• ಹೋಂ
 • »
 • ನ್ಯೂಸ್
 • »
 • jobs
 • »
 • Higher Education: ಉನ್ನತ ಶಿಕ್ಷಣ ಕುಂದುಕೊರತೆ ನಿವಾರಿಸಲು ಬರಲಿದೆ ಹೊಸ ಪೋರ್ಟಲ್​

Higher Education: ಉನ್ನತ ಶಿಕ್ಷಣ ಕುಂದುಕೊರತೆ ನಿವಾರಿಸಲು ಬರಲಿದೆ ಹೊಸ ಪೋರ್ಟಲ್​

ಸಚಿವ ಅಶ್ವತ್ಥ್ ನಾರಾಯಣ್

ಸಚಿವ ಅಶ್ವತ್ಥ್ ನಾರಾಯಣ್

ಸ್ಕಿಲ್ ಕನೆಕ್ಟ್ ಪೋರ್ಟಲ್'ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಇತ್ತೀಚೆಗೆ ಉತ್ತೀರ್ಣರಾದ ವಿದ್ಯಾರ್ಥಿಗಳ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಸಹಾಯವಾಗಲಿದೆ. ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಮತ್ತು ಕೈಗಾರಿಕೆಗಳು ನಿರೀಕ್ಷಿಸುವ ಕೌಶಲ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Karnataka, India
 • Share this:

ಉನ್ನತ ಶಿಕ್ಷಣದಲ್ಲಿನ (Higher Education) ಕುಂದು ಕೊರತೆಗಳನ್ನು ಪರಿಹರಿಸಲು ಸ್ಕಿಲ್ ಕನೆಕ್ಟ್ ಪೋರ್ಟಲ್ ಎಂಬ ಹೊಸ ವೇದಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಉದ್ದೇಶದಿಂದ ಇದನ್ನು ಡಿಸೆಂಬರ್​ 25 ರಿಂದ ಜಾರಿಗೊಳಿಸಲು ಯೋಚಿಸಲಾಗಿದೆ. ಯಾಕಾಗಿ ಇದನ್ನು ನಿರ್ಮಿಸಲಾಗುತ್ತದೆ? ಮತ್ತು ಇದರಿಂದಾಗುವ ಪ್ರಯೋಜನಗಳೇನು (Benefits)? ಎಂಬಿತ್ಯಾದಿ ಮಾಹಿತಿಗಳಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಅದರಲ್ಲೂ ನೀವು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಹುದ್ದೆಯಲ್ಲಿದ್ದರೆ  ತಪ್ಪದೆ ಇದನ್ನು ಓದಲೇ ಬೇಕು. 


ಪಾಲಿಟೆಕ್ನಿಕ್, ಪ್ರಥಮ ದರ್ಜೆ ಕಾಲೇಜುಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಉನ್ನತ ಅಧಿಕಾರಿಗಳು ಮತ್ತು ಪ್ರಾಂಶುಪಾಲರೊಂದಿಗೆ ನಡೆದ ಸಭೆಯಲ್ಲಿ , ಪಿಂಚಣಿ, ಬಡ್ತಿ, ಉದ್ಯೋಗಾವಕಾಶ, ನ್ಯಾಯಾಲಯದ ಹೊರಗೆ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಲು ಹೊಸ ಪೋರ್ಟಲ್ ವೇದಿಕೆಯಾಗಲಿದೆ. ಎನ್‌ಇಪಿಯ ಪರಿಣಾಮಕಾರಿ ಅನುಷ್ಠಾನವು ಪ್ರಾಂಶುಪಾಲರ ಹೆಗಲ ಮೇಲಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್​ ಅಶ್ವಥ್ ಹೇಳಿದರು.


ಮುಕ್ತ  ಆಯ್ಕೆಯನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳ ಕೌಶಲವನ್ನು ಹೆಚ್ಚಿಸುವ ಮತ್ತು ಆ ಮೂಲಕ ಅವರ ಉದ್ಯೋಗಾವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಆಯ್ಕೆ ವಿಷಯಗಳನ್ನು ಪರಿಚಯಿಸಲಾಗಿದೆ ಎಂದರು.


ಇದನ್ನೂ ಓದಿ: Government Job: ಮಾಸಿಕ ವೇತನ ₹46,000- ಮುಂಬೈ ಬಂದರು ಪ್ರಾಧಿಕಾರದಲ್ಲಿ ಕೆಲಸ ಖಾಲಿ ಇದೆ


ಸ್ಕಿಲ್ ಕನೆಕ್ಟ್ ಪೋರ್ಟಲ್'ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಇತ್ತೀಚೆಗೆ ಉತ್ತೀರ್ಣರಾದ ವಿದ್ಯಾರ್ಥಿಗಳ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಸಹಾಯವಾಗಲಿದೆ. ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಮತ್ತು ಕೈಗಾರಿಕೆಗಳು ನಿರೀಕ್ಷಿಸುವ ಕೌಶಲ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ ಎಂದು ಅವರು ಹೇಳಿದರು.


ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಳ್ಳಬೇಕು


ಉನ್ನತ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ ಅವರೂ ಸಹ ಈ ಸಂದರ್ಭದಲ್ಲಿ ಮಾತನಾಡಿ ಆಯಾ ಪ್ರದೇಶಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಡಬೇಕು ಎಂದು ಹೇಳಿದರು. ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆರಂಭಿಸುವಂತೆ ಮತ್ತು ಅವುಗಳ ಮೂಲಕ ಸಾರ್ವಜನಿಕರ ಗಮನವನ್ನು ಸೆಳೆಯುವಂತೆಯೂ ಅವರು ಸಲಹೆ ನೀಡಿದರು. ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಶೈಕ್ಷಣಿಕ ವಿಚಾರಗಳನ್ನು ಹಾಕುತ್ತಾ ಇರುವುದರಿಂದ  ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡುತ್ತದೆ ಎಂದರು.


ಸಾಂಕೇತಿಕ ಚಿತ್ರ


ಕಾಲೇಜಿನ ಮಾಹಿತಿಗಳನ್ನು ಬಹಿರಂಗಪಡಿಸುತ್ತಿರಬೇಕು


ಕಾಲೇಜಿನಲ್ಲಿ ಏನಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕು. ಎಲ್ಲಾ ಧನಾತ್ಮಕ ವಿಚಾರಗಳನ್ನೂ ಹಂಚಿಕೊಳ್ಳಬೇಕು ಎಂದು ಹೇಳಿದರು. ಪಿ ಪ್ರದೀಪ್, ಆಯುಕ್ತರು, ಡಿಸಿಟಿಇ ಅವರು ಕಳೆದ 3 ವರ್ಷಗಳಲ್ಲಿ ಇಲಾಖೆಯಲ್ಲಿ ಜಾರಿಗೆ ತಂದ ಸುಧಾರಣೆಗಳ ಕುರಿತು ಪ್ರಸ್ತುತಪಡಿಸಿದರು. ಸ್ಮಾರ್ಟ್ ತರಗತಿ ಮತ್ತು ಕೆಎಲ್‌ಎಂಎಸ್‌ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.


ವಾಸ್ತವ ಸಭೆಯಲ್ಲಿ ಇಲಾಖೆಯ  ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಟೈಮ್ಸ್​ ಆಪ್​ ಇಂಡಿಯಾ ವರದಿ ಮಾಡಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆಗಳನ್ನು ಇದರಲ್ಲಿ ಪರಿಹರಿಸಲಾಗುತ್ತದೆ. ಸರಳವಾಗಿ ಪರಿಹರಿಸಲು ಸಮಗ್ರ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಇದನ್ನು 'ಸುಶಾಸನ ದಿನ'ವಾದ ಡಿ.25 ರಂದು ಲಾಂಚ್ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.


ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸರಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಬೋಧಕರನ್ನು ಉದ್ದೇಶಿಸಿ ಅವರು ಈ ಕುರಿತು ಮಾತನಾಡಿದ್ದಾರೆ.

First published: