• ಹೋಂ
 • »
 • ನ್ಯೂಸ್
 • »
 • Jobs
 • »
 • Mental Health: ತಾಯಂದಿರಿಗೆ ಬೇಕು ಸ್ವ-ಆರೈಕೆ; ಮಾನಸಿಕ ಆರೋಗ್ಯಕ್ಕೆ ಇಲ್ಲಿದೆ ಪರಿಹಾರ

Mental Health: ತಾಯಂದಿರಿಗೆ ಬೇಕು ಸ್ವ-ಆರೈಕೆ; ಮಾನಸಿಕ ಆರೋಗ್ಯಕ್ಕೆ ಇಲ್ಲಿದೆ ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಂದಿರು ತಮ್ಮ ಕೆಲಸಗಳ ಒಟ್ಟಿಗೆ ಈ ವಿಷಯಗಳಿಗೂ ಹೆಚ್ಚಿನ ಸಮಯವನ್ನು ಕೊಡಬೇಕು. ಸ್ವ ಆರೈಕೆಗೆ ಹೆಚ್ಚಿನ ಸಮಯ ನೀಡಬೇಕು. ತಮಗೆ ಇಷ್ಟವಾದ ಹವ್ಯಾಸಗಳನ್ನು ಮಾಡಬೇಕು ರುಚಿಕರವಾದ ಅಡುಗೆ, ಚಿತ್ರ ಬಿಡಿಸುವುದು, ನೃತ್ಯ, ಸಂಗೀತ, ಆಗಾಗ ಪ್ರವಾಸವನ್ನು ಮಾಡುವುದು ಹೀಗೆ ಇನ್ನೂ ಬೇರೆ ಬೇರೆ ರೀತಿಯಲ್ಲಿ ನೀವು ಸ್ವ ಆರೈಕೆಗೆ ಆದ್ಯತೆ ನೀಡಬೇಕು.

ಮುಂದೆ ಓದಿ ...
 • Share this:

ಮಾನಸಿಕ ಆರೋಗ್ಯವು ಇಂದು ವ್ಯಾಪಕವಾಗಿ ಬಳಸಲಾಗುವ ಪದವಾಗಿದೆ. ಮಾನಸಿಕ ಆರೋಗ್ಯ (Mental Health) ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ. ತಾಯ್ತನ ಎಂಬುದು ಅಳೆಯಲಾಗದ ಅನುಭವ ಆಗಿದೆ. ತಾಯಂದಿರ ಮಾನಸಿಕ ಯೋಗಕ್ಷೇಮವು ಜಾಗತಿಕವಾಗಿ ಚರ್ಚೆಯಾಗಿದೆ. ತಾಯಂದಿರು (Mother) ಯಾವಾಗಲು ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ (Health) ಮೇಲೆ ಗಮನಹರಿಸುವುದಿಲ್ಲ. ಪ್ರತಿಯೊಬ್ಬ ತಾಯಿಗೂ ಸ್ವ ಆರೈಕೆ ಬೇಕು ಇದರ ಮಹತ್ವವನ್ನು ತಾಯಂದಿರಿಗೆ ತಿಳಿಸಿಕೊಡಬೇಕು.


ಈ ಕಾರಣಗಳಿಂದ ತಾಯಂದಿರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ
ತಾಯಂದಿರು ಮಾನಸಿಕ ಆರೋಗ್ಯವನ್ನು ನಿರ್ಲಕ್ಷ ಮಾಡಲು ಹಲವಾರು ಕಾರಣಗಳಿವೆ. ಸಂಪೂರ್ಣ ಅರಿವಿನ ಕೊರತೆ, ತಿಳುವಳಿಕೆಯಿಲ್ಲದ ಮನೆಯವರು, ಹೊಸ ತಾಯಂದಿರಿಗೆ ಇರುವ ಸಣ್ಣ ಆತಂಕಗಳು, ನಿದ್ರಾಹೀನತೆ, ಅವರು ಅನುಭವಿಸುವ  ಕ್ಲಿನಿಕಲ್ ಪರಿಸ್ಥಿತಿಗಳು ಈ ಎಲ್ಲವೂ ಸಹ ತಾಯಂದಿರ ಮಾನಸಿಕ ಆರೋಗ್ಯ ಕೆಡುವಂತೆ ಮಾಡಿದ ಅಂಶಗಳಾಗಿವೆ.


ಇದನ್ನೂ ಓದಿ: Atal Residential School: ಜುಲೈ ತಿಂಗಳಿನಿಂದ ಆರಂಭವಾಗಲಿದೆ ವಸತಿ ಶಾಲೆ; ಅಪ್ಲೈ ಮಾಡಲು ಇಲ್ಲಿದೆ ಮಾಹಿತಿ


ತಾಯಂದಿರು ಹೆಚ್ಚಾಗಿ ಈ ಸಂದರ್ಭಗಳಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ
1. ಪ್ರಸವದ ನಂತರ
2. ಜನರು ತಾಯಂದಿರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಇದ್ದಾಗ
3. ದೈಹಿಕ ಬದಲಾವಣೆಗಳಾದಾಗ
4. ವಿಪರೀತ ಒತ್ತಡ ಮತ್ತು ಆತಂಕ ಉಂಟಾದಾಗ
5. ಅನುಮಾನಾಸ್ಪದ ಗೊಂದಲಗಳು ಸೃಷ್ಟಿಯಾದಾಗ


6. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ
7. ಪ್ರೀತಿ ಪಾತ್ರರನ್ನು ಹೆಚ್ಛಾಗಿ ಹಚ್ಚಿಕೊಂಡು ಪ್ಯಾನಿಕ್ ಆದ ಸಂದರ್ಭದಲ್ಲಿ
ಈ ಮೇಲೆ ನೀಡಿದ ಎಲ್ಲಾ ಸಂದರ್ಭಗಳಲ್ಲೂ ತಾಯಂದಿರ ಮಾನಸಿಕ ಆರೋಗ್ಯ ಹದಗೆಡುತ್ತದೆ.


ಪ್ರತಿಯೊಬ್ಬ ತಾಯಂದಿರೂ  ಸ್ವ ಆರೈಕೆ ಮಾಡಿಕೊಳ್ಳಲೇ ಬೇಕು
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ತಾಯಂದಿರೂ ಸಹ ಕೆಲಸ ಮಾಡುತ್ತಾರೆ. ಇತ್ತ ಮನೆ ಮಕ್ಕಳ ಆರೈಕೆಯನ್ನೂ ಮಾಡುತ್ತಾರೆ. ಹೀಗಿರುವಾಗ ತಮ್ಮ ಆರೈಕೆಯನ್ನು ಮಾಡಿಕೊಳ್ಳಲು ಅವರಿಗೆ ಸಮಯವೇ ಇರುವುದಿಲ್ಲ.
ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ಗಮನಿಸಿ


1. ಸಾಮಾನ್ಯ ಗುಂಪಿನೊಂದಿಗೆ ಒಂದೇ ರೀತಿಯ ಸಮಸ್ಯೆಗಳನ್ನು ಚರ್ಚಿಸುವುದು
2. ಸಾಮಾನ್ಯ ಮಾಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು
3. ಪರಿಸ್ಥಿತಿಗೆ ಹೊಂದಿಕೊಳ್ಳುವುದು
4. ಸಕಾರಾತ್ಮಕ ಚಿಂತನೆ ಮಾಡುವುದು
ಈ ಅಂಶಗಳನ್ನು ಪಾಲಿಸಿದರೆ ತಾಯಂದಿರ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.


ಕುಟುಂಬದ ಪಾತ್ರ


ಕುಟುಂಬವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ಕುಟುಂಬದ  ತಿಳುವಳಿಕೆ, ಪ್ರತಿಯೊಬ್ಬ ತಾಯಿಯು ನಿಕಟವಾಗಿ ಬೆಳೆಯಲು ಮತ್ತು ಅವಳ ಯೋಗಕ್ಷೇಮಕ್ಕೆ ಪ್ರಾಮುಖ್ಯತೆಯನ್ನು ನೀಡಲು ಸಹಾಯ ಮಾಡುತ್ತದೆ. ಆದ್ದರಿಂದ ತಾಯಿಯ ಆರೋಗ್ಯ ಕಾಪಾಡುವಲ್ಲಿ ಕುಟುಂಬದ ಜವಾಬ್ಧಾರಿಯೂ ಬಹಳ ಮುಖ್ಯವಾಗಿರುತ್ತದೆ. ಯೋಗಕ್ಷೇಮ ಮತ್ತು ಸ್ವ-ಆರೈಕೆ ಒಳಗೊಂಡಂತೆ ಇನ್ನೂ ಅನೇಕ ಕ್ರಮಗಳನ್ನು ತಾಯಂದಿರು ಪಾಲಿಸಬೇಕಾಗುತ್ತದೆ.


ಇದನ್ನೂ ಓದಿ: Sonda Fort: ಸೋಂದ ಅರಸರ ಕೋಟೆಯಲಿ ಪರಾಕ್ರಮ ಮೆರೆದ ಫಿರಂಗಿಗಳು!


ತಾಯಂದಿರು ತಮ್ಮ ಕೆಲಸಗಳ ಒಟ್ಟಿಗೆ ಈ ವಿಷಯಗಳಿಗೂ ಹೆಚ್ಚಿನ ಸಮಯವನ್ನು ಕೊಡಬೇಕು. ಸ್ವ ಆರೈಕೆಗೆ ಹೆಚ್ಚಿನ ಸಮಯ ನೀಡಬೇಕು. ತಮಗೆ ಇಷ್ಟವಾದ ಹವ್ಯಾಸಗಳನ್ನು ಮಾಡಬೇಕು ರುಚಿಕರವಾದ ಅಡುಗೆ, ಚಿತ್ರ ಬಿಡಿಸುವುದು, ನೃತ್ಯ, ಸಂಗೀತ, ಆಗಾಗ ಪ್ರವಾಸವನ್ನು ಮಾಡುವುದು ಹೀಗೆ ಇನ್ನೂ ಬೇರೆ ಬೇರೆ ರೀತಿಯಲ್ಲಿ ನೀವು ಸ್ವ ಆರೈಕೆಗೆ ಆದ್ಯತೆ ನೀಡಬೇಕು. ತಾಯಂದಿರಿಗೆ ಕುಟುಂಬದ ಇತರ ಸದ್ಯರೂ ಕೂಡಾ ಈ ರೀತಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಫೋಟೋಗ್ರಫಿ, ಬರವಣಿಗೆ ಈ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಾಯಂದಿರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.


ಇದೆಲ್ಲವೂ ಸಹ ಅಮ್ಮಂದಿರ ಮಾನಸಿಕ ಆರೋಗ್ಯಕ್ಕೆ ಸಹಾಯವಾಗುವ ಅಂಶಗಳಾಗಿದ್ದಯ ಸ್ವ ಆರೈಕೆ ಮಾಡಿಕೊಳ್ಳುತ್ತಾ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೌನ್ಸೆಲಿಂಗ್ ಮತ್ತು ವಿಶೇಷ ಶಿಕ್ಷಣ, ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್ ಮಹಿಳಾ ದಿನಾಚರಣೆಯ ಪ್ರಯುಕ್ತ ತಾಯಂದಿರಿಗೆ ಈ ಆರೋಗ್ಯದಾಯಕ ಸಲಹೆಗಳನ್ನು ನೀಡಿ ಕಾಳಜಿ ತೋರಿದೆ.

top videos


  ಕೌನ್ಸೆಲಿಂಗ್ ಮತ್ತು ವಿಶೇಷ ಶಿಕ್ಷಣ, ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್​ನ ವಿಭಾಗ ಮುಖ್ಯಸ್ಥೆ ಅರ್ಚನಾ ಪಾಧ್ಯೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

  First published: