ನಿನ್ನೆ ದ್ವಿತೀಯ ಪಿಯುಸಿ (2nd PUC) ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳ ಸಾಧನೆಯಿಂದ ಪಾಲಕರು ತುಂಬಾ ಸಂತೋಷದಿಂದಿದ್ದಾರೆ. ಹಲವಾರು ಬಡ ಮಕ್ಕಳು ಕಷ್ಟಪಟ್ಟು ಓದಿ ತಮ್ಮ ಶಾಲೆಗೆ (School) ಹಾಗೂ ಶಿಕ್ಷಕರಿಗೆ ಹೆಮ್ಮೆ ತಂದಿದ್ದಾರೆ. ಅಂತಹ ಒಂದು ಉದಾಹರಣೆ ಇಲ್ಲಿದೆ ನೋಡಿ. ಎಂದಿನಂತೆ ಈ ವರ್ಷವೂ ಕೂಡಾ ಅಂಕ ಗಳಿಕೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ. ಈ ವಿದ್ಯಾರ್ಥಿನಿಯರು ಮಾಡಿದ ಸಾಧನೆ (Success) ನೋಡಿ. ಮನೆಯಲ್ಲಿ ಕಷ್ಟ ಹಾಗೂ ಬಡತನ ಇದ್ದರೂ ಈ ವಿದ್ಯಾರ್ಥಿನಿಯರು ಎಷ್ಟು ಅಂಕ ಗಳಿಸಿದ್ದಾರೆ ನೋಡಿ.
ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ನಿವಾಸಿ ಎಂ.ದುರುಗಪ್ಪ, ತಾಯಿ ಎಂ.ಸಾವಿತ್ರಮ್ಮ ಅವರಿಗೆ ಐವರು ಮಕ್ಕಳಿದ್ದಾರೆ ಕೊನೆಯ ಮಗಳು ಮಲ್ಲಮ್ಮ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯಾಗಿದ್ದಾರೆ. ಮನೆಯಲ್ಲಿ ಕಷ್ಟ ಇದ್ದರೂ ಸಹ ಅದನ್ನು ಲೆಕ್ಕಿಸದೇ ಪ್ರತಿನಿತ್ಯ ದೂರದ ಊರಿಗೆ ತೆರಳಿ ಅಭ್ಯಾಸ ಮಾಡಿ ಇಂದು ಹೆಚ್ಚಿನ ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: 2nd PUCಯಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಸಾಧನೆ! 511 ಅಂಕ ಪಡೆದು ಉಡುಪಿಗೆ ಹೆಮ್ಮೆ ತಂದ ಕೊರಗ ಸಮುದಾಯದ ವಿದ್ಯಾರ್ಥಿನಿಯರು
ಮನೆಯಲ್ಲಿ ಸಂಭ್ರಮದ ವಾತಾವರಣ
ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಾಲೇಜಿನ ಪಾಲಕರಿಗೆ ಕಾಲೇಜಿನಿಂದ ಫೋನ್ ಬಂದಿದೆ ಆ ನಂತರ ಅವರಿಗೆ ಈ ವಿಷಯ ತಿಳಿದು ಸಂತೋಷವಾಗಿದೆ. ಮಗಳಿಗೆ ಸಿಹಿ ತಿನ್ನಿಸಿ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿಸಿದ್ದಾರೆ. ಅವರೂ ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಸ್ವಂತ ಜಮೀನಿಲ್ಲದೇ ಕೂಲಿ ಮಾಡಿ ಜೀವನ ಸಾಗಿಸುವ ಎಷ್ಟೋ ಜನ ಇರುತ್ತಾರೆ. ತಮ್ಮ ಮಕ್ಕಳು ಮುಂದೆ ನಮ್ಮ ರೀತಿ ಕಷ್ಟ ಪಡಬಾರದು ಎಂದು ಪಾಲಕರು ಬಯಸುತ್ತಾರೆ. ಅದರಂತೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಮಕ್ಕಳ ಯಶಸ್ಸಿಗಾಗಿ ಹಲವಾರು ರೀತಿಯ ಸಹಾಯ ಮಾಡುತ್ತಾರೆ.
ಸ್ನೇಹಾ ಸಾಧನೆ
ಕುಂದಾಪುರ ಜ್ಯೂನಿಯರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ, ಪಡುಕೋಣೆ ನಿವಾಸಿ ಸ್ನೇಹಾ 511 ಅಂಕ ಪಡೆದಿದ್ದು ಕನ್ನಡದಲ್ಲಿ 93, ಇಂಗ್ಲೀಷ್‌ನಲ್ಲಿ 75, ಎಕನಾಮಿಕ್ಸ್ 75, ಬಿಸಿನೆಸ್ ಸ್ಟಡೀಸ್ 89, ಅಕೌಂಟೆನ್ಸಿ 85, ಕಂಪ್ಯೂಟರ್ ಸೈನ್ಸ್‌ನಲ್ಲಿ 64 ಅಂಕ ಪಡೆದಿದ್ದಾರೆ. ಸ್ನೇಹಾ ಪಡುಕೋಣೆ ನಿವಾಸಿ ದಿವಂಗತ ಸುಧೀರ್, ಹಾಗೂ ಕೂಲಿ ಮಾಡುವ ಮಮತಾ ಅವರ ಇಬ್ಬರು ಪುತ್ರಿಯರ ಪೈಕಿ ಕಿರಿಯವಳು. ಮುಂದೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಮುಂದುವರಿಯುವ ಆಸೆಯನ್ನು ಸ್ನೇಹಾ ಹೊಂದಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ