ಶಾಲೆಗಳಲ್ಲಿ ಮಕ್ಕಳಿಗೆ ಸಹಾಯವಾಗಲಿ ಮಕ್ಕಳು ಹಸಿವಿನಿಂದ ಬಳಲದಿರಲಿ ಎಂದು ಬಿಸಿ ಊಟ (Bisi Uta) ಯೋಜನೆ ಸ್ಥಾಪಿಸಿರುವ ಸಂಗತಿ ತಿಳಿದೇ ಇದೆ ಆದರೆ ಈಗ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯವನ್ನು ಬದಲಾವಣೆ ಮಾಡಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಶಾಲೆಗಳಿಗೆ (Schools) ಸೂಚನೆಯೊಂದನ್ನ ನೀಡಿದೆ. ಈ ಸೂಚನೆಯ ಪ್ರಕಾರ ಮಕ್ಕಳಿಗೆ ಮಧ್ಯಾಹ್ನದ ಬಿಸ ಊಟದ ಸಮಯ (Time) ಎಂದಿಗಿಂತ ಒಂದು ಗಂಟೆಗಳ ಕಾಲದ ನಂತರ ಊಟ ಬಡಿಸಲಾಗುವುದು ಎಂದು ತಿಳಿಸು ಬಂದಿದೆ. ಹೀಗೆ ಮಾಡಲು ಕಾರಣ (reason) ಏನೆಂದು ತಿಳಿಯಲು ಮುಂದೆ ಓದಿ.
ಮಕ್ಕಳ ಸಂಖ್ಯೆ ಅಧಿಕವಿರುವ ಶಾಲೆಗಳಲ್ಲಿ ಮತ್ತು ಒಂದೇ ಅಡುಗೆ ಮನೆ ಇರುವ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್) ಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯವನ್ನು ಬದಲಿಸುವಂತೆ ಸೂಚಿಸಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಈಗಾಗಲೇ ಸೂಚನೆ ಹೊರಡಿಸಿದೆ.
ಬದಲಾದ ಬಿಸಿ ಊಟದ ಸಮಯ
ಹಿರಿಯರ ವಿಭಾಗದ ವಿದ್ಯಾರ್ಥಿಗಳು ಹಾಗು ಕಿರಿಯ ವಿದ್ಯಾರ್ಥಿಗಳು ಒಂದೇ ಬಾರಿ ಊಟಕ್ಕೆ ಬರುವುದು. ನೂಕುನುಗ್ಗಲಾಗುವುದು ಮತ್ತು ಗಲಾಟೆ ಆಗುತ್ತಿರುವ ಕಾರಣ ಅಷ್ಟೇ ಅಲ್ಲ ಶಾಲಾ ಮಕ್ಕಳು ತಮ್ಮ ತಟ್ಟೆಗಳನ್ನು ತೊಳೆಯುವ ಸಂದರ್ಭದಲ್ಲೂ ನೂಕು ನುಗ್ಗಲಾಗುತ್ತಿದೆ. ಈ ಹಿನ್ನಲೆಯಲ್ಲಿ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 1.45 ರವರೆಗೆ, ಆರರಿಂದ ಹತ್ತನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2 ರಿಂದ 2.40 ರವರೆಗೆ ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಿಸಲು ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Kalaburagi: ಬಡಮಕ್ಕಳ ದ್ರೋಣಾಚಾರ್ಯ ಕಲಬುರಗಿಯ ಈ ಡಾನ್ಸ್ ಮಾಸ್ಟರ್!
ಮೌಲ್ಯ ಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾಡಿರುವ ವಿವಿಧ 20 ಶಿಫಾರಸುಗಳನ್ನು ಸಹ ಇಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮುಂದೆ ಈ ಬದಲಾದ ಸಮಯದಲ್ಲಿ ಬಿಸಿಯೂಟ
ಇನ್ನು ಮುಂದೆ ಈ ಬದಲಾದ ಸಮಯದಲ್ಲಿ ಬಿಸಿಯೂಟ ವಿತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ. ಅಷ್ಟೇ ಅಲ್ಲ ಯಾವ ಶಾಲೆ ಉತ್ತಮ ರೀತಿಯಲ್ಲಿ ಇದನ್ನು ನಿರ್ವಹಿಸುತ್ತದೆಯೋ ಆ ಶಾಲೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸೂಚಿಸಲಾಗಿದೆ. ಜಿಲ್ಲೆ ಇಲ್ಲವೇ ತಾಲೂಕು ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಬಿಸಿಯೂಟ ಹಾಗೂ ಬಿಸಿ ಹಾಲು ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಗೊಂಡಿರುವ ಶಾಲೆಗಳನ್ನು 'ಉತ್ತಮ ಪ್ರೇರಕ ಶಾಲೆ' ಗಳೆಂದು ಗುರುತಿಸಲಾಗುವುದು ಎಂದು ತಿಳಿಸಲಾಗಿದೆ.
ಇನ್ನಿತರ ಶಾಲೆಗಳಿಗೂ ಮಾದರಿ ಶಾಲೆ
ಈ ಶಾಲೆಗಳನ್ನು ಇನ್ನಿತರ ಶಾಲೆಗಳಿಗೂ ಮಾದರಿ ಶಾಲೆ ಎಂದು ಸೂಚಿಸಲಾಗುವುದು. ಮತ್ತು ಯಾವ ಶಾಲೆಗಳಲ್ಲಿ ಬಿಸಿಯೂಟದ ಸಮಸ್ಯೆ ಇರುತ್ತದೆಯೋ ಅಂತ ಶಾಲೆಗಳಿಗೆ ಈ ಶಾಲೆಯ ತಂಡವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿ ವ್ಯವಸ್ಥೆಯನ್ನು ತೋರಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಅದೇ ರೀತಿ ಶಾಲೆಯಲ್ಲಿ ತಾಯಂದಿರ ಸಮಿತಿ ರಚಿಸಿ ಯೋಜನೆಗಳ ನಿರ್ವಹಣೆ ಮತ್ತೆ ಮೇಲ್ವಿಚಾರಣೆಯನ್ನು ವಾರ ಅಥವಾ ತಿಂಗಳಲ್ಲಿ ಒಂದು ದಿನ ಯೋಜನೆಗಳ ಪ್ರಗತಿಯನ್ನು ಚರ್ಚಿಸಲಾಗುತ್ತದೆ.
ಬಿಸಿಯೂಟದ ಗುಣಮಟ್ಟ ಹೆಚ್ಚಳ
ಬಿಸಿಯೂಟದ ಗುಣಮಟ್ಟ ಪ್ರಮಾಣ, ಪೌಷ್ಠಿಕತೆ, ಸ್ವಚ್ಛತೆ, ಸುರಕ್ಷತೆ ಹಾಗೂ ಕುಂದುಕೊರತೆಗಳ ಕುರಿತು ಸಭೆ ನಡೆಸಲು ಕ್ರಮ ವಹಿಸುವಂತೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಈ ಎಲ್ಲಾ ನಿಟ್ಟಿನಲ್ಲಿ ಇನ್ನು ಮುಂದಿನ ದಿನಗಳಲ್ಲಿ ಉತ್ತಮ ಶಾಲಾ ಬಿಸಿ ಊಟ ವ್ಯವಸ್ಥೆ ನಿರ್ವಹಣೆಯಾಗುವುದರಲ್ಲಿ ಸಂಶಯವಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲಿರುವುದಂತೂ ನಿಜ. ಇನ್ನು ಕೆಲ ಮಕ್ಕಳಿಗೆ ಸಮಯ ಬದಲಾವಣೆಗೆ ಹೊಂದಿಕೊಳ್ಳಲು ಕೆಲ ದಿನಗಳ ಸಮಯದ ಅವಶ್ಯಕಥೆ ಇರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ