• ಹೋಂ
  • »
  • ನ್ಯೂಸ್
  • »
  • Jobs
  • »
  • NIRF Rankings 2023ರ ಟಾಪ್​ 10 ಕಾಲೇಜುಗಳ ಲಿಸ್ಟ್​ ಇಲ್ಲಿದೆ ಗಮನಿಸಿ

NIRF Rankings 2023ರ ಟಾಪ್​ 10 ಕಾಲೇಜುಗಳ ಲಿಸ್ಟ್​ ಇಲ್ಲಿದೆ ಗಮನಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಬಾರಿಯ ಫಲಿತಾಂಶದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಹಿಂದಿನ ದಾಖಲೆಯನ್ನು ಕಾಯ್ದುಕೊಂಡಿದ್ದು, ಕಳೆದ ಬಾರಿ ಮೊದಲ ಮೂರು ಸ್ಥಾನಗಳಲ್ಲಿದ್ದ ಕಾಲೇಜುಗಳು ಈ ಬಾರಿಯೂ ಮೊದಲ ಮೂರು ಸ್ಥಾನಗಳಲ್ಲಿ ನಿಂತಿವೆ

  • Share this:

ಪ್ರತಿ ವರ್ಷ ವಿದ್ಯಾರ್ಥಿಗಳು ಈ NIRF ಶ್ರೇಯಾಂಕ ಪಟ್ಟಿಯ ಬಿಡುಗಡೆಗಾಗಿ ಕಾಯುತ್ತಾರೆ. ಈ ಮೂಲಕ ಪಟ್ಟಿಯಲ್ಲಿ ಯಾವ ಸಂಸ್ಥೆಗಳು ಉತ್ತಮವಾಗಿ ಸ್ಥಾನ ಪಡೆದಿವೆ ಎಂದು ನೋಡಿ ನಂತರ ಆ ಕಾಲೇಜಿಗೆ (College) ಸೇರಲು ಬಯಸುತ್ತಾರೆ. ಈ ಬಾರಿಯ ಫಲಿತಾಂಶದಲ್ಲಿ (Result) ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಹಿಂದಿನ ದಾಖಲೆಯನ್ನು ಕಾಯ್ದುಕೊಂಡಿದ್ದು, ಕಳೆದ ಬಾರಿ ಮೊದಲ ಮೂರು ಸ್ಥಾನಗಳಲ್ಲಿದ್ದ ಕಾಲೇಜುಗಳು ಈ ಬಾರಿಯೂ ಮೊದಲ ಮೂರು ಸ್ಥಾನಗಳಲ್ಲಿ ನಿಂತಿವೆ. ಅದೇ ರೀತಿ ಒಟ್ಟಾರೆ ಕಾರ್ಯಕ್ಷಮತೆಯ ದೃಷ್ಟಿಯಿಂದ ಟಾಪ್ 10 ಪಟ್ಟಿಯಲ್ಲಿ ಕೆಲವು ಕಾಲೇಜುಗಳು ಸೇರಿವೆ. ಇವುಗಳಲ್ಲಿ ಮೊದಲು ಬರುವ ಹೆಸರು ಐಐಟಿ, ಮದ್ರಾಸ್.ಈ ಕುರಿತು ಸಂಪೂರ್ಣ ಮಾಹಿತಿ (Information) ಇಲ್ಲಿದೆ.


ಈ ವರ್ಷದ NIRF ಶ್ರೇಯಾಂಕದಲ್ಲಿರುವ ಟಾಪ್​ 10 ಕಾಲೇಜುಗಳಿವು


1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್,ತಮಿಳುನಾಡು.


2. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು,ಕರ್ನಾಟಕ.


3. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ.


4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ,ಮಹಾರಾಷ್ಟ್ರ.


5. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ, ಉತ್ತರ ಪ್ರದೇಶ.


6. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದೆಹಲಿ.


7. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್‌ಪುರ,ಪಶ್ಚಿಮ ಬಂಗಾಳ.


8. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ, ಉತ್ತರಾಖಂಡ.


9. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗುವಾಹಟಿ, ಅಸ್ಸಾಂ.


10. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ.ಇವು ಮೊದಲ ಮೂರು ವಿಶ್ವವಿದ್ಯಾಲಯಗಳಾಗಿವೆ.


ಈ ಹತ್ತು ಕಾಲೇಜುಗಳ ಟಾಪ್​ 10 ಸ್ಥಾನವನ್ನು ಗಳಿಸಿಕೊಂಡಿದ್ದು ಉಳಿದ ಕಾಲೇಜುಗಳು ಸಹ ಉತ್ತಮ ಶ್ರೇಯಾಂಕಗಳನ್ನೇ ಪಡೆದುಕೊಂಡಿದೆ. ಈ ವರ್ಷ ಶೈಕ್ಷಣಿಕ ಪ್ರಗತಿ ಕಂಡು ಬಂದಿದೆ.


1. ಭಾರತೀಯ ವಿಜ್ಞಾನ ಸಂಸ್ಥೆ


2. ಜೆಎನ್‌ಯು


3. ಜಾಮಿಯಾ ಮಿಲಿಯಾ ಇಸ್ಲಾಮಿಯಾ


ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕಾಲೇಜುಗಳು ಹಿಂದಿನ ವರ್ಷ ಪಡೆದುಕೊಂಡಿದ್ದ ಶ್ರೇಯಾಂಕವನ್ನೇ ಕಾಪಾಡಿಕೊಂಡಿವೆ.


ಈ ಬಾರಿ ಎನ್‌ಐಆರ್‌ಎಫ್ ರ್ಯಾಂಕಿಂಗ್‌ನಲ್ಲಿರುವ ವೈದ್ಯಕೀಯ ಕಾಲೇಜುಗಳ ಪಟ್ಟಿ ಹೇಗಿದೆ ನೋಡಿ. ಕಳೆದ ವರ್ಷ ಮೊದಲ ಮೂರು ಕಾಲೇಜುಗಳು ಈ ವರ್ಷವೂ ಮೊದಲ ಮೂರು ಸ್ಥಾನಗಳಲ್ಲಿವೆ.


1. ಏಮ್ಸ್ ದೆಹಲಿ


2. PGIMER, ಚಂಡೀಗಢ


3. ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ವೆಲ್ಲೂರು.


ಟಾಪ್ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಹೀಗಿದೆ.


ಐಐಟಿ ಮದ್ರಾಸ್ ಈ ಬಾರಿ ಅಗ್ರಸ್ಥಾನ ಪಡೆದಿದೆ. ಇದು NIRF ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಅಂದರೆ 2022ರಲ್ಲಿ ಅದೇ ಸ್ಥಾನವನ್ನು ಪಡೆದುಕೊಂಡಿತ್ತು. ಅಂಕದ ಕುರಿತು ನೋಡುವುದಾದರೆ NIRF IIT Madras 90.04 ಅಂಕಗಳನ್ನು ನೀಡಿದೆ.


ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು


1. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು


2. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್


3. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ


4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ


5. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ.


ಇವುಗಳು ಅತ್ಯತ್ತಮ ಸಂಶೋಧನಾ ಕಾಲೇಜುಗಳಾಗಿವೆ.


ಹಿಂದಿನ ವರ್ಷಗಳಂತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಐಐಎಂ ಅಹಮದಾಬಾದ್‌ನೊಂದಿಗೆ ಬಿ-ಸ್ಕೂಲ್ ಶ್ರೇಯಾಂಕದಲ್ಲಿ ಪ್ರಾಬಲ್ಯ ಸಾಧಿಸಿದೆ, ಬೆಂಗಳುರು ಮತ್ತೊಮ್ಮೆ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಅಹಮದಾಬಾದ್​ ಪ್ರಥಮ ಸ್ಥಾನ ಪಡೆದುಕೊಂಡಿದೆ. ಐಐಎಂ-ಕೋಝಿಕೋಡ್ ಮೂರನೇ ಸ್ಥಾನವನ್ನು ಗಳಿಸಿದೆ ಮತ್ತು ಐಐಎಂ-ಕಲ್ಕತ್ತಾದ ಶ್ರೇಯಾಂಕವು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

First published: