ನೀಟ್ ಪಿಜಿ 2023 ಪರೀಕ್ಷೆಯನ್ನು (Exam) ಮುಂದೂಡುವಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮುಂದುವರಿಸಿದೆ. ನೀಟ್ ಮುಂದೂಡಿಕೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಶೀಘ್ರದಲ್ಲೇ ಪುನರಾರಂಭಿಸಲಿದೆ. ಅರ್ಜಿದಾರರು ಪ್ರಸ್ತುತ ಮಾರ್ಚ್ 5 ಕ್ಕೆ ನಿಗದಿಪಡಿಸಲಾದ NEET PG 2023 ಪರೀಕ್ಷೆಯನ್ನು ಮುಂದೂಡುವಂತೆ ವಿನಂತಿಸಿದ್ದಾರೆ. ಪರೀಕ್ಷೆಗೆ ಸಮರ್ಪಕವಾಗಿ ತಯಾರಿ ನಡೆಸಲು ಇನ್ನೂ ಹೆಚ್ಚು ಸಮಯ ಬೇಕು ಎಂಬುದು ವಿದ್ಯಾರ್ಥಿಗಳ (Students) ಬೇಡಿಕೆಯಾಗಿತ್ತು.
ಶುಕ್ರವಾರ, ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ನಿರ್ದಿಷ್ಟ ವಿವರಗಳನ್ನು ನೀಡಲು ಮತ್ತು ಪರಿಹಾರವನ್ನು ಪ್ರಸ್ಥಾಪಿಸಲು ಸೂಚನೆಯನ್ನು ಕೇಳಿತ್ತು ಇದಕ್ಕೆ ಸಂಬಂಧಿಸಿದಂತೆ ಇಮದು ಮಾಹಿತಿ ಬಿಡುಗಡೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಅವಕಾಶ ಕಡಿಮೆಯಾಗಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ಯಾವ ರೀತಿ ತೀರ್ಪು ನೀಡಲಿದೆ ಎಂದು ಕಾತತರಾಗಿದ್ದ ವಿದ್ಯಾರ್ಥಿಗಳು ಇಂದು ಹೊಸ ಆಶಾವಾದವನ್ನು ಹೊಂದಿದ್ದಾರೆ.
ಇದನ್ನೂ ಓದಿ: VMinclusion Taara: ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗಾಗಿ ಉಚಿತ ತರಬೇತಿ! ನೀವೂ ಜಾಯ್ನ್ ಆಗಿ
ಪೀಠವು ಯಾವುದೇ ಆದೇಶವನ್ನು ಮಾಹಿತಿ ಹಾಗೂ ಆಧಾರವಿಲ್ಲದೆ ಹೊರಡಿಸುವುದಿಲ್ಲ ಆ ಸಂಬಂಧ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ವಿದ್ಯಾರ್ಥಿಗಳುಸ್ತುತ ದಿನದ 12 ಗಂಟೆಗಳ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಓದಲು ಸಮಯ ಸಾಲುತ್ತಿಲ್ಲ ಎಂದು ಹೇಳಿದ್ದಾರೆ.
ಕಳೆದ ವಿಚಾರಣೆಯ ಸಂದರ್ಭದಲ್ಲಿ, NEET ಪಿಜಿ ನಡೆಸುವ ಜವಾಬ್ದಾರಿ ಹೊಂದಿರುವ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE), ಸರಿಸುಮಾರು 2.09 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿತ್ತು. ಪರೀಕ್ಷೆಯನ್ನು ಮುಂದೂಡಿದರೆ ತಕ್ಷಣದ ಹೊಸ ದಿನಾಂಕವನ್ನು ತಿಳಿಸಲು ಅಥವಾ ನಿಗದಿಪಡಿಸಲು ಸಾಧ್ಯವಿಲ್ಲ ಎಂದು NBE ಎಚ್ಚರಿಸಿದೆ.
ವೈದ್ಯಕೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸುತ್ತಿವೆ
ಇತ್ತೀಚೆಗೆ, ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷೆಗಳ ಮಂಡಳಿ (NBEMS) NEET PG 2023 ಇಂಟರ್ನ್‌ಶಿಪ್ ಕಟ್-ಆಫ್ ದಿನಾಂಕವನ್ನು ಜೂನ್ 30, 2023 ಕ್ಕೆ ವಿಸ್ತರಿಸಿದೆ.
NEET 2022 ಕೌನ್ಸೆಲಿಂಗ್ ಮತ್ತು ದಾಖಲಾತಿಗಳಲ್ಲಿ COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ವಿಳಂಬಗಳು ವೈದ್ಯಕೀಯ ಆಕಾಂಕ್ಷಿಗಳ ತಯಾರಿಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ ಎಂದು ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸುತ್ತಿವೆ.
ಪ್ರಸ್ತುತ ನಿಗದಿಪಡಿಸಿದಂತೆ ಮಾರ್ಚ್ 2023ರಲ್ಲಿ ನಡೆಯುತ್ತಾ?
ಇದರ ಪರಿಣಾಮವಾಗಿ NEET 2022 ಸ್ಟ್ರೇ ರೌಂಡ್ ಕೌನ್ಸೆಲಿಂಗ್ ಅನ್ನು ಜನವರಿಯಲ್ಲಿ ನಡೆಸಲಾಗುತ್ತಿರುವುದರಿಂದ, ಪ್ರಸ್ತುತ ನಿಗದಿಪಡಿಸಿದಂತೆ ಮಾರ್ಚ್ 2023 ರಲ್ಲಿ ಪರೀಕ್ಷೆಯು ನಡೆದರೆ ಅಭ್ಯರ್ಥಿಗಳಿಗೆ NEET PG 2023 ಗೆ ತಯಾರಿ ನಡೆಸಲು ಸಾಕಷ್ಟು ಸಮಯ ಇರುವುದಿಲ್ಲ. NEET PG ಭಾರತದಲ್ಲಿ MD/MS/PG ಡಿಪ್ಲೊಮಾ ಕೋರ್ಸ್‌ಗಳಿಗೆ ಏಕೈಕ ಅರ್ಹತಾ ಪ್ರವೇಶ ಪರೀಕ್ಷೆ ಇದಾಗಿದೆ. ಎಲ್ಲಾ ಕೋರ್ಸ್ಗಳು ಆರಂಭವಾಗುವುದಕ್ಕೂ ಇದು ಮುಖ್ಯ ಹಂತವಾಗಿದೆ. ಇದರ ಮೇಲೆ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯ ನಿಂತಿದೆ.
ನಿಯಮ ಏನು ಹೇಳುತ್ತೆ?
ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆ 1956 ರ ನಿಯಮಗಳ ಪ್ರಕಾರ ಈ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಯಾವುದೇ ಇತರ ರಾಜ್ಯ ಅಥವಾ ಸಾಂಸ್ಥಿಕ ಮಟ್ಟದ ಪ್ರವೇಶ ಪರೀಕ್ಷೆಗಳನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. NEET PG ಅನ್ನು ಪ್ರತಿ ವರ್ಷ ದೇಶದಾದ್ಯಂತ ವಿವಿಧ ನಗರಗಳಲ್ಲಿ ನಡೆಸಲಾಗುತ್ತದೆ ಮತ್ತು ಲಕ್ಷಗಟ್ಟಲೆ ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಾರೆ. ಆದರೆ ಇದು ನಿಜವಾಗಿಯೂ ಮಾನಸಿಕ ಹಿಂಸೆಯಾಗಿದೆ ನಾವು ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಲು ಅನುವು ಮಾಡಿ ಕೊಡಲೇ ಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಕೌನ್ಸೆಲಿಂಗ್ ದಿನಾಂಕಗಳ ನಡುವಿನ ಸಮಯದ ವ್ಯತ್ಯಾಸವು ತುಂಬಾ ದೀರ್ಘವಾಗಿದೆ ಆದ್ದರಿಂದ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುತ್ತಿದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ