• Home
  • »
  • News
  • »
  • jobs
  • »
  • Border Dispute: ಹೆಚ್ಚಿದ ಗಡಿ ವಿವಾದ! ಕರ್ನಾಟಕದಲ್ಲಿ ಮರಾಠಿ ಶಾಲೆಗಳನ್ನು ಆರಂಭಿಸಲು ಯೋಚಿಸಿದ ಮಹಾರಾಷ್ಟ್ರ

Border Dispute: ಹೆಚ್ಚಿದ ಗಡಿ ವಿವಾದ! ಕರ್ನಾಟಕದಲ್ಲಿ ಮರಾಠಿ ಶಾಲೆಗಳನ್ನು ಆರಂಭಿಸಲು ಯೋಚಿಸಿದ ಮಹಾರಾಷ್ಟ್ರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಮರಾಠಿ ಜನಸಂಖ್ಯೆ ಇದೆ ಎಂಬ ಕಾರಣಕ್ಕೆ ಬೆಳಗಾವಿಯನ್ನು ತನ್ನೊಂದಿಗೆ ವಿಲೀನಗೊಳಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಒತ್ತಾಯಿಸುತ್ತಿದೆ.

  • News18 Kannada
  • Last Updated :
  • Karnataka, India
  • Share this:

ಕರ್ನಾಟಕ ಮತ್ತು ಮಹಾರಾಷ್ಟ್ರದ (Maharashtra) ನಡುವೆ ಆಗಾಗ ಗಡಿ ಸಮಸ್ಯೆಗಳು ಉದ್ಭವವಾಗುತ್ತಲೇ ಇರುತ್ತವೆ. ಗಡಿ ಸಮಸ್ಯೆಗಳು ಬಗೆಹರಿಯದ ಸಮಸ್ಯೆಗಳು ಎಂದು ಹೇಳಬಹುದು. ಬೆಳಗಾವಿ ಜಿಲ್ಲೆ ಮತ್ತು ಕರ್ನಾಟಕದ (Karnataka) ಇತರ ಪ್ರದೇಶಗಳಲ್ಲಿ ಹೆಚ್ಚಿನ ಮರಾಠಿ-ಮಾಧ್ಯಮ ಶಾಲೆಗಳನ್ನು ಸ್ಥಾಪಿಸಲು ಉತ್ತೇಜನ ನೀಡಲು ಮಹಾರಾಷ್ಟ್ರ ಸರ್ಕಾರದ (Government) ತಂಡವು ಆರು ತಿಂಗಳ ಹಿಂದೆ ಈ ಕ್ರಮಕ್ಕೆ ಚಾಲನೆ ನೀಡಿತ್ತಾಗಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕೆಬಿಎಡಿಎ) ಅಧ್ಯಕ್ಷ ಡಾ.ಸಿ.ಸೋಮಶೇಖರ ಶುಕ್ರವಾರದಂದು ಮಾಧ್ಯಮಗಳಿಗೆ ತಿಳಿಸಿದರು.


ಕರ್ನಾಟಕದಲ್ಲಿ ಮರಾಠಿ ಶಾಲೆಗಳನ್ನು ಆರಂಭಿಸಲು ಯೋಜಿಸಿದ ಮಹಾರಾಷ್ಟ್ರ
ಆದರೆ ಇದು ಕಾನೂನುಬಾಹಿರ ಎಂದು ಕೆಬಿಎಡಿಎ ಸಂಸ್ಥೆಯು ಪ್ರತಿಭಟನೆ ನಡೆಸಿದ ನಂತರ ಮರಾಠಿ ಶಾಲೆಗಳನ್ನು ಸ್ಥಾಪಿಸುವ ಅಭಿಯಾನ ಸ್ಥಗಿತಗೊಂಡಿತು. ಮಹಾರಾಷ್ಟ್ರದ ನಿಯೋಗವೊಂದು ಕರ್ನಾಟಕದ ಗಡಿ ಪ್ರದೇಶಗಳಿಗೆ ಆಗಮಿಸಿ ಮರಾಠಿಯಲ್ಲಿ ಶಿಕ್ಷಣ ನೀಡುವ ಶಾಲೆಗಳಿಗೆ ಹೆಚ್ಚಿನ ಅನುದಾನ ಮತ್ತು ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ ಚಾಲನೆ ನೀಡಲು ಮುಂದಾಗಿತ್ತು ಎಂದು ಸೋಮಶೇಖರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಕೆಬಿಎಡಿಎ ಸಂಸ್ಥೆಯು 12 ವರ್ಷ ಕಾರ್ಯ ನಿರ್ವಹಿಸಿದ ಕುರಿತು ‘ಸಾಧನೆಯ ದರ್ಶನ’ (ಸಾಧನೆಯ ಇಣುಕುನೋಟ) ಕಿರುಪುಸ್ತಕವನ್ನು ಬಿಡುಗಡೆಗೊಳಿಸಿದ ನಂತರ ಕೆಬಿಎಡಿಎ ಅಧ್ಯಕ್ಷ ಸೋಮಶೇಕರ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.


ಇದನ್ನೂ ಓದಿ: ಶಾಲೆಗೆ ಹೋಗೋಕೆ ಸಮಸ್ಯೆಯೇ ಇರಲ್ಲ! ಸರ್ಕಾರದಿಂದಲೇ ಬಸ್ ಸೌಲಭ್ಯ


ಕೆಬಿಎಡಿಎ ಕಾರ್ಯಚಟುವಟಿಕೆಗಳನ್ನು ವಿವರಿಸಿದ ಸೋಮಶೇಖರ ಅವರು, ಕರ್ನಾಟಕದಿಂದ ಹೊರಗಿರುವ ಗಡಿ ಭಾಗದಲ್ಲಿರುವ ಕನ್ನಡಿಗರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ 2010ರಲ್ಲಿ ಪ್ರಾಧಿಕಾರವನ್ನು ಸ್ಥಾಪಿಸಿದೆ. ಅವರ ಪ್ರಕಾರ, ಕರ್ನಾಟಕದ ಹೊರಗಿರುವ 19 ಜಿಲ್ಲೆಗಳಲ್ಲಿ ಕನ್ನಡ ಮಾತನಾಡುವ ಜನರ ಸಂಖ್ಯೆ ಹೆಚ್ಚಿದೆ.


ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡಿಗರೇ ಹೆಚ್ಚು
''19 ಜಿಲ್ಲೆಗಳ 63 ತಾಲೂಕುಗಳಲ್ಲಿ ಸುಮಾರು 980 ಹಳ್ಳಿಗಳಲ್ಲಿ ಕನ್ನಡಿಗರು ವಾಸಿಸುತ್ತಿದ್ದಾರೆ. ಅವರ ಅಸ್ತಿತ್ವ, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವುದು ನಮ್ಮ ಪ್ರಾಧಿಕಾರದ ಮುಖ್ಯ ಕರ್ತವ್ಯವಾಗಿದೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಮಾಡುತ್ತಿದ್ದೇವೆ’ ಎಂದು ಸೋಮಶೇಖರ ಹೇಳಿದರು.


ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಮತ್ತೊಮ್ಮೆ ಗಡಿ ಘರ್ಷಣೆ
ಬೆಳಗಾವಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಮತ್ತೊಮ್ಮೆ ಗಡಿ ಘರ್ಷಣೆ ಉಂಟಾಗಿರುವ ಮಧ್ಯೆ, ಕೆಬಿಎಡಿಎ ಅಧ್ಯಕ್ಷರು, ಮಹಾರಾಷ್ಟ್ರ ಸರ್ಕಾರದ ಅಭಿಯಾನವು ಆರು ತಿಂಗಳ ಹಿಂದೆ ನಡೆದಿದೆ ಎಂದು ಹೇಳಿದರು. "ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಡವೊಂದು ಸಮೀಕ್ಷೆ ನಡೆಸಿ ಮರಾಠಿ-ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಅನುದಾನ ಮತ್ತು ಶಿಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದೆ ಎಂಬ ಸುದ್ದಿ ನಮಗೆ ತಿಳಿದಾಗ, ನಾವು ಕಾರ್ಯಾಚರಣೆಯನ್ನು ನಡೆಸಲು ಆರಂಭಿಸಿದೆವು. ಇದರಿಂದಾಗಿ ಮಹಾರಾಷ್ಟ್ರದ ಅಭಿಯಾನವು ನಿಂತುಹೋಯಿತು" ಎಂದು ಅವರು ವಿವರಿಸಿದರು.


ಮರಾಠಿ ಶಾಲೆಗಳನ್ನು ತೆರೆಯುವುದು ಕಾನೂನುಬಾಹಿರ
“ಮಹಾರಾಷ್ಟ್ರದ ನಿಯೋಗ ಕರ್ನಾಟಕಕ್ಕೆ ಭೇಟಿ ನೀಡಿರುವುದು ಮತ್ತು ಇಲ್ಲಿ ಹೆಚ್ಚಿನ ಮರಾಠಿ ಶಾಲೆಗಳನ್ನು ತೆರೆಯುವುದು ಕಾನೂನುಬಾಹಿರ ಎಂದು ಬೆಳಗಾವಿಯ ಕೆಲವು ಸಂಘಟನೆಗಳೊಂದಿಗೆ ಕೆಬಿಎಡಿಎ ಪ್ರಾಧಿಕಾರವು ಪ್ರತಿಭಟಿಸಿತು” ಎಂದು ಸೋಮಶೇಖರ ಹೇಳಿದರು. ಮಹಾರಾಷ್ಟ್ರದ ಈ ಅಭಿಯಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ತಂಡವು ಸ್ವಯಂಪ್ರೇರಿತವಾಗಿ ಬಂದಿದ್ದು, ಅಂತಹ ಚಟುವಟಿಕೆಗಳನ್ನು ಮಾಡಲು ಕರ್ನಾಟಕ ಸರ್ಕಾರದಿಂದ ಯಾವುದೇ ರೀತಿಯ ಆಹ್ವಾನವನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.


ಬಗೆಹರಿಯದ ಗಡಿ ವಿವಾದ
ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಮರಾಠಿ ಜನಸಂಖ್ಯೆ ಇದೆ ಎಂಬ ಕಾರಣಕ್ಕೆ ಬೆಳಗಾವಿಯನ್ನು ತನ್ನೊಂದಿಗೆ ವಿಲೀನಗೊಳಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಒತ್ತಾಯಿಸುತ್ತಿದೆ. ಆದರೆ, ಕರ್ನಾಟಕ ಸರ್ಕಾರ ಇದನ್ನು ವಿರೋಧಿಸುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಬೆಳಗಾವಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ನಡೆದಿತ್ತು.


ಕೆಬಿಎಡಿಎ ಸಂಸ್ಥೆಯು ತನ್ನ ಚಟುವಟಿಕೆಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ನಿರ್ವಹಿಸುತ್ತದೆ. ಪ್ರಾಧಿಕಾರವು ಪ್ರಾರಂಭಿಸಿರುವ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ, ಮೇಲ್ವಿಚಾರಣಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಕೆಬಿಎಡಿಎ ಅಧ್ಯಕ್ಷರು ಹೇಳಿದರು.


ಕನ್ನಡದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸುವ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್‌ ಯೋಜನೆ
“ಗಡಿ ಭಾಗದ ಮಕ್ಕಳಲ್ಲಿ ಕನ್ನಡದ ಬಗ್ಗೆ ಒಲವನ್ನು ಹೆಚ್ಚಿಸಲು ಕೆಬಿಎಡಿಎ ಕನ್ನಡ ಮಾಧ್ಯಮದ ವಿದ್ಯಾರ್ಥಿ ಮತ್ತು ಶಾಲೆಯ ಜಂಟಿ ಖಾತೆಗೆ 5,000 ರೂ ಗಳನ್ನು ನೀಡುತ್ತದೆ. 10 ನೇ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಪೂರ್ಣಗೊಳಿಸುವಂತಹ ವಿದ್ಯಾರ್ಥಿಗಳಿಗೆ ತದನಂತರದ ಶಿಕ್ಷಣಕ್ಕೆ ನೆರವಾಗುವಂತೆ ಧನಸಹಾಯ ಇದರಿಂದ ಸಿಗುತ್ತದೆ. ಇದರಿಂದ ಮಕ್ಕಳನ್ನು ಕನ್ನಡದ ಕಡೆಗೆ ಆಕರ್ಷಿಸಬಹುದು. ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಅನುಕೂಲವಾಗಲಿದೆ. ನಾವು ಈ ಯೋಜನೆಯನ್ನು ಯೋಜಿಸುತ್ತಿದ್ದೇವೆ” ಎಂದು ಸೋಮಶೇಖರ ಹೇಳಿದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು