ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (Entrance- Exam) 2023 (NEET UG 2023) ಗಾಗಿ ಪ್ರವೇಶ ಕಾರ್ಡ್ ಅನ್ನು ಮೇ 01 ರಂದು ಬಿಡುಗಡೆ ಮಾಡುತ್ತದೆ. ಎನ್‌ಟಿಎ ಈಗಾಗಲೇ ನಗರದ ಮಾಹಿತಿ (Information) ಪತ್ರವನ್ನು ನೀಡಿದೆ. ಇದರ ನಂತರ ಅಭ್ಯರ್ಥಿಗಳು ಪ್ರವೇಶ ಕಾರ್ಡ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಅವರೆಲ್ಲರಿಗೂ ಸಹ ಈ ಲಿಂಕ್ ಬಹಳ ಉಪಯೋಗವಾಗಲಿದೆ. ಪ್ರವೇಶ ಕಾರ್ಡ್ (Admit Card) ನೀಡಿದ ನಂತರ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.inನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಭ್ಯರ್ಥಿಗಳು ಇಲ್ಲಿ ತಿಳಿಸಲಾದ ಹಂತಗಳನ್ನು ಪಾಲಿಸುವ ಮೂಲಕ ನೀವೇ ಡೌನ್‌ಲೋಡ್ ಮಾಡಿಕೊಳ್ಳಬಹುದು.
NEET 2023 UG ಪರೀಕ್ಷೆಯ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ನೇರ ಲಿಂಕ್ ನಾವಿಲ್ಲಿ ನೀಡಿದ್ದೇವೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು NTA NEET ನ ಅಧಿಕೃತ ಸೈಟ್ ಮೂಲಕ neet.nta.nic.in ನಲ್ಲಿ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು NEET ಪರೀಕ್ಷೆಯನ್ನು ಮೇ 7, 2023 ರಂದು ಒಂದೇ ಪಾಳಿಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 2 ರಿಂದ 5.20 ರವರೆಗೆ ಈ ಪರೀಕ್ಷೆ ನಡೆಯಲಿದೆ. NEET (UG) - 2023 ರ ಪರೀಕ್ಷಾ ಮಾದರಿಯು ನಾಲ್ಕು ವಿಷಯಗಳನ್ನು ಒಳಗೊಂಡಿದೆ. ಪ್ರತಿಯೊಂದು ವಿಷಯವು ಎರಡು ವಿಭಾಗಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: NEET UG Admit Card ಬಿಡುಗಡೆಯಾಗಿದೆ; ಈ ಲಿಂಕ್ ಬಳಸಿ ಡೌನ್‌ಲೋಡ್ ಮಾಡಿಕೊಳ್ಳಿ
ವಿಭಾಗ A 35 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು ವಿಭಾಗ B 15 ಪ್ರಶ್ನೆಗಳನ್ನು ಹೊಂದಿರುತ್ತದೆ. ನೀವು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಬೇಕು ಈ 15 ಪ್ರಶ್ನೆಗಳಲ್ಲಿ, ಅಭ್ಯರ್ಥಿಗಳು ಯಾವುದೇ 10 ಪ್ರಶ್ನೆಗಳನ್ನು ಆಯ್ಕೆ ಮಾಡಿ ಅದಕ್ಕೆ ಉತ್ತರಿಸುವ ಅವಕಾಶವನ್ನು ಸಹ ನೀಡಲಾಗಿದೆ. ಆದ್ದರಿಂದ ನಿಗದಿತ ಸಮಯಕ್ಕೆ ನಿಗದಿತ ಪ್ರಶ್ನೆಗಳಿಗೆ ನೀವು ಉತ್ತರಿಸಬೇಕಾಗುತ್ತದೆ.
ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಕೆಳಗೆ ನೀಡಲಾದ ಈ ಸರಳ ಹಂತಗಳನ್ನು ಫಾಲೋ ಮಾಡುವ ಮೂಲಕ ತಮ್ಮ ಹಾಲ್ಟಿಕೆಟ್ ಪಡೆಯಬಹುದು. ಆದಷ್ಟು ಬೇಗ ನಿಮ್ಮ ಹಾಲ್ಟಿಕೆಟ್ ಡೌನ್‌ಲೋಡ್ ಮಾಡಿ.
NEET UG 2023 ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ನೇರ ಲಿಂಕ್ ಈಗಾಗಲೇ ನೀಡಿದ್ದೇವೆ.
ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡುವ ಹಂತಗಳು
ಹಂತ 1: ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಮೊದಲ ಅಧಿಕೃತ ವೆಬ್‌ಸೈಟ್neet.nta.nic.inಗೆ ಹೋಗಿ
ಹಂತ 2: ಅದರ ನಂತರ ಅಭ್ಯರ್ಥಿಯ ಮುಖಪುಟದಲ್ಲಿ ನೀಡಲಾದ NEET UG ಪ್ರವೇಶ ಕಾರ್ಡ್ ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 3: ನಂತರ ಅಭ್ಯರ್ಥಿಯ ಅರ್ಜಿ ಸಂಖ್ಯೆ ಇತ್ಯಾದಿ ವಿವರಗಳನ್ನು ನಮೂದಿಸಬೇಕಾಗುತ್ತದೆ.
ಹಂತ 4: ಈಗ ಅಭ್ಯರ್ಥಿಯ ಪ್ರವೇಶ ಪತ್ರವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 5: ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಕೂಡಾ ಮಾಡಬಹುದು.
ಹಂತ 6: ಅಂತಿಮವಾಗಿ ಪ್ರವೇಶ ಕಾರ್ಡ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳಿ ಇದು ನಿಮ್ಮ ಸಹಾಯಕ್ಕೆ ಬರುತ್ತದೆ.
ಮುಂದಿನದಿನಗಳಲ್ಲಿ ನೀವು ಪರೀಕ್ಷೆ ಬರೆಯುವಾಗ ಈ ಹಾಲ್ಟಿಕೆಟ್ ಪಡೆದಿರುವುದು ಮುಖ್ಯವಾಗಿರುತ್ತದೆ. ನೀವು ಕೂಡಾ ಈ ಬಾರಿ ಪರೀಕ್ಷೆ ಬರೆಯುವವರಾಗಿದ್ದರೆ ಖಂಡಿತ ಈ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ನೀವು ಈ ಮೇಲಿನ ಹಂತಗಳನ್ನು ಪಾಲಿಸಿದರೆ ಸಾಕು. ಆರು ಹಂತಗಳನ್ನು ಅನುಸರಿಸಿ ನೀವು ಡೌನ್‌ಲೋಡ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ