ಪರೀಕ್ಷೆಯಲ್ಲಿ (Exam) ಮಕ್ಕಳು ಪಾಸ್ (Pass) ಆಗಲಿ ಎಂದು ಪಾಲಕರು ಆಸೆ ಪಡುವುದು ತಪ್ಪಲ್ಲ ಆದರೆ ಇಲ್ಲೊಬ್ಬರು ತನ್ನ ಮಗ ಪಾಸಾಗಲಿ ಎಂದು ಮಾಡಿದ ಕೆಲಸ ನೋಡಿದರೆ ನೀವು ಕಂಡಿತ ದಂಗಾಗ್ತೀರಾ. ಆದರೆ ಒಮ್ಮೆ ಅನಿಸುತ್ತೆ ಈ ಪಾಲಕರು ಎಷ್ಟು ಮುಗ್ದರು ಎಂದು. ತನ್ನ ಮಗನಿಗೆ ಕಾಪಿ (Copy) ಚೀಟಿ ನೀಡಲು ಬಂದ ಈ ತಂದೆಯನ್ನು ಏನು ಮಾಡಿದ್ದಾರೆ ಎಂಬ ಮಾಹತಿ ಕೇಳಿದ್ರೆ ನಿಮಗೆ ಅಳಬೇಕೋ ನಗಬೇಕೋ ಎಂಬ ಗೊಂದಲ ಆಗುತ್ತದೆ. ಈ ಕುರಿತು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಈ ಘಟನೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕೆಂದು ಹೆತ್ತವರು ಬಯಸುವುದು ಸಹಜ! ಅವರು ಉತ್ತಮ ಅಂಕ ಗಳಿಸಲು ಎಲ್ಲ ವ್ಯವಸ್ಥೆ ಮಾಡಿಕೊಡುತ್ತಾರೆ. ಮಕ್ಕಳ ಪರೀಕ್ಷೆಯನ್ನು ತಮ್ಮ ಪರೀಕ್ಷೆಯಂತೆ ಭಾವಿಸುತ್ತಾರೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: PUC ವಿದ್ಯಾರ್ಥಿಗಳೇ ಗಮನಿಸಿ, ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆಯಾಗಿದೆ
ಎಷ್ಟೋ ಜನ ಪಾಲಕರು ಈ ರೀತಿಯೆಲ್ಲಾ ಮಾಡುವುದು ಸಾಮಾನ್ಯ ಆದರೆ ಅದರ ಬದಲಾಗಿ ಈ ಪಾಲಕರು ಮಾಡಿರುವ ಸಂಗತಿ ಮಾತ್ರ ನಿಜಕ್ಕೂ ಸಾಮಾನ್ಯದ್ದಲ್ಲವೇ ಅಲ್ಲ. ಇದು ಎಲ್ಲದಕ್ಕಿಂತ ಹೆಚ್ಚಿನದು ಇದನ್ನು ಒಳ್ಳೆಯ ಉದ್ದೇಶ ಎನ್ನಬೇಕೋ ಇಲ್ಲ ಕೆಟ್ಟ ಉದ್ದೇಶ ಎನ್ನಬೇಕೋ ತಿಳಿಯುವುದಿಲ್ಲ.
ಇದು ಮಹಾರಾಷ್ಟ್ರದಲ್ಲಿ ನಡೆದಿರುವ ಘಟನೆ. ತಂದೆಯೊಬ್ಬರು ತನ್ನ ಮಗ ಹೆಚ್ಚಿನ ಅಂಕ ಪಡೆಯಲಿ ಹೆಚ್ಚಿನ ಅಂಕ ಪಡೆದು ಪಾಸ್ ಆಗಲಿ ಎಂಬ ಕಾರಣಕ್ಕೆ ಮನೆಯಿಂದ ಕಾಫಿ ಚೀಟಿ ಹಿಡಿದು ಎಕ್ಸಾಂ ಹಾಲಿಗೆ ಓಡೋಡಿ ಬಂದಿದ್ದಾರೆ. ತಂದೆಯೇ ತನ್ನ ಮಗನಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾಪಿ ಚೀಟಿ ನೀಡಲು ಪ್ರಯತ್ನಿಸಿದ್ದಾರೆ. ಇದರಿಂದ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ.
ಪೊಲೀಸರು ಇವರನ್ನು ತಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ವಿಡಿಯೋವನ್ನು ನೀವಿಲ್ಲು ನೋಡಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಕೂಡಾ ಆಗಿದೆ. ಸಾಮಾನ್ಯ ಜನರು ಇದರ ಬಗ್ಗೆ ಕೆಮೆಂಟ್ ಮಾಡುತ್ತಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ ನೋಡಿ.
मुलाला कॉपी पुरवायला गेलेल्या बापाला पोलिसांकडून बेदम चोप, व्हिडिओ व्हायरल pic.twitter.com/RiF402O2X6
— Kiran Balasaheb Tajne (@kirantajne) March 4, 2023
ಮಹಾರಾಷ್ಟ್ರದ ಜಲಗಾಂವ್‌ನ ವ್ಯಕ್ತಿಯೊಬ್ಬನನ್ನು ಪೊಲೀಸರು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ತಂದೆ ತನ್ನ ಮಗನ ಪರೀಕ್ಷಾ ಹಾಲ್‌ಗೆ ಹೋಗಿ ನೋಟ್ಸ್ ನೀಡಲು ಪ್ರಯತ್ನಿಸಿದ ಘಟನೆ ಇದಾಗಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ರಾಜ್ಯ ಬೋರ್ಡ್ ಪರೀಕ್ಷೆಗಳು ನಡೆಯುತ್ತಿವೆ. ಗಣಿತದ ಪೇಪರ್ ಆಗಿದ್ದರಿಂದ ಫೇಲ್ ಆದರೆ ಎಂಬ ಭಯ ಹುಡುಗನಿಗೆ ಇತ್ತು. ಆದ್ದರಿಂದ ತಂದೆ ಪಾಸ್ ಮಾಡಲು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ಚೀಟಿಗಳನ್ನು ಹಿಡಿದುಕೊಂಡು ಪರೀಕ್ಷಾ ಕೇಂದ್ರದ ಬಳಿ ಹೋದರು. ಮಗ ಯಾವ ಕೊಠಡಿಯಲ್ಲಿದ್ದಾನೆ ಎಂದು ಹುಡುಕಾಡುತ್ತಿದ್ದಾಗ ಕರ್ತವ್ಯದಲ್ಲಿದ್ದ ಪೊಲೀಸರು ಗಮನಿಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಂದ ಕಳುಹಿಸಿದ್ದಾರೆ. ಆದರೂಅವನು ಮತ್ತೆ ಬಂದು ಮಗನನ್ನು ಹುಡುಕುತ್ತಿದ್ದ ಕಾರಣ ಥಳಿಸಿದ್ದಾರೆ.
ಪೋಲೀಸರು ಎಷ್ಟೇ ಹೇಳಿದರೂ ಕೇಳಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮತ್ತೆ ಚೀಟಿ ನೀಡಲು ಎಕ್ಸಾಂ ಸೆಂಟರ್ ಗೆ ಹೋದ. ಪೊಲೀಸರ ಕೈಗೆ ಸಿಕ್ಕಿಬಿದ್ದ ಆತ ತನ್ನನ್ನು ಬಿಡಿಸಿಕೊಂಡು ಓಡಲು ಯತ್ನಿಸಿದ್ದಾನೆ. ಎರಡು ಬಾರಿ ಹೇಳಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ವ್ಯಕ್ತಿಯನ್ನು ತೀವ್ರವಾಗಿ ಥಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ