• ಹೋಂ
  • »
  • ನ್ಯೂಸ್
  • »
  • Jobs
  • »
  • Higher Studies: 6 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹಾರಿದ್ದಾರೆ 30 ಲಕ್ಷಕ್ಕೂ ಹೆಚ್ಚು ಭಾರತೀಯರು

Higher Studies: 6 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹಾರಿದ್ದಾರೆ 30 ಲಕ್ಷಕ್ಕೂ ಹೆಚ್ಚು ಭಾರತೀಯರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಂಕಿಅಂಶಗಳ ಆಧಾರದ ಮೇಲೆ ನೋಡುವುದಾದರೆ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳುತ್ತಿದ್ದಾರೆ.

  • Trending Desk
  • 4-MIN READ
  • Last Updated :
  • Karnataka, India
  • Share this:

    ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಈ ವರ್ಷ ಎಲ್ಲಾ ದಾಖಲೆಗಳನ್ನು ಬದಿಗೊತ್ತಿ ಅತಿ ಹೆಚ್ಚಿನ ಬಜೆಟ್‌ ಅನ್ನು ಶಿಕ್ಷಣ ಕ್ಷೇತ್ರದ (Education Sector) ಕ್ರಾಂತಿಗೆ ಮೀಸಲಿಟ್ಟಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ (Student) ಅಧ್ಯಯನಕ್ಕೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ಇಟ್ಟುಕೊಂಡಿದೆ. ಆದಾಗ್ಯೂ ವಿದೇಶಕ್ಕೂ ಹೋಗಿ ವ್ಯಾಸಾಂಗ ಮಾಡುತ್ತಿರುವವರ ಸಂಖ್ಯೆ ಹೇರಳವಾಗಿದೆ. ಶಿಕ್ಷಣ ಕ್ಷೇತ್ರ ವಿಸ್ತರಿಸುತ್ತಿದ್ದು, ದೇಶದಲ್ಲಿ ಮಾತ್ರವಲ್ಲದೇ ವಿದೇಶಕ್ಕೂ ಹೋಗಿ ವ್ಯಾಸಾಂಗ ಮಾಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.


    ಅದರಲ್ಲೂ ಭಾರತದ ವಿದ್ಯಾರ್ಥಿಗಳು ಹೆಚ್ಚಾಗಿ ವಿದೇಶದಲ್ಲಿ ಅಭ್ಯಾಸ ಮಾಡುವ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾಗಿ ಹೊಸ ಅಂಕಿಅಂಶಗಳು ತೋರಿಸಿವೆ.


    6 ವರ್ಷಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶಕ್ಕೆ


    ಅಂಕಿಅಂಶಗಳ ಆಧಾರದ ಮೇಲೆ ನೋಡುವುದಾದರೆ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳುತ್ತಿದ್ದಾರೆ.


    ಕಳೆದ ಆರು ವರ್ಷಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ದಾಖಲೆಗಳು ಹೇಳಿವೆ.


    ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ


    ಸಂಸತ್ತಿನಲ್ಲಿ ಶಿಕ್ಷಣ ಸಚಿವಾಲಯ ಸಲ್ಲಿಸಿದ ಮಾಹಿತಿಯ ಪ್ರಕಾರ, 2022 ರಲ್ಲಿ 750,365 ವಿದ್ಯಾರ್ಥಿಗಳು, 2021 ರಲ್ಲಿ 444,553 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ.


    2021ಕ್ಕೆ ಹೋಲಿಸಿದರೆ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 68% ಹೆಚ್ಚಾಗಿದೆ ಎಂದು ಕಿರಿಯ ಶಿಕ್ಷಣ ಸಚಿವ ಸುಭಾಷ್ ಸರ್ಕಾರ್ ಹೇಳಿದ್ದಾರೆ.


    ವರದಿಯ ಪ್ರಕಾರ, 2017 ರಲ್ಲಿ 454,009 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದರೆ, 2018 ರಲ್ಲಿ ಈ ಸಂಖ್ಯೆ 517,998ಕ್ಕೆ ಏರಿತ್ತು, ಹಾಗೆಯೇ 2019 ರಲ್ಲಿ 586,337 ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ಅಬ್ರಾಡ್‌ಗೆ ಹೋಗಿದ್ದಾರೆ. ಆದರೆ ಕೋವಿಡ್‌ ಆರಂಭವಾದ 2020ರಲ್ಲಿ ಈ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕೇವಲ 259,650 ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿದ್ದರು.




    ಒಟ್ಟಾರೆಯಾಗಿ, 2017 ರಿಂದ ಹಿಡಿದು 2022ರ ನಡುವೆ 30 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ಶಿಕ್ಷಣ ಸಚಿವಾಲಯ ಲೋಕಸಭೆಗೆ ತಿಳಿಸಿದೆ.


    "ದೇಶದಲ್ಲಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಯಾವುದೇ ಪ್ರಸ್ತಾಪವಿಲ್ಲ"


    ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳು ಖರ್ಚು ಮಾಡುತ್ತಿರುವ ಹಣವು ದೇಶದ ಶಿಕ್ಷಣ ಬಜೆಟ್‌ಗಿಂತ ಹೆಚ್ಚಾಗಿರುತ್ತದೆ ಮತ್ತು ಈ ಹಣವನ್ನು ಉಳಿಸಲು “ಅಂತರರಾಷ್ಟ್ರೀಯ ಉನ್ನತ ಗುಣಮಟ್ಟದ ವಿಶ್ವವಿದ್ಯಾಲಯ” ಸ್ಥಾಪಿಸುವ ಯಾವುದೇ ಪ್ರಸ್ತಾವನೆಯನ್ನು ಸರ್ಕಾರ ಹೊಂದಿದೆಯೇ ಎಂದು ಸಚಿವರನ್ನು ಕೇಳಲಾಯಿತು.


    ಇದಕ್ಕೆ ಉತ್ತರಿಸಿದ ಕಿರಿಯ ಶಿಕ್ಷಣ ಸಚಿವ ಸುಭಾಷ್ ಸರ್ಕಾರ್ "ದೇಶದಲ್ಲಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಯಾವುದೇ ಪ್ರಸ್ತಾಪವಿಲ್ಲ" ಎಂದು ಹೇಳಿದರು.


    ಆದಾಗ್ಯೂ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ನಿಯಮಾವಳಿಗಳನ್ನು ಸಕ್ರಿಯಗೊಳಿಸಿದೆ ಎಂದು ತಿಳಿಸಿದರು.


    ಈ ಬಗ್ಗೆ ಹೆಚ್ಚಿನ ವಿವರ ನೀಡಿದ ಸರ್ಕಾರ್‌ "ವಿಶ್ವವಿದ್ಯಾಲಯ ಅನುದಾನ ಆಯೋಗದ (ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆ) ನಿಯಮಗಳು, 2023 ಅನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಜನವರಿ 18, 2023 ರೊಳಗೆ ಎಲ್ಲಾ ಪಾಲುದಾರರಿಂದ ಪ್ರತಿಕ್ರಿಯೆ, ಸಲಹೆಗಳು, ಕಾಮೆಂಟ್‌ಗಳು ಇತ್ಯಾದಿಗಳನ್ನು ಕೋರಲಾಗಿದೆ.




    ಆದಾಗ್ಯೂ, ಮಧ್ಯಸ್ಥಗಾರರಿಂದ ಸ್ವೀಕರಿಸಿದ ವಿನಂತಿಗಳನ್ನು ಪರಿಗಣಿಸಿ, ಕರಡು ನಿಯಮಾವಳಿಗಳ ಕುರಿತು ಪ್ರತಿಕ್ರಿಯೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು ಫೆಬ್ರವರಿ 20 ರವರೆಗೆ ವಿಸ್ತರಿಸಲಾಗಿದೆ, ”ಎಂದು ಹೇಳಿದರು.


    ಆತಂಕ ವ್ಯಕ್ತಪಡಿಸಿದ ಅರವಿಂದ್ ಕೇಜ್ರಿವಾಲ್


    ಸಂಸತ್ತಿನಲ್ಲಿ ಶಿಕ್ಷಣ ಸಚಿವಾಲಯ ಸಲ್ಲಿಸಿದ ಮಾಹಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ "ನಮ್ಮ ಯುವಕರು ವಿದೇಶಕ್ಕೆ ಹೋಗಬೇಕು ಎನ್ನುವುದಕ್ಕಿಂತ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಭಾರತ ಅಭಿವೃದ್ಧಿಪಡಿಸಬೇಕು" ಎಂದು ಅಭಿಪ್ರಾಯಪಟ್ಟರು.

    Published by:ಪಾವನ ಎಚ್ ಎಸ್
    First published: