• Home
 • »
 • News
 • »
 • jobs
 • »
 • New Education Policy: ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮುಂದಿನ ಶಿಕ್ಷಣ ಹೇಗಿರಲಿದೆ ನೋಡಿ

New Education Policy: ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮುಂದಿನ ಶಿಕ್ಷಣ ಹೇಗಿರಲಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಹಿಂದೆ 10+2 ವ್ಯವಸ್ಥೆಯಲ್ಲಿ ಪರಿಗಣಿಸದೆ ಇದ್ದ ಪೂರ್ವ ಪ್ರಾಥಮಿಕ ವರ್ಷಗಳನ್ನು ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರಿಸಿರುವುದು ದೊಡ್ಡ ಪ್ರಯೋಜನವಾಗಿದೆ. NEP ಅಳವಡಿಕೆಯ ಮೂಲಕ ಪರಿಣಾಮಕಾರಿತ್ವದ ಕಲಿಕೆಯು ಹೊರಬರಲಿದೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

ನಮಗೆಲ್ಲ ತಿಳಿದಿರುವಂತೆ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಜಾರಿಯಾಗಿದ್ದು ಅದರ ಪ್ರಕಾರ ಮುಂದಿನ ಶೈಕ್ಷಣಿಕ ಅಧಿವೇಶನದಿಂದ 10+2 ಶಿಕ್ಷಣ ಮಾದರಿಯ ಬದಲು ಹೊಸ 5+3+3+4 ಮಾದರಿಗೆ ಬದಲಾಯಿಸುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಈಗಾಗಲೇ ತಿಳಿಸಿದೆ. ಇನ್ನು ಈ ಹೊಸ ಶಿಕ್ಷಣ ನೀತಿಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ, ಇದರಿಂದಾಗುವ ಪ್ರಯೋಜನವೇನು ಎಂಬುದರ ಬಗ್ಗೆ ಹಲವು ಶಿಕ್ಷಣ ತಜ್ಞರು ತಮ್ಮದೆ ಆದ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಯಾರು ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.


VIBGYOR ಶಾಲೆಗಳ ಸಮೂಹದ ನಿರ್ದೇಶಕಿ (ಶೈಕ್ಷಣಿಕರು, ಗುಣಮಟ್ಟದ ವಿಶ್ಲೇಷಣೆ ಮತ್ತು ತರಬೇತಿಗಳು) ಅನ್ನಿ ಡಯಾಸ್ ಅವರು ಹೇಳುವ ಪ್ರಕಾರ, ಈ ಹೊಸ ನೀತಿಯು ಮಕ್ಕಳ ಅರಿವಿನ ಬೆಳವಣಿಗೆಯ ವಿವಿಧ ಹಂತಗಳೊಂದಿಗೆ ಸಮ್ಮಿಳಿತವಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಗುಣಮಟ್ಟಕ್ಕೆ ತಕ್ಕನಾಗಿದೆ.


ಅಲ್ಲದೆ, "ವಿಶ್ವಸಂಸ್ಥೆಯ ಸಸ್ಟೈನಬಲ್ ಡೆವಲಪ್ಮೆಂಟ್ ಗುರಿಗಳ ಪ್ರಕಾರ, ಔಪಚಾರಿಕ ಶಿಕ್ಷಣ ವ್ಯವಸ್ಥೆಯು ಜೀವಮಾನದಲ್ಲಿ ಉನ್ನತ ಕಲಿಕೆಗೆ ಅವಕಾಶಗಳನ್ನು ಉತ್ತೇಜಿಸುವಂತಿರಬೇಕು ಮತ್ತು ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಮೂಲಭೂತವಾಗಿ ಆ ಗುರಿಯನ್ನು ತಲುಪಲು ಸಿದ್ಧವಿರಬೇಕು.


ಹೊಸ ಮಾದರಿ


ಈ ಹೊಸ 5+3+3+4 ವ್ಯವಸ್ಥೆಯು ಮಗುವಿಗೆ ಮೊದಲ ಹಂತದಲ್ಲೇ ಉತ್ತಮ ಅಡಿಪಾಯ ಎನ್ನಬಹುದಾದ ಶಿಕ್ಷಣವನ್ನು ಖಚಿತಪಡಿಸುತ್ತದೆ ಹಾಗೂ ಆ ಮೂಲಕ ಮಗು ಮುಂದಿನ ಹಂತದ ಶಿಕ್ಷಣ ಪಡೆಯಲು ಸಶಕ್ತವಾಗುವಂತೆ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಭವಿಷ್ಯದಲ್ಲಿ ಮೌಖಿಕ ಕಲಿಕೆಯನ್ನು ಕಡಿಮೆ ಮಾಡುತ್ತದೆ
"ಪ್ರಸ್ತುತ ಇಡೀ ಶಿಕ್ಷಣ ವ್ಯವಸ್ಥೆಯು ಸಾಮರ್ಥ್ಯ ಆಧಾರಿತ ಕಲಿಕೆಗೆ ಬದಲಾಗುತ್ತಿರುವುದರಿಂದ, CBSE ತೆಗೆದುಕೊಂಡಿರುವ ಹೊಸ ಶಿಕ್ಷಣ ನೀತಿಯ ಅಳವಡಿಕೆಯ ನಿರ್ಧಾರವು ಮುಂದೆ ಭವಿಷ್ಯದಲ್ಲಿ ಮೌಖಿಕ ಕಲಿಕೆಯನ್ನು ಕಡಿಮೆ ಮಾಡುತ್ತ ಕಲಿಕೆಯ ರೂಪವನ್ನು ಇನ್ನಷ್ಟು ವಾಸ್ತವಿಕ, ಸಮಗ್ರ ಮತ್ತು ಅನುಭವಾಧಾರಿತವಾಗುವಂತೆ ಮಾಡಲಿದೆ ”ಎಂದು ಮಹಾರಾಷ್ಟ್ರದ ಭಾಯಂದರ್‌ನಲ್ಲಿರುವ ಆರ್‌ಬಿಕೆ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲರಾದ ಶೀತಲ ಪ್ರಭು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.


ಅಳವಡಿಕೆಯಾಗಿರುವ ಅಂಶಗಳು
ಈ ಹೊಸ ನೀತಿ ತರಬೇಕೆಂಬ ನಿರ್ಧಾರವು, ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳನ್ನು ಗಣನೆಗೆ ತೆಗೆದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ರೀತಿಯ ಶಿಕ್ಷಣ ಮೂಲಭೂತ ಸಾಕ್ಷರತೆ ನೀಡುವುದಲ್ಲದೆ ಮಕ್ಕಳಲ್ಲಿ ಶಿಸ್ತು, ವೃತ್ತಿಪರ ಮನೋಭಾವ ಮತ್ತು ಆಲೋಚನಾ-ಚಿಂತನಾ ಕೌಶಲ್ಯಗಳನ್ನು ಮೂಡಿಸುವಂತಹ ಅವಕಾಶವನ್ನೂ ಸೃಷ್ಟಿಸುವತ್ತ ಗಮನಹರಿಸಿದೆ.


ಇದಕ್ಕೆ ಸಂಬಂಧಿಸಿದಂತೆ ಶಿವ ನಾಡರ್ ಶಾಲೆಯ ಶಿಕ್ಷಣ ನಿರ್ದೇಶಕ ಶಶಿ ಬ್ಯಾನರ್ಜಿ ಅವರು, “ಈ ನಿರ್ಧಾರವು ಸಮಗ್ರ ಕಲಿಕೆಯತ್ತ ಕ್ರಮೇಣ ಪ್ರಗತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಇದನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ, ಅದು ಕಲಿಕೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ.


ಇದನ್ನೂ ಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು - ಅಶ್ವಥ್​ ನಾರಾಯಣ್


ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಕೌಶಲ್ಯಗಳನ್ನು ಸಮ್ಮಿಳಿತಗೊಳಿಸಿಕೊಂಡು ಬೆಳೆಯಲು ಅವಕಾಶವನ್ನು ಒದಗಿಸುವುದು ಬಲು ಮುಖ್ಯವಾಗಿದ್ದು ಈ ನೀತಿಯಿಂದ ಅದು ಸಾಧ್ಯವಾಗಲಿದೆ" ಎಂದು ಅವರು ಹೇಳುತ್ತಾರೆ.


ಎಷ್ಟು ಪ್ರಯೋಜನ?
ಈ ಹಿಂದೆ 10+2 ವ್ಯವಸ್ಥೆಯಲ್ಲಿ ಪರಿಗಣಿಸದೆ ಇದ್ದ ಪೂರ್ವ ಪ್ರಾಥಮಿಕ ವರ್ಷಗಳನ್ನು ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರಿಸಿರುವುದು ದೊಡ್ಡ ಪ್ರಯೋಜನವಾಗಿದೆ. NEP ಅಳವಡಿಕೆಯ ಮೂಲಕ ಪರಿಣಾಮಕಾರಿತ್ವದ ಕಲಿಕೆಯು ಹೊರಬರಲಿದೆ. ಇದು ಕಲಿಕೆಯನ್ನು ಹೆಚ್ಚು ಪ್ರಾಯೋಗಿಕ ಮತ್ತು ಪ್ರಾಜೆಕ್ಟ್ ಆಧಾರಿತವಾಗಿಸುತ್ತದೆ. “ಇದು ಭಾರತದಲ್ಲಿನ ಎಲ್ಲಾ ಹಂತದ ಶಾಲಾ ಶಿಕ್ಷಣಕ್ಕೆ ಒಂದೇ ನಿಯಂತ್ರಣವನ್ನು ಪ್ರೋತ್ಸಾಹಿಸುತ್ತದೆ.


ಮಕ್ಕಳಿಗೆ ಗ್ರೇಡಿಂಗ್​ ವ್ಯವಸ್ಥೆ
ಅಲ್ಲದೆ ಇದರಲ್ಲಿ ಅಳವಡಿಸಲಾಗಿರುವ ಗ್ರೇಡಿಂಗ್ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಖಚಿತಪಡಿಸುತ್ತದೆ. ಉತ್ತಮ ಮಾನದಂಡದೊಂದಿಗೆ, ಪಠ್ಯಕ್ರಮ ಮತ್ತು ಮೌಲ್ಯಮಾಪನ ಪರಿಕರಗಳು ಹೆಚ್ಚು ಪರಿಣಾಮಕಾರಿ ಕಲಿಕೆಯ ಔಟ್‌ಪುಟ್ ಅನ್ನು ಖಚಿತಪಡಿಸುತ್ತದೆ, ” ಎಂದು ಡಯಾಸ್ ವಿವರಿಸುತ್ತಾರೆ. ಮುಂದುವರೆಯುತ್ತ ಅವರು, "ಇದರಲ್ಲಿರುವ ದೀರ್ಘವಾಗಿರುವ ಪ್ರಾರಂಭಿಕ ಹಂತವು ಮಕ್ಕಳು ತಮ್ಮ ಎರಡನೇ ಹಂತ ಪ್ರವೇಶಿಸುವುದಕ್ಕೆ ಮೊದಲೆ ಅವರ ಭಾಷೆ, ಸಂವಹನ, ಸಂಖ್ಯಾಶಾಸ್ತ್ರ ಮತ್ತು ಸಾಮಾಜಿಕ ಕೌಶಲ್ಯಗಳು ಬಲವಾಗಿರುವಂತೆ ಖಚಿತಪಡಿಸುತ್ತದೆ. ನಂತರದ ಮಧ್ಯಮ ಹಂತವು ಅನುಭವಾಧಾರಿತ ಕಲಿಕೆಯ ಮೇಲೆ ಕೇಂದ್ರೀಕರಿಸಿದರೆ, ತದನಂತರದ ಹಂತವು ಅವರನ್ನು ಇನ್ನಷ್ಟು ಪಕ್ವವಾಗಿ ಮಾಡುತ್ತದೆ.


ಮಕ್ಕಳನ್ನು ಸಿದ್ಧಗೊಳಿಸುವುದು
ಈ ನೀತಿಯಲ್ಲಿರುವ, ಬಹುಶಿಸ್ತೀಯ ಶಿಕ್ಷಣದ ಅಂಶವು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಲೋಚಿಸುವಂತೆ, ಚಿಂತನೆ ಮಾಡುವಂತೆ ಉತ್ತೇಜಿಸುತ್ತದೆ ಮತ್ತು ಇದು ಅವರನ್ನು ಜಗತ್ತಿಗಾಗಿ ಸಕಲ ರೀತಿಯಿಂದ ಸಿದ್ಧಗೊಳಿಸುತ್ತದೆ" ಎಂದು ಡಯಾಸ್ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆನ್ಲೈನ್ ನಲ್ಲಿ ತರಬೇತಿ ಪಡೆದಿರುವ ಅನೇಕ ಮಕ್ಕಳೇ ಈಗ ಈ ನೀತಿಯಡಿಯಲ್ಲಿ ಪೂರ್ವಸಿದ್ಧತಾ ಹಂತಕ್ಕೆ ಮರಳಲಿದ್ದಾರೆ ಎಂದು ಬ್ಯಾನರ್ಜಿ ಹೇಳುತ್ತಾರೆ.


ಯಶಸ್ವಿಯಾಗುವುದು ಹೇಗೆ?
ಈ ನೀತಿಯ ಅನುಸಾರ ಶಿಕ್ಷಣದ ಮೊದಲ ಹಂತದಲ್ಲಿ ಪ್ರಾಜೆಕ್ಟ್ ಆಧಾರಿತ ಕಲಿಕೆ, ಶಿಸ್ತುಬದ್ಧ ಕಲಿಕೆ, ಅನುಭವದ ಕಲಿಕೆ ಮತ್ತು ಹೆಚ್ಚಿನವುಗಳು ಇದ್ದು ಇವು ಮಗುವೊಂದು ಸಮರ್ಥವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿವೆ. ತದನಂತರದ ಶಿಕ್ಷಣದ ಹಿರಿಯ ವರ್ಷಗಳಲ್ಲಿ, ವಿದ್ಯಾರ್ಥಿಗಳಿಗೆ ಎರಡನೇ ಬೋರ್ಡ್ ಪರೀಕ್ಷೆಯನ್ನು ಹೊಂದುವ ಆಯ್ಕೆ ನೀಡಿರುವುದು ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ.

First published: