ಪಿಯುಸಿ (PUC) ವಿದ್ಯಾರ್ಥಿಗಳಿಗೆ ಈಗಾಗಲೇ ವೇಳಾಪಟ್ಟಿ ಬಿಡುಗಡೆಯಾಗಿದ್ದು ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಈ ವರ್ಷ ಪ್ರಶ್ನೆ ಪತ್ರಿಕೆ (Question Paper) ಯಾವ ಮಾದರಿಯಲ್ಲಿ ಬರಲಿದೆ ಎಂದು ತಿಳಿಸುಕೊಂಡು ನಂತರ ಅಭ್ಯಾಸ ಮಾಡಿದರೆ ಅವರಿಗೆ ಇನ್ನೂ ಹೆಚ್ಚಿನ ಅಂಕ (Score) ಗಳಿಸಲು ಸಹಕಾರಿಯಾಗುತ್ತದೆ. ಆ ಕಾರಣ ಇಲ್ಲಿ ಪ್ರಶ್ನೆ ಪತ್ರಿಕೆ ಯಾವ ಮಾದರಿಯಲ್ಲಿರಲಿದೆ ಎಂದು ತಿಳಿಸಲಾಗಿತ್ತಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ. ಪ್ರತಿ ವರ್ಷವೂ ಲಿಖಿತ ರೂಪದಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವ ಮೂಲಕ ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ಬಾರಿ ದೀರ್ಘ ಉತ್ತರಗಳೊಟ್ಟಿಗೆ ಬಹು ಆಯ್ಕೆಯ (Multiple Choice Questions) ಪ್ರಶ್ನೆಗಳನ್ನೂ ಸಹ ಇಡುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು 15-20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು (MCQ) ಪರಿಚಯಿಸುವುದರೊಂದಿಗೆ ಪೂರ್ವ-ವಿಶ್ವವಿದ್ಯಾಲಯ (PU) ಪರೀಕ್ಷಾ ವ್ಯವಸ್ಥೆಯಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸುತ್ತಿದೆ.
ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆ
ಈ ಮೂಲಕ ಉತ್ತೀರ್ಣರಾಗುವ ಶೇಕಡಾವಾರು ಪ್ರಮಾಣವನ್ನು ಸುಧಾರಿಸಲು ಯೋಜಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಿಯು ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆಯಲ್ಲಿ MCQ ಪರಿಚಯಿಸುವ ಕುರಿತು ಚರ್ಚಿಸಲಾಯಿತು. CBSE ಯೊಂದಿಗೆ ಸ್ಪರ್ಧಿಸಲು ಮತ್ತು ಉನ್ನತ ಶಿಕ್ಷಕ್ಷಣಕ್ಕೆ ಸಹಾಯವಾಗಲೆಂದು ಈ ರೀತಿ ಮಾಡುವ ಆಲೋಚನೆ ಇದೆ. CBSE ಯೊಂದಿಗೆ ಸ್ಪರ್ಧಿಸಲು ಮತ್ತು ಉನ್ನತ ಶಿಕ್ಷಣದಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಸರ್ಕಾರವು ಪಿಯು ಪಾಸ್ ಶೇಕಡಾವನ್ನು ಸುಧಾರಿಸಲು ಈ ರೀತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ, ಪಿಯುಸಿ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ
MCQ ಪ್ರಶ್ನೆ ಪತ್ರಿಕೆ
ಸರ್ಕಾರವು ಪ್ರಥಮ ಮತ್ತು ದ್ವಿತೀಯ ಪಿಯುನಲ್ಲಿ MCQ ಗಳನ್ನು ಪರಿಗಣಿಸುತ್ತಿದೆ. ಇದು ವಿದ್ಯಾರ್ಥಿಗಳು ಅಂಕ ಗಳಿಸಲು ಮತ್ತು ಯಶಸ್ಸು ಸಾಧಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಸಭೆಯಲ್ಲಿ ಹಾಜರಿದ್ದ ಕೆಲವು ಹಿರಿಯ ಅಧಿಕಾರಿಗಳು MCQ ಗಳನ್ನು ಪ್ರತಿಪಾದಿಸಿದರು. "ಎಂಸಿಕ್ಯೂಗಳನ್ನು ಪರಿಚಯಿಸುವುದು ಫಲಿತಾಂಶಗಳನ್ನು ಸುಧಾರಿಸುವ ಏಕೈಕ ಮಾರ್ಗವಾಗಿದೆ ಎಂದು ಕೆಲವು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ" ಎಂದು ತಿಳಿದು ಬಂದಿದೆ.
ದ್ವಿತೀಯ ಪಿಯು ಫಲಿತಾಂಶ
ಸಭೆಯಲ್ಲಿ, ದ್ವಿತೀಯ ಪಿಯು ಫಲಿತಾಂಶಗಳನ್ನು ಕೇಂದ್ರೀಯ ಮಂಡಳಿಗಳ ಫಲಿತಾಂಶಗಳೊಂದಿಗೆ ಹೋಲಿಸಲಾಯಿತು. ಅಧಿಕಾರಿಗಳು ತೇರ್ಗಡೆಯ ಶೇಕಡಾವಾರು ಮತ್ತು ಸ್ಕೋರ್ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತಿದೆ ಮತ್ತು ನಮ್ಮ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ಗಳಲ್ಲಿ ಸೀಟುಗಳಿಗಾಗಿ CBSE ಯೊಂದಿಗೆ ಸ್ಪರ್ಧಿಸಲು ಪರದಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ವಿವರಣಾತ್ಮಕ ಉತ್ತರ
ಈ ವರ್ಷದ ಆರಂಭದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 61.88ರಷ್ಟು ಉತ್ತೀರ್ಣರಾಗಿದ್ದರು. ಪ್ರಸ್ತುತ, ಪಿಯುಸಿ ಪ್ರಶ್ನೆ ಪತ್ರಿಕೆ ಮಾದರಿಯು ವಿವರಣಾತ್ಮಕ ಉತ್ತರಗಳನ್ನು ಮಾತ್ರ ಒಳಗೊಂಡಿದೆ. ಒಂದು ಅಂಕವನ್ನು ಹೊಂದಿರುವ ಪ್ರಶ್ನೆಗಳಿಗೂ ವಿವರಣಾತ್ಮಕ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ನಾಗೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು 2023 ರ ಪಿಯು ಪರೀಕ್ಷೆಗಳಿಗೆ ಎಂಸಿಕ್ಯೂಗಳನ್ನು ಪರಿಚಯಿಸಲು ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಅಂತಿಮಗೊಳಿಸಲು ಮತ್ತೊಂದು ಸುತ್ತಿನ ಸಭೆ ಕರೆಯಲು ನಿರ್ಧರಿಸಿದ್ದಾರೆ.
2022 ರ ಬೋರ್ಡ್ ಪರೀಕ್ಷೆ
2022 ರ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಪಿಯು ವಿಭಾಗವು ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಿತು ಮತ್ತು ಹೆಚ್ಚಿನ ಆಯ್ಕೆಗಳೊಂದಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿತ್ತು. ಇದು ಒಟ್ಟಾರೆ ಫಲಿತಾಂಶಗಳ ಹೆಚ್ಚಳಕ್ಕೆ ಕೊಡುಗೆ ನೀಡಿದೆ. ಯಾವುದೇ ಆಫ್ಲೈನ್ ತರಗತಿಗಳಿಲ್ಲದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಗಣಿಸಿ ಇದನ್ನು ಮಾಡಲಾಗಿದೆ. ಈ ವರ್ಷ ಇಲಾಖೆಯು ಈಗಾಗಲೇ ಸಾಂಕ್ರಾಮಿಕ ಪೂರ್ವ ಪ್ರಶ್ನೆ ಪತ್ರಿಕೆ ಮಾದರಿಗೆ ಬದಲಾಯಿಸುವುದಾಗಿ ಘೋಷಿಸಿದೆ. ಮಾರ್ಚ್ 9 ಮತ್ತು 29 ರ ನಡುವೆ ಪರೀಕ್ಷೆಗಳು ನಡೆಯಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ