• Home
  • »
  • News
  • »
  • jobs
  • »
  • Education: ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಹೊಸ ಪಠ್ಯಕ್ರಮದ ಅನುಷ್ಠಾನಕ್ಕೆ ಮುಂದಾಗಿರುವ ಕೇರಳ ಶಿಕ್ಷಣ ಇಲಾಖೆ

Education: ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಹೊಸ ಪಠ್ಯಕ್ರಮದ ಅನುಷ್ಠಾನಕ್ಕೆ ಮುಂದಾಗಿರುವ ಕೇರಳ ಶಿಕ್ಷಣ ಇಲಾಖೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೀಗ ಕೇರಳ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ತನ್ನ ಪ್ರೌಢ ಶಿಕ್ಷಣ ಪಠ್ಯಪುಸ್ತಕ ಕ್ರಮವನ್ನು ಬದಲಾಯಿಸುವ ಬಗ್ಗೆ ಮಹತ್ವಪೂರ್ಣ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾತೃಭೂಮಿ ಮಾಧ್ಯಮದಲ್ಲಿ ವರದಿಯಾಗಿದೆ.

  • Trending Desk
  • 5-MIN READ
  • Last Updated :
  • Share this:

ಸಾಮಾನ್ಯವಾಗಿ ಯಾವುದಾದರೂ ಹೊಸ ಪಠ್ಯಕ್ರಮವನ್ನು ಜಾರಿಗೆ ತರುವ ವಿಷಯ ಬಂದಾಗ ಅಥವಾ ಆ ಬಗ್ಗೆ ಅನುಮೋದನೆ ದೊರೆತಾಗ ಅದನ್ನು ಹೊಸ ಶೈಕ್ಷಣಿಕ ವರ್ಷದಿಂದ ಜಾರಿ ಮಾಡುವುದು ಉತ್ತಮ, ಅರ್ಥಪೂರ್ಣ ಹಾಗೂ ಪಾಲಿಸಿಕೊಂಡು ಬಂದ ಒಂದು ನೀತಿಯಾಗಿರುತ್ತದೆ ಎಂದು ಹೇಳಬಹುದು. ಆದರೆ, ಸದ್ಯ ಬೆಳಕಿಗೆ ಬಂದಿರುವ ವರದಿಯ (Report) ಪ್ರಕಾರ, ಕೇರಳದ (Kerala) ಉನ್ನತ ಶಿಕ್ಷಣ ಇಲಾಖೆಯು ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕೇ ಇನ್ನೂ ಕೇವಲ ಅರ್ಧ ವರ್ಷವಷ್ಟೇ ಬಾಕಿ ಇರುವಾಗ ಹೊಸ ಪಠ್ಯಕ್ರಮವನ್ನು ಅಳವಡಿಸುವ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.


ಹಾಗಾದರೆ, ಏನಿದು ಹೊಸ ಪಠ್ಯಕ್ರಮ, ಈ ಬಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರದನ್ವಯ ಹೊಸ ಪಠ್ಯಕ್ರಮದಲ್ಲಿ ಸೇರಿಸಲಾದ ಮಹತ್ತರ ಅಂಶಗಳೇನು? ಎಂಬುದರ ಬಗ್ಗೆ ಒಂದಿಷ್ಟು ಸಂಕ್ಷಿಪ್ತವಾಗಿ ಈ ಲೇಖನದ ಮೂಲಕ ತಿಳಿಯೋಣ. ತಿರುವನಂತಪುರಂ ಇದೀಗ ಕೇರಳ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ತನ್ನ ಪ್ರೌಢ ಶಿಕ್ಷಣ ಪಠ್ಯಪುಸ್ತಕ ಕ್ರಮವನ್ನು ಬದಲಾಯಿಸುವ ಬಗ್ಗೆ ಮಹತ್ವಪೂರ್ಣ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾತೃಭೂಮಿ ಮಾಧ್ಯಮದಲ್ಲಿ ವರದಿಯಾಗಿದೆ.


ಉನ್ನತ ಶಿಕ್ಷಣ ಪಠ್ಯಕ್ರಮ ಹೇಗಿರಲಿದೆ?


ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಉನ್ನತ ಶಿಕ್ಷಣ ಸಚಿವಾಲಯವು ಪಠ್ಯಕ್ರಮ ಹೇಗಿರಲಿದೆ ಎಂಬುದರ ಕುರಿತಾಗಿ ಒಂದು ಕರಡು ಪ್ರತಿಯನ್ನು ಸಿದ್ಧಪಡಿಸಿದೆ ಎನ್ನಲಾಗಿದ್ದು ಅದನ್ನು ಎಲ್ಲ ವಿಶ್ವವಿದ್ಯಾಲಯಗಳಿಗೆ ಒದಗಿಸಲಾಗುವುದೆಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವರದಿಯ ಪ್ರಕಾರ, ಉನ್ನತ ಶಿಕ್ಷಣ ಇಲಾಖೆಯು ಈಗಾಗಲೇ ಹೊಸದಾಗಿ ನಿರ್ಮಿಸಲಾದ ಅಥವಾ ಬದಲಾಯಿಸಲಾದ ಪಠ್ಯಕ್ರಮದ ಕರಡು ಪ್ರತಿಯನ್ನು ರಾಜ್ಯದ ವಿವಿಧ ವಿವಿಗಳಿಗೆ ರವಾನಿಸಲಿದ್ದು ಅದರ ಪ್ರಕಾರ ಎಲ್ಲ ವಿವಿಗಳು ಪೂರ್ವ ತಯಾರಿ ನಡೆಸಿ ಸನ್ನದ್ಧವಾಗಿರಬೇಕೆನ್ನಲಾಗಿದೆ.


ಇದನ್ನೂ ಓದಿ: UG PG Exams: ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಇನ್ಮುಂದೆ ಇಂಗ್ಲಿಷ್-ಕನ್ನಡ ಎರಡೂ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು


ಇಲ್ಲಿ ವಿಶೇಷವಾಗಿ ಗಮನಿಸಬೆಕಾಗಿರುವ ಅಂಶವೆಂದರೆ ಈ ಬದಲಾದ ಪಠ್ಯಕ್ರಮವು ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕೆ ಮುಂಚೆಯೇ ಅನುಷ್ಠಾನಗೊಳ್ಳಬೇಕಾಗಿರುವುದು.


ಕೈಗೊಳ್ಳಲಾದ ಮಹತ್ವದ ನಿರ್ಧಾರ


ಈ ಕುರಿತು ರಾಜ್ಯದಲ್ಲಿ ಶಿಕ್ಷಣ ಸಚಿವರಾದ ಆರ್. ಬಿಂದು ಅವರ ನೇತೃತ್ವದಲ್ಲಿ ಈಗಾಗಲೇ ವಿವಿಧ ಪ್ರಾಧಿಕಾರಗಳ ಮುಖ್ಂಡರೊಡನೆ ಉನ್ನತ ಮಟ್ಟದ ಸಭೆ ನಡೆದಿದ್ದು ಆ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮಾಧ್ಯಮ ಮೂಲಗಳಿಂದ ದೃಢಪಟ್ಟಿದೆ. ಇನ್ನು ಮುಂದುವರೆದಂತೆ ಈ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲೇ ಅಧಿಕಾರಿಗಳಿರುವ ಉನ್ನತ ಸಮಿತಿಗಳನ್ನು ರಚಿಸಲಾಗುವುದೆಂದು ಮಾತೃಭೂಮಿ ಮಾಧ್ಯಮ ವರದಿ ಮಾಡಿರುವುದಾಗಿ ತಿಳಿದುಬಂದಿದೆ.


ಕೆಲ ಮುಖ್ಯ ಅಂಶಗಳು


1. ಮೂಲಗಳಿಂದ ಸದ್ಯ ತಿಳಿದುಬಂದಿರುವ ಮಾಹಿತಿಗಳ ಪ್ರಕಾರ ಬದಲಾದ ಪಠ್ಯಕ್ರಮದಲ್ಲಿ ಯಾವೆಲ್ಲ ಅಂಶಗಳನ್ನು ಸೇರಿಸಲಾಗಿದೆ ಎಂಬುದರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.


2. ಕ್ರೆಡಿಟ್ ವ್ಯವಸ್ಥೆಯು ಕಡ್ಡಾಯವಾಗಿರಲಿದ್ದು ನಾಲ್ಕು ವರ್ಷಗಳ ಪದವಿ ಶಿಕ್ಷಣವು ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ.


3. ಈ ಹೊಸ ಅಥವಾ ಬದಲಾದ ಪಠ್ಯಕ್ರಮದ ಪ್ರಮುಖ ಅಂಶವು ಕೌಶಲ್ಯಾಭಿವೃದ್ಧಿಯಾಗಲಿದೆ ಎಂದು ತಿಳಿದುಬಂದಿದೆ. ವಿಷಯಗಳ ಆಧಾರದ ಮೇಲೆ ಮೌಲ್ಯಮಾಪನವೂ ಬದಲಾಗಲಿದೆ ಎನ್ನಲಾಗಿದೆ.


4. ವಿಶೇಷತೆ ಅಂದರೆ ಸ್ಪೆಷಲೈಸೇಷನ್ ಸೌಲಭ್ಯ ಇರುತ್ತದೆಯಾದರೂ ವಿಷಯಗಳ ಆಯ್ಕೆಯಲ್ಲಿ ನಮ್ಯತೆ ಇರುತ್ತದೆ ಹಾಗೂ ಭಾಷೆಗಳನ್ನು ಇಲೆಕ್ಟಿವ್ ಗಳನ್ನಾಗಿ ಮಾಡಲಾಗುತ್ತದೆ.


5. ಒಟ್ಟು ನಾಲ್ಕು ವರ್ಷಗಳ ಶಿಕ್ಷಣದಲ್ಲಿ ಅಭ್ಯರ್ಥಿಯೊಬ್ಬ 200 ಕ್ರೆಡಿಟ್ ಅಂಕಗಳ ಪೈಕಿ 176 ಕ್ರೆಡಿಟ್ ಅಂಕಗಳನ್ನು ಗಳಿಸಬೇಕಾಗಿರುತ್ತದೆ. ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಡಿ ಇದರ ಪ್ರಮಾಣ 150 ಕ್ರೆಡಿಟ್ ಅಂಕಗಳಾಗಿವೆ.


6. ಆನ್ಲೈನ್ ತರಬೇತಿಗಳು, ಇಂಟರ್ನ್ಶಿಪ್, ಕೌಶಲ್ಯಾಭಿವೃದ್ಧಿ ತರಬೇತಿಗಳು, NSS, NCC ಹಾಗೂ ಇತರೆ ಪ್ರಾಜೆಕ್ಟುಗಳು ಕ್ರೆಡಿಟ್ ನೀಡಲಿವೆ.


7. ನಾಲ್ಕು ವರ್ಷಗಳ ಹಾನರ್ಸ್ ಪದವಿಗಾಗಿ ವಿದ್ಯಾರ್ಥಿಯು ತನ್ನ ಅಂತಿಮ ವರ್ಷದಲ್ಲಿ ಸಂಶೋಧನಾ ಪ್ರಾಜೆಕ್ಟ್ ಅನ್ನು ಕೈಗೊಳ್ಳಬೇಕಾಗಿರುತ್ತದೆ.

First published: