• Home
  • »
  • News
  • »
  • jobs
  • »
  • Education: ಮುಂಬೈನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬರಲಿದೆ ಹೊಸ ಯೋಜನೆ

Education: ಮುಂಬೈನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬರಲಿದೆ ಹೊಸ ಯೋಜನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಯೋಜನೆ ಈ ಯೋಜನೆಯನ್ನು ಸಿಂಗಾಪುರ್ ಇಂಟರ್‌ನ್ಯಾಶನಲ್ ಫೌಂಡೇಶನ್ (SIF) ಮತ್ತು ಮುಂಬೈನ ಮುನ್ಸಿಪಲ್ ಶಾಲೆಗಳಿಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾದ ಮುಕ್ತಾಂಗನ್ ಎಜುಕೇಶನ್ ಟ್ರಸ್ಟ್‌ ವತಿಯಿಂದ ನಡೆಸಲಾಗಿದೆ. 2017 ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಮಹಾರಾಷ್ಟ್ರದಲ್ಲಿ ಆರಂಭಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವೃತ್ತಿಪರ ಮಟ್ಟದಲ್ಲಿ ಸುಧಾರಣೆಯನ್ನು ತರಲಿದೆ.

ಮುಂದೆ ಓದಿ ...
  • Share this:

ಭಾರತ ಹಾಗೂ ಸಿಂಗಾಪುರದ ಶಿಕ್ಷಣ ತಜ್ಞರು ಆರಂಭಿಕ ಶಿಕ್ಷಣ ಪಠ್ಯಕ್ರಮ ವರ್ಧನೆ ಮತ್ತು ಶಿಕ್ಷಣಶಾಸ್ತ್ರ ಎಂಬ ಯೋಜನೆಗಾಗಿ (Plan) ಜೊತೆಯಾಗಿ ಕೈಜೋಡಿಸಿದ್ದು ಈ ಕಾರ್ಯಕ್ರಮವು ಪೋಷಕ ಸಂವಾದಗಳು, ಪೋಷಕರ ಪಾಲ್ಗೊಳ್ಳುವಿಕೆ, ಶಿಕ್ಷಕರ ಮೌಲ್ಯಮಾಪನಗಳು, ಆಟದ ಅನುಕೂಲತೆ, ಸಾಮಾಜಿಕ ಅಭಿವೃದ್ಧಿ (Social Development) ಮತ್ತು ತರಗತಿಯ ಪರಿಸರ (Environment) ಮೊದಲಾದ ಅಂಶಗಳನ್ನು ಒಳಗೊಂಡಿದೆ.


ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಯೋಜನೆ
ಈ ಯೋಜನೆಯನ್ನು ಸಿಂಗಾಪುರ್ ಇಂಟರ್‌ನ್ಯಾಶನಲ್ ಫೌಂಡೇಶನ್ (SIF) ಮತ್ತು ಮುಂಬೈನ ಮುನ್ಸಿಪಲ್ ಶಾಲೆಗಳಿಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾದ ಮುಕ್ತಾಂಗನ್ ಎಜುಕೇಶನ್ ಟ್ರಸ್ಟ್‌ ವತಿಯಿಂದ ನಡೆಸಲಾಗಿದೆ. 2017 ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಮಹಾರಾಷ್ಟ್ರದಲ್ಲಿ ಆರಂಭಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವೃತ್ತಿಪರ ಮಟ್ಟದಲ್ಲಿ ಸುಧಾರಣೆಯನ್ನು ತರುವುದಕ್ಕಾಗಿ ಸಿಂಗಾಪುರದ 32 ಶಿಕ್ಷಕರು ಸುಮಾರು 700 ಶಿಕ್ಷಕರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.


ಐದು ವರ್ಷಗಳ ಯೋಜನೆಯ ಯಶಸ್ಸು ಇನ್ನೊಂದು ಮೈಲಿಗಲ್ಲು
ಸಿಂಗಾಪುರ್ ಇಂಟರ್‌ನ್ಯಾಶನಲ್ ಫೌಂಡೇಶನ್ (SIF) ಹಾಗೂ ಭಾರತದ ನಡುವಿನ 26 ವರ್ಷಗಳ ಸ್ನೇಹಕ್ಕೆ ಐದುವರ್ಷಗಳ ಯೋಜನೆಯ ಯಶಸ್ಸು ಇನ್ನೊಂದು ಮೈಲಿಗಲ್ಲಾಗಿದೆ. ಈ ಯೋಜನೆಗಾಗಿ ಸಿಂಗಾಪುರದ ನಿವಾಸಿಗಳು ಹಾಗೂ ಭಾರತೀಯ ಸಹವರ್ತಿಗಳು ಸಿಂಗಾಪುರದಲ್ಲಿ ಜನ ಜೀವನ ಮಟ್ಟದಲ್ಲಿ ಹಂಚಿಕೆಯ ಸವಾಲುಗಳ ಮೇಲೆ ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದು SIF ನಲ್ಲಿ ಕಾರ್ಯತಂತ್ರ ನಿರ್ವಹಣೆ ವಿಭಾಗದ ನಿರ್ದೇಶಕರಾದ ಎನ್‌ಜಿ ಹೆರ್ಕ್ ಲೋ ತಿಳಿಸಿದ್ದಾರೆ.


ಇದನ್ನೂ ಓದಿ: ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಕೊರತೆ: ಅನಿವಾರ್ಯವಾಗಿ ಮರಾಠಿ ಶಾಲೆಗೆ ವಿದ್ಯಾರ್ಥಿಗಳ ಪಲ್ಲಟ


ಮಕ್ಕಳಿಗೆ ಬಾಲ್ಯದ ಶಿಕ್ಷಣ ಏಕೆ ಅತ್ಯಂತ ಮಹತ್ವವಾದುದು?
ಮಕ್ಕಳಿಗೆ ಬಾಲ್ಯದ ಶಿಕ್ಷಣವು ಯಾವುದೇ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಅತ್ಯಗತ್ಯ ಆಧಾರವಾಗಿದೆ. ಬಾಲ್ಯ ಶಿಕ್ಷಣವೇ ಮಕ್ಕಳ ಮುಂದಿನ ಕಲಿಕೆಗೆ ಆಧಾರ ಸ್ತಂಭವಾಗಿದೆ ಹಾಗೂ ಕಲಿಕೆಯ ವಿನಿಮಯವು ಉನ್ನತ ವೃತ್ತಿಪರ ಗುಣಮಟ್ಟ ಮತ್ತು ವರ್ಧಿತ ECE ಪಠ್ಯಕ್ರಮಕ್ಕೆ ಕಾರಣವಾಗಿದೆ. ಈ ಯೋಜನೆಯು ಎರಡೂ ದೇಶಗಳ ನಡುವೆ ಹೆಚ್ಚು ಸಾಂಸ್ಕೃತಿಕ ಸಹಯೋಗ ಮತ್ತು ಸ್ನೇಹವನ್ನು ಉತ್ತೇಜಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಮುಕ್ತಾಂಗನ್ ಶಿಕ್ಷಣ ಟ್ರಸ್ಟ್ ಸಂಸ್ಥಾಪಕಿ ಎಲಿಜಬೆತ್ ಮೆಹ್ತಾ ತಿಳಿಸಿದ್ದಾರೆ.


ಯೋಜನೆಯಲ್ಲಿರುವ ಅಂಶಗಳಾವುವು?
ಕಾರ್ಯಕ್ರಮದ ಭಾಗವಾಗಿ ಶಿಕ್ಷಣತಜ್ಞರು ಅಂತೆಯೇ ವೈಯಕ್ತಿಕ ಮತ್ತು ಆನ್‌ಲೈನ್ ಕಾರ್ಯಾಗಾರಗಳು, ಸಂವಾದಗಳು ಮತ್ತು ಅಧ್ಯಯನ ಭೇಟಿಗಳ ಸರಣಿಯನ್ನು ಪೂರ್ಣಗೊಳಿಸಿದರು. ಸಿಂಗಾಪುರ ಮತ್ತು ಭಾರತದ ಶಿಕ್ಷಣತಜ್ಞರು ಪೋಷಕರ ಸಂವಹನ, ಪಾಲ್ಗೊಳ್ಳುವಿಕೆ, ಶಿಕ್ಷಕರ ಮೌಲ್ಯಮಾಪನಗಳು, ಆಟಪಾಠಗಳ ಅನುಕೂಲತೆ, ಸಾಮಾಜಿಕ ಅಭಿವೃದ್ಧಿ, ಕಲಿಕೆಯ ಪರಿಸರಗಳು, ಆಂತರಿಕ ತಿಳುವಳಿಕೆ, ಅಭ್ಯಾಸಗಳು, ಆರಂಭಿಕ ಅರಿವು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಹಕಾರ ನೀಡಿದ್ದಾರೆ.


ಯೋಜನೆಗೆ ಪೂರಕವಾಗಿರುವ ವೆಬ್‌ಸೈಟ್ ಅಭಿವೃದ್ಧಿ
ಯೋಜನೆಗಳ ವಿಷಯವನ್ನು ಹೊಂದಿರುವ ವೆಬ್‌ಸೈಟ್ ಅನ್ನು ಸಿಂಗಾಪುರ್ ಇಂಟರ್‌ನ್ಯಾಶನಲ್ ಸ್ವಯಂಸೇವಕರು (SIV ಗಳು) ರಚಿಸಿದ್ದಾರೆ. ಮುಂಬೈನಲ್ಲಿ ಇಸಿಇ ಅಭ್ಯಾಸ ಮಾಡುವವರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಅವರ ಶಿಕ್ಷಣ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಈ ವೆಬ್‌ಸೈಟ್ ಸಹಾಯಕವಾಗುತ್ತದೆ.


ಪ್ರಯೋಜನ ಪಡೆದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು
ಈ ಯೋಜನೆಯಲ್ಲಿ ಇತರ ಇಸಿಇ (ಪೂರ್ವ ಬಾಲ್ಯ ಶಿಕ್ಷಣ) ಶಿಕ್ಷಕರಿಗೆ ತರಬೇತಿ ನೀಡುವ ಸಲುವಾಗಿ ಪೂರಕವಾಗಿರುವ ಹಾಗೂ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ 34 ಭಾರತೀಯ ಮಾಸ್ಟರ್ ಟ್ರೈನರ್‌ಗಳನ್ನು ಒದಗಿಸಿದೆ. 3,400 ಭಾರತೀಯ ಇಸಿಇ ಶಿಕ್ಷಣತಜ್ಞರು ಬಾಲ್ಯ ಪೂರ್ವದಲ್ಲಿ ಪಠ್ಯಕ್ರಮ ಹೇಗಿರಬೇಕು ಮತ್ತು ಮಕ್ಕಳಿಗೆ ಕಲಿಕೆಗೆ ಸುಲಭವಾಗುವಂತೆ ಪಠ್ಯಕ್ರಮವನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಕಲಿತುಕೊಂಡರು. ಇದೇ ಸಮಯದಲ್ಲಿ ಹೊಸ ಶಿಕ್ಷಣ ನೀತಿ ಮತ್ತು ಮೌಲ್ಯಮಾಪನ ಕೌಶಲ್ಯಗಳನ್ನು ಅರಿತುಕೊಂಡರು. ಒಟ್ಟಿನಲ್ಲಿ ಮಹಾರಾಷ್ಟ್ರದ 45,000 ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ.

First published: