ಇಂದು ಶಿಕ್ಷಣ(Education) ಮತ್ತು ಕೌಶಲ್ಯ (Skill) ಕುರಿತು ಬಜೆಟ್ ನಂತರದ ವೆಬ್‌ನಾರ್ ಅನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಯುಜಿಸಿಯು (UGC) ಫೆಬ್ರವರಿ 25 ರಂದು ಶಿಕ್ಷಣ ಮತ್ತು ಕೌಶಲ್ಯ ವಲಯಕ್ಕೆ ಬಜೆಟ್ ನಂತರದ ವೆಬ್‌ನಾರ್ ಹಮ್ಮಿಕೊಂಡಿದೆ. ಈ ಕುರಿತು ವಿವರಗಳೊಂದಿಗೆ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEIs) ಅಧಿಸೂಚನೆಯನ್ನು ಹೊರಡಿಸಿದೆ. ಈ ವೆಬ್‌ನಾರ್‌ನ ಸಂಪೂರ್ಣ ಅಧಿವೇಶನ ಇಂದು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ವಲಯದ ವೃತ್ತಿಪರರೊಂದಿಗೆ ಮತ್ತು ಶೈಕ್ಷಣಿಕವಾಗಿ ಅವರೊಂದಿಗೆ ಸಂಪರ್ಕ ಸಾಧಿಸಲು ಹಲವಾರು ಪ್ರಮುಖ ವಲಯಗಳಲ್ಲಿ ಬಜೆಟ್ ನಂತರದ ವೆಬ್‌ನಾರ್‌ಗಳನ್ನು ಆಯೋಜಿಸಲಾಗುತ್ತಿದೆ ಎಂದು ಯುಜಿಸಿ ಹೇಳಿದೆ. ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಅಧಿವೇಶನ, ಬ್ರೇಕ್‌ಔಟ್ ಸೆಷನ್‌ಗಳು ಮತ್ತು ಮುಕ್ತಾಯದ ಅಧಿವೇಶನದಲ್ಲಿ ಹಾಜರಾಗಲು ಎಲ್ಲರಿಗೂ ವ್ಯವಸ್ಥೆ ಮಾಡಲು HEI ಗಳನ್ನು ಕೇಳಲಾಗಿದೆ. ಫೆಬ್ರವರಿ 25 ರಂದು ನಿಗದಿಪಡಿಸಲಾದ ವೆಬ್‌ನಾರ್‌ನ ಕಾರ್ಯಕ್ರಮದ ವಿವರಗಳನ್ನು ಜೊತೆಗೆ ಸೆಷನ್‌ಗಳ ಲಿಂಕ್‌ಗಳನ್ನು ಸಹ ಯುಜಿಸಿ ಹಂಚಿಕೊಂಡಿದೆ.
ಯುಜಿಸಿ ಹಂಚಿಕೊಂಡ ಸೆಷನ್ ಲಿಂಕ್ಬಳಸಿ ನೀವು ಕೂಡಾ ಈ ಭಾಷಣ ಕೇಳಬಹುದು. ಆದ್ದರಿಂದ ನೀವು ಇಂದೇ ಮೋದಿಯವರ ಮಾತುಗಳನ್ನು ಆಲಿಸಲಬಹುದು. ಕೌಶಲ್ಯ ಹಾಗೂ ಶಿಕ್ಷಣದ ಕುರಿತು ಇಂದವರು ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ಒಂದು ಗಂಟೆಗೆ ಈ ಭಾಷಣ ಮುಕ್ತಾಯವಾಗಲಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Physical Education: ಶಾಲೆಯಲ್ಲಿ ದೈಹಿಕ ಶಿಕ್ಷಣ ಏಕೆ ಮುಖ್ಯ? ಇಲ್ಲಿದೆ ಮಾಹಿತಿ
ಉನ್ನತ ಶಿಕ್ಷಣ ಕಾರ್ಯದರ್ಶಿಯವರು ಸರ್ವಸದಸ್ಯರ ಅಧಿವೇಶನಕ್ಕೆ ಚಾಲನೆ ನೀಡಿ ಸ್ವಾಗತಿಸಿದ್ಧಾರೆ. ಇದಾದ ನಂತರ ಪ್ರಧಾನಿ ಭಾಷಣ ನಡೆಯಲಿದೆ. ಭಾಗವಹಿಸುವ ಎಲ್ಲಾ ಸಚಿವಾಲಯಗಳ ಕಾರ್ಯದರ್ಶಿಗಳು, ಪ್ಯಾನೆಲಿಸ್ಟ್‌ಗಳು ಮತ್ತು ತಜ್ಞರನ್ನು ಈ ಅಧಿವೇಶನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಎರಡನೇ ಅಧಿವೇಶನವು ಆರು ಸಮಾನಾಂತರ ಬ್ರೇಕ್‌ಔಟ್ ಸೆಷನ್‌ಗಳೊಂದಿಗೆ ಪ್ರಾರಂಭವಾಗುತ್ತದೆ.
ಇದನ್ನು 11:30 AM-1:30 PM ನಡುವೆ ನಡೆಸಲಾಗುತ್ತದೆ. ಇದರ ನಂತರ 3:30 PM - 4:50 PM ರ ನಡುವೆ ಈ ಕುರಿತು ಮಾಹಿತಿ ನೀಡಲಾಗಿದೆ. ಇದಾದ ನಂತರ ವಿಷಯ ವಿಮರ್ಷೆ ಕಾರ್ಯಕ್ರಮ ನಡೆಯಲಿದೆ. ಚರ್ಚೆಯ ಸಾರಾಂಶದ ಪ್ರಸ್ತುತಿಯನ್ನು ನೀಡಲಾಗುತ್ತದೆ. ಫೆಬ್ರವರಿ 28 ರೊಳಗೆ ಪ್ರತಿ ಗುಂಪು ವಿವರವಾದ ವರದಿಯನ್ನು ಸಿದ್ಧಪಡಿಸುತ್ತದೆ ಮತ್ತು ಶಿಕ್ಷಣ ಸಚಿವಾಲಯವು ಈ ವರದಿಯನ್ನು ಸಂಗ್ರಹಿಸುತ್ತದೆ.
“ಸಪ್ತಋಷಿ” ಆದ್ಯತೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
2023–24ರ ಕೇಂದ್ರ ಬಜೆಟ್‌ನಲ್ಲಿ ವ್ಯಾಖ್ಯಾನಿಸಲಾದ “ಸಪ್ತಋಷಿ” ಆದ್ಯತೆಗಳನ್ನು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಈ ವೆಬ್‌ನಾರ್‌ಗಳನ್ನು ಆಯೋಜಿಸುವ ಮೂಲಕ ವಿಸ್ತರಿಸುತ್ತಿವೆ. 2023-24ರ ಕೇಂದ್ರ ಬಜೆಟ್‌ನಲ್ಲಿ ಮಾಡಿದ ವಿವಿಧ ಹಂಚಿಕೆಗಳ ಕುರಿತು ಪ್ರಧಾನಿ ಮೋದಿ 12 ವೆಬ್‌ನಾರ್‌ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 23 ಮತ್ತು ಮಾರ್ಚ್ 11 ರ ಇದು ನಡುವೆ ನಡೆಯಲಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಹಾಗೂ ಇನ್ನು ಹೆಚ್ಚಿನ ವಿಷಯಗಳನ್ನು ಚರ್ಚೆ ಮಾಡಲಾಗುತ್ತದೆ.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೆ
ಆದರೆ ಇಂದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ. ಬಜೆಟ್ನ ನಂತರ ಶಿಕ್ಷಣ ಕ್ಷೇತ್ರ ಹಾಗೂ ಕೌಶಲ್ಯದ ಕುರಿತು ಇದೇ ಮೊದಲ ಬಾರಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. “ಸಪ್ತಋಷಿ” ಆದ್ಯತೆಗಳ ಬಗ್ಗೆ ಇದೇ ಮೊದಲಬಾರಿ ಮಾಹಿತಿ ಹಂಚಿಕೋಳ್ಳುತ್ತಾರೆ ಈ ಕುರಿತು ಹಲವಾರು ಜನರು ಆಸಕ್ತಿಯಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ