• ಹೋಂ
  • »
  • ನ್ಯೂಸ್
  • »
  • Jobs
  • »
  • Dropout ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾಲೇಜ್​ ಇದು! ನೀವೂ ಜಾಯಿನ್​ ಆಗ್ಬಹುದು

Dropout ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾಲೇಜ್​ ಇದು! ನೀವೂ ಜಾಯಿನ್​ ಆಗ್ಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಲಹಂಕದ ಮುನೇಶ್ವರ ಲೇಔಟ್‌ನಲ್ಲಿರುವ ಓಷಿಯಾನಿಕ್ ಕಾಲೇಜು ಡ್ರಾಪ್‌ಔಟ್‌ಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ವಿಶೇಷಚೇತನರು ಮತ್ತು ಅನಾಥರಿಗೆ ಸಮಗ್ರ ಶಿಕ್ಷಣವನ್ನು ನೀಡುತ್ತದೆ.

  • Share this:

ಬೆಂಗಳೂರು: ಕೋವಿಡ್ ವರ್ಷದಲ್ಲಿ ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿ ಪಿಯು ತೊರೆದ 18 ವರ್ಷದ ವಿದ್ಯಾರ್ಥಿ, ಮತ್ತೆ ಕಲಿಯಲೇ ಬೇಕು ಎಂಬ ಆಸಕ್ತಿ ಮೂಡಿಸಿಕೊಂಡ 23 ವರ್ಷದ (Year) ವಿದ್ಯಾರ್ಥಿನಿ. ಸೈನ್ಸ್​ ಕಷ್ಟ ಆಗುತ್ತೆ ಅಂತ ಕಾಲೇಜನ್ನೇ ಬಿಟ್ಟ ವಿದ್ಯಾರ್ಥಿ. ಹೀಗೆ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಅವರದೇ ಆದ ಡ್ರಾಪೌಟ್​ ರೀಸನ್​ಗಳನ್ನು ಹೊಂದಿದ್ದಾರೆ. ಆದರೆ ಅವರೆಲ್ಲರೂ ಮತ್ತೆ ಪರೀಕ್ಷೆ ಬರೆದು ಪಾಸ್​ ಆಗಲು ಬಯಸಿದ್ದಾರೆ. ಇಂಥವರನ್ನು ಮತ್ತೆ ಹುರಿದುಂಬಿಸಿ ಶಿಕ್ಷಣ ನೀಡುವ ಉದ್ದೇಶವನ್ನು ಶಿಕ್ಷಕರೂ (Teachers) ಹೊಂದಿದ್ದಾರೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 


ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಡ್ರಾಪ್‌ಔಟ್ ಆದ ನಂತರ ಕಾಲೇಜ್​​ ಕ್ಯಾಂಪಸ್‌ಗೆ ಹಿಂತಿರುಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ಆ ವಿದ್ಯಾರ್ಥಿಗಳ ಮನಸ್ಥಿತಿ ತುಂಬಾ ಬದಲಾಗಿರುತ್ತದೆ. ಯಲಹಂಕದ ಮುನೇಶ್ವರ ಲೇಔಟ್‌ನಲ್ಲಿರುವ ಓಷಿಯಾನಿಕ್ ಕಾಲೇಜು ಡ್ರಾಪ್‌ಔಟ್‌ಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ವಿಶೇಷಚೇತನರು ಮತ್ತು ಅನಾಥರಿಗೆ ಸಮಗ್ರ ಶಿಕ್ಷಣವನ್ನು ನೀಡುತ್ತದೆ. ಕಾಲೇಜು ಪೂರ್ವ-ವಿಶ್ವವಿದ್ಯಾಲಯದಲ್ಲಿ ಸುಮಾರು 400 ವಿದ್ಯಾರ್ಥಿಗಳನ್ನು ಹೊಂದಿದೆ ಮತ್ತು ಪ್ರಸ್ತುತ ಎರಡು ಪದವಿ ಕಾರ್ಯಕ್ರಮಗಳನ್ನು ಹೊಂದಿದೆ.


II PU ಫಲಿತಾಂಶಗಳು ಪ್ರಕಟವಾದಾಗ ಈ ಕಾಲೇಜು 85% ಗಳಿಸಿದೆ. ಮ್ಯಾನೇಜ್‌ಮೆಂಟ್‌ನ  ಸದಸ್ಯರೊಬ್ಬರು STOI ಯೊಂದಿಗೆ ಡ್ರಾಪ್‌ಔಟ್‌ಗಳನ್ನು ಮುಖ್ಯವಾಹಿನಿಗೆ ಮರಳಿ ತರುವಲ್ಲಿನ ಸವಾಲುಗಳ ಬಗ್ಗೆ ಮಾತನಾಡಿದರು. ಅವರಲ್ಲಿ ಶಿಕ್ಷಣದ ಬಗ್ಗೆ ಗಾಂಭೀರ್ಯತೆ ಮೂಡಿಸಿ ಅವರನ್ನು ಕಾಲೇಜಿನಲ್ಲಿ ರೆಗ್ಯುಲರ್‌ಗಳನ್ನಾಗಿ ಮಾಡುವುದೇ ದೊಡ್ಡ ಸವಾಲಾಗಿದ್ದು, ಹೆಚ್ಚಿನ ಅಂಕ ಗಳಿಸುವುದಕ್ಕಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: Summer Vacation: ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ಶಾಲೆಗಳು ಈ ದಿನಾಂಕದಂದೇ ಆರಂಭವಾಗುತ್ತೆ


ವಿದ್ಯಾರ್ಥಿಗಳು ಹಲವಾರು ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದರೆ ಅವರಿಗೆ ಶಿಕ್ಷಣ ನೀಡುವುದು ಅವರನ್ನು ಮತ್ತೆ ಸರಿದಾರಿಗೆ ಕರೆದುಕೊಂಡು ಬರುವುದು ಒಂದು ಸವಾಲಾಗಿರುತ್ತದೆ ಎಂದು ಪ್ರಾಂಶುಪಾಲರಾದ ಶೋಭಾ ಕೆ.ಎಂ. ಹೇಳಿದ್ದಾರೆ. ಪ್ರೇಮ, ಜೂಜು, ಮಧ್ಯವ್ಯಸನ, ಮೋಜು ಮಸ್ತಿ ಇವುಗಳಿಂದಾಗಿ ವಿದ್ಯಾರ್ಥಿಗಳು ಕಾಲೇಜು ಬಿಡುತ್ತಾರೆ ಇನ್ನು ಕೆಲವರು ಆರ್ಥಿಕವಾಗಿ ಸಭಲರಾಗಿಲ್ಲದ ಕಾರಣ ಕಾಲೇಜು ಬಿಡುವವರೂ ಇದ್ದಾರೆ. ಆದರೆ ಈ ಕಾಲೇಜು ಅಂಥವರಿಗಾಗಿ ಅವರ ಸಹಾಯಕ್ಕಾಗಿ ನಿಂತಿದೆ.



ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕಾಲೇಜು 15 ಶಿಕ್ಷಕರನ್ನು ಹೊಂದಿದೆ ಮತ್ತು ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಸಲಹೆಗಾರರು ಮತ್ತು ವ್ಯಾಖ್ಯಾನಕಾರರ ಗುಂಪನ್ನು ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಿದೆ. ಏನೇ ಅನುಮಾನಗಳಿದ್ದರೂ ಅದನ್ನು ಪರಿಹರಿಸಿಕೊಳ್ಳಲು ಈ ಶಿಕ್ಷಕರ ಸಹಾಯವನ್ನು ವಿದ್ಯಾರ್ಥಿಗಳು ಪಡೆಯಬಹುದು. ಇದು ವಿದ್ಯಾರ್ಥಿಗಳಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ಪರೀಕ್ಷೆಗಳನ್ನು ಬರೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Study Abroad: ಭಾರತದ ವಿದ್ಯಾರ್ಥಿಗಳಿಗೆ ಈ ದೇಶದಲ್ಲಿ ಶಿಕ್ಷಣ ನೀಡೋದಿಲ್ಲ!

top videos


    ವಿದ್ಯಾರ್ಥಿಯೊಬ್ಬ ಹೇಳಿರುವ ಪ್ರಕಾರ ಯಾರಾದರೂ ಕೇಳಿದಾಗಲೆಲ್ಲಾ ನನ್ನ ತಾಯಿ ಹಿಂಜರಿಯುವುದನ್ನು ನಾನು ನೋಡಿದೆ. ಅದಕ್ಕಾಗಿ ಅವರಿಗೆ ಅವಮಾನ ಆಗಬಾರದು ಎಂಬ ಕಾರಣಕ್ಕಾಗಿ ನಾನು ಮತ್ತೆ ಕಲಿಯಬೇಕು ಎಂಬ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ. ಇದೇ ರೀತಿ ನಾನಾ ಕಾರಣಗಳಿಂದಾಗಿ ಮತ್ತೆ ಶಾಲೆಗೆ ಮರಳಿದ ಎಷ್ಟೊ ವಿದ್ಯಾರ್ಥಿಗಳಿಗೆ ಈ ಕಾಲೇಜು ಸಹಾಯ ಮಾಡಿದೆ.

    First published: