• Home
  • »
  • News
  • »
  • jobs
  • »
  • NEP: ಅಂಗನವಾಡಿಗಳಿಗೂ ಹೊಸ ಶಿಕ್ಷಣದ ನೀತಿ ಜಾರಿ; ಸಚಿವ ಬಿ ಸಿ ನಾಗೇಶ್​ ಘೋಷಣೆ

NEP: ಅಂಗನವಾಡಿಗಳಿಗೂ ಹೊಸ ಶಿಕ್ಷಣದ ನೀತಿ ಜಾರಿ; ಸಚಿವ ಬಿ ಸಿ ನಾಗೇಶ್​ ಘೋಷಣೆ

ಬಿ.ಸಿ ನಾಗೇಶ್​

ಬಿ.ಸಿ ನಾಗೇಶ್​

ರಾಜ್ಯಾದ್ಯಂತ ಸುಮಾರು 400 ರಿಂದ 500 ಆಯ್ದ ಶಾಲೆಗಳಲ್ಲಿ ಫೆಬ್ರವರಿಯ ಆರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಅನ್ನು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಗೆ ತರಲಾಗುವುದು ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

  • Share this:

ಅಂಗನವಾಡಿ ಕಾರ್ಯಕರ್ತೆಯರು (Workers) ಅಂಗನವಾಡಿಗಳಿಗೂ ಸಹ NEP ಜಾರಿಯಾಗಬೇಕು ಎಂದು ಬೇಡಿಕೆ ಇಟ್ಟಿದ್ದರು ಅದಾದ ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆಯನ್ನೂ (Protest) ಸಹ ಮಾಡಿದ್ದರು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಆಯ್ದ ಶಾಲೆಗಳಲ್ಲಿ NEP ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಇನ್ನು ಮುಂದೆ ಅಂಗನವಾಡಿಗಳಿಗೂ (Anganwadi) ಹಂತ ಹಂತವಾಗಿ NEP ಜಾರಿಯಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಗಾಗಿ (Information) ಮುಂದೆ ಓದಿ.


ರಾಜ್ಯಾದ್ಯಂತ ಸುಮಾರು 400 ರಿಂದ 500 ಆಯ್ದ ಶಾಲೆಗಳಲ್ಲಿ ಫೆಬ್ರವರಿಯ ಆರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಅನ್ನು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಗೆ ತರಲಾಗುವುದು ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.


ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ (ECCE) ಸೀಮಿತಗೊಳಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಆದರೆ ಈ ಹಂತದಲ್ಲಿ NEP ಅನುಷ್ಠಾನ ದೊಡ್ಡ ರೀತಿಯಲ್ಲಿ ಆಗುವುದಿಲ್ಲ. ಇದು ಅಂಗನವಾಡಿಗಳು ಮತ್ತು ನರ್ಸರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: UGC NET ಪರೀಕ್ಷೆ ನೋಂದಣಿ ದಿನಾಂಕ ವಿಸ್ತರಣೆಗೆ ಅವಕಾಶ, ಈ ಲಿಂಕ್​ ಕ್ಲಿಕ್​ ಮಾಡಿ


ಈ ಹಿಂದೆ ಪ್ರಾಥಮಿಕ ಹಂತ ಅಂದರೆ ಒಂದನೇ ತರಗತಿ ವಿದ್ಯಾರ್ಥಿಗಳಿಂದ NEP ಜಾರಿಯಾಗಲಿದೆ ಎಂದು ಸೂಚಿಸಲಾಗಿತ್ತು. ಅಲ್ಲಿ ಶಿಕ್ಷಕರು NEP ನಲ್ಲಿ ಉಲ್ಲೇಖಿಸಿದಂತೆ ಹೆಚ್ಚು ಚಟುವಟಿಕೆ ಆಧಾರಿತ ಕಲಿಕೆ ಮತ್ತು ಆಟದ ಕಲಿಕೆಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಮಾತ್ರ ಬದಲಿಸುತ್ತಾರೆ ಎಂದು ಹೇಳಲಾಗಿದೆ. ಪ್ರಸ್ತುತ ಪಠ್ಯಕ್ರಮದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಇಲಾಖೆ ಅಂತಿಮಗೊಳಿಸುತ್ತಿದೆ. ಇದು ಇಸಿಸಿಇ ಆಗಿರುವುದರಿಂದ ಕಿರಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಿಲ್ಲದ ಕಾರಣ ಬದಲಾವಣೆಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ.


ಕೇಂದ್ರದ ಒಪ್ಪಿಗೆಗಾಗಿ ನಾವು ಕಾಯುತ್ತಿದ್ದೇವೆ


ಕೇಂದ್ರದ ಒಪ್ಪಿಗೆಗಾಗಿ ನಾವು ಕಾಯುತ್ತಿದ್ದೇವೆ ಈ ಫೇಬ್ರವರಿ ತಿಂಗಳಿನಲ್ಲಿ ಅಂಗನವಾಡಿಗಳಿಗೆ NEP ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ ಮತ್ತು ಇದು ಹಂತ ಹಂತವಾಗಿ ಜಾರಿಗೊಳ್ಳಲಿದೆ ಎಂದು ಹೇಳಿದ್ದಾರೆ. ಸುಮಾರು 20,000 ಅಂಗನವಾಡಿಗಳು ಎನ್‌ಇಪಿ ಪಠ್ಯಕ್ರಮಕ್ಕೆ ಬದಲಾಗಲಿವೆ ಎಂಬ ಮಾಹಿತಿ ನೀಡಿದ್ಧಾರೆ. ಈ ಕುರಿತು ಅಂಗನವಾಡಿ ಶಿಕ್ಷಕರಿಗೆ ತರಬೇತಿಯನ್ನೂ ಸಹ ನೀಡಬೇಕಾಗುತ್ತದೆ. ಆಯ್ದ ಶಾಲೆಗಳಲ್ಲಿ ಮಾತ್ರ ಇದು ಜಾರಿಯಾಗಲಿದೆ ಎಂದು ಉಲ್ಲೇಖಿಸಿದ್ದಾರೆ.




ಸಮಸ್ಯೆ ನ್ಯಾಯಾಲಯದಲ್ಲಿರುವುದರಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಕೇಂದ್ರದಿಂದ ಆದೇಶ ಬಂದರೆ ಇನ್ನು ಕೇವಲ 15 ದಿನಗಳೊಳಗೆ ಅಂಗನವಾಡಿಗಳಿಗೂ NEP ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.


ಆಗ್ರಹಕ್ಕೆ ಈಗ ಫಲ ಸಿಕ್ಕಂತಿದೆ


ಪ್ರಾಥಮಿಕ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಅನ್ವಯವಾಗುತ್ತಿದೆ. ಅದನ್ನು ಅಲ್ಲಿಗೇ ಸ್ಥಗಿತ ಗೊಳಿಸದೆ ಅಂಗನವಾಡಿ ಹಂತಗಳಿಗೂ ನೀವು ತರಬೇಕು ಎಂದು ಹೇಳುತ್ತಿದ್ದಾರೆ. ಈ ಮೂಲಕ ಕಳೆದ ಮೂರ್ನಾಲ್ಕು ದಶಕದಿಂದ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು ಎಂದು ಆಗ್ರಹಕ್ಕೆ ಈಗ ಫಲ ಸಿಕ್ಕಂತಿದೆ.


ಅಂಗನವಾಡಿಗಳಿಗೂ ಸಹ ಹೊಸ ಶಿಕ್ಷಣ ನೀತಿ ಜಾರಿಯಾದರೆ ಸಹಾಯವಾಗುತ್ತದೆ. ಕಾರ್ಯಕರ್ತೆಯರಿಗೂ ಇದರ ಅನ್ವಯ ಉತ್ತಮ ವೇತನ ದೊರೆಯುತ್ತದೆ ಎಂಬುದು ಇವರ ಉದ್ದೇಶವಾಗಿದೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದ್ದು ಇದನ್ನು ಅಂಗನವಾಡಿಗಳಿಗೂ ಅನ್ವಯ ಮಾಡಿ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯಾಗಿತ್ತು.

First published: