• ಹೋಂ
  • »
  • ನ್ಯೂಸ್
  • »
  • Jobs
  • »
  • Pariksha Pe Charcha 2023: ಎಕ್ಸಾಂನಲ್ಲಿ ನಡೆಯೋ ಚೀಟಿಂಗ್ ಬಗ್ಗೆ ಪ್ರಧಾನಿ ಮೋದಿ ಖಡಕ್ ಮಾತು

Pariksha Pe Charcha 2023: ಎಕ್ಸಾಂನಲ್ಲಿ ನಡೆಯೋ ಚೀಟಿಂಗ್ ಬಗ್ಗೆ ಪ್ರಧಾನಿ ಮೋದಿ ಖಡಕ್ ಮಾತು

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ

ಎಷ್ಟೋ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆ ಬರೀತಾರೆ. ಆದರೆ ಎಷ್ಟೋ ವಿದ್ಯಾರ್ಥಿಗಳು ನಕಲು ಮಾಡಿ ಪಾಸ್​ ಆಗ್ತಿದ್ರು ಆದರೆ ಈಗ ಕಾಪಿ ಮಾಡಿದ್ದೇವೆ ಎಂದು ಗರ್ವದಿಂದ ಹೇಳಿಕೊಳ್ತಾರೆ. ಸೂಪರ್​ವೈಸರ್ಗೆ ಮೋಸ ಮಾಡಿದೀವಿ ಅಂತ ರಾಜಾರೋಷವಾಗಿ ಹೇಳಿಕೊಳ್ತಾರೆ. ಹಾಗೇ ಮಾಡೋದು ತುಂಬಾ ತಪ್ಪು ಎಂದು ಹೇಳಿದ್ಧಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

ನವದೆಹಲಿಯ (Dehali) ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಇಂದು ವಿದ್ಯಾರ್ಥಿಗಳು ಹಾಗೂ ಮೋದಿಯವರೊಂದಿಗಿನ ಸಂವಾದ ಕಾರ್ಯಕ್ರಮ, ಪರೀಕ್ಷಾ ಪೆ ಚರ್ಚಾ (Pariksha Pe Charcha 2023) ಹನ್ನೊಂದು ಗಂಟೆಯಿಂದ ಆರಂಭವಾಗಿದೆ. ಹಲವಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ಮುಖ್ಯವಾಗಿ ಪರೀಕ್ಷೆಯ ಸಂದರ್ಭದಲ್ಲಿ ಆಗುತ್ತಿರುವ ವಂಚನೆ (Cheating) ಬಗ್ಗೆ ಮಾತನಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವ ರೀತಿ ಮಾನಸಿಕ ತೊಂದರೆ ಉಂಟಾಗುತ್ತದೆ ಮತ್ತು ಯಾವ ರೀತಿ ಇದು ವಿದ್ಯಾರ್ಥಿಗಳ (Students) ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ಧಾರೆ. 


ಎಷ್ಟೋ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆ ಬರೀತಾರೆ. ಆದರೆ ಎಷ್ಟೋ ವಿದ್ಯಾರ್ಥಿಗಳು ನಕಲು ಮಾಡಿ ಪಾಸ್​ ಆಗ್ತಿದ್ರು ಆದರೆ ಈಗ ಕಾಪಿ ಮಾಡಿದ್ದೇವೆ ಎಂದು ಗರ್ವದಿಂದ ಹೇಳಿಕೊಳ್ತಾರೆ. ಸೂಪರ್​ವೈಸರ್ಗೆ ಮೋಸ ಮಾಡಿದೀವಿ ಅಂತ ರಾಜಾರೋಷವಾಗಿ ಹೇಳಿಕೊಳ್ತಾರೆ. ಹಾಗೇ ಮಾಡೋದು ತುಂಬಾ ತಪ್ಪು ಎಂದು ಹೇಳಿದ್ಧಾರೆ.


ಆದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ನಕಲಿ ಮಾಡೋದು ತುಂಬಾ ನಡೆಯುತ್ತಿದೆ. ಟ್ಯೂಷನ್ ಕ್ಲಾಸ್​ಗೆ  ಹೋಗ್ತಾರೆ ಆಗ ನನ್ನ ಮಕ್ಕಳು ಪಾಸ್ ಆಗಲಿ ಹೆಚ್ಚಿನ ಅಂಕ ಪಡೆಯಲಿ ಎಂಬ ಆಸೆ ಪಾಲಕರಿಗೆ ಹಾಗೂ ಟೀಚರ್​ಗಳಿಗೆ ಇರುತ್ತದೆ. ಇನ್ನು ಕೆಲವರು ನಕಲಿ ಮಾಡೋದು ಹೇಗೆ ಎಂಬುದನ್ನು ಹುಡುಕೋದ್ರಲ್ಲಿ ಎಷ್ಟೋ ಸಮಯವನ್ನು ವ್ಯರ್ಥ ಮಾಡ್ತಾರೆ. ನಕಲಿ ಮಾಡಲು ಬಳಸಿದಷ್ಟು ಕ್ರಿಯೇಟಿವಿಟಿಯನ್ನು ಓದುವುದರಲ್ಲಿ ಬಳಸಿದರೆ ಹೆಚ್ಚಿನ ಅಂಕ ಪಡೆಯಲು ಸಹಾಯವಾಗುತ್ತಿತ್ತು ಎಂದು ಹೇಳಿದ್ದಾರೆ.


ಇದನ್ನೂ ಓದಿ: Union Budget 2023: ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ಸಿಗಲಿದೆ ಬಂಪರ್​ ಕೊಡುಗೆ!


ವಿದ್ಯಾರ್ಥಿಗಳು ತಮ್ಮ ಸ್ವ ಆಲೋಚನೆಯಿಂದ ಇದರ ಬಗ್ಗೆ ತಿಳಿದುಕೊಳ್ಳಲಾಗದಿದ್ದರೂ ಸಹ ಯಾರಾದರೂ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು.  ಯಾರಾದರೂ ಅವರಿಗೆ ಸಲಹೆ ನೀಡಬೇಕು. ಇದರ ಅವಶ್ಯಕತೆ ಬಹಳ ಇದೆ ಒಂದು ಪರೀಕ್ಷೆಯಲ್ಲಿ ನೀವು ಪಾಸ್ ಆಗ್ದೆ ಇದ್ರೆ ಜೀವನ ಕೊನೆಯಾಗಲ್ಲ. ಹಾಗೆಯೇ ನಕಲಿ ಮಾಡಿ ಪಾಸ್​ ಆದ್ರೆ ಮುಂದೆ ನಿಮ್ಮ ಜೀವನದಲ್ಲಿ ಹಲವಾರು ಪ್ರಶ್ನೆಗಳನ್ನು ಎದುರಿಸುವ ಸಂದರ್ಭ ಬಂದೇ ಬರುತ್ತದೆ ಆದರೆ ಮುಂದೆ ಯಾವುದಾದರೂ ಒಂದು ದಿನ ಜೀವನದಲ್ಲಿ ಸಿಲುಕಿಕೊಳ್ತೀರಿ ಎಂದು ಹೇಳಿದ್ದಾರೆ.




ಯಾರು ನಕಲಿ ಮಾಡದೇ ಪಾಸ್​ ಆಗ್ತೀರೋ ಅವರು ಹೆಚ್ಚಿನ ಅಂಕ ಪಡೆಯುತ್ತಾರೆ. ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗದೇ ಇದ್ದರೂ ಕೂಡಾ ನೀವು ಜೀವನದಲ್ಲಿ ತುಂಬಾ ಗಳಿಸುತ್ತೀರಿ. ನಕಲು ಮಾಡಿ ಪಾಸ್​ ಆದ್ರೆ ಏನೂ ಪ್ರಯೋಜನ ಇಲ್ಲ. ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.




ಪರೀಕ್ಷಾ ಪೆ ಚರ್ಚಾ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ


ಇಂದು (ಜನವರಿ 27) ವಾರ್ಷಿಕ 'ಪರೀಕ್ಷಾ ಪೇ ಚರ್ಚಾ'ದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಹಲವಾರು ರಾಜ್ಯಗಳಿಂದ ಜಿಲ್ಲೆಗಳ ಮೂಲೆ ಮೂಲೆಯಿಂದ ಅಪಾರ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸೇರಿದ್ದಾರೆ.20 ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳು ವಿದ್ಯಾರ್ಥಿ, ಶಿಕ್ಷಕರು ಮತ್ತು ಪಾಲಕರಿಂದ ಮೋದಿಯವರಿಗೆ ಬಂದಿದೆ. 15 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.  ಈ ವರ್ಷ, ಒಟ್ಟು 38 ಲಕ್ಷ ವಿದ್ಯಾರ್ಥಿಗಳು PPC 2023 ಗಾಗಿ ನೋಂದಾಯಿಸಿಕೊಂಡಿದ್ದಾರೆ.  ಮುಂಬರುವ ಬೋರ್ಡ್ ಪರೀಕ್ಷೆಗಳು 2023ರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ 11 ಗಂಟೆಗೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ಆರಂಭಿಸಿದ್ದಾರೆ.

First published: