ಕೇಂದ್ರ ಸರ್ಕಾರದಿಂದ ಅವಳಿ ನಗರಕ್ಕೆ ಮತ್ತೊಂದು ಬಂಪರ್ ಕೊಡುಗೆ ಸಿಕ್ಕಿದೆ. ಶೀಘ್ರವೇ ಅವಳಿ ನಗರದಲ್ಲಿ ಎನ್ಎಫ್ಎಸ್ ವಿಶ್ವವಿದ್ಯಾಲಯ (University) ಸ್ಥಾಪನೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ದಕ್ಷಿಣ ಭಾರತದಲ್ಲಿಯೇ (India) ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ವಿ.ವಿ. ಸ್ಥಾಪನೆಯಾಗುತ್ತಿದೆ. ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ (Education) ನೀಡುವ ಸಲುವಾಗಿ ಈ ವಿ.ವಿ ಸ್ತಾಪಿಸಲಾಗುತ್ತಿದ್ದೆ. ನಿರ್ಮಾಣ ಯಾವಾಗ ಆಗಲಿದೆ? ಯಾಕಾಗಲಿದೆ? ಈ ಕುರಿತು ಮಾಹಿತಿಗಾಗಿ (Information) ಲೇಖನ ಪೂರ್ತಿಯಾಗಿ ಓದಿ.
ಹೌದು ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರದ ವಿ.ವಿ. ಕ್ಯಾಂಪಸ್ ಧಾರವಾಡದಲ್ಲಿ ಸ್ಥಾಪನೆಯಾಗಲಿದೆ. ವಿಶ್ವವಿದ್ಯಾಲಯ ಹುಬ್ಬಳ್ಳಿ- ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ವಿ.ವಿ ಯಲ್ಲಿ ರಾಜ್ಯ ಸರ್ಕಾರ ಸ್ಥಳ ಗುರುತು ಮಾಡಿದೆ.
ಇದೇ ಜನವರಿ 27 ರಂದು ಎನ್.ಎಫ್.ಎಸ್. ವಿ.ವಿ.ಗೆ ಅಡಿಗಲ್ಲು ಹಾಕೋ ಸಾಧ್ಯತೆಗಳಿವೆ.
ಇದೇ ಜನವರಿ 27 ರಂದು ಎನ್.ಎಫ್.ಎಸ್. ವಿ.ವಿ.ಗೆ ಅಡಿಗಲ್ಲು ಹಾಕೋ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮಂಜೂರಾತಿ ಪ್ರತಿ ರಾಜ್ಯ ಸರ್ಕಾರಕ್ಕೆ ಬಂದಿದೆ. ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ ವಿವರವಾಗಿ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಈ ಭಾಗದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರದ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಯ ಅಗತ್ಯತೆಯನ್ನು ಸರ್ಕಾರ ವಿವರಿಸಿತ್ತು. ವಿ.ವಿ. ಸ್ಥಾಪನೆಯಿಂದ ಅಪರಾಧಗಳ ತನಿಖಾ ಮಟ್ಟದ ತಾಂತ್ರಿಕ ಸೌಲಭ್ಯಗಳು ಲಭ್ಯವಾಗಲಿದೆ.
ಇದನ್ನೂ ಓದಿ: Life Lesson: ನಿಮ್ಮ ಮಕ್ಕಳಿಗೆ ಹೇಳಿಕೊಡಲೇಬೇಕಾದ ವಿಷಯ ಇದು!
ಕರ್ನಾಟಕ ಸೇರಿದಂತೆ ಸುತ್ತಲಿನ ರಾಜ್ಯಗಳಲ್ಲಿನ ಪ್ರಕರಣಗಳ ತನಿಖೆಯೂ ಚುರುಕುಗೊಳ್ಳಲಿವೆ. ಕಾಲೇಜುಗಳಲ್ಲಿ ಅಪರಾಧ ಶಾಸ್ತ್ರ ಹಾಗೂ ಮಾನವ ಶಾಸ್ತ್ರ, ಲೈಫ್ ಸೈನ್ಸ್, ಜಿನೆಟಿಕ್ಸ್, ಬಯೋಟೆಕ್ನಾಲಜಿ, ಪ್ರಾಣಿಶಾಸ್ತ್ರ, ಮುಂತಾದ ಶಾಸ್ತ್ರ ಅಭ್ಯಾಸಕ್ಕೆ ಅನುಕೂಲವಾಗಲಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಹಾಗೂ ಸಂಶೋಧನೆಗೆ ವಿಪುಲ ಅವಕಾಶ ಸಿಗಲಿದೆ.
ವಿ.ವಿ.ಗೆ ಅಡಿಗಲ್ಲು ಹಾಕೋಕೆ ಅವಳಿ ನಗರಕ್ಕೆ ಆಗಮಿಸ್ತಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೆಲ ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಯಲ್ಲಿ ಆರ್.ಎಫ್.ಎಸ್.ಎಲ್. ಕೇಂದ್ರ ಸ್ಥಾಪನೆಗೊಂಡಿತ್ತು. ಇದೀಗ ಪ್ರತ್ಯೇಕ ವಿ.ವಿ. ತಲೆ ಎತ್ತಲಿದೆ. ವಿ.ವಿ.ಗೆ ಅಡಿಗಲ್ಲು ಹಾಕೋಕೆಕೇಂದ್ರ ಗೃಹ ಸಚಿವ ಅಮಿತ್ ಶಾ ಅವಳಿ ನಗರಕ್ಕೆ ಆಗಮಿಸ್ತಿದಾರೆ. ಉತ್ತರ ಕರ್ನಾಟಕಕ್ಕೆ ಮತ್ತೊಂದು ಗರಿಮೆಯಾಗಲಿರೋ ಎನ್.ಎಫ್.ಎಸ್.ಯು. ಎಂದು ಜನತೆ ನಿರೀಕ್ಷಿಸಿದೆ.
ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹಲವಾರು ಜಿಲ್ಲೆ ಹಾಗೂ ರಾಜ್ಯಗಳಿಂದ ವಿದ್ಯಾರ್ಥಿಗಳು ಆಗಮಿಸಿ ತಮ್ಮ ಕಲಿಕೆಯನ್ನು ಪೂರ್ಣಗೊಳಿಸುತ್ತಾರೆ. ಇನ್ನು ಎಷ್ಟೋ ವಿದ್ಯಾರ್ಥಿಗಳು ಇಲ್ಲೇ ಬೇಕು ಎಂದು ಆಯ್ಕೆ ಮಾಡಿಕೊಂಡು ಕೆಲವು ಕೋರ್ಸ್ ಪಡೆಯುತ್ತಾರೆ. ಹಾಗಿರುವಾಗ ಶಿಕ್ಷಣ ಕಾಶಿ ಎಂದೇ ಬಿರುದು ಪಡೆದಿರುವ ಧಾರವಾಡದಲ್ಲಿ ಈಗ ಹೊಸದಾಗಿ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಹಲವಾರು ವಿದ್ಯಾರ್ಥಿಗಳು ಆಗಮಿಸಿ ಶಿಕ್ಷಣ ಪಡೆಯುತ್ತಾರೆ.
NFS ಯುನಿವರ್ಸಿಟಿ ಎಂದರೇನು?
ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಈ ರೀತಿಯ ಯುನಿವರ್ಸಿಟಿ ಸ್ಥಾಪನೆಯಾಗಿದೆ. ನ್ಯಾಷನಲ್ ಪಾರೆನ್ ಸಿಕ್ ಸೈನ್ಸ್ ಯುನಿವರ್ಸಿಟಿ ಎಂದು ಇದನ್ನು ಕರೆಯಲಾಗುತ್ತದೆ. ಅಪರಾಧ ಪತ್ತೆಹಚ್ಚುವ ಬಗ್ಗೆ ಅಧಿಕೃತವಾದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ರಕ್ಷಣಾ ಕಾರ್ಯದಲ್ಲಿ ಯಾವರೀತಿ ಭಾಗಿಯಾಗಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಕ್ರಿಮಿನಲ್ಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಇಲ್ಲಿ ಕಲಿತವರು ಮಾಡಬಹುದು. ಸರ್ಕಾರಿ ಉದ್ಯೋಗಗಳು ಸಹ ಇದನ್ನು ಕಲಿತವರಿಗೆ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ