• Home
 • »
 • News
 • »
 • jobs
 • »
 • CA Rank: ಸಿಎ ಪರೀಕ್ಷೆಯಲ್ಲಿ ದೇಶಕ್ಕೇ 2ನೇ ಸ್ಥಾನ ಗಳಿಸಿದ ಮಂಗಳೂರಿನ ರಮ್ಯಶ್ರೀ

CA Rank: ಸಿಎ ಪರೀಕ್ಷೆಯಲ್ಲಿ ದೇಶಕ್ಕೇ 2ನೇ ಸ್ಥಾನ ಗಳಿಸಿದ ಮಂಗಳೂರಿನ ರಮ್ಯಶ್ರೀ

ರಮ್ಯಶ್ರೀ

ರಮ್ಯಶ್ರೀ

ಇದು ಸುಲಭದ ಕಾರ್ಯವಂತೂ ಅಲ್ಲ ತಮ್ಮ ಶ್ರಮ ಹಾಗೂ ನಿರಂತರ ಪ್ರಯತ್ನದಿಂದಾಗಿ ಅವರು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನೀವೂ ಕೂಡಾ ನಿರಂತರ ಪ್ರಯತ್ನಮಾಡಿದರೆ ಉತ್ತಮ ಅಂಕ ಗಳಿಸಬಹುದು ಎನ್ನುವುದಕ್ಕೆ ಇವರು ಸಾಕ್ಷಿಯಾಗಿದ್ದಾರೆ. 

 • News18 Kannada
 • 2-MIN READ
 • Last Updated :
 • Karnataka, India
 • Share this:

‘ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ’ ಸಿಎ ಅಂತಿಮ ಪರೀಕ್ಷೆಯ  ಫಲಿತಾಂಶ (CA Final Exam) ಈಗಾಗಲೇ ಪ್ರಕಟವಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆಲ್ಲಾ ತಮ್ಮ ಫಲಿತಾಂಶ ದೊರೆತಿದೆ. ಹಲವಾರು ಜನರಿಗೆ ಸಕಾರಾತ್ಮಕ ಫಲಿತಾಂಶ (Result) ದೊರೆತಿದ್ದು ಇನ್ನು ಕೆಲವರಿಗೆ ಅವರು ಅಂದುಕೊಂಡಂತೆ ಫಲಿತಾಂಶ ದೊರೆತಿಲ್ಲ. ಆದರೆ ಈ ಪರೀಕ್ಷೆಯಲ್ಲಿ (Exam) ಮಂಗಳೂರಿನ ರಮ್ಯಶ್ರೀ ಎಂಬುವವರು ಮಹತ್ತರ ಸಾಧನೆ ಮಾಡಿದ್ದಾರೆ. ಇವರು ಮಾಡಿದ ಸಾಧನೆ ಹೇಗಿದೆ ಎಂದರೆ  ಇವರು ದೇಶದಲ್ಲೇ ಎರಡನೇ ಸ್ಥಾನ (2nd Rank) ಗಳಿಸಿದ್ದಾರೆ. ಈ ಕುರಿತು ಇನ್ನಷ್ಟು ವಿವರ ಇಲ್ಲಿದೆ. 


‘ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ’ ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಮಂಗಳೂರಿನ ರಮ್ಯಶ್ರೀ ದೇಶಕ್ಕೆ ಎರಡನೇ ಸ್ಥಾನದಲ್ಲಿದ್ದಾರೆ. ಇವರೊಟ್ಟಿಗೆ ಇನ್ನೂ ಒಬ್ಬರು ಇಂಧೋರ್‌ನ ಶಿಖಾ 2ನೇ ರ‍್ಯಾಂಕ್ ಗಳಿಸಿದ್ದಾರೆ.


ಇದು ಸುಲಭದ ಕಾರ್ಯವಂತೂ ಅಲ್ಲ ತಮ್ಮ ಶ್ರಮ ಹಾಗೂ ನಿರಂತರ ಪ್ರಯತ್ನದಿಂದಾಗಿ ಅವರು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನೀವೂ ಕೂಡಾ ನಿರಂತರ ಪ್ರಯತ್ನಮಾಡಿದರೆ ಉತ್ತಮ ಅಂಕ ಗಳಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ.


ಇದನ್ನೂ ಓದಿ: JEE Main 2023 ಪರೀಕ್ಷೆ ಮುಂದೂಡಿಕೆಗೆ ನಿರಾಕರಿಸಿದ ಬಾಂಬೆ ಹೈಕೋರ್ಟ್​ 


ರಮ್ಯಶ್ರೀ ಮತ್ತು ಇಂದೋರ್‌ನ ಶಿಖಾ ಜೈನ್‌ ಜಂಟಿಯಾಗಿ 2ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ದೆಹಲಿಯ ಮಾನ್ಸಿ ಅಗರವಾಲ್‌ 3ನೇ ರ‍್ಯಾಂಕ್‌ ಪಡೆದಿದ್ದಾರೆ. ಇನ್ನು ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ದೀಕ್ಷಾ ಗೋಯಲ್‌ ಮೊದಲ ರ‍್ಯಾಂಕ್‌ಗಳಿಸಿದ್ದಾರೆ. ತುಲಿಕಾ ಶ್ರವಣ್‌ ಜಲನ್‌ ಮತ್ತು ಸಕ್ಷಮ್‌ ಜೈನ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.


800 ಅಂಕಗಳಲ್ಲಿ ಒಟ್ಟು 617 ಅಂಕ ಪಡೆದಿದ್ದಾರೆ.


ಸುರತ್ಕಲ್‌ನ ಹೊಸಬೆಟ್ಟುವಿನ ರಮ್ಯಶ್ರೀ ಅವರು ಮಂಗಳೂರಿನ ಕಾಮತ್‌ ಆ್ಯಂಡ್‌ ರಾವ್‌ ಸಂಸ್ಥೆಯಲ್ಲಿ ದಯಾಕರ ರಾವ್‌ ಅವರಿಂದ ತರಬೇತಿ ಪಡೆಯುವ ಮೂಲಕ ಕೆಲವು ಕೌಶಲ್ಯಗಳನ್ನು ಹೊಂದಿದ್ದರು. ಮತ್ತು ಇತ್ತೀಚೆಗೆ ಎಂಆರ್‌ಪಿಎಲ್‌ನಲ್ಲಿ ತರಬೇತಿ ಕೂಡಾ ಪಡೆದುಕೊಂಡಿದ್ದಾರೆ. ಅಂತಿಮ ಪರೀಕ್ಷೆಯಲ್ಲಿ 800 ಅಂಕಗಳಲ್ಲಿ ಒಟ್ಟು 617 ಅಂಕ ಪಡೆದಿದ್ದಾರೆ.


ಸಹಕರಿಸದ ಎಲ್ಲರನ್ನೂ ಸ್ಮರಿಸಿದ ರಮ್ಯಶ್ರೀ


ತಮ್ಮ ಅಂಕಗಳಿಕೆ ಹಾಗೂ ಈ ಸಿಹಿ ಸಮಾಚಾರದ ಕುರಿತು ಮಾತನಾಡಿದ ಅವರು ತನ್ನ ಕುಟುಂಬದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದ್ದಾರೆ. ತಮಗೆ ಓದಲು ಸಹಾಯ ಮಾಡಿರುವ ಎಲ್ಲರನ್ನೂ ಕೂಡಾ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ. ಹಿರಿಯಣ್ಣನ ಪ್ರೋತ್ಸಾಹ, ಗುರು, ಹಿರಿಯರ ಆಶೀರ್ವಾದದಿಂದ ರ‍್ಯಾಂಕ್‌ ಪಡೆಯಲು ಸಾಧ್ಯವಾಗಿದೆ. ಮುಂದೆ ನಾನು ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ಧಾರೆ.


ಗೋವಿಂದದಾಸ್‌ ಕಾಲೇಜಿನಲ್ಲಿ ಪಿಯುಸಿಯಲ್ಲಿ ಐದನೇ ರ‍್ಯಾಂಕ್‌ ಪಡೆದಿದ್ದರು.


ಎಲ್‌ಐಸಿ ಉದ್ಯೋಗಿ ರಮೇಶ್‌ ರಾವ್‌ ಮತ್ತು ನ್ಯಾಷನಲ್‌ ಇನ್ಶೂರೆನ್ಸ್‌ ಉದ್ಯೋಗಿ ಮೀರಾ ಅವರ ಪುತ್ರಿಯಾಗಿರುವ ರಮ್ಯಶ್ರೀ, ಸುರತ್ಕಲ್‌ ವಿದ್ಯಾದಾಯಿನಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ತರಗತಿಗೆ ಇವರು ಮೂರನೇ ಸ್ಥಾನ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಗೋವಿಂದದಾಸ್‌ ಕಾಲೇಜಿನಲ್ಲಿ ಪಿಯುಸಿಯಲ್ಲಿ ಐದನೇ ರ‍್ಯಾಂಕ್‌ ಪಡೆದಿದ್ದರು. ಪದವಿ ಜತೆಗೆ ಸಿಎ ಅಖಿಲ ಭಾರತ ಇಂಟರ್‌ ಪರೀಕ್ಷೆಯಲ್ಲಿ 16ನೇ ರ‍್ಯಾಂಕ್‌ ಗಳಿಸಿದ್ದರು.


2021ರಲ್ಲಿ ಮಂಗಳೂರಿನ ಹುಡುಗಿ ರುತ್‌ ಕ್ಲಾರಾ ಡಿಸಿಲ್ವ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು ಎಂಬುದು ಇಲ್ಲಿ ಗಮನಿಸ ಬೇಕಾದ ಅಂಶವಾಗಿದೆ. ಒಟ್ಟಿನಲ್ಲಿ ತಮ್ಮ ನಿರಂತರ ಶ್ರಮ ಹಾಗೂ ಪ್ರಯತ್ನದ ಮೂಲಕ ಇವರು ಸಾಧನೆ ಮಾಡಿದ್ದಾರೆ. ಸಿಎ ಓದುತ್ತಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಇವರು ಮಾದರಿಯಾಗಿದ್ದಾರೆ.

First published: