳೊಂದಿಗೆ ಸೀಟು ಮೀಸಲಾಗುತ್ತದೆ. ರಾಜ್ಯ ಸರ್ಕಾರಗಳು ನಿಗದಿಪಡಿಸಿದ ಖಾಸಗಿ (Private Collage) ಕಾಲೇಜುಗಳಲ್ಲಿನ ಸೀಟುಗಳ ವೆಚ್ಚದಲ್ಲಿ ಹೆಚ್ಚು ಕಡಿಮೆ ಹೀಗೆ ಶುಲ್ಕದಲ್ಲಿ ವ್ಯತ್ಯಾಸ ಕಂಡುಬರುವುದು ಸಹಜ. ಉನ್ನತ ವೈದ್ಯಕೀಯ ನಿಯಂತ್ರಕವಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿನ ಪರಿಣಿತ ಗುಂಪು (Group), ಡೀಮ್ಡ್ ವಿಶ್ವವಿದ್ಯಾನಿಲಯಗಳ ಸರಾಸರಿ ಶುಲ್ಕವು (Fees) ವರ್ಷಕ್ಕೆ 21 ಲಕ್ಷ ರೂ.ಗಳಾಗಿದೆ. ಇನ್ನು ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ವರ್ಷಕ್ಕೆ ಸರಾಸರಿ 11.5 ರೂ. ಆಗಿದೆ. 


2023ಕ್ಕೆ ದೇಶದಲ್ಲಿ ಸುಮಾರು 96,000 MBBS ಸೀಟುಗಳಿವೆ. ಅದರಲ್ಲಿ ಅರ್ಧದಷ್ಟು ಖಾಸಗಿ ವಲಯದಲ್ಲಿವೆ. ಕೇಂದ್ರ ಸರ್ಕಾರದ ಶಿಕ್ಷಣ ಖಾತೆಯ ರಾಜ್ಯ ಸಚಿವ ಡಾ ಸುಭಾಸ್ ಸರ್ಕಾರ್ ಅವರು ಲಿಖಿತ ರೂಪದಲ್ಲಿ ಸಂಸತ್ತಿಗೆ ನೀಡಿರುವ ಮಾಹಿತಿಯಲ್ಲಿ ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳ ಸರಾಸರಿ ಶುಲ್ಕವು ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಸಾಮಾನ್ಯ ಸೀಟುಗಳಿಗೆ ಸಮಾನವಾಗಿರುತ್ತದೆ ಎಂದು ತಿಳಿಸಿದ್ದಾರೆ. ಆದರೆ ಇದರಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ.


ಎರಡು ಪಟ್ಟು ಶುಲ್ಕ ಹೆಚ್ಚಳ


ಎನ್‌ಆರ್‌ಐ ಕೋಟಾದ ಅಡಿಯಲ್ಲಿರುವ ಸೀಟುಗಳಿಗೆ ಅಂದರೆ ಎನ್‌ಆರ್‌ಐಗಳು, ಭಾರತದ ಸಾಗರೋತ್ತರ ನಾಗರಿಕರು, ಭಾರತೀಯ ಮೂಲದ ವ್ಯಕ್ತಿಗಳು ಅಥವಾ ಭಾರತದ ಹೊರಗೆ ವಾಸಿಸುವ ಎನ್‌ಆರ್‌ಐ ಪ್ರಾಯೋಜಕರಿಗೆ ಕಾಯ್ದಿರಿಸಲಾಗಿದೆ. ಆದರೆ ಈ ಸೀಟುಗಳಿಗೆ ರೂ 24 ಲಕ್ಷವಾಗಿದ್ದು ಸಾಮಾನ್ಯ ಸೀಟುಗಳಗಿಂತ ಎರಡು ಪಟ್ಟು ಶುಲ್ಕ ಹೆಚ್ಚಾಗಿದೆ.


ಶುಲ್ಕ ನಿರ್ಧಾರಕ್ಕೆ ಪರಿಣಿತರ ಸಲಹೆ


ಎನ್‌ಆರ್‌ಐ ಕೋಟಾದ ಸೀಟುಗಳಿಗೆ ಸರಾಸರಿ ಶುಲ್ಕವು ಸಾಮಾನ್ಯ ಸೀಟುಗಳಿಗಿಂತ 50 ಪ್ರತಿಶತ ಅಧಿಕವಾಗಿದ್ದು ವರ್ಷಕ್ಕೆ 31 ಲಕ್ಷ ರೂ.ಗಳಾಗಿದೆ. ವಿವಿಧ ರಾಜ್ಯಗಳಲ್ಲಿನ ವಿವಿಧ ವರ್ಗಗಳ ಸೀಟುಗಳಿಗೆ ಶುಲ್ಕ ರಚನೆಯು ವಿಭಿನ್ನವಾಗಿದೆ. ದೇಶಾದ್ಯಂತ ಶುಲ್ಕ ರಚನೆಗಳಲ್ಲಿ ತೀವ್ರ ವ್ಯತ್ಯಾಸವಿದೆ. ಇದರಿಂದಾಗಿ ಎಂಬಿಬಿಎಸ್‌ಗೆ ಬೇಸ್‌ಲೈನ್ ಶುಲ್ಕವನ್ನು ಹೊಂದಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ಸರಾಸರಿ ಶುಲ್ಕವನ್ನು ನಿರ್ಧರಿಸುವ ಕಾರ್ಯವನ್ನು ತಜ್ಞರ ಸಮಿತಿಯು ಕೈಗೊಂಡಿದೆ. ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಮಾಜಿ ಮುಖ್ಯಸ್ಥ ಡಾ.ಪ್ರವೀಣ್ ಶಿಂಗಾರೆ ತಿಳಿಸಿದ್ದಾರೆ.


ವೈದ್ಯಕೀಯ ಶಿಕ್ಷಣವನ್ನು ಹೆಚ್ಚು ಸುಲಭವಾಗಿಸುವ ಪ್ರಯತ್ನದಲ್ಲಿ ಭಾರತದ ಅಗತ್ಯಗಳನ್ನು ಪೂರೈಸಲು ಮತ್ತು ಮಕ್ಕಳು ಓದಲು ವಿದೇಶಕ್ಕೆ ಹೋಗಬೇಕಾಗಿಲ್ಲ. ಸರ್ಕಾರವು ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಜೊತೆಗೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಿದೆ.


ಇದನ್ನೂ ಓದಿ: 2nd PUC Preparatory Exam: ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ


ಈ ವರ್ಷದ ಆರಂಭದಲ್ಲಿ, ರಾಷ್ಟ್ರೀಯ ವೈದ್ಯಕೀಯ ಆಯೋಗವು ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಅರ್ಧದಷ್ಟು ಸೀಟುಗಳ ಶುಲ್ಕವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮಟ್ಟಕ್ಕೆ ತರಬೇಕು ಎಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.

First published: