• Home
  • »
  • News
  • »
  • jobs
  • »
  • NEP 2023: ಜನವರಿ 26 ರಿಂದ 400 ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಜಾರಿ

NEP 2023: ಜನವರಿ 26 ರಿಂದ 400 ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಜಾರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಡಿಪಾಯದ ಹಂತದಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜನವರಿ 26 ರಿಂದ ಅಳವಡಿಸಿ ಜಾರಿಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗದಲ್ಲಿ ಶನಿವಾರ ತಿಳಿಸಿದ್ದಾರೆ. ಎನ್‌ಇಪಿ ಪ್ರಕಾರ ಪಠ್ಯಕ್ರಮ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ

  • News18 Kannada
  • Last Updated :
  • Karnataka, India
  • Share this:

ಹೊಸ ಶಿಕ್ಷಣ ನೀತಿ (New Education Policy) ಅನುಸಾರ ಎಲ್ಲಾ ಶಾಲೆಗಳಲ್ಲೂ ಹೊಸ ಕ್ರಮವನ್ನು ಜಾರಿಗೆ ತರಬೇಕು. ಎಲ್ಲರಿಗೂ ಹೊಸ ರೀತಿಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ಇದೇ ಜನವರಿಯಿಂದ (January) ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಕಲ ಸಿದ್ಧತೆಗಳೂ ಸಹ ನಡೆದಿದೆ. ಜನವರಿ 26 ರಂದು ಈ 400 ಶಾಲೆಗಳಲ್ಲಿ (School) ಹೊಸ ಶಿಕ್ಷಣ (Education) ನೀತಿಯ ಅಳವಡಿಕೆಯಾಗಲಿದೆ. ಈ ಸಂಬಂಧ ಶಿಕ್ಷಣ ಸಚೀವರು ತಿಳಿಸಿದ ಮಾಹಿತಿ ಇಲ್ಲಿದೆ ನೋಡಿ.


ಅಡಿಪಾಯದ ಹಂತದಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜನವರಿ 26 ರಿಂದ ಅಳವಡಿಸಿ ಜಾರಿಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗದಲ್ಲಿ ಶನಿವಾರ ತಿಳಿಸಿದ್ದಾರೆ. ಎನ್‌ಇಪಿ ಪ್ರಕಾರ ಪಠ್ಯಕ್ರಮ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಪೂರ್ವ ಪ್ರಾಥಮಿಕ ತರಗತಿಗಳ ಪಠ್ಯಕ್ರಮವು ನಲಿ ಕಲಿಯನ್ನು ಹೋಲುತ್ತದೆ ಇದನ್ನು ಈಗಾಗಲೇ ರಾಜ್ಯದಲ್ಲಿ ಅನುಸರಿಸುತ್ತಿದ್ದಾರೆ.


ಇದರಂತೆ ಇನ್ನೂ ಹಲವು ಹೊಸ ನೀತಿಗಳನ್ನು ಹೊಸ ಪಠ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕೆ ಶಿಕ್ಷಕರೂ ತುಂಬಾ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ನಲಿ ಕಲಿ ವಿಧಾನವನ್ನು ಪ್ರಾಯೋಗಿಕ ಕಲಿಕೆಯ ರೀತಿಯಲ್ಲಿ ಹಲವು ಶಾಲೆಗಳಲ್ಲಿ ಅಳವಡಿಸಿಕೊಂಡಿದ್ದಾರೆ.


ಇದನ್ನೂ ಓದಿ: Smart Study: ನಿಮ್ಮ ಮಕ್ಕಳಿಗೆ ಈ ರೀತಿ ಅಭ್ಯಾಸ ಮಾಡಿಸಿ, ಖಂಡಿತ ಒಳ್ಳೆ ರಿಸಲ್ಟ್​ ಬರುತ್ತೆ


400 ಕೆಲವು ಆಯ್ದ ಶಾಲೆಗಳಲ್ಲಿ ಮಾತ್ರ ಮೊದಲಿಗೆ ಇದನ್ನು ಅಳವಡಿಸಲಾಗುತ್ತದೆ. ಪಠ್ಯಪುಸ್ತಕಗಳು ಈಗಾಗಲೇ ಸಿದ್ಧವಾಗಿವೆ ಅದರ ಪ್ರಕಾರ NEP ಚಟುವಟಿಕೆ ಆಧಾರಿತ ಕಲಿಕೆ ಮತ್ತು ನಿಯಮಿತ ಪಠ್ಯ ಕ್ರಮವನ್ನು ಆದಷ್ಟು ಬೇಗ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗಿದೆ.


ಯೋಗ ಶಿಕ್ಷಣವನ್ನೂ ಸಹ ಜನವರಿ 26 ರಿಂದಲೇ ಜಾರಿಗೆ ತರಲಾಗುವುದು.


ಯೋಗ ಶಿಕ್ಷಣವನ್ನೂ ಸಹ ಜನವರಿ 26 ರಿಂದಲೇ ಜಾರಿಗೆ ತರಲಾಗುವುದು. ಎಲ್ಲಾ ಶಾಲೆಗಳಲ್ಲೂ ಸಹ ಪ್ರತಿನಿತ್ಯ ಯೋಗ ಕಲಿಸಲಾಗುವುದು ಎಂದು ಹೇಳಿದ್ದಾರೆ. ಶಿಕ್ಷಣ ಸಚಿವರು ಶಾಲೆಗೆ ಶಿಕ್ಷಕರ ಅಗತ್ಯವಿದೆ ಎಂದು ಒಪ್ಪಿಕೊಂಡರು. ಒಟ್ಟು 43 ಸಾವಿರ ಶಿಕ್ಷಕರ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಕೂಡಲೇ 2,500 ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳುತ್ತೇವೆ. ಅಗತ್ಯವಿರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ಭರ್ತಿ ಮಾಡುತ್ತೇವೆ ಎಂದಿದ್ದಾರೆ.


ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ


ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಲವಾರು ಹೊಸತನದೊಂದಿಗೆ ಜಾರಿಯಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಲ್ಲಿ ಸಾಂಸ್ಕೃತಿಕ ಚಡುವಟಿಕೆಗಳ ಜತೆಗೆ ದೈಹಿಕ ಶಿಕ್ಷಣ, ಡಿಜಿಟಲ್ ಮತ್ತು ಹಣಕಾಸು ಜಾಗೃತಿ ಕಲಿಕೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಡ್ಡಾಯಗೊಳಿಸಲಾಗಿದೆ. ಇದನ್ನು ಹೊರತು ಪಡಿಸಿ ಸಾಂಸ್ಕೃತಿಕ ಶಿಕ್ಷಣ ಅತ್ಯಗತ್ಯ ಎಂದೂ ಸಹ ತಿಳಿಸಿದ್ದಾರೆ. ಉಳಿದ ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.


ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಹೊಸ ನಿಯಮ


ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಧಾಮಂತ್ರಿ ನರೇಂದ್ರ ಮೋದಿ ಅವರು ತರುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ರಾಜ್ಯ ಸರ್ಕಾರವು ಅಷ್ಟೇ ಉತ್ಸಾಹ ಮತ್ತು ಬದ್ಧತೆಗಳಿಂದ ಅನುಷ್ಠಾನಗೊಳಿಸಲಿದೆ. ಇನ್ನು ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಾವ ರೀತಿ ಸಕಾರಾತ್ಮಕ ಬದಲಾವಣೆ ಉಂಟಾಗಲಿದೆ ಕಾದು ನೋಡಬೇಕಿದೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಪ್ರಯತ್ನವೂ ಸಹ ನಡೆಯುತ್ತಿದೆ. ವಿದ್ಯಾರ್ಥಿಗಳು ಈ ಹೊಸ ಪಠ್ಯ ಕ್ರಮಕ್ಕೆ ಹೊಂದಿಕೊಂಡು ನಡೆಯುತ್ತಿದ್ದರೆ ಖಂಡಿತ ಪ್ರತಿ ಸಾಧ್ಯವಾಗಲಿದೆ.

First published: