ಪ್ರವೇಶ ಪರೀಕ್ಷೆಯನ್ನು ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷೆ ಮಾಡುವ ಸಲುವಾಗಿ ಮಾಡಲಾಗುತ್ತದೆ. ಪ್ರತಿಯೊಂದು ಕಾಲೇಜು ಅದರದೇ ಆದ ಪ್ರವೇಶ ಪರೀಕ್ಷೆಯನ್ನು ಹೊಂದಿರುತ್ತದೆ. ಆ ಕಾರಣದಿಂದಾಗಿ ನೀವು ಯಾವ ಕಾಲೇಜ್ (College) ಸೇರಲು ಬಯಸುತ್ತೀರೋ ಆ ಕಾಲೇಜ್ನ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗುತ್ತದೆ. ಉನ್ನತ ಶಿಕಲ್ಷಣ ಪಡೆಯಲು ನೀವು ಪ್ರತಿಷ್ಟಿತ ಕಾಲೇಜುಗಳಿಗೆ ಸೇರಿಕೊಳ್ಳಲು ಬಯಸಿದರೆ ಖಂಡಿತ ಪರೀಕ್ಷೆಯನ್ನು (Exam) ಬರೆಯಲೇ ಬೇಕಾಗುತ್ತದೆ. ನೀವು ಮಣಿಪಾಲ್ನಲ್ಲಿ ನಿಮ್ಮ ಶಿಕ್ಷಣವನ್ನು (Education) ಮುಂದುವರೆಸಲು ಬಯಸಿದರೆ ಖಂಡಿತ ಈ ಪರೀಕ್ಷೆ ಬರೆಯಲೇ ಬೇಕಾಗುತ್ತದೆ.
ನೀವು ಈ ಬಾರಿ ಹೊಸದಾಗಿ ಕಾಲೇಜಿಗೆ ಸೇರಿಕೊಳ್ಳಲು ಬಯಸುತ್ತಿದ್ದರೆ ಖಂಡಿತ ಇಲ್ಲಿ ಅಡ್ಮಿಷನ್ ಮಾಡಿಸಬಹುದು. ಆದಷ್ಟು ಬೇಗ ಅಪ್ಲೈ ಮಾಡಿ. MAHE ಆನ್‌ಲೈನ್‌ನಲ್ಲಿ ಮೂಲಕ ಪ್ರವೇಶಾತಿ ಆರಂಭಮಾಡಿದೆ. ನೀವೂ ಆನ್‌ಲೈನ್ ಮೂಲಕ ಇಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು MET 2023 ಹಂತ 2 ಕ್ಕೆ ಆನ್‌ಲೈನ್ ಮೋಡ್‌ನಲ್ಲಿ manipal.edu ನಲ್ಲಿ ನೋಂದಾಯಿಸಿಕೊಳ್ಳಬಹುದು. ಅಧಿಕೃತ ಜಾಲತಾಣದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಲಭ್ಯವಿದೆ.
ಕೋರ್ಸ್ಗಳು | ಪ್ರಮುಖ MET ದಿನಾಂಕಗಳು |
MET ಅರ್ಜಿ ನಮೂನೆ 2023 ಬಿಡುಗಡೆ ದಿನಾಂಕ | ಹಂತ 1: ಅಕ್ಟೋಬರ್ 5, 2022 ಹಂತ 2: ಏಪ್ರಿಲ್ 26, 2023 |
MAHE ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ 2023 | ಹಂತ 1: ಏಪ್ರಿಲ್ 15, 2023 (ಪರಿಷ್ಕರಿಸಲಾಗಿದೆ) ಹಂತ 2: ಸೂಚನೆ ನೀಡಲಾಗುವುದು |
ಆನ್‌ಲೈನ್ ಟೆಸ್ಟ್ ಬುಕಿಂಗ್ ಸಿಸ್ಟಮ್ ವೇಳಾಪಟ್ಟಿ (ಹಂತ 1) | ಏಪ್ರಿಲ್ 21, 2023 ರಿಂದ ಏಪ್ರಿಲ್ 24, 2023 ರವರೆಗೆ |
MET 2023 ಪರೀಕ್ಷೆಯ ದಿನಾಂಕ (ಹಂತ 1) | ಏಪ್ರಿಲ್ 21, 2023 ರಿಂದ ಏಪ್ರಿಲ್ 24, 2023 ರವರೆಗೆ |
ಆನ್‌ಲೈನ್ ಟೆಸ್ಟ್ ಬುಕಿಂಗ್ ಸಿಸ್ಟಮ್ ವೇಳಾಪಟ್ಟಿ (ಹಂತ 2) | ಮೇ 19, 2023 ರಿಂದ ಮೇ 22 2023 |
MET 2023 ಪರೀಕ್ಷೆಯ ದಿನಾಂಕ (ಹಂತ 2) | ಮೇ 27, 2023 ರಿಂದ ಮೇ 28, 2023 |
ಏಪ್ರಿಲ್ 26 ರಿಂದ ಆನ್‌ಲೈನ್‌ನಲ್ಲಿ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. MET ಅರ್ಜಿ ನಮೂನೆಯ ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಈ ಕೊನೆ ದಿನಾಂಕಗಳಿಗಿಂತ ಮುಂಚಿತವಾಗಿ ಅಡ್ಮಿಷನ್ ಮಾಡಿಸಿಕೊಂಡರೆ ಮಾತ್ರ ನಿಮಗೆ ಸೀಟ್ ಸಿಗುತ್ತದೆ.
manipal.edu ಇದು ಅಧಿಕೃತ ಜಾಲತಾಣವಾಗಿದ್ದು ನೀವು ಅಲ್ಲಿ ಅಪ್ಲೈ ಮಾಡಬಹುದು. ಅಭ್ಯರ್ಥಿಗಳು MET ಪರೀಕ್ಷೆಯ ದಿನಾಂಕಗಳನ್ನು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು .ಉನ್ನತ ಶಿಕ್ಷಣಕ್ಕಾಗಿ ಮಣಿಪಾಲ್ ಅಕಾಡೆಮಿ MET ಅರ್ಜಿ ನಮೂನೆಯನ್ನು ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ಬಿಡುಗಡೆ ಮಾಡುತ್ತದೆ. MET 2023 ರ ಅರ್ಜಿ ಪ್ರಕ್ರಿಯೆಯು ನೋಂದಣಿ, MET 2023 ರ ಫಾರ್ಮ್ ಭರ್ತಿ, ವೈಯಕ್ತಿಕ ವಿವರಗಳನ್ನು ಭರ್ತಿ ಮಾಡುವುದು, ಕೋರ್ಸ್ ಆಯ್ಕೆ, ಅರ್ಜಿ ಶುಲ್ಕ ಪಾವತಿ, ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಇವೆಲ್ಲದರ ಬಗ್ಗೆ ಮಾಹಿತಿ ನೀಡುತ್ತದೆ. ಹಂತ 1. MET ಹಂತ 1 ರ ಅರ್ಜಿ ನಮೂನೆಯು ಅಕ್ಟೋಬರ್ 05, 2022 ರಿಂದ ಏಪ್ರಿಲ್ 15, 2023 ರವರೆಗೆ ಲಭ್ಯವಿತ್ತು. ಹಾಗಾಗಿ ಅದು ಈಗ ಮುಕ್ತಾಯವಾಗಿದೆ. ಇನ್ನು ಹಂತ 2ರ ನೋಂದಣಿ ಪ್ರಕ್ರಿಯೆ ಈಗ ಆರಂಭವಾಗಿದೆ. ನೀವು ಈ ಕೂಡಲೆ ಅಪ್ಲೈ ಮಾಡಿ.
ನೀವು ಉನ್ನತ ಶಿಕ್ಷಣಕ್ಕಾಗಿ ಯಾವುದೇ ಬೇರೆ ಕಾಲೇಜುಗಳನ್ನು ಸೇರಲು ಬಯಸುತ್ತಿದ್ದರೆ ಖಂಡಿತ ಅದಕ್ಕೂ ಬೇರೆ ಬೇರೆ ಪರೀಕ್ಷೆಗಳನ್ನು ಬರೆಯಲೇ ಬೇಕಾಗುತ್ತದೆ. ಆದ್ದರಿಂದ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮದೇ ವೆಬ್ಸೈಟ್ನ ಇನ್ನಷ್ಟು ಸುದ್ದಿಗಳನ್ನು ಓದಿ. ಇತರ ಕಾಲೇಜುಗಳ ಮಾಹಿತಿಯನ್ನೂ ಸಹ ನೀಡಿದ್ದೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ