• Home
 • »
 • News
 • »
 • jobs
 • »
 • NEP Opinion: ಶಿವಾಜಿ ಮಹಾರಾಜರ ಸ್ಟೈಲ್‌ನಲ್ಲಿ ಇರಬೇಕಂತೆ ಹೊಸ ಶಿಕ್ಷಣ ನೀತಿ! ಹೀಗೂ ಇದೆ ಅಭಿಪ್ರಾಯ

NEP Opinion: ಶಿವಾಜಿ ಮಹಾರಾಜರ ಸ್ಟೈಲ್‌ನಲ್ಲಿ ಇರಬೇಕಂತೆ ಹೊಸ ಶಿಕ್ಷಣ ನೀತಿ! ಹೀಗೂ ಇದೆ ಅಭಿಪ್ರಾಯ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತೀಯ ಆಡಳಿತದ ಯುಗವು ಸ್ಥಳೀಯ ಮೌಲ್ಯಗಳು ಮತ್ತು ಸ್ಥಳೀಯ ಭಾಷೆಯಲ್ಲಿ ನೈತಿಕತೆಯಿಂದ ತುಂಬಿದ್ದು ಆಡಳಿತ ಮತ್ತು ಶೈಕ್ಷಣಿಕ ರಂಗಗಳಲ್ಲಿ ತನ್ನ ಸ್ಥಾನವನ್ನು ಇನ್ನೂ ಕಂಡುಕೊಳ್ಳಬೇಕಾಗಿದೆ. ವಿಪರ್ಯಾಸವೆಂದರೆ, ಸ್ವಾತಂತ್ರ್ಯದ ನಂತರದ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯು ನಮ್ಮ ಸ್ಥಳೀಯ ಭಾಷೆಗಳು, ಪದ್ಧತಿಗಳು ಮತ್ತು ಜೀವನ ವಿಧಾನವನ್ನು ಕಳೆದುಕೊಳ್ಳುತ್ತಿದೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • New Delhi, India
 • Share this:

ಛತ್ರಪತಿ ಶಿವಾಜಿ ಮಹಾರಾಜರನ್ನು ನಿರ್ಭೀತ ಹಿಂದೂ ಯೋಧ ಎಂದು ನಾವೆಲ್ಲರೂ ನೆನಪಿಸಿಕೊಳ್ಳುತ್ತೇವೆ (Remember), ಅವರು ಇಸ್ಲಾಮಿಕ್ ದರೋಡೆಕೋರರು ಮತ್ತು ಲೂಟಿಕೋರರ ವಿರುದ್ಧ ಹೋರಾಡಿದ್ದಾರೆ. ಭಾರತದ (India) ಹೃದಯಭಾಗದಲ್ಲಿ ಸ್ವರಾಜ್ಯವನ್ನು ಸ್ಥಾಪಿಸಿದ್ದಾರೆ. ಶಿವಾಜಿಯಲ್ಲಿ ಶಕ್ತಿ ಸಾಮರ್ಥ್ಯವಿತ್ತು. ಆದರೂ ಸಹ ಶಿವಾಜಿಯವರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕೊಡುಗೆಯನ್ನು ಶಿಕ್ಷಣದಲ್ಲಿ (Education) ಸ್ಮರಿಸಲು ಅವಕಾಶ ಮಾಡಬೇಕು. ಇತಿಹಾಸವನ್ನು (History) ಸ್ಮರಿಸಬೇಕು ಎಂದು ಅಭಿಪ್ರಾಯಗಳು ವ್ಯಕ್ತವಾಗ್ತಿದೆ.


ಶಿವಾಜಿ ತನ್ನ ಆಡಳಿತ ಮತ್ತು ಸಾಮ್ರಾಜ್ಯದಲ್ಲಿ ಭಾಷೆಯ ಬಳಕೆಗೆ ಹೆಚ್ಚಿನ ಮೌಲ್ಯವನ್ನು ನೀಡಿದ್ದರು. ಒಂದು ಭಾಷೆಯು ತನ್ನದೇ ಆದ ವಿಭಿನ್ನ ಚಿಂತನೆಯ ಪ್ರಕ್ರಿಯೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತದೆ. ಸ್ವರಾಜ್ಯದ ವಿದ್ವಾಂಸರು ರಾಜ್ಯ ವ್ಯವಹಾರ ಕೋಶವನ್ನು ರಚಿಸುವ ಕಾರ್ಯವನ್ನು ನಿರ್ವಹಿಸಿದ್ದರು.ಈ ಅಂಶಗಳೆಲ್ಲವೂ ಮುಖ್ಯವಾಗಿದೆ.


ದಿನನಿತ್ಯದ ಆಡಳಿತದಲ್ಲಿ ಬಳಸಬೇಕಾದ ಸರಿಸುಮಾರು 1400 ಪದಗಳ ಶಬ್ದಕೋಶ. ಆಡಳಿತದಲ್ಲಿ ಪ್ರಚಲಿತದಲ್ಲಿರುವ ಅರೇಬಿಕ್-ಪರ್ಷಿಯನ್ ಪರಿಭಾಷೆಯನ್ನು ಸಂಸ್ಕೃತದಿಂದ ಪಡೆದ ಮರಾಠಿ ಪರಿಭಾಷೆಯು ಮಹತ್ವದ ಸ್ಥಾನ ಹೊಂದಿತ್ತು ಎಂಬ ಮಾತು ಚರ್ಚೆಯಾಗುತ್ತಿದೆ. ಮಾರ್ಕ್ಸ್‌ವಾದಿ ಇತಿಹಾಸಕಾರರು ಸೃಷ್ಟಿಸಿದ ಇತಿಹಾಸದ ಹೊರತಾಗಿಯೂ ಶಿವಾಜಿಯು ತನ್ನ ಅದ್ಭುತವಾದ ಆಡಳಿತ ಮತ್ತು ಸುಧಾರಣೆಗಳ ಮೂಲಕ ಇತಿಹಾಸದ ಪುಟಗಳಲ್ಲಿದ್ದಾರೆ.


ಇದನ್ನೂ ಓದಿ: Winter Holiday: ಜನವರಿ 23 ರವರೆಗೆ ಚಳಿಗಾಲದ ರಜೆ ಮುಂದೂಡಿದ ಸರ್ಕಾರ!


ಭಾರತೀಯ ಆಡಳಿತದ ಯುಗವು ಸ್ಥಳೀಯ ಮೌಲ್ಯಗಳು ಮತ್ತು ಸ್ಥಳೀಯ ಭಾಷೆಯಲ್ಲಿ ನೈತಿಕತೆಯಿಂದ ತುಂಬಿದ್ದು ಆಡಳಿತ ಮತ್ತು ಶೈಕ್ಷಣಿಕ ರಂಗಗಳಲ್ಲಿ ತನ್ನ ಸ್ಥಾನವನ್ನು ಇನ್ನೂ ಕಂಡುಕೊಳ್ಳಬೇಕಾಗಿದೆ. ವಿಪರ್ಯಾಸವೆಂದರೆ, ಸ್ವಾತಂತ್ರ್ಯದ ನಂತರದ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯು ನಮ್ಮ ಸ್ಥಳೀಯ ಭಾಷೆಗಳು, ಪದ್ಧತಿಗಳು ಮತ್ತು ಜೀವನ ವಿಧಾನವನ್ನು ಕಳೆದುಕೊಳ್ಳುತ್ತಿದೆ.
ತಮ್ಮದೇ ರಾಜ್ಯಗಳಲ್ಲಿಯೂ ಭಾರತೀಯ ಭಾಷೆಗಳು ಅಗತ್ಯ ಬೆಳವಣಿಗೆಯನ್ನು ಮಾಡಲಿಲ್ಲ ಎಲ್ಲಾ ರಾಜ್ಯಗಳಲ್ಲೂ ಸಹ ಇಂಗ್ಲೀಷ್ ಬಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಹಿಂದಿ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ, ಗುಜರಾತಿ ಮತ್ತು ಇತರ ಶ್ರೀಮಂತ ಭಾಷೆಗಳು ಇಂಗ್ಲೀಷ್​ನ ಅಬ್ಬರದಲ್ಲಿ ಮುಳುಗಿ ಹೋಗುತ್ತಿವೆ. ದೇಶದ ಅಧಿಕೃತ ಚಟುವಟಿಕೆಗಳಿಗೆ ಹಿಂದಿಯ ಬಳಕೆ ಮಾಡುವ ಗಾಂಧೀಜಿಯವರ ಚಿಂತನೆಯ ಹೊರತಾಗಿಯೂ ಇಂಗ್ಲೀಷ್​ ಹೆಚ್ಚು ಪ್ರಾಧಾನ್ಯತೆ ಪಡೆಯುತ್ತಿದೆ.


ಶಿವಾಜಿಯವರಂತೆ ನಾವು ನಮ್ಮ ತನದ  ಶಿಕ್ಷಣ ಮತ್ತು ಸಂಸ್ಕಾರಗಳನ್ನು ಪ್ರಭಲವಾಗಿ ಸ್ಥಾಪಿಸಬೇಕು. ಸ್ವರಾಜ್ಯ ನೀತಿಯಂತೆ ಹೊಸ ಶಿಕ್ಷಣ ನೀತಿ 2020 ಮುಂದಿನ ದಿನಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಹೊಂದಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.


ಕರ್ನಾಟಕದಲ್ಲಿ ಇದೇ ತಿಂಗಳು ಜಾರಿಯಾಗಲಿದೆ ಹೊಸ ಶಿಕ್ಷಣ ನೀತಿ


ಅಡಿಪಾಯದ ಹಂತದಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜನವರಿ 26 ರಿಂದ ಅಳವಡಿಸಿ ಜಾರಿಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗದಲ್ಲಿ ಶನಿವಾರ ತಿಳಿಸಿದ್ದಾರೆ. ಎನ್‌ಇಪಿ ಪ್ರಕಾರ ಪಠ್ಯಕ್ರಮ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಪೂರ್ವ ಪ್ರಾಥಮಿಕ ತರಗತಿಗಳ ಪಠ್ಯಕ್ರಮವು ನಲಿ ಕಲಿಯನ್ನು ಹೋಲುತ್ತದೆ ಇದನ್ನು ಈಗಾಗಲೇ ರಾಜ್ಯದಲ್ಲಿ ಅನುಸರಿಸುತ್ತಿದ್ದಾರೆ.


ಹಲವು ಹೊಸ ನೀತಿಗಳೊಂದಿಗೆ ಪ್ರಸ್ತುತಿ


ಇದರಂತೆ ಇನ್ನೂ ಹಲವು ಹೊಸ ನೀತಿಗಳನ್ನುಹೊಸ ಪಠ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕೆ ಶಿಕ್ಷಕರೂ ತುಂಬಾ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ನಲಿ ಕಲಿ ವಿಧಾನವನ್ನು ಪ್ರಾಯೋಗಿಕ ಕಲಿಕೆಯ ರೀತಿಯಲ್ಲಿ ಹಲವು ಶಾಲೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. 400 ಕೆಲವು ಆಯ್ದ ಶಾಲೆಗಳಲ್ಲಿ ಮಾತ್ರ ಮೊದಲಿಗೆ ಇದನ್ನು ಅಳವಡಿಸಲಾಗುತ್ತದೆ. ಪಠ್ಯಪುಸ್ತಕಗಳು ಈಗಾಗಲೇ ಸಿದ್ಧವಾಗಿವೆ ಅದರ ಪ್ರಕಾರ NEP ಚಟುವಟಿಕೆ ಆಧಾರಿತ ಕಲಿಕೆ ಮತ್ತು ನಿಯಮಿತ ಪಠ್ಯ ಕ್ರಮವನ್ನು ಆದಷ್ಟು ಬೇಗ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು