• ಹೋಂ
  • »
  • ನ್ಯೂಸ್
  • »
  • Jobs
  • »
  • Exam: ಕೇಂದ್ರ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆಗಳನ್ನು ಆಯೋಜಿಸಿದ MCD

Exam: ಕೇಂದ್ರ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆಗಳನ್ನು ಆಯೋಜಿಸಿದ MCD

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

MCD ಯ ಶಿಕ್ಷಣ ಇಲಾಖೆಯು ಈಗಾಗಲೇ ಕೇಂದ್ರೀಕೃತ ಮಟ್ಟದಲ್ಲಿ ಪಾಠ ಯೋಜನೆಗಳು ಮತ್ತು ಮಾಸಿಕ ಯೋಜನೆಗಳನ್ನು ಪರಿಚಯಿಸಿದೆ. ಶಿಕ್ಷಕರ ಅನುಕೂಲಕ್ಕಾಗಿ ಇಲಾಖೆಯು ತನ್ನ 'ಎಡುಲೈಫ್ ಪೋರ್ಟಲ್' ನಲ್ಲಿ ಫಲಿತಾಂಶ ಸಾಫ್ಟ್‌ವೇರ್ ಅನ್ನು ಅಪ್‌ಲೋಡ್ ಮಾಡಿದೆ.

  • Share this:

ದೆಹಲಿ ಶಿಕ್ಷಣ ವ್ಯವಸ್ಥೆ ಗುಣಮಟ್ಟದ ಉದ್ದೇಶದಿಂದಾಗಿ ಒಂದೊಂದೆ ಮೈಲಿಗಲ್ಲನ್ನು ತಲುಪುತ್ತಿದೆ. ಇದೇ ನಿಟ್ಟಿನಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಿಕ್ಷಣ (Primary Education) ವ್ಯವಸ್ಥೆಯಲ್ಲಿ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವೊಂದು ನಡೆದಿದೆ. 
ತನ್ನ ಶಾಲೆಗಳಲ್ಲಿ (School) ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಳ್ಳಲು, ಎಂಸಿಡಿ (ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್) ಶಿಕ್ಷಣ (Education) ಇಲಾಖೆಯು ಪುರಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರ ಮಟ್ಟದಲ್ಲಿ ವಾರ್ಷಿಕ ಪರೀಕ್ಷೆಗಳನ್ನು (Exam) ಆಯೋಜಿಸಿದೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಒದಗಿಸಿದೆ. ಈ ಮೂಲಕ MCD ಮೊದಲ ಬಾರಿಗೆ ಕೇಂದ್ರ ಮಟ್ಟದಲ್ಲಿ ವಾರ್ಷಿಕ ಪರೀಕ್ಷೆಗಳನ್ನು ಆಯೋಜಿಸಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.


ಶಿಕ್ಷಣ ಇಲಾಖೆಯು ಪ್ರತಿ ವಿದ್ಯಾರ್ಥಿಗೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಮುದ್ರಿತ ರೂಪದಲ್ಲಿ ಪಡೆಯುವುದನ್ನು ಖಚಿತಪಡಿಸಿದೆ ಮತ್ತು ಶಿಕ್ಷಕರು ಅದೇ ದಿನ ಅವುಗಳನ್ನು ಪರಿಶೀಲಿಸಬೇಕು ಎಂದು ಆದೇಶಿಸಿದೆ. ಶಿಕ್ಷಕರ ಪರೀಕ್ಷಾ ಕರ್ತವ್ಯವನ್ನು ಪರೀಕ್ಷೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ ಎಂದು ಇಲಾಖೆಯು ಪ್ರಾಂಶುಪಾಲರಿಗೆ ಸೂಚನೆ ಮೂಲಕ ತಿಳಿಸಿದೆ.


ಇದನ್ನೂ ಓದಿ: Education News: ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿಬೇಕು; ಸೆನೆಟ್ ಸಭೆಯಲ್ಲಿ ಚರ್ಚೆ


ಪ್ರಶ್ನೆ ಪತ್ರಿಕೆಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಒದಗಿಸುವುದರ ಜೊತೆಗೆ ಪರೀಕ್ಷೆಗೆ ಸಂಬಂಧಿಸಿದ ಹಲವು ಗುಣಮಟ್ಟದ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ. ಬೇರೆ ಬೇರೆ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ನೀಡುವುದರ ಜೊತೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಶಿಕ್ಷಣ ಇಲಾಖೆಯು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಆಪ್ಟಿಟ್ಯೂಡ್ ಆಧಾರಿತ ಪ್ರಶ್ನೆಗಳನ್ನು ಸೇರಿಸಿದೆ. ವಿದ್ಯಾರ್ಥಿಗಳ ವಿಷಯ-ಸಂಬಂಧಿತ ಜ್ಞಾನವನ್ನು ಪರೀಕ್ಷಿಸಲು ಮತ್ತು ಕಲಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಎಂಸಿಡಿ ಈ ಕ್ರಮವನ್ನು ತೆಗೆದುಕೊಂಡಿದೆ.


ಜೊತೆಗೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ನಿರ್ಧರಿಸಿದ ಕಲಿಕೆಯ ಫಲಿತಾಂಶಗಳ ಪ್ರಕಾರ ಈ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹೊಂದಿಸಲಾಗಿದೆ. ಇನ್ನೂ ವಿಜ್ಞಾನ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆಯು ಪ್ರಾಕ್ಟಿಕಲ್‌ ಪರೀಕ್ಷೆಗಳನ್ನು ಸಹ ಆಯೋಜಿಸಿದೆ.



ಮೊದಲ ಬಾರಿಗೆ ಕೇಂದ್ರ ಮಟ್ಟದಲ್ಲಿ ವಾರ್ಷಿಕ ಪರೀಕ್ಷೆಗಳನ್ನು ಆಯೋಜಿಸುವ ಸಲುವಾಗಿ MCDಯ ಶಿಕ್ಷಣ ಇಲಾಖೆಯು ಅನೇಕ ಉಪಕ್ರಮಗಳನ್ನು ಪ್ರಾರಂಭಿಸಿದೆ ಮತ್ತು ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. MCD ಯ ಶಿಕ್ಷಣ ಇಲಾಖೆಯು ಈಗಾಗಲೇ ಕೇಂದ್ರೀಕೃತ ಮಟ್ಟದಲ್ಲಿ ಪಾಠ ಯೋಜನೆಗಳು ಮತ್ತು ಮಾಸಿಕ ಯೋಜನೆಗಳನ್ನು ಪರಿಚಯಿಸಿದೆ. ಶಿಕ್ಷಕರ ಅನುಕೂಲಕ್ಕಾಗಿ ಇಲಾಖೆಯು ತನ್ನ 'ಎಡುಲೈಫ್ ಪೋರ್ಟಲ್' ನಲ್ಲಿ ಫಲಿತಾಂಶ ಸಾಫ್ಟ್‌ವೇರ್ ಅನ್ನು ಅಪ್‌ಲೋಡ್ ಮಾಡಿದೆ.


ಶೈಕ್ಷಣಿಕ ಗುರಿ ಸಾಧಿಸಲು ಕಂಕಣಬದ್ಧವಾಗಿರುವ ಎಂಸಿಡಿ
ಎಂಸಿಡಿ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಉತ್ತೇಜನ ನೀಡಲು ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. ಮತ್ತು ಡ್ರಾಪ್-ಔಟ್ ಮತ್ತು ಗೈರುಹಾಜರಿಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ದುರ್ಬಲ ವರ್ಗಗಳ ಮಕ್ಕಳಿಗೆ ಪ್ರೋತ್ಸಾಹಕವಾಗಿ ಎಂಸಿಡಿ ಕಾರ್ಯನಿರ್ವಹಿಸುತ್ತಿದೆ.


ದೆಹಲಿಯಲ್ಲಿ, ಪ್ರಾಥಮಿಕ ಶಿಕ್ಷಣವು MCDಯ ವ್ಯಾಪ್ತಿಯಾಗಿದ್ದರೆ, ಶಾಲಾ ಶಿಕ್ಷಣವನ್ನು ದೆಹಲಿ ಸರ್ಕಾರವು ತನ್ನ ಸಂಸ್ಥೆಗಳಲ್ಲಿ ಒದಗಿಸುತ್ತದೆ. ಹೀಗೆ ಎಲ್ಲಾ ಶಿಕ್ಷಣ ವ್ಯವಸ್ಥೆಯಲ್ಲೂ ಕ್ರಾಂತಿಕಾರಿ ಬೆಳವಣಿಗೆಗೆ ಸಂಪೂರ್ಣ ವ್ಯವಸ್ಥೆ ಪಣತೊಟ್ಟಿದೆ ಎನ್ನಬಹುದು. ಮೊನ್ನೆ ಮೊನ್ನೆ ದೆಹಲಿಯ ಮಹತ್ವದ ಯೋಜನೆಯಾದ ಹ್ಯಾಪಿನೆಸ್ ಪಠ್ಯಕ್ರಮದ 36-ಕಂತುಗಳ ವಿಡಿಯೋ ಸರಣಿಯನ್ನು ಪ್ರಪಂಚದಾದ್ಯಂತ ದೆಹಲಿಯ ಶಿಕ್ಷಣ ಸಚಿವೆ ಅತಿಶಿ ಬಿಡುಗಡೆ ಮಾಡಿದರು. ದೆಹಲಿಯಲ್ಲಿ ನಡೆದ ಎಕ್ಸಲೆನ್ಸ್ ಇನ್ ಎಜುಕೇಶನ್ ಅವಾರ್ಡ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ವಿಶ್ವ ಶಿಕ್ಷಣದ ಕೇಂದ್ರವನ್ನಾಗಿ ಮಾಡುವ ತಮ್ಮ ಹೆಬ್ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

First published: