• ಹೋಂ
  • »
  • ನ್ಯೂಸ್
  • »
  • Jobs
  • »
  • Free Tuition: ಬಡ ಮಕ್ಕಳಿಗೆ ಪಾಠ ಹೇಳುತ್ತಿದ್ದಾಳೆ 8ನೇ ತರಗತಿಯ ಈ ಪುಟ್ಟ ಬಾಲಕಿ!

Free Tuition: ಬಡ ಮಕ್ಕಳಿಗೆ ಪಾಠ ಹೇಳುತ್ತಿದ್ದಾಳೆ 8ನೇ ತರಗತಿಯ ಈ ಪುಟ್ಟ ಬಾಲಕಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯಲ್ಲಿ ಸೀಟು ಪಡೆಯುವ ಗುರಿ ಹೊಂದಿರುವ ಕೌರ್, ನ್ಯಾಯಾಧೀಶರಾಗಲು ಬಯಸಿದ್ದಾರೆ. ಇಂತಹ ಒಳ್ಳೆ ಗುಣವನ್ನು ಹೊಂದಿರುವ 8ನೇ ತರಗತಿಯ ಪುಟ್ಟ ಬಾಲಕಿ ಇವರಾಗಿದ್ದು ಇವರಲ್ಲಿ ನಿಜಕ್ಕೂ ದೊಡ್ಡ ಪ್ರತಿಭೆ ಅಡಗಿದೆ.  

  • Share this:

ಶುಕ್ರವಾರ 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿ (Student) ನಿರಂಜನ್ ಕೌರ್ ಒಂದು ಉತ್ತಮ ಕಾರ್ಯ ಮಾಡುತ್ತಿದ್ದಾರೆ ತಮ್ಮ ಪರಿಶ್ರಮದ ಬೆಳಕನ್ನು ಇನ್ನೊಬ್ಬರಿಗೆ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಹಾಗಾದರೆ ಇವರು ಏನು ಮಾಡಿದ ಒಳ್ಳೆ ಕಾರ್ಯ ಏನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ. ಇವರು ತಮ್ಮ ಸುತ್ತ ಮುತ್ತಲಿನ ಬಡ ವಿದ್ಯಾರ್ಥಿಗಳಿಗೆ ಪಾಟ ಹೇಳುವ ಕೆಲಸ (Work) ಮಾಡುತ್ತಿದ್ದಾರೆ. ಫಲಿತಾಂಶ (Result) ಪ್ರಕಟವಾಗಿ ತಮಗೆ ಉತ್ತಮ ಅಂಕ ಬಂದದಕ್ಕಾಗಿ ಇವರು ತುಂಬಾ ಸಂತೋಷ ಪಡುತ್ತಿದ್ದಾರೆ. 


ತಾವು ವಾಸಿಸುವ ಜಾಗದಲ್ಲಿ ಹೆಚ್ಚು ಕೈಗಾರಿಕೆಗಳಿವೆ. ಅಲ್ಲಿ ಹಲವಾರು ಜನ ಕಾರ್ಮಿಕರು ವಲಸೆ ಬಂದು ಉಳಿದುಕೊಳ್ಳುತ್ತಾರೆ. ಅಲ್ಲಿ ಹಲವಾರು ಬಡ ಮಕ್ಕಳು ಶಿಕ್ಷಣಕ್ಕಾಗಿ ಕಷ್ಟಪಡುತ್ತಿರುತ್ತಾರೆ. ಆ ಕಾರಣಕ್ಕಾಗಿ ನಾನು ಅವರಿಗೆ ಟ್ಯೂಷನ್ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಇವರು ವಾಸ ಮಾಡುತ್ತಿರುವುದು ಜನತಾ ನಗರದಲ್ಲಿ. ಕಾರ್ಮಿಕ ವರ್ಗದ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರಲು ಇವರು ಪ್ರಯತ್ನಿಸುತ್ತಿದ್ದಾರೆ.


ನಿರಂಜನ್ ಕೌರ್ ಅವರು 8 ನೇ ತರಗತಿಯಿಂದ ಹಿಂದುಳಿದ ಮಕ್ಕಳಿಗೆ ಉಚಿತ ಟ್ಯೂಷನ್ ತರಗತಿಗಳನ್ನು ನೀಡುತ್ತಿದ್ದಾರೆ ಮತ್ತು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಸರಿಯಾದ ನೆರವು ಮತ್ತು ವೈಯಕ್ತಿಕ ಮಾರ್ಗದರ್ಶನದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸರಳವಾದ ಲೆಕ್ಕಾಚಾರಗಳನ್ನು ಮಾಡಲು ಮತ್ತು ಸರಿಯಾದ ವಾಕ್ಯಗಳನ್ನು ರೂಪಿಸಲು ಕೂಡಾ ಅಲ್ಲಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಅವರು ಹೇಳಿದ್ದಾರೆ.


ಇದನ್ನೂ ಓದಿ: ICSE Topper ಅನನ್ಯಾ ಹೆಚ್ಚಿನ ಅಂಕ ಗಳಿಸಲು ಯಾವ ರೀತಿ ತಯಾರಿ ನಡೆಸಿದ್ದರು ಗೊತ್ತಾ? ಇಲ್ಲಿದೆ ಮಾಹಿತಿ


ಆರಂಭದಲ್ಲಿ ನಿರಂಜನ್​ ಕೌರ್​​ 2 ರಿಂದ 5 ನೇ ತರಗತಿಯ ಎರಡು-ಮೂರು ವಿದ್ಯಾರ್ಥಿಗಳನ್ನು ಸಂಜೆ ತನ್ನ ಮನೆಗೆ ಆಹ್ವಾನಿಸಿದ್ದರಂತೆ ಮತ್ತು ಅವರಿಗೆ ಎರಡು ಗಂಟೆಗಳ ಕಾಲ ಕಲಿಸುತ್ತಿದ್ದರಂತೆ. ಶೀಘ್ರದಲ್ಲೇ ವಿದ್ಯಾರ್ಥಿಗಳ ಸಂಖ್ಯೆ 10 ಕ್ಕೆ ಏರಿತು. ಅಲ್ಲಿನ ಎಲ್ಲಾ ವಿದ್ಯಾರ್ಥಿಗಳು ಟ್ಯೂಷನ್‌ಗಳನ್ನು ಇಷ್ಟಪಡಲು ಪ್ರಾರಂಭಿಸಿದರು ಎಂದು ಅವರು ಹೇಳಿದರು.
ತನ್ನ ಅಧ್ಯಯನದ ಜೊತೆಗೆ ಉಚಿತ ಕೋಚಿಂಗ್ ತರಗತಿಗಳನ್ನು ಹೇಗೆ ನಿರ್ವಹಿಸುತ್ತಿದ್ದಳು ಎಂಬುದರ ಕುರಿತು ಮಾಹಿತಿಯನ್ನು ಅವರ ಬಳಿ ಕೇಳಿದಾಗ ಎರಡನ್ನೂ ನಾನು ಒಟ್ಟೊಟ್ಟಿಗೆ ನಿಭಾಯಿಸುತ್ತಿದ್ದೆ ಇದು ನನಗೆ ತುಂಬಾ ಕಷ್ಟ ಎಂದೇನೂ ಅನಿಸುವುದಿಲ್ಲ ಎಂದು ಹೇಳಿದ್ದಾರೆ. ಇದರ ಗುಟ್ಟು ಏನೆಂದರೆ ಇವರು ಪ್ರತಿನಿತ್ಯ ಬೆಳಿಗ್ಗೆ ಬೇಗನೇ ಏಳುತ್ತಿದ್ದರಂತೆ. ಅವರಿಗೆ ಕಲಿಸುವುದರಿಂದ ತನಗೆ ತೃಪ್ತಿ ಮತ್ತು ತನ್ನ ಪ್ರಯತ್ನದಿಂದ ಜಗತ್ತಿನಲ್ಲಿ ಬದಲಾವಣೆ ಮಾಡಬಹುದು ಎಂಬ ನಂಬಿಕೆಯನ್ನು ನೀಡಿತು ಎಂದು ಅವರು ಹೇಳಿದ್ದಾರೆ.


ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯಲ್ಲಿ ಸೀಟು ಪಡೆಯುವ ಗುರಿ ಹೊಂದಿರುವ ಕೌರ್, ನ್ಯಾಯಾಧೀಶರಾಗಲು ಬಯಸಿದ್ದಾರೆ. ಇಂತಹ ಒಳ್ಳೆ ಗುಣವನ್ನು ಹೊಂದಿರುವ 8ನೇ ತರಗತಿಯ ಪುಟ್ಟ ಬಾಲಕಿ ಇವರಾಗಿದ್ದು ಇವರಲ್ಲಿ ನಿಜಕ್ಕೂ ದೊಡ್ಡ ಪ್ರತಿಭೆ ಅಡಗಿದೆ.

First published: