ಉಕ್ರೇನ್‌ನಿಂದ (Ukraine) ಭಾರಕ್ಕೆ ಮರಳಿರುವ ಎಂಬಿಬಿಎಸ್ ವಿದ್ಯಾರ್ಥಿಗಳು ಅಸ್ತಿತ್ವದಲ್ಲಿರುವ ಯಾವುದೇ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗದೆಯೇ ಕೊನೆಯ ಪರೀಕ್ಷೆಗಳಾದ ಭಾಗ 1 ಹಾಗೂ ಭಾಗ 2 (Theory And Practice) ರಲ್ಲಿ ಉತ್ತೀರ್ಣರಾಗಲು ಒಂದೇ ಒಂದು ಅವಕಾಶವನ್ನು (Opportunity) ನೀಡಲಾಗುತ್ತದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಯುದ್ಧಪೀಡಿತ ಉಕ್ರೇನ್‌ನಿಂದ ಸುಮಾರು 18,000 ವಿದ್ಯಾರ್ಥಿಗಳು (Students) ಭಾರತಕ್ಕೆ ಮರಳಿದ್ದರು ಅಂತೆಯೇ ತಮ್ಮದೇ ತಾಯ್ನಾಡಿನಲ್ಲಿ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಬಹುದೆಂಬ ಮಹದಾಸೆಯನ್ನಿಟ್ಟುಕೊಂಡು ಬೇರೆ ಬೇರೆ ವಿಧಾನಗಳನ್ನು ಅನ್ವೇಷಿಸುತ್ತಿದ್ದರು.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದೇ ಅವಕಾಶ
ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಪಠ್ಯಕ್ರಮ ಮತ್ತು ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಫೈನಲ್, ಥಿಯರಿ (ಭಾಗ I) ಮತ್ತು ಪ್ರಾಕ್ಟಿಕಲ್ (ಭಾಗ II) ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಒಂದೇ ಅವಕಾಶವನ್ನು ನೀಡಬಹುದು ಎಂದು ಸಮಿತಿಯು ಪ್ರಸ್ತಾಪಿಸಿದೆ ಎಂದು ಕೇಂದ್ರ ಸಲ್ಲಿಸಿದ ಅಫಿಡವಿಟ್ ಹೇಳಿದೆ.
ಇಂಟರ್ನ್‌ಶಿಪ್ ಕಡ್ಡಾಯ
ಕೇಂದ್ರದ ಪ್ರಕಾರ, ಈ ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ, ವಿದ್ಯಾರ್ಥಿಗಳು ಎರಡು ವರ್ಷಗಳ ಕಡ್ಡಾಯ ರೋಟರಿ ಇಂಟರ್ನ್‌ಶಿಪ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ.
ಮೊದಲ ವರ್ಷ ಉಚಿತ ಮತ್ತು ಎರಡನೇ ವರ್ಷದ ಇಂಟರ್ನ್‌ಶಿಪ್ ಕೋರ್ಸ್‌ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿರ್ಧರಿಸಿದಂತೆ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Exam News: ಇಂದಿನಿಂದ SSLC ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್
ಭಾಗ 1 ಉತ್ತೀರ್ಣರಾದ ನಂತರವೇ ಭಾಗ 2 ಕ್ಕೆ ಅವಕಾಶ
ಈ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ರಚಿಸಿದ್ದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಒಂದೇ ಒಂದು ಆಯ್ಕೆಯಾಗಿದ್ದು ಭವಿಷ್ಯದಲ್ಲಿ ಇಂತಹುದೇ ನಿರ್ಧಾರಗಳನ್ನು ಇನ್ನು ಮುಂದೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸಮಿತಿ ಒತ್ತಿ ಹೇಳಿದೆ.
ಪ್ರಸ್ತುತ ವಿಷಯಗಳಿಗೆ ಮಾತ್ರ ಯೋಜನೆಯು ಪೂರಕವಾಗಿದೆ ಎಂಬ ಅಂಶವನ್ನು ಸಮಿತಿ ದೃಢೀಕರಿಸಿದೆ. ಒಂದು ವರ್ಷದ ಅವಧಿಯಲ್ಲಿ ಪರೀಕ್ಷೆಯನ್ನು ನೀಡಬಹುದು ಹಾಗೂ ತೆರವುಗೊಳಿಸಬಹುದು.
ಭಾಗ 1 ರ ನಂತರ ಒಂದು ವರ್ಷದ ನಂತರ ಭಾಗ 2 ಹೀಗೆ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಅಂತೆಯೇ ಭಾಗ 1 ರಲ್ಲಿ ಉತ್ತೀರ್ಣರಾದ ನಂತರವೇ ಭಾಗ 2 ರಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ ಎಂದು ಅಫಿದವಿಟ್ ಸೂಚಿಸಿದೆ.
ಗೊತ್ತುಪಡಿಸಿದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ
ಭಾರತೀಯ ಎಂಬಿಬಿಎಸ್ ಪರೀಕ್ಷೆಯ ಮಾದರಿಯಲ್ಲಿ ಥಿಯರಿ ಪರೀಕ್ಷೆಯನ್ನು ಕೇಂದ್ರೀಯವಾಗಿ ಮತ್ತು ಭೌತಿಕವಾಗಿ ನಡೆಸಬಹುದು ಮತ್ತು ಜವಾಬ್ದಾರಿಯನ್ನು ನಿಯೋಜಿಸಲಾದ ಕೆಲವು ಗೊತ್ತುಪಡಿಸಿದ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಪ್ರಾಯೋಗಿಕವಾಗಿ ನಡೆಸಬಹುದು ಎಂದು ಅಫಿಡವಿಟ್ ಹೇಳಿದೆ.
ಇನ್ನು ಅಸ್ತಿತ್ವದಲ್ಲಿರುವ ಯಾವುದೇ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗದೆ ಎಂಬಿಬಿಎಸ್ ಪರೀಕ್ಷೆಗಳನ್ನು ತೆರವುಗೊಳಿಸಲು ಒಂದು ಬಾರಿ ಅವಕಾಶವನ್ನು ನೀಡುವ ಕೇಂದ್ರದ ನಿರ್ಧಾರವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅಗತ್ಯವಿರುವ ಇನ್ನಷ್ಟು ಪರಿಹಾರವನ್ನು ಒದಗಿಸಬಹುದು ಎಂಬ ನಿರೀಕ್ಷೆ ಕೂಡ ಇದೆ.
ಸಮಿತಿ ರಚನೆ
ಡಿಸೆಂಬರ್ 30, 2022 ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರತಿನಿಧಿಗಳೊಂದಿಗೆ DGHS ನ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂಬುದಾಗಿ ಅಫಿದವಿಟ್ ತಿಳಿಸಿದ್ದು, ಗೃಹ, ವಿದೇಶಾಂಗ ವ್ಯವಹಾರಗಳು ಮತ್ತು ಆರೋಗ್ಯ ಸಚಿವಾಲಯಗಳು ಒಂದಾಗಿ ಸಮಸ್ಯೆಗೆ ಪರಿಹಾರವನ್ನು ಸೂಚಿಸಲು ಸಮತಿಯನ್ನು ರಚಿಸಲಾಗಿದೆ ಎಂದು ತಿಳಿಸಿದೆ.
ರಾಜ್ಯಗಳು ಮೀಸಲಾತಿ ವ್ಯಕ್ತಪಡಿಸಿದ್ದವು
ವಿದೇಶಿ ವೈದ್ಯಕೀಯ ಪದವೀಧರರು ವಿದೇಶದಲ್ಲಿ ಪಡೆದಿರಬಹುದಾದ ಶಿಕ್ಷಣ ಮತ್ತು ತರಬೇತಿಯ ಗುಣಮಟ್ಟದ ಕುರಿತು ರಾಜ್ಯಗಳು ಚರ್ಚೆ ಹಾಗೂ ಸಮಾಲೋಚನೆಯ ಸಮಯದಲ್ಲಿ ತಮ್ಮ ಮೀಸಲಾತಿಗಳನ್ನು ವ್ಯಕ್ತಪಡಿಸಿವೆ ಎಂದು ಅಫಿಡವಿಟ್ ತಿಳಿಸಿದೆ.
ವೈದ್ಯಕೀಯ ವರ್ಷದ ಮಧ್ಯದಲ್ಲಿ ಅವರಿಗೆ ಕಾಲೇಜುಗಳಲ್ಲಿ ವಸತಿ ಕಲ್ಪಿಸುವ ಬಗ್ಗೆ ರಾಜ್ಯಗಳು ಮೀಸಲಾತಿಯನ್ನು ವ್ಯಕ್ತಪಡಿಸಿದ್ದವು ಎಂಬುದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ