• ಹೋಂ
  • »
  • ನ್ಯೂಸ್
  • »
  • Jobs
  • »
  • Scholarships: ಮಾರ್ಚ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್​ ಶಿಪ್​ ಲಿಸ್ಟ್​​ ಇಲ್ಲಿದೆ

Scholarships: ಮಾರ್ಚ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್​ ಶಿಪ್​ ಲಿಸ್ಟ್​​ ಇಲ್ಲಿದೆ

ಸ್ಕಾಲರ್​ ಶಿಪ್​

ಸ್ಕಾಲರ್​ ಶಿಪ್​

ಮಾರ್ಚ್​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ವಿದ್ಯಾರ್ಥಿ ವೇತನಗಳ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ. ನೀವು ಈ ಮಾಹಿತಿ ಮೂಲಕ ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.

  • Share this:

ದಿನೇ ದಿನೇ ಹೊಸ ಹೊಸ ತಂತ್ರಜ್ಞಾನ ಬರುತ್ತಿರುವ ಈ ಯುಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರ ಅವಶ್ಯಕತೆ ಹೆಚ್ಚಿದೆ. ಅನೇಕ ಪ್ರತಿಭಾವಂತರು ಹಣಕಾಸಿನ ಸಮಸ್ಯೆಯಿಂದ (Economic Problem) ಉನ್ನತ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಫೆಲೋಶಿಪ್‌ಗಳು, ವಿದ್ಯಾರ್ಥಿವೇತನಗಳು (Scholarship) ಮತ್ತು ಇಂಟರ್ನ್‌ಶಿಪ್‌ಗಳು ಈ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಲವು ವಿದ್ಯಾರ್ಥಿಗಳಿಗೆ  ಹಣಕಾಸಿನ ಸಹಾಯದಿಂದ ಶಿಕ್ಷಣ ಮುಂದುವರೆಸಲು ಇದು ಸಹಾಯ ಮಾಡುತ್ತದೆ. ಅಂತಹ ಹಲವಾರು ಸ್ಕಾಲರ್​ ಶಿಪ್​​ಗಳ ವಿವರ ಇಲ್ಲಿದೆ. 


ಸಿಎಫ್ ಸ್ಪಾರ್ಕಲ್ ವಿದ್ಯಾರ್ಥಿವೇತನ 
ಉನ್ನತ ಶಿಕ್ಷಣವನ್ನು ಪಡೆಯಲು ಕಡಿಮೆ ಆದಾಯ ಇರುವ  ಅಂಗವಿಕಲರು ಮತ್ತು ಟ್ರಾನ್ಸ್ಜೆಂಡರ್ ವಿದ್ಯಾರ್ಥಿಗಳಿಗೆ CF ಸ್ಪಾರ್ಕಲ್  ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಹುಡುಗಿಯರೂ ಇದಕ್ಕೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು STEAM ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ, ಗಣಿತ ಕೋರ್ಸ್‌ಗಳಲ್ಲಿ ಪದವಿಪೂರ್ವ ಅಥವಾ ಪದವಿಯ ಮೊದಲ ವರ್ಷದಲ್ಲಿ ಇರುವವರು ಅರ್ಜಿ ಸಲ್ಲಿಸಬಹುದು. ವೃತ್ತಿಪರ ಕೋರ್ಸ್​​ ಮಾಡುತ್ತಿರಬೇಕು. ಪ್ಯಾರಾಮೆಡಿಕಲ್ ಸೈನ್ಸಸ್, ಆರೋಗ್ಯ ವಿಜ್ಞಾನ ವಿಷಯಗಳಲ್ಲಿ ಪದವಿಪೂರ್ವ ಪದವಿ ಅಥವಾ ಡಿಪ್ಲೊಮಾ. ಇಂಟರ್ ಅಥವಾ 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು. ಅಷ್ಟಾದರೆ ಮಾತ್ರ ವಿದ್ಯಾರ್ಥಿ ವೇತನ ಲಭಿಸುತ್ತದೆ.


ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.5 ಲಕ್ಷ ಮೀರಬಾರದು. ಯಾವುದೇ ಭಾರತೀಯ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು. Cognizant, Cognizant Foundation, Buddy4Study ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ವರ್ಷಕ್ಕೆ ರೂ.75 ಸಾವಿರ ನೀಡಲಾಗುವುದು. ಮಾರ್ಚ್ 15 ರೊಳಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳಿಗಾಗಿ www.b4s.in/it/CFSI1 ಪೋರ್ಟಲ್‌ಗೆ ಭೇಟಿ ನೀಡಿ.


ಇದನ್ನೂ ಓದಿ: Education News: ಭಾರತೀಯ ವಿದ್ಯಾರ್ಥಿಗಳಿಗೆ ಶುಭ ಸುದ್ದಿ! ವೀಸಾ ನಿರ್ಬಂಧ ತೆಗೆದು ಹಾಕಿದ ಚೀನಾ


NETAPS ಫೌಂಡೇಶನ್ ಸ್ಕಾಲರ್​ ಶಿಪ್​


ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಪ್ರಮುಖ ಸಲಹಾ ಸಂಸ್ಥೆ ಇದಾಗಿದೆ. ಸ್ಥಳೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಸೇವೆಗಳನ್ನು ಒದಗಿಸುವುದು ಇದರ ಕೆಲಸವಾಗಿದೆ. ಇದು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಸಹಯೋಗದೊಂದಿಗೆ ತನ್ನ ಸೇವೆಗಳನ್ನು ಮುಂದುವರೆಸಿದೆ. NETAPS ಫೌಂಡೇಶನ್ ಲೀಡ್ ಜನರೇಷನ್ ಎಕ್ಸಿಕ್ಯೂಟಿವ್ ಇಂಟರ್ನ್‌ಶಿಪ್ 2023 ಪದವೀಧರ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡುತ್ತಿದೆ. ಪದವೀಧರರು ಇದಕ್ಕೆ ಅರ್ಹರು. ಆರು ತಿಂಗಳು ಕೆಲಸ ಮಾಡಿದ ಅನುಭವ ಇರಬೇಕು. ತಿಂಗಳಿಗೆ 10,000ರೂ ನೀಡಲಾಗುತ್ತದೆ. ಮಾರ್ಚ್ 31 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ನೀವು ಪೋರ್ಟಲ್ ಅನ್ನು ಪರಿಶೀಲಿಸಬಹುದು.


ಅಬ್ದುಲ್ ಕಲಾಂ ಟೆಕ್ನಾಲಜಿ ಇನ್ನೋವೇಶನ್ ನ್ಯಾಷನಲ್ ಫೆಲೋಶಿಪ್


ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (INAE) ಅರ್ಹ ಇಂಜಿನಿಯರಿಂಗ್ ಪದವೀಧರರಿಗೆ ಫೆಲೋಶಿಪ್ ಅವಕಾಶಗಳನ್ನು ನೀಡುತ್ತದೆ. ಎಂಜಿನಿಯರಿಂಗ್  ಮತ್ತು ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಅಬ್ದುಲ್ ಕಲಾಂ ಟೆಕ್ನಾಲಜಿ ಇನ್ನೋವೇಶನ್ ನ್ಯಾಷನಲ್ ಫೆಲೋಶಿಪ್ 2023-24 ಅನ್ನು ಆಯೋಜಿಸಲಾಗಿದೆ.ಭಾರತ ಅಥವಾ ವಿದೇಶದಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಕನಿಷ್ಠ ಪದವಿ ಪಡೆದಿರಬೇಕು. ಪೋಷಕ ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಇತರ ಫೆಲೋಶಿಪ್‌ಗಳನ್ನು ಹೊಂದಿರಬಾರದು. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ ರೂ.25,000 ಸ್ಟೈಫಂಡ್ ಮತ್ತು ಇತರ ಪ್ರಯೋಜನಗಳನ್ನು ಪಡೆಯುತ್ತಾರೆ. ಜೂನ್ 30 ರೊಳಗೆ ಅರ್ಜಿ ಸಲ್ಲಿಸಿ. inaehq@inae.in ಎಂಬ ಮೇಲ್ ಐಡಿಗೆ ಮೇಲ್ ಮಾಡಿ.

First published: