ಪಾಟ್ನಾ(ಫೆ.02): ಬಿಹಾರದ ನಳಂದಾ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಾಸ್ತವವಾಗಿ ಈ ಘಟನೆ ನಡೆದಿದ್ದು ಬಿಹಾರ ಶರೀಫ್‌ನ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಯಲ್ಲಿ. ಇದೇ ಶಾಲೆ ಬಿಹಾರ ಶರೀಫ್‌ನ ಅಲ್ಲಮ ಇಕ್ಬಾಲ್ ಕಾಲೇಜಿನ ವಿದ್ಯಾರ್ಥಿ ಮನೀಶ್ ಶಂಕರ್‌ಗೆ ಪರೀಕ್ಷಾ ಕೇಂದ್ರವಾಗಿ ಸಿಕ್ಕಿತ್ತು. ಕಾಲೇಜಿನ ಯಾವ ಕೋಣೆಯಲ್ಲಿ ಈ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದನೋ ಅಲ್ಲಿ 322 ಹುಡುಗಿಯರು ಮಾತ್ರ ಪರೀಕ್ಷೆ ಬರೆಯುತ್ತಿದ್ದರು ಎಂಬುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ. ಅಂದರೆ ಅಲ್ಲಿ ಪರೀಕ್ಷೆ ಬರೆಯುತ್ತಿದ್ದ 322 ಹುಡುಗಿಯರಲ್ಲಿ ಮನೀಶ್ ಒಬ್ಬನೇ ಹುಡುಗ.
ವಾಸ್ತವವಾಗಿ, ಮನೀಶ್ ಕುಮಾರ್ ತನ್ನ ಪರೀಕ್ಷಾ ನಮೂನೆಯಲ್ಲಿ ಪುರುಷನ ಬದಲಿಗೆ ಲಿಂಗ ವಿಭಾಗದಲ್ಲಿ ಹೆಣ್ಣು ಎಂದು ಹಾಕಿದ್ದ. ಇದರಿಂದಾಗಿ ಆತನ ಕೇಂದ್ರವು ಬಾಲಕಿಯರ ಪರೀಕ್ಷಾ ಕೇಂದ್ರವಾದ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಗೆ ಹೋಯಿತು. ಮೊದಲ ಅವಧಿಯಲ್ಲಿ ಗಣಿತ ವಿಷಯದ ಪರೀಕ್ಷೆಗೆ ಹಾಜರಾಗಲು ಕೇಂದ್ರಕ್ಕೆ ಆಗಮಿಸಿದ ಆತ ಅಲ್ಲಿನ ಸ್ಥಿತಿ ಕಂಡು ತಬ್ಬಿಬ್ಬಾಗಿದ್ದಾನೆ. ಅಲ್ಲಿ ಆತನೊಬ್ಬನೇ ಬಾಲಕನಾಗಿದ್ದು, ಕೋಣೆಯಲ್ಲಿದ್ದ ಎಲ್ಲರೂ ಹೆಣ್ಮಕ್ಕಳಾಗಿದ್ದರು.
ಇದನ್ನೂ ಓದಿ: Public Exam: 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಗೆ ಕೆಲವೇ ದಿನ ಬಾಕಿ!
ಹೀಗಾಗಿ ಪರೀಕ್ಷಾರ್ಥಿ ಮನೀಶ್‌ಗೆ ಕೇಂದ್ರ ತಲುಪಿದ ತಕ್ಷಣ ಅಸೌಖ್ಯ ಉಂಟಾಗಿದ್ದು, ಬಳಿಕ ಚಳಿ, ತಲೆನೋವು ಕಾಣಿಸಿಕೊಂಡು ತಲೆಸುತ್ತು ಬಂದು ಬಿದ್ದಿದ್ದಾನೆ. ಇಲ್ಲಿ ಕೂಡಲೇ ಆತನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆತರಲಾಯಿತು, ನಂತರ ಅವರ ಸಂಬಂಧಿಕರಿಗೆ ಈ ಬಗ್ಗೆ ತಿಳಿಸಲಾಯಿತು. ಮನೀಷ್ ತನ್ನ ಸುತ್ತಲೂ ಹುಡುಗಿಯರು ಸುತ್ತುವರೆದಿರುವುದನ್ನು ನೋಡಿ ಆತಂಕಕ್ಕೀಡಾಗಿ ಪ್ರಜ್ಞಾಹೀನನಾಗಿದ್ದ ಎಂದು ಮನೀಶ್ ಅವರ ಕುಟುಂಬ ತಿಳಿಸಿದೆ.
ಪ್ರಜ್ಞಾಹೀನತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ
ಮನೀಶ್ ವಿಜ್ಞಾನ ವಿಷಯದಲ್ಲಿ 12ನೇ ಪರೀಕ್ಷೆ ಬರೆಯುತ್ತಿದ್ದ. ಹೆಚ್ಚುವರಿ ವಿಷಯವಾಗಿ, ಅತ ಗಣಿತಶಾಸ್ತ್ರದ ವಿಷಯವನ್ನು ತೆಗೆದುಕೊಂಡಿದ್ದ. ಆದರೆ ಅನಾರೋಗ್ಯದಿಂದ ಪರೀಕ್ಷೆ ಬರೆಯಲಾಗದೇ ಐದು ಪರೀಕ್ಷೆಗಳನ್ನು ಮಾತ್ರ ನೀಡಬೇಕಾಗುತ್ತದೆ.
ಇದನ್ನೂ ಓದಿ: UPSC Exam 2023: ಮೇ ತಿಂಗಳಲ್ಲಿ ಪರೀಕ್ಷೆ, ಇಂದಿನಿಂದ 8 ರೂಲ್ಸ್ ಫಾಲೋ ಮಾಡಿದ್ರೆ IAS ಅಧಿಕಾರಿ ಆಗೋದು ಗ್ಯಾರೆಂಟಿ
.
ಈ ವೇಳೆ ಜಿಲ್ಲಾ ಶಿಕ್ಷಣಾಧಿಕಾರಿ ಕೇಶವ ಪ್ರಸಾದ್ ಮಾತನಾಡಿ, ಪ್ರವೇಶ ಪತ್ರದಲ್ಲಿ ಆತ ಹೆಣ್ಣು ಎಂದು ಹಾಕಿಕೊಂಡಿದ್ದಾನೆ. ಇದರಿಂದಾಗಿ ಕೇಂದ್ರವನ್ನು ವಿದ್ಯಾರ್ಥಿನಿಯರಿಗಾಗಿಯೇ ನಿರ್ಮಿಸಲಾಗಿರುವ ಪರೀಕ್ಷಾ ಕೇಂದ್ರ ನೀಡಲಾಗಿದೆ. ಫಾರ್ಮ್ ಅನ್ನು ಭರ್ತಿ ಮಾಡುವ ಸಮಯದಲ್ಲಿ ದೋಷವಿತ್ತು, ಇದರಿಂದಾಗಿ ಈ ಸಮಸ್ಯೆ ಉಂಟಾಗಿದೆ. ಸದ್ಯ ವಿದ್ಯಾರ್ಥಿಯು ಅದೇ ಕೇಂದ್ರದಲ್ಲಿ ಪರೀಕ್ಷೆ ನೀಡಬೇಕಾಗುತ್ತದೆ. ನಂತರ ಲಿಂಗ ವರ್ಗವನ್ನು ಸರಿಪಡಿಸಲಾಗುವುದು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ