• ಹೋಂ
  • »
  • ನ್ಯೂಸ್
  • »
  • Jobs
  • »
  • NEET UG Admit Card ಬಿಡುಗಡೆಯಾಗಿದೆ; ಈ ಲಿಂಕ್ ಬಳಸಿ ಡೌನ್​ಲೋಡ್​ ಮಾಡಿಕೊಳ್ಳಿ

NEET UG Admit Card ಬಿಡುಗಡೆಯಾಗಿದೆ; ಈ ಲಿಂಕ್ ಬಳಸಿ ಡೌನ್​ಲೋಡ್​ ಮಾಡಿಕೊಳ್ಳಿ

ಅಡ್ಮಿಟ್​ ಕಾರ್ಡ್​

ಅಡ್ಮಿಟ್​ ಕಾರ್ಡ್​

ನೀವು ಕೂಡಾ ಈ ಬಾರಿ ಪರೀಕ್ಷೆ ಬರೆಯುವವರಾಗಿದ್ದರೆ ಖಂಡಿತ ಈ ಅಡ್ಮಿಟ್​ ಕಾರ್ಡ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ನೀವು ಈ ಕೆಳಗಿನ ಹಂತಗಳನ್ನು ಪಾಲಿಸಿದರೆ ಸಾಕು.

  • Share this:

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (Entrance- Exam)  2023 (NEET UG 2023) ಗಾಗಿ ಪ್ರವೇಶ ಕಾರ್ಡ್ ಅನ್ನು ಮೇ 01 ರಂದು ಬಿಡುಗಡೆ ಮಾಡುತ್ತದೆ. ಎನ್‌ಟಿಎ ಈಗಾಗಲೇ ನಗರದ ಮಾಹಿತಿ ಪತ್ರವನ್ನು ನೀಡಿದೆ. ಇದರ ನಂತರ ಅಭ್ಯರ್ಥಿಗಳು ಪ್ರವೇಶ ಕಾರ್ಡ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಅವರೆಲ್ಲರಿಗೂ ಸಹ ಈ ಲಿಂಕ್​ ಬಹಳ ಉಪಯೋಗವಾಗಲಿದೆ. ಪ್ರವೇಶ ಕಾರ್ಡ್ (Admit Card) ನೀಡಿದ ನಂತರ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.inನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಭ್ಯರ್ಥಿಗಳು ಇಲ್ಲಿ ತಿಳಿಸಲಾದ ಹಂತಗಳನ್ನು ಪಾಲಿಸುವ ಮೂಲಕ ನೀವೇ ಡೌನ್​ಲೋಡ್​ ಮಾಡಿಕೊಳ್ಳಬಹುದು. 


ವರದಿಗಳ ಪ್ರಕಾರ ನೀಟ್ ಯುಜಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಮೇ 1ರಂದು ಸಾಯಂಕಾಲ ಬಿಡುಗಡೆ ಮಾಡಲಾಗಿದೆ. NEET UG ಪರೀಕ್ಷೆ 2023 7ನೇ ಮೇ 2023 ರಂದು ನಡೆಯಲಿದೆ. ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 5.20 ರವರೆಗೆ ಇರುತ್ತದೆ. ದೇಶದ 499 ನಗರಗಳಲ್ಲಿ ಈ ಪರೀಕ್ಷೆಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಭಾರತದ ಹೊರಗಿನ 14 ನಗರಗಳಲ್ಲಿ ವಿವಿಧ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರದೊಳಗೆಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ ಈ ಎಲ್ಲಾ ನಿಯಮಗಳನ್ನು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪಾಲಿಸಲೇ ಬೇಕಾಗುತ್ತದೆ.


NEET (UG) - 2023 ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 011- 40759000 ಅನ್ನು ಸಂಪರ್ಕಿಸಬಹುದು. ಅಥವಾ ಅಭ್ಯರ್ಥಿಗಳು neet@nta.ac.in ಗೆ ಇಮೇಲ್ ಮಾಡಬಹುದು. NEET UG 2023 ಗಾಗಿ ನೋಂದಣಿ ಪ್ರಕ್ರಿಯೆಯು ಮಾರ್ಚ್ 6 ರಿಂದ ಪ್ರಾರಂಭವಾಗಿದೆ. ಅಪ್ಲಿಕೇಶನ್ ಪ್ರಕ್ರಿಯೆಯು 15 ಏಪ್ರಿಲ್ 2023 ರವರೆಗೆ ಅವಕಾಶವನ್ನು ನೀಡಿತ್ತು. ಇದೀಗ ಅವರ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅಭ್ಯರ್ಥಿಗಳಿಗೆ ಸಮಯವನ್ನು ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನ ಸಹಾಯವನ್ನು ತೆಗೆದುಕೊಳ್ಳಬಹುದು. ಅಲ್ಲಿ ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಲಭ್ಯವಿರುತ್ತದೆ.


ಇದನ್ನೂ ಓದಿ: Summer Camp: ಬಾಲ ಭವನದಲ್ಲಿ ಮಕ್ಕಳಿಗೆ ಉಚಿತ ಅನಿಮೇಷನ್ ತರಬೇತಿ!


ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಆ ಕಾರಣ ನಾವು ನಿಮಗಿಲ್ಲಿ ಹಂತ ಹಂತವಾಗಿ ಹೇಗೆ ಡೌನ್​ಲೋಡ್​ ಮಾಡುವುದು ಎಂಬ ಅಂಶವನ್ನು ತಿಳಿಸಿದ್ದೇವೆ. ಇದೇ ರೀತಿ ನೀವು ಡೌನ್​ಲೋಡ್​ ಮಾಡಬಹುದು.




ಅಡ್ಮಿಟ್​ ಕಾರ್ಡ್​ ಡೌನ್​ಲೋಡ್​ ಮಾಡುವ ಹಂತಗಳು


ಹಂತ 1: ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಮೊದಲ ಅಧಿಕೃತ ವೆಬ್‌ಸೈಟ್neet.nta.nic.inಗೆ ಹೋಗಿ


ಹಂತ 2: ಅದರ ನಂತರ ಅಭ್ಯರ್ಥಿಯ ಮುಖಪುಟದಲ್ಲಿ ನೀಡಲಾದ NEET UG ಪ್ರವೇಶ ಕಾರ್ಡ್ ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.


ಹಂತ 3: ನಂತರ ಅಭ್ಯರ್ಥಿಯ ಅರ್ಜಿ ಸಂಖ್ಯೆ ಇತ್ಯಾದಿ ವಿವರಗಳನ್ನು ನಮೂದಿಸಬೇಕಾಗುತ್ತದೆ.


ಹಂತ 4: ಈಗ ಅಭ್ಯರ್ಥಿಯ ಪ್ರವೇಶ ಪತ್ರವು ಪರದೆಯ ಮೇಲೆ ಕಾಣಿಸುತ್ತದೆ.


ಹಂತ 5: ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಕೂಡಾ ಮಾಡಬಹುದು.


ಹಂತ 6: ಅಂತಿಮವಾಗಿ ಪ್ರವೇಶ ಕಾರ್ಡ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳಿ ಇದು ನಿಮ್ಮ ಸಹಾಯಕ್ಕೆ ಬರುತ್ತದೆ.


ನೀವು ಕೂಡಾ ಈ ಬಾರಿ ಪರೀಕ್ಷೆ ಬರೆಯುವವರಾಗಿದ್ದರೆ ಖಂಡಿತ ಈ ಅಡ್ಮಿಟ್​ ಕಾರ್ಡ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ನೀವು ಈ ಮೇಲಿನ ಹಂತಗಳನ್ನು ಪಾಲಿಸಿದರೆ ಸಾಕು. ಆರು ಹಂತಗಳನ್ನು ಅನುಸರಿಸಿ ನೀವು ಡೌನ್​ಲೋಡ್​ ಮಾಡಬಹುದು.

First published: