• ಹೋಂ
  • »
  • ನ್ಯೂಸ್
  • »
  • Jobs
  • »
  • Traffic Jam: 4 ನಿಮಿಷ ತಡವಾಗಿ ಬಂದದ್ದಕ್ಕೆ ಎಕ್ಸಾಂ ಹಾಲ್​ನಿಂದ ಹೊರಕ್ಕೆ, ಓಡಿ ಬಂದ ತಾಯಿ ಆಸ್ಪತ್ರೆಗೆ!

Traffic Jam: 4 ನಿಮಿಷ ತಡವಾಗಿ ಬಂದದ್ದಕ್ಕೆ ಎಕ್ಸಾಂ ಹಾಲ್​ನಿಂದ ಹೊರಕ್ಕೆ, ಓಡಿ ಬಂದ ತಾಯಿ ಆಸ್ಪತ್ರೆಗೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ 46.3 ಕಿ.ಮೀ ದೂರ ಕ್ರಮಿಸಬೇಕಿತ್ತು. ಕಣ್ಣೂರು, ಪಳ್ಳಿಕ್ಕುನ್ನು ಮತ್ತು ಪುತಿಯಾತೆರುವುನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಧ್ಯಾಹ್ನ 12:45 ಕ್ಕೆ ತಾಯಿ ಮತ್ತು ಮಗಳು ಕಾರಿನಿಂದ ಹೊರಬಂದು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಓಡಿಕೊಂಡು ಬಂದಿದ್ದಾರೆ ಆದರೂ ಈಕೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. 

ಮುಂದೆ ಓದಿ ...
  • Share this:

ಟ್ರಾಫಿಕ್ (​Traffic) ಎಂಬುದು ಎಷ್ಟು ದೊಡ್ಡ ಸಮಸ್ಯೆಯನ್ನು ತಂದಿಡುತ್ತದೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಟ್ರಾಫಿಕ್ ಮಧ್ಯ ಸಿಕ್ಕಿ ಸತ್ತೇ ಹೋಗಿರುವ ಘಟನೆ ಕೂಡಾ ನಾವು ಕೇಳಿರುತ್ತೇವೆ. ಈ ರೀತಿ ಟ್ರಾಫಿಕ್ ಎಂಬುದು ಭವಿಷ್ಯವನ್ನೇ ಹಾಳು ಮಾಡುವ ಸ್ಥಿತಿಗೆ ಬಂದಿದೆ. ಅದಕ್ಕೆ ಇನ್ನೊಂದು ಉದಾಹರಣೆ (Example) ಎಂಬಂತೆ NEET ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಭಳಿಗೂ (Student) ಇದೇ ರೀತಿಯಾಗಿದೆ. ಯಾಕೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ. 


ವಿದ್ಯಾರ್ಥಿನಿಯೊಬ್ಬಳು ಹಲವಾರು ದಿನಗಳಿಂದ ತಯಾರಿ ನಡೆಸಿ ಪರೀಕ್ಷೆ ಬರೆಯಲು ಸಿದ್ಧಳಾಗಿರುತ್ತಾಳೆ. ಆದರೆ ಆಕೆ ಟ್ರಾಫಿಕ್ನಲ್ಲಿ ಸಿಲುಕಿ ಪರೀಕ್ಷೆಗೆ ನಾಲ್ಕು ನಿಮಿಷ ತಡವಾಗಿ ತಲುಪುತ್ತಾಳೆ. ಈ ಕಾರಣದಿಂದ ಆಕೆ ಈ ವರ್ಷ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಆಕೆಯ ಭವಿಷ್ಯದಲ್ಲಿ ಇದೊಂದು ಕೆಟ್ಟ ದಿನವಾಗಿ ಉಳಿಯುತ್ತದೆ. ಆಕೆಯ ಒಂದು ವರ್ಷ ವ್ಯರ್ಥವಾಗುತ್ತದೆ.


ಇದನ್ನೂ ಓದಿ: TS Inter Exam: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಇಂದೇ ಫಲಿತಾಂಶ ಪ್ರಕಟ


ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2023, ಕೇರಳದ ಬಹುತೇಕ ಕೇಂದ್ರಗಳಲ್ಲಿ ಭಾನುವಾರ ಸುಗಮವಾಗಿ ನಡೆಯಿತು. ಆದರೆ ಕೆಲವು ಕೇಂದ್ರಗಳಲ್ಲಿ ತುಂಬಾ ಸಮಸ್ಯೆಯಾಗಿದೆ. ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ.ಭಾನುವಾರ ಪರೀಕ್ಷಾ ಕೇಂದ್ರಕ್ಕೆ ತೆರಳುವ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಅಭ್ಯರ್ಥಿಯೊಬ್ಬರು ಕೇವಲ ನಾಲ್ಕು ನಿಮಿಷ ತಡವಾಗಿ ಬಂದಿದ್ದಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.




ಕಣ್ಣೂರು ಜಿಲ್ಲೆಯ ಕೂತುಪರಂಬದ ನಿರ್ಮಲಗಿರಿಯ ನಯನಾ ಜಾರ್ಜ್ ಅವರ ಪರೀಕ್ಷಾ ಕೇಂದ್ರವು ಪಯ್ಯನೂರಿನ ಪೆರುಂಬದಲ್ಲಿರುವ ಲತೀಫಿಯಾ ಇಂಗ್ಲಿಷ್​ ಶಾಲೆಯಾಗಿತ್ತು. ಅಭ್ಯರ್ಥಿಗಳು ಮಧ್ಯಾಹ್ನ 1:30 ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಇರಬೇಕಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಇವರು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದರು ಎಂದು ಹೇಳಲಾಗಿದೆ. ಇವರ ತಂದೆಯೊಟ್ಟಿಗೆ ಮನೆಯಿಂದ ಹೊರಟು ಬಂದಿದ್ದಾರೆ. ಕಾರು 62 ಕಿಮೀ ದೂರವನ್ನು ಕ್ರಮಿಸಲು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆಯಿಂದ ಇವರು ಬೇಗನೇ ಹೊರಟಿದ್ದಾರೆ.


ಸಮಯಕ್ಕಿಂತ 2 ತಾಸು ಮುನ್ನವೇ ಹೊರಟರು


ಊಟವನ್ನೂ ಮಾಡದೇ ತಿಂಡಿಯನ್ನು ಸಹ ಮಾಡದೇ ಬೇಗನೇ ಹೊರಟಿದ್ದಾರೆ. 11 ಗಂಟೆಗೆ ರಸ್ತೆ ಮಧ್ಯದಲ್ಲಿ ಉಪಹಾರ ಸೇವಿಸಿದ್ದಾರೆ. ಅವರು ಸರಿಯಾದ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿಯ ಪ್ರವೇಶ ಬಿಂದುವಾದ ಕಣ್ಣೂರಿನ ಚಾಲಾವನ್ನು ತಲುಪಿದ್ದರು. ಆದರೆ ನಂತರ ವಾಹನ ಟ್ರಾಫಿಕ್ ಬ್ಲಾಕ್‌ಗಳಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿಯೇ ಅವರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿ ಈ ಕುರಿತು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.


ತಾಯಿ ಮಗಳು ಓಡಿ ಪರೀಕ್ಷಾ ಕೇಂದ್ರ ತಲುಪಿದ್ದಾರೆ


ಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ 46.3 ಕಿ.ಮೀ ದೂರ ಕ್ರಮಿಸಬೇಕಿತ್ತು. ಕಣ್ಣೂರು, ಪಳ್ಳಿಕ್ಕುನ್ನು ಮತ್ತು ಪುತಿಯಾತೆರುವುನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಧ್ಯಾಹ್ನ 12:45 ಕ್ಕೆ ತಾಯಿ ಮತ್ತು ಮಗಳು ಕಾರಿನಿಂದ ಹೊರಬಂದು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಓಡಿಕೊಂಡು ಬಂದಿದ್ದಾರೆ ಆದರೂ ಈಕೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ.

top videos


    ನಾಲ್ಕು ನಿಮಿಷ ತಡವಾಗಿ ಹೋಗಿದ್ದಕ್ಕೆ ಪರೀಕ್ಷೆಯಿಂದ ಔಟ್
    ನಾಲ್ಕು ನಿಮಿಷಗಳ ಹಿಂದೆ ಗೇಟ್‌ಗಳನ್ನು ಮುಚ್ಚಲಾಗಿತ್ತು. ಗೇಟಿನ ಮುಂದೆ ಮಗಳು ಕಣ್ಣೀರಿಡುತ್ತಿರುವುದನ್ನು ಕಂಡು ಹತ್ತಿರದಲ್ಲಿದ್ದ ತಾಯಿ ತುಂಬಾ ದುಃಖಿತರಾಗಿದ್ದಾರೆ. ಕೊನೆಗೆ ಕಾರಿನಲ್ಲಿ ಸ್ಥಳಕ್ಕೆ ಬಂದ ನಯನಾ ತಂದೆ ಜಾರ್ಜ್ ಮಗಳನ್ನು ಸಮಾಧಾನಪಡಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

    First published: