ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯಾರಾದರೂ ದೂರ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿದ್ದರೆ ಖಂಡಿತ ಇದನ್ನು ಓದಲೇ ಬೇಕು. ಈ ವರ್ಷದ ಅಡ್ಮಿಷನ್ (Admission) ಪ್ರಕ್ರಿಯೆ ಆರಂಭವಾಗಲಿದೆ. ಮೈಸೂರು ವಿಶ್ವವಿದ್ಯಾನಿಲಯವು ಯುಜಿ (Ug) ಮತ್ತು ಪಿಜಿ ಕೋರ್ಸ್‌ಗಳಾದ ಎಂಎ , ಬಿಎ, ಬಿಬಿಎ, ಬಿಕಾಂ, ಬಿಎಸ್‌ಸಿ ಮತ್ತು ಎಂಎಸ್‌ಸಿ ಸೇರಿದಂತೆ 40+ ಆನ್‌ಲೈನ್ ಕೋರ್ಸ್ಗಳನ್ನು (Online Course) ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲು ಮುಂದಾಗಿದೆ. ಸಾಮಾನ್ಯವಾಗಿ, ಈ ಕೋರ್ಸ್‌ಗಳಿಗೆ ಪ್ರವೇಶವನ್ನು ವಿಶ್ವವಿದ್ಯಾಲಯವು ಜನವರಿ ಮತ್ತು ಜುಲೈ ಅವಧಿಗಳಲ್ಲಿ ನೀಡಲಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯವು (University) ಕರ್ನಾಟಕದ ಮೈಸೂರಿನಲ್ಲಿರುವ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯವಾಗಿದೆ.
ಇದನ್ನು 27 ಜುಲೈ 1916 ರಂದು ಸ್ಥಾಪಿಸಲಾಯಿತು. ಇದರ 1 ನೇ ಕುಲಪತಿ ಮೈಸೂರಿನ ರಾಜಕುಮಾರಾಗಿದ್ದರು. ಮೊದಲ ಉಪಕುಲಪತಿ HV ನಂಜುಂಡಯ್ಯನವರು.
ಇದು ದೇಶದ ಆರನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ. ಕರ್ನಾಟಕದ ಮೊದಲ ವಿಶ್ವವಿದ್ಯಾಲಯವಾಗಿದೆ. ಇಷ್ಟೊಂದು ಹಿರಿಮೆ ಹೊಂದಿರುವ ಕಾಲೇಜಿನಲ್ಲಿ ನಿಮ್ಮ ಅಡ್ಮಿಷನ್ ಮಾಡಿಸಲು ಕಾಲಾವಕಾಶ ನೀಡಲಾಗಿದೆ.
UOM ಜುಲೈ 2023 ರ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಸಿಕೊಳ್ಳುವ ಪ್ರಕ್ರಿಯೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ದೂರ ಶಿಕ್ಷಣದ ಮೂಲಕ ನೀಡಲಾಗುವ ವಿಶ್ವವಿದ್ಯಾನಿಲಯದ LLM ಪ್ರೋಗ್ರಾಂನಲ್ಲಿ ನೀವು ಆಸಕ್ತಿ ಹೊಂದಿದ್ದರೆ ಅರ್ಜಿ ಸಲ್ಲಿಸಲು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತದೆ.
ಇದನ್ನೂ ಓದಿ: PUC Supplementary Exam ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳೇ ಇದನ್ನೊಮ್ಮೆ ಓದಿ
ಯುಜಿ ಮತ್ತು ಪಿಜಿ ಪದವಿಗಳು ದೂರ ಶಿಕ್ಷಣದ ರೂಪದಲ್ಲಿ ಲಭ್ಯವಿದೆ. ಕಲಿಕೆಯ ಎಲ್ಲಾ ಹಂತಗಳಲ್ಲಿನ ಅರ್ಹತೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯ ದೂರ ಶಿಕ್ಷಣವು ಆನ್‌ಲೈನ್ ಅರ್ಜಿ ಪ್ರಕ್ರಿಯೆಯ ಮೂಲಕ ಆನ್‌ಲೈನ್ ನೋಂದಣಿಯನ್ನು ಮಾಡಿಕೊಳ್ಳುತ್ತದೆ. ಅಭ್ಯರ್ಥಿಗಳು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಪೋರ್ಟಲ್ಗೆ ಭೇಟಿ ನೀಡಬೇಕಾಗುತ್ತದೆ.
ಅಪ್ಲೈ ಮಾಡುವ ಮೊದಲು ನೀವು ತಿಳಿದಿರಬೇಕಾದ ಕೆಲವು ಅಂಶಗಳು
BBM, BBA, B.Com, BCA, ಇಂಟಿಗ್ರೇಟೆಡ್ BCA+MBA, ಇಂಟಿಗ್ರೇಟೆಡ್ BBA+MBA, ಮತ್ತು ಇಂಟಿಗ್ರೇಟೆಡ್ BBA+MBA ಈ ಕೋರ್ಸ್ಗಳು ಆನ್ಲೈನ್ನಲ್ಲಿ ಲಭ್ಯವಿದೆ.
PG ಕೋರ್ಸ್‌ಗಳಿಗೆ ಸಂಬಂಧಿಸಿದಂತೆ M.Com, MBA, MFM, MS, MSc, ಮತ್ತು MCA ಈ ಎಲ್ಲಾ ಕೋರ್ಸ್ಗಳು ಸಹ ಲಭ್ಯವಿದೆ.
ನೀವು 12ನೇ ತರಗತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿದ್ದರೆ ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು.
ದ್ವಿತೀಯ ಪಿಯುಸಿಯಲ್ಲಿ ಪಾಸ್ ಆದರೆ ಸಾಲದು ಅದರಲ್ಲಿ 50 ಪ್ರತಿಶತ ಅಂಕಗಳನ್ನು ಪಡೆದಿರಲೇ ಬೇಕು. ಈ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಅಪ್ಲೈ ಮಾಡಬಹುದು.
PG ಕೋರ್ಸ್‌ಗಳ ಇತರ ಪ್ರವೇಶಗಳು ಮೆರಿಟ್ ಆಧಾರಿತ ಮತ್ತು MBA ಪ್ರವೇಶ ಆಧಾರಿತವಾಗಿದೆ. ಆಯ್ದ ಕ್ಷೇತ್ರದಲ್ಲಿ ನೀವು ಪದವಿ ಪೂರ್ಣಗೊಳಿಸಿರಲೇ ಬೇಕು
ಪ್ರತಿಯೊಂದು ಕೋರ್ಸ್ಗಳಿಗೂ ಅದರದೇ ಆದ ನಿಗದಿಪಡಿಸಿದ ಕೆಲವು ಶುಲ್ಕಗಳನ್ನು ಇಡಲಾಗಿದೆ. ನೀವು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತೀರೋ ಅದಕ್ಕೆ ಸಂಬಂಧಿಸಿದ ನಿಗದಿಪಡಿಸಿದ ಶುಲ್ಕವನ್ನು ನೀವು ತುಂಬ ಬೇಕಾಗುತ್ತದೆ. ಪದವಿಯಾಗಿರಲಿ ಅಥವಾ ಉನ್ನತ ಶಿಕ್ಷಣ, ಸ್ನಾತಕೋತ್ತರ ಪದವಿಯಾಗಿರಲಿ ನೀವು ಅಧಿಕೃತವಾಗಿ ಮೈಸೂರು ವಿಶ್ವವಿದ್ಯಾಲಯದಿಂದಲೇ ಕಲಿಯಲು ಸಾಧ್ಯ. ಅಪ್ಲೈ ಮಾಡಲು ಈ ಇಲ್ಲಿ ಕ್ಲಿಕ್ ಮಾಡಿ ಮೇ 5ರೊಳಗೆ ಅಪ್ಲೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ