• ಹೋಂ
  • »
  • ನ್ಯೂಸ್
  • »
  • Jobs
  • »
  • Ashwath Narayan: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕರ್ನಾಟಕದ ಮೂಲದವರಿಗೆ ವಸತಿ ಮೀಸಲಾತಿ ನೀಡಿ; ರಾಜ್ಯ ಸರ್ಕಾರ

Ashwath Narayan: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕರ್ನಾಟಕದ ಮೂಲದವರಿಗೆ ವಸತಿ ಮೀಸಲಾತಿ ನೀಡಿ; ರಾಜ್ಯ ಸರ್ಕಾರ

ಅಶ್ವಥ್ ನಾರಾಯಣ

ಅಶ್ವಥ್ ನಾರಾಯಣ

ಅಖಿಲ ಭಾರತ ಕೋಟಾದಡಿ ಆಯ್ಕೆಯಾದ 13 ವಿದ್ಯಾರ್ಥಿಗಳು ಸಹ ಇದರಲ್ಲಿ ಸೇರಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ವಸತಿ ಮೀಸಲಾತಿ ವರ್ಗೀಕರಣದೊಳಗೆ ಸೇರಿಸಲಾಗಿದೆ. ಹಾಗಾಗಿ ವಸತಿ ಮೀಸಲಾತಿಯಡಿ ಕೇವಲ 32 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.

  • News18 Kannada
  • 5-MIN READ
  • Last Updated :
  • New Delhi, India
  • Share this:

ನ್ಯಾಶನಲ್​ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (University) ವಸತಿ ಮೀಸಲಾತಿಯನ್ನು ಜಾರಿಗೆ ತರಲು ಅನುಸರಿಸಿದ ಕಾರ್ಯವಿಧಾನದ ಬಗ್ಗೆ ಆಕ್ಷೇಪ ಎತ್ತಲಾಗಿದೆ. ಕರ್ನಾಟಕ ಉನ್ನತ ಶಿಕ್ಷಣ (Education) ಸಚಿವ ಸಿಎನ್ ಅಶ್ವಥ್ ನಾರಾಯಣ್, (Ashwath Narayan) ಅಖಿಲ ಭಾರತ ಕೋಟಾದ ಅಡಿಯಲ್ಲಿ ಆಯ್ಕೆಯಾದವರನ್ನು ಹೊರತುಪಡಿಸಿ ಕರ್ನಾಟಕ (Karnataka) ಮೂಲದ ವಿದ್ಯಾರ್ಥಿಗಳಿಗೆ ಶೇಕಡಾ 25 ರಷ್ಟು ಒದಗಿಸುವುದು ಕಡ್ಡಾಯ ಎಂದು ಹೇಳಿದ್ದಾರೆ. 


ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಬುಧವಾರ ಬರೆದ ಪತ್ರದಲ್ಲಿ, ಅಖಿಲ ಭಾರತ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಸತಿ ಮೀಸಲಾತಿ ಅಡಿಯಲ್ಲಿ ಪರಿಗಣಿಸಿದರೆ ಅದು  ನ್ಯಾಯದ ಉಲ್ಲಂಘನೆಯಾಗುತ್ತದೆ ಎಂದು ಅವರು ಪತ್ರ ಬರೆದ ಕುರಿತು ತಿಳಿಸಿದ್ದಾರೆ.  ಕೆಲ ದಿನಗಳ ಹಿಂದೆ ಇದೇ ವಿಷಯವಾಗಿ ಅವರು ವಿಷಯದ ಪ್ರಸ್ತಾಪನೆ ಮಾಡಿದ್ದರು ಎಂದು ತಿಳಿದು ಬಂದಿದೆ.


"ವಿಶಾಖಪಟ್ಟಣಂ, ರಾಯ್‌ಪುರ, ಕೋಲ್ಕತ್ತಾ ಮತ್ತು ಇತರ ಸ್ಥಳಗಳಲ್ಲಿ ಇರುವ ಇದೇ ರೀತಿಯ ಸಂಸ್ಥೆಗಳಲ್ಲಿ, ಅಖಿಲ ಭಾರತ ಕೋಟಾದ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುವ 25 ಪ್ರತಿಶತದಷ್ಟು ವಸತಿ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. 2020 ರಲ್ಲಿ ಪರಿಚಯಿಸಲಾದ ತಿದ್ದುಪಡಿಗಳ ಪ್ರಕಾರ ಇಲ್ಲಿಯೂ ಸಹ ಇದನ್ನು ಪರಿಗಣಿಸಬೇಕು ಎಂದು ಅಶ್ವಥ್​ ನಾರಾಯಣ್ ತಿಳಿಸಿದ್ದಾರೆ. 2022-23ರ ಶೈಕ್ಷಣಿಕ ವರ್ಷದಲ್ಲಿ ಲಭ್ಯವಿರುವ ಒಟ್ಟು 180 ಸೀಟುಗಳಲ್ಲಿ 45 ವಿದ್ಯಾರ್ಥಿಗಳು ವಸತಿ ಮೀಸಲಾತಿಯಡಿ ಪ್ರವೇಶ ಪಡೆಯಬೇಕಾಗಿತ್ತು ಎಂದು ಅವರು ಹೇಳಿದರು.


ಇದನ್ನೂ ಓದಿ: Post Office Jobs: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್! 40,889 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್​ ಪೋಸ್ಟ್​


ಆದರೆ ಅಖಿಲ ಭಾರತ ಕೋಟಾದಡಿ ಆಯ್ಕೆಯಾದ 13 ವಿದ್ಯಾರ್ಥಿಗಳು ಸಹ ಇದರಲ್ಲಿ ಸೇರಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ವಸತಿ ಮೀಸಲಾತಿ ವರ್ಗೀಕರಣದೊಳಗೆ ಸೇರಿಸಲಾಗಿದೆ. ಹಾಗಾಗಿ ವಸತಿ ಮೀಸಲಾತಿಯಡಿ ಕೇವಲ 32 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಇದರಿಂದ ರಾಜ್ಯದ 13 ವಿದ್ಯಾರ್ಥಿಗಳು ತಮ್ಮ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.


2023-24ನೇ ಶೈಕ್ಷಣಿಕ ವರ್ಷಕ್ಕೆ 240 ಸೀಟುಗಳು ಲಭ್ಯವಿದ್ದು, ಈ ಪೈಕಿ 60 ವಿದ್ಯಾರ್ಥಿಗಳನ್ನು ವಸತಿ ಮೀಸಲಾತಿ ಅಡಿಯಲ್ಲಿ ಪರಿಗಣಿಸಬೇಕು ಎಂದು ಸಚಿವರು ಹೇಳಿದರು. ಒಂದು ವೇಳೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಇದನ್ನು ಖಾತ್ರಿಪಡಿಸದೇ ಇದ್ದಲ್ಲಿ ಕೂಡಲೇ ಸರಿಪಡಿಸಬೇಕು ಎಂದೂ ಸಹ ಕೋರಿದ್ದಾರೆ.




ಈ ರೀತಿ ಸರಿಪಡಿಸಲಾಗದಿದ್ದರೆ ಸೂಪರ್ ನ್ಯೂಮರಿ ಮಾನದಂಡವನ್ನು ಪರಿಗಣಿಸಿ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ವಿಶ್ವವಿದ್ಯಾಲಯ ಸಿದ್ಧಪಡಿಸಬೇಕು ಎಂದ ಅವರು ಹೇಳಿದ್ದಾರೆ. ಕನ್ನಡ ಸಂಘಟನೆಗಳು ಮತ್ತು ವಕೀಲರ ಸಂಘಗಳು ಎತ್ತಿರುವ ಕಳವಳವನ್ನು ವಿಶ್ವವಿದ್ಯಾಲಯ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರವು ಈ ವರ್ಷ ವಿಶ್ವವಿದ್ಯಾನಿಲಯಕ್ಕೆ 22 ಕೋಟಿ ರೂಪಾಯಿಗಳ ಹಣವನ್ನು ಮಂಜೂರು ಮಾಡಿದೆ ಎಂಬುದನ್ನು ಸಹ ಮರೆಯಬಾರದು ಎಂದು ನಾರಾಯಣ್ ನೆನಪಿಸಿದ್ದಾರೆ.


ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದು ಹೀಗೆ


ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಲವಾರು ಹೊಸತನದೊಂದಿಗೆ ಜಾರಿಯಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ದೈಹಿಕ ಶಿಕ್ಷಣ, ಡಿಜಿಟಲ್ ಮತ್ತು ಹಣಕಾಸು ಜಾಗೃತಿ ಕಲಿಕೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಡ್ಡಾಯಗೊಳಿಸಲಾಗಿದೆ. ಇದನ್ನು ಹೊರತು ಪಡಿಸಿ ಸಾಂಸ್ಕೃತಿಕ ಶಿಕ್ಷಣ ಅತ್ಯಗತ್ಯ ಎಂದೂ ಸಹ ತಿಳಿಸಿದ್ದಾರೆ. ಉಳಿದ ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು